ತಲಕಾಡಿನ ವೈಭವ ಗುಂಪು ಚಟುವಟಿಕೆಗಳು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಗುಂಪು ಚಟುವಟಿಕೆಗಳು

1.ಪಾಠ ಪರಿಚಯ

ವಿದ್ಯಾರ್ಥಿಗಳು ನೋಡಿದ ಪ್ರವಾಸಿ ಸ್ಥಳಗಳ ಕುರಿತು ಹೇಳಿಸುವುದು ಅಥವಾ ಬರೆಸುವುದು (ಪ್ರವಾಸದ ಅನುಭವ )

ಗುಂಪು ೧ ರ ಚಟುವಟಿಕೆಗಳು

  1. ಪ್ರವಾಸಕ್ಕೆ ಹೋಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಪಟ್ಟಿ ಮಾಡುವುದು ಅಥವಾ ಬರೆಯುವಂತೆ ಹೇಳುವುದು
  2. ಪ್ರವಾಸದ ವಿಧಗಳ ಬಗ್ಗೆ ವಿವರಣೆ ಬರೆಯಲು ತಿಳಿಸುವುದು (ಶೈಕ್ಷಣಿಕ ,ಕೌಟುಂಬಿಕ ಆಡಳಿತಾತ್ಮಕ ಇತ್ಯಾದಿ ಸ್ಥಳೀಯ ಸ್ಥಳಗಳು, ರಾಜ್ಯದೊಳಗೆ ,ದೇಶದೊಳಗೆ, ವಿದೇಶಿ )
  3. ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ಚರ್ಚೆ
  4. ಕನ್ನಡ ನಾಡಿನ ಸುಂದರ ತಾಣಗಳ ಕುರುತು ವಿದ್ಯಾರ್ಥಿಗಳಿಗಿರುವ ಮಾಹಿತಿ ಕುರಿತು ಚರ್ಚೆ

ಗುಂಪು ೨ ರ ಚಟುವಟಿಕೆಗಳು

  1. ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ಚರ್ಚೆ
  2. ವಿದ್ಯಾರ್ಥಿಗಳು ನೋಡಿದ ಪ್ರವಾಸಿ ಸ್ಥಳಗಳ ಕುರಿತು ಹೇಳಿಸುವುದು ಅಥವಾ ಬರೆಸುವುದು (ಪ್ರವಾಸದ ಅನುಭವ )
  3. ಕನ್ನಡ ನಾಡಿನ ಸುಂದರ ತಾಣಗಳ ಕುರುತು ವಿದ್ಯಾರ್ಥಿಗಳಿಗಿರುವ ಮಾಹಿತಿ ಕುರಿತು ಚರ್ಚೆ

ಗುಂಪು ೩ ರ ಚಟುವಟಿಕೆಗಳು

  1. ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಆ ಅಕ್ಷರಗಳಿಂದ ಪ್ರಾರಂಭವಾಗುವ ಅಥವಾ ಆ ಅಕ್ಷರಗಳನ್ನು ಹೊಂದಿರುವ ಪದಗಳನ್ನು ಈ ಪಠ್ಯದಲ್ಲಿ ಗುರುತಿಸಿ ಬರೆಯವುದು. ಉದಾ: ಅಕ್ಷರ 'ಕ' , ನಂತರ 'ಕ' ಯಿಂದ ಪ್ರಾರಂಭವಾಗುವ ಅಥವಾ 'ಕ' ಅಕ್ಷರವನ್ನು ಒಳಗೊಂಡಿರುವ ಪದಗಳನ್ನು ಹುಡುಕುವುದು.
  2. ಈ ಪಠ್ಯದಲ್ಲಿ ಬರುವ ಮೂರಕ್ಷರದ ಪದಗಳನ್ನು ಪಟ್ಟಿ ಮಾಡುವುದು ಮತ್ತು ಓದಿ ಅರ್ಥೈಸಿಕೊಳ್ಳುವುದು
  3. ಈ ಪಠ್ಯದಲ್ಲಿ ಬರುವ ಒತ್ತಕ್ಷರ ರಹಿತ ಪದಗಳನ್ನು ಹುಡುಕಿ ಬರೆಯಲು ತಿಳಿಸುವುದು

2.ಗೂಗಲ್ ಮ್ಯಾಪ್ ಬಳಸಿ ಚಟುವಟಿಕೆ

  • ಗೂಗಲ್ ಮ್ಯಾಪ್ ಬಳಸಿ ತಲಕಾಡು ಕ್ಷೇತ್ರಕ್ಕೂ ತಾವಿರುವ ಪ್ರದೇಶಕ್ಕೂ ಇರುವ ದೂರದ ಪರಿಚಯ
  • ಕಾವೇರಿನದಿ,ದೇವಾಲಯದ 360 ಡಿಗ್ರಿ ವೀಕ್ಷಣೆ
  • ಮ್ಯಾಪ್ ನಲ್ಲಿನ ವಿವಿಧ ದೇವಾಲಯಗಳ ಪ್ರದರ್ಶನ