ದೋಣಿ ವಿಹಾರ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ
ಉದ್ದೇಶಗಳು :
ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ
ಕಥಾ ವಸ್ತು : ಕುಟುಂಬ, ಸಾಹಸಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Doni%20Vihara.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
- ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಕೆರೆ ಮತ್ತು ದಡ ಆಡಿಸುವುದು.
- ಜಾನಿ ಜಪಾನಿನ ಮಂಗಗಳು ಎಂಬ ಅಭಿನಯ ಗೀತೆಯನ್ನು ಆಡಿಸುವುದು
- ಬರಪೇಟೆ ಬಂಗಾರ ಜಿಲ್ಲಾ ಪೇಟೆ ಸಿಂಗಾರ ಎಂಬ ಅಭಿನಯ ಗೀತೆ ಹಾಡಿಸುವುದು.
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
- ಬೇಸಿಗೆ ರಜೆಯಲ್ಲಿ ನೀವು ಏನು ಮಾಡಿರುವಿರಿ?
- ನೀವು ಯಾವ ಊರಿಗೆ ಹೋಗಿದ್ದಿರಿ?
- ಅಲ್ಲಿ ನೀನು ಯಾವೆಲ್ಲಾ ಸ್ಥಳಗಳನ್ನು ನೋಡಿ ಇಷ್ಟಪಟ್ಟೆ.
- ನೀನು ನದಿಯಲ್ಲಿ ಏನೇನು ನೋಡಿದ್ದೀಯಾ?
- ಹಾಗಾದರೆ ಮಕ್ಕಳೇ ಇಂದು ನದಿಯ ಕುರಿತಾಗಿ ಒಂದು ಕಥೆಯನ್ನ ಕೇಳೋಣ.
ಆಲಿಸುವ ಸಂಧರ್ಭದ ಚಟುವಟಿಕೆಗಳು
- 40 sec Pause
- ರಾಜುವಿಗೆ ನದಿಯೆಂದರೆ ಏಕೆ ಇಷ್ಟ ಆಗಿರಬಹುದೂ?
- ನಿಮಗೂ ನದಿ ಎಂದರೇ ಇಷ್ಟವೇ?
- ಹಾಗಾದರೇ ಏಕೆ?
- 1.40 sec Pause
- ಆ ಸಂಜೆ ರಾಜು ನದಿ ದಂಡೆಗೆ ಹೋಗುವನೇ?
- ನದಿ ದಂಡೆಗೆ ಏಕೆ ಹೋಗಬೇಕು?
- ನದಿ ದಂಡೆಗೆ ಹೋಗಲು ರಾಜು ಏನು ಮಾಡಿದನು?
- ನೀನು ನದಿ ದಂಡೆಗೆ ಹೋದರೆ ಏನು ಮಾಡುತ್ತೀಯ?
- 2.49 Pause
- ಅದು ಯಾವ ಕಾಯಿ ಆಗಿರಬಹುದು?
- ಅದನ್ನು ಏಕೆ ಕಟ್ಟುತ್ತಾರೆ?
- ನೀನೂ ಹೀಗೆ ಕಾಯಿ ಕಟ್ಟಿಕೊಂಡು ಈಜಾಡಿದ್ದೀಯಾ?
- ಈಜಾಡುವಾಗ ಮುಳುಗದಂತೆ ಯಾವೆಲ್ಲಾ ತಂತ್ರಗಳನ್ನು ಉಪಯೋಗಿಸಬಹುದು ?
- 4.53 Pause
- ರಾಜು ದೋಣಿಯಲ್ಲಿ ಕುಳಿತನಾ?
- ನೀರು ಕಂಡರೆ ನಿಮಗೆ ಭಯವೋ ಖುಷಿಯೋ?
ಆಲಿಸಿದ ನಂತರದ ಚಟುವಟಿಕೆಗಳು
- ಇಡೀ ಕಥೆಯಲ್ಲಿ ಕೆಲವು ಪದಗಳನ್ನು ಆಯ್ದು ಅದನ್ನು ಓದಿ ಬರೆಯಲು ಹೇಳುವುದು
- ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಬರೆಯುವುದು
- ಕಥೆಯಲ್ಲಿ ಬಂದ ಪಾತ್ರಗಳನ್ನು ಪಟ್ಟಿ ಮಾಡುವುದು.
- ಕಥೆಯ ಪ್ರಾರಂಭ, ಮಧ್ಯಮ ಮತ್ತು ಅಂತ್ಯದ ಹಂತಗಳನ್ನು ಗುರುತಿಸಿ ಹೇಳುವುದು.
- ನದಿಯಿಂದಾಗುವ ಅನುಕೂಲಗಳು ಹಾಗೂ ಅನಾನುಕೂಲಗಳು ಯಾವುವು?
- ನದಿ ಹೇಗೆ ಕಲುಷಿತಗೊಳ್ಳುತ್ತದೆ? ಅದನ್ನು ಸಂರಕ್ಷಣೆ ಮಾಡುವುದು ಹೇಗೆ?
- ನೀನೊಂದು ನದಿಯಾಗಿದ್ದರೆ ಜನರ ಯಾವ ವರ್ತನೆ ಇಷ್ಟ ಆಗುತ್ತಿತ್ತು ಮತ್ತು ಯಾವ ವರ್ತನೆ ಇಷ್ಟ ಆಗುತ್ತಿರಲಿಲ್ಲ? ಏಕೆ?
- ನಿಮ್ಮ ದೋಣಿ ಪ್ರಯಾಣದ ಅನುಭವವನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಬರೆಯಿರಿ .