ತ್ರಿಭುಜದ ಮಧ್ಯಬಿಂದು ಮತ್ತು ಮಧ್ಯರೇಖೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ತ್ರಿಭುಜದ ಮಧ್ಯಬಿಂದು ಎಂದರೆ ಮೂರು ಮಧ್ಯರೇಖೆಗಳು ಛೇಧಿಸುತ್ತವೆ. ಈ ಚಟುವಟಿಕೆಯು ಮಧ್ಯಬಿಂದು ಅನ್ನು ಹೇಗೆ ಪಡೆಯುವುದು ಎಂಬುದನ್ನು ನಿಮಗೆ ತೋರಿಸುತ್ತದೆ ಮತ್ತು ಮಧ್ಯಬಿಂದು ಮತ್ತು ಮಧ್ಯರೇಖೆಗಳಿಗೆ ಸಂಬಂಧಿಸಿದ ಹಲವಾರು ಜ್ಯಾಮಿತೀಯ ಸಂಬಂಧಗಳನ್ನು ನೀವು ಅನ್ವೇಷಿಸುತ್ತೀರಿ.

ಉದ್ದೇಶಗಳು:

ತ್ರಿಭುಜದ ಮಧ್ಯರೇಖೆಗಳನ್ನು ಮತ್ತು ಅದರ ಏಕಕಾಲಿಕ ಬಿಂದುವನ್ನು ಪರಿಚಯಿಸಲು

ಅಂದಾಜು ಸಮಯ:

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ತ್ರಿಭುಜಗಳ ವಿಧಗಳು, ಅವುಗಳ ಮಧ್ಯರೇಖೆಗಳು ಮತ್ತು ಅವುಗಳ ರಚನೆಗಳನ್ನು ಪರಿಚಯಿಸಿರಬೇಕು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

ವಿವಿಧ ತ್ರಿಭುಜಗಳಲ್ಲಿ ಮಧ್ಯಬಿಂದುವಿನ ಸ್ಥಾನವು ಹೇಗೆ ಸ್ಥಿರವಾಗಿರುತ್ತದೆ ಎಂಬುದನ್ನು ತೋರಿಸಲು ಶಿಕ್ಷಕರು ಈ ಜಿಯೋಜೆಬ್ರಾ ಕಡತವನ್ನು ಬಳಸಬಹುದು.

ಬೆಳವಣಿಗೆಯ ಪ್ರಶ್ನೆಗಳು:

  1. ಇದು ಯಾವ ರೀತಿಯ ತ್ರಿಭುಜ?
  2. ಮಧ್ಯರೇಖೆ ಎಂದರೇನು?
  3. ಬಾಹುವಿನ ಮಧ್ಯಭಿಂದುವನ್ನು ನೀವು ಹೇಗೆ ಗುರುತಿಸುತ್ತೀರಿ?
  4. ತ್ರಿಭುಜದ ಮಧ್ಯರೇಖೆಗಳ ಏಕಕಾಲೀನ ಬಿಂದು ಯಾವುದು?
  5. ವಿವಿಧ ತ್ರಿಭುಜಗಳಲ್ಲಿ ಸ್ಥಾನವನ್ನು ಗುರುತಿಸಿ.?

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ವಿವಿಧ ತ್ರಿಭುಜಗಳಲ್ಲಿ ಮಧ್ಯಭಿಂದುವಿನ ಸ್ಥಾನ ಏನು?
  2. ಪ್ರತಿಯೊಂದು ರೀತಿಯ ತ್ರಿಭುಜದಲ್ಲೂ ಸೆಂಟ್ರಾಯ್ಡ್ (ಮಧ್ಯಭಿಂದು)ಯಾವಾಗಲೂ ಕೇಂದ್ರದಲ್ಲಿ ಬರುತ್ತದೆ ಎಂದು ನೀವು ಏಕೆ ಭಾವಿಸುತ್ತೀರಿ?
  3. ಸೆಂಟ್ರಾಯ್ಡ್ (ಮಧ್ಯಭಿಂದು)ಏನು ಸೂಚಿಸುತ್ತದೆ?
  4. ಮಧ್ಯಭಿಂದು ವಿನ ಪ್ರಾಯೋಗಿಕ ಅನ್ವಯಗಳು ಯಾವುವು?