ತಾರಾಳ ನೇರಳೆ ವಿಮಾನ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ನಗುವ ಎಲೆಗಳು, ಉರುಳಾಡುವ ಅಳಿಲುಗಳ ಕೀ... ಕೀ... ನಡುವೆ ಮರ ಹತ್ತಿ, ನೇರಳೆ ವಿಮಾನ ಏರಿದ ತಾರಾ ಮಾಡಿದ್ದೇನು?
ಉದ್ದೇಶಗಳು :
ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು, ವಾಕ್ಯರಚನೆಯ ಜೊತೆಗೆ ಮಾತನಾಡುವ ಕೌಶಲ್ಯವನ್ನು ಮೂಡಿಸಬಹುದು.
ಕಥಾ ವಸ್ತು :ಸಾಹಸ,ಭಾವನೆಗಳು,ಜಾದು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
- ಪದ್ಯ : ಅಮ್ಮ ಅಮ್ಮ ನನ್ನ ತೋಳಿಗೆ ರೆಕ್ಕೆ ಹಚ್ಚು ( ಮೂರನೇ ತರಗತಿ ನಲಿ ಕಲಿಹಾಡು )
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
- ನಿಮ್ಮ ಶಾಲೆಯ ಬಳಿ ಮರಗಳಿವೆಯೇ?
- ಹಾಗಾದರೇ ಯಾವೆಲ್ಲಾ ಮರಗಳಿವೆ?
- ಅವುಗಳಲ್ಲಿ ತುಂಬಾ ಎತ್ತರವಾಗಿರುವ ಮರ ಯಾವುದು?
- ಎತ್ತರದ ಮರದಿಂದ ಇಳಿಯಲು ಸಾಧ್ಯವೇ?
- ಹಾಗಾದರೇ ನೀನು ಕಾಲ್ಪನಿಕವಾಗಿ ಮರವನ್ನು ಹೇಗೆ ಇಳಿಯಬಲ್ಲೆ? ಯಾವ ವಾಹನವನ್ನು ಬಳಸಿಕೊಳ್ಳುವುದು ಸೂಕ್ತ?
ಆಲಿಸುವ ಸಂಧರ್ಭದ ಚಟುವಟಿಕೆಗಳು
- (ತಾರಾ ಎಲ್ಲಗೆ ಹೋಗಿದ್ದೆ? ಅಮ್ಮ ರೇಗಿದರು pause)
- ತಾರಾ ಎಲ್ಲಿಗೆ ಹೋಗಿರಬಹುದೂ?
- (ಇಲೀಯುವುದು ಹೇಗೆ ಅಂತಲೇ ಗೊತ್ತಾಗಲಿಲ್ಲಾ)
- ತಾರಾ ಮರದಿಂದ ಹೇಗೆ ಇಳಿದಿರಬಹುದು?
ಆಲಿಸಿದ ನಂತರದ ಚಟುವಟಿಕೆಗಳು
- ಕಥೆಯ ಸಾಲುಗಳನ್ನು ಅನುಕ್ರಮವಾಗಿ ಜೋಡಿಸುವುದು
- ಕಥಾ ಸನ್ನಿವೇಷವನ್ನು ಚಿತ್ರರೂಪದಲ್ಲಿ ವ್ಯಕ್ತಪಡಿಸಲು ತಿಳಿಸುವುದು.
- ಸಾರಿಗೆಯ ವಿಧಗಳನ್ನು ಪಟ್ಟಿ ಮಾಡಿ.
- ಸಾರಿಗೆಯ ಮಹತ್ವವನ್ನು ವಿವರಿಸಿ.
- ವಿಮಾನದ ಚಿತ್ರವನ್ನು ಬಿಡಿಸಿ ನೇರಳೆ ಬಣ್ಣವನ್ನು ಹಾಕಿ.
- ಬೇರೆ ಬೇರೆ ಪ್ರಾಣಿಗಳ ಧ್ವನಿಯನ್ನು ಅನುಕರಿಸಿ.
- ನೀವು ಅಮ್ಮನ ಬಳಿ ಬೈಸಿಕೊಳ್ಳುವ ಸಂದರ್ಭಗಳು ಯಾವುವು?