ತ್ರಿಭುಜಗಳ ಸರ್ವಸಮತೆಯ ಪರಿಚಯ
Jump to navigation
Jump to search
ಉದ್ದೇಶಗಳು
- ಸರ್ವಸಮತೆಯನ್ನು ಪರಿಚಯಿಸುವುದು
- ಸರ್ವಸಮತೆಯನ್ನು ಅರ್ಥೈಸಿಕೊಳ್ಳುವುದು
ಅಂದಾಜು ಸಮಯ
೨೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ತ್ರಿಭುಜ ಅಂಶಗಳು ಮತ್ತು ತ್ರಿಭುಜ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಎರಡು ತ್ರಿಭುಜಗಳು ಸರ್ವಸಮಾವಾಗಿದೆಯೇ ?
- ಇಲ್ಲ ಸರ್ವಸಮವಾಗಿಲ್ಲ. ನಾವು ಒಂದರ ಮೇಲೊಂದರಂತೆ ಚಲಿಸಿದಾಗ/ಜರುಗಿಸಿದಾಗ ಅವು ಪರಸ್ಪರ ಐಕ್ಯೆಯಾಗುವುದಿಲ್ಲ.
- ಈ ಎರಡು ತ್ರಿಭುಜಗಳನ್ನು ನಾವು ಹೇಗೆ ಸರ್ವಸಮಗೊಳಿಸಬಹುದು?
- ನಾವು ಹಸಿರು ತ್ರಿಭುಜದ ಬಾಹುವಿನ ಉದ್ದವನ್ನು 5 ರಿಂದ 3 ಕ್ಕೆ ಬದಲಾಯಿಸಿದರೆ ನಂತರ ಎರಡೂ ತ್ರಿಭುಜವು ಸರ್ವಸಮಾ ವಾಗಿರುತ್ತವೆ I ನ ಉದ್ದವನ್ನು 3 ಕ್ಕೆ ಬದಲಾಯಿಸಿ. ನಂತರ ಒಂದು ತ್ರಿಭುಜವನ್ನು ಇನ್ನೊಂದರ ಮೇಲೆ ಎಳೆಯಿರಿ (ಒಂದರ 3 ಬಾಹುಗಳು ಮತ್ತೊಂದು ತ್ರಿಭುಜದ 3 ಅನುರೂಪ ಬಾಹುಗಳಿಗೆ ಸರ್ವಸಮವಾಗಿರುತ್ತದೆ)
- ನಿಮ್ಮ ಮೌಸ್ ಬಳಸಿ,ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಎಳೆದು ಬಿಡಿ.ಎರಡು ವಸ್ತುಗಳು ಪರಸ್ಪರ ಐಕ್ಯವಾದರೆ , ಅವು ಸರ್ವಸಮವಾಗಿವೆ. ವಸ್ತುಗಳನ್ನು ಸರಿಸಲು/ಜರುಗಿಸಲು ಕೆಂಪು ಬಿಂದುಗಳನ್ನು ಮತ್ತು ತಿರುಗಿಸಲು ಹಳದಿ ಬಿಂದುಗಳನ್ನು ಬಳಸಿ.
- ಸ.ತ್ರಿ.ಅ.ಭಾ ('ಸರ್ವ ಸಮ ತ್ರಿಭುಜದ ಅನುರೂಪ ಭಾಗಗಳ) ಅರ್ಥವೇನು?
- 'ಸರ್ವ ಸಮ ತ್ರಿಭುಜದ ಅನುರೂಪ ಭಾಗಗಳ ' ಪರಿಕಲ್ಪನೆ 'ಸ..ತ್ರಿ.ಅ.ಭಾ' ಇಲ್ಲಿ ವಿವರಿಸಬಹುದು a ಯು f ಗೆ ಅನುರೂಪವಾಗಿದೆ. b ಯು i ಗೆ ಅನುರೂಪವಾಗಿದೆ.