ನನ್ನನ್ನು ನೋಡಲು ಎಳೆಯಿರಿ,ಇನ್ನೂ ನಾನು ಚೌಕವಾಗಿ ಉಳಿದಿದ್ದರೆ.
Jump to navigation
Jump to search
ಉದ್ದೇಶಗಳು
ಚೌಕದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಿ
ಅಂದಾಜು ಸಮಯ
15 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಜಿಯೋಜೆಬ್ರಾ ಫೈಲ್, ಲ್ಯಾಪ್‌ಟಾಪ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.
ಜಿಯೋಜೆಬ್ರಾ ಆಪಲ್ಟ್ಸ್: ಈ ಜಿಯೋಜೆಬ್ರಾ ವೆಬ್‌ಸೈಟ್‌ನಿಂದ ಬಂದಿದೆ : http://www.geogebratube.org/material/show/id/2474
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಶಿಕ್ಷಕರು ಜಿಯೋಜೆಬ್ರಾ ಕಡತವನ್ನು ಪ್ರಕ್ಷೇಪಿಸಬಹುದು, ಕೆಂಪು ಚುಕ್ಕೆ ಸರಿಸಬಹುದು ಮತ್ತು ಅದು ಇನ್ನೂ ಚೌಕವಾಗಿದೆಯೇ ಎಂದು ವಿದ್ಯಾರ್ಥಿಗಳನ್ನು ಕೇಳಬಹುದು.
- ಅವರ ಉತ್ತರಗಳಿಗೆ ಕಾರಣವಿರಲಿ.
ಅಭಿವೃದ್ಧಿ ಪ್ರಶ್ನೆಗಳು:
- ನೀವು ಯಾವ ಅಕೃತಿಗಳನ್ನು ನೋಡುತ್ತೀರಿ?
- ಕೆಂಪು ಚುಕ್ಕೆ ಚಲಿಸುವಾಗ, ಈಗ ಅದು ಯಾವ ಅಕೃತಿಯಾಗಿದೆ?
- ಇದು ಇನ್ನೂ ಚೌಕವೇ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಆಯತವು ಒಂದು ಚೌಕವೇ?
- ಸಮಾಂತರ ಚತುರ್ಭುಜವು ಒಂದು ಚೌಕವೇ?
- ಎಲ್ಲಾ ಚೌಕಗಳು ಸಮಾಂತರ ಚತುರ್ಭುಜಗಳೇ?
- ಚೌಕವನ್ನು ಒಂದು ರೀತಿಯ ಗಾಳಿಪಟವೆಂದು ಪರಿಗಣಿಸಬಹುದೇ?
- ಚೌಕ ಮತ್ತು ವಜ್ರಾಕೃತಿಯನ್ನು ಪ್ರತ್ಯೇಕಿಸಿ.
- ಚೌಕದ ಗುಣಲಕ್ಷಣಗಳು ಯಾವುವು?