ನೀರಿನ ವಿಧಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ನೀರಿನ ವಿಧಗಳನ್ನು ಗುರುತಿಸುವುದು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಪ್ರನಾಳಗಳು,
  • ಪ್ರನಾಳದ ಸ್ಟಾಂಡ್ ,
  • ಬೀಕರ್ ಗಳು,
  • ಗಾಜಿನ ಕಡ್ಡಿ ,
  • ಸಾಬೂನು ದ್ರಾವಣ
  • ನೀರಿನ ಮಾದರಿಗಳು ೧,೨ & ೩

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ರಾಸಾಯನಶಾಸ್ತ್ರದ ಪ್ರಯೋಗ ಮಾಡುವಾಗ ಏಪ್ರೆನ್ ದರಿಸಿ ಪ್ರಯೋಗ ಮಾಡಬೇಕು
  2. ಪ್ರಯೋಗ ಮಾಡುವಾಗ ನೀರಿನ ಮಾದರಿ ಹಾಗೂ ಸಾಬೂನಿನ ದ್ರಾವಣಗಳನ್ನು ಅಳತೆ ಜಾಡಿಯಲ್ಲಿ ಅಳತೆ ಮಾಡಿ ಕೊಳ್ಳಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರಾತ್ಯಾಕ್ಷಿಕೆಯ ಪ್ರತಿಲಿಪಿ / Transcript of demonstration

  1. ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ ಅವುಗಳಿಗೆ ಪ್ರನಾಳ-೧ , ಪ್ರನಾಳ-೨ & ಪ್ರನಾಳ -೩ ಎಂದು ಗುರುತಿಸಿಕೊಳ್ಳಿ
  2. ಪ್ರನಾಳ-೧ ರಲ್ಲಿ ನೀರಿನ ಮಾದರಿ -೧ ನ್ನು ೧೦ ಮಿಲಿ ತೆಗೆದುಕೊಳ್ಳಿ .
  3. ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .
  4. ಮಿಶ್ರಣವನ್ನು ಚೆನ್ನಾಗಿ ಕಲಕಿ .
  5. ಪ್ರನಾಳ-೧ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ .
  6. ಇದೇ ರೀತಿ ಪ್ರನಾಳ-೨ ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ .
  7. ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ .
  8. ಪ್ರನಾಳ-೨ ರಲ್ಲಾಗಿರುವ ಬದಲಾವಣೆಯನ್ನು ವೀಕ್ಷಿಸಿ.
  9. ಇದೇ ರೀತಿ ಪ್ರನಾಳ- ೩ರಲ್ಲಿ ಕೊಟ್ಟಿರುವ ನೀರಿನ ಮಾದರಿ ತೆಗೆದುಕೊಳ್ಳಿ
  10. ಅದಕ್ಕೆ ೫ ಮಿಲಿ ಸಾಬೂನಿನ ದ್ರಾವಣವನ್ನು ಸೇರಿಸಿ
  11. ಪ್ರನಾಳ-೩ ರಲ್ಲಾದ ಬದಲಾವಣೆಯನ್ನು ವೀಕ್ಷಿಸಿ

ವೀಕ್ಷಣೆ: ಪ್ರನಾಳ-೧ ರಲ್ಲಿ ನೀರು ಸಾಬೂನಿನ ದ್ರಾವಣದೊಂದಿಗೆ ವತಿ೯ಸಿ ಚೆನ್ನಾಗಿ ನೊರೆಕೊಡುತ್ತದೆ.
ಪ್ರನಾಳ-೨ ರಲ್ಲಿ ಉಪಯೋಗಿಸಿದ ಮಾದರಿ ನೀರು ನೊಂದಿಗೆ ಸಾಬೂನಿನ ದ್ರಾವಣದೊಂದಿಗೆ ವರ್ತಿಸಿ ನೊರೆ ಕೊಡುತ್ತದೆ.
ಪ್ರನಾಳ-೩ರಲ್ಲಿ ಉಪಯೋಗಿಸಿದ ಮಾದರಿ ನೀರು ಸಾಬೂನಿನ ದ್ರಾವಣದೊಂದಿಗೆ ವರ್ತಿಸಿ ನೊರೆಕೊಡುವ ಬದಲು ನೀರಿನಲ್ಲಿ ವೀಲೀನವಾಗದ ಚರಟವನ್ನು ಉಂಟುಮಾಡುತ್ತದೆ.
ತೀಮಾ೯ನ:

  • ಪ್ರನಾಳ ೧ ರಲ್ಲಿ ತೆಗೆದುಕೊಂಡಿರುವ ಬಟ್ಟಿ ಇಳಿಸಿದ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು
  • ಪ್ರನಾಳ ೨ ರಲ್ಲಿ ತೆಗೆದುಕೊಂಡಿರುವ ನಲ್ಲಿ ನೀರಿನಲ್ಲಿ ಚರಟವನ್ನು ಉಂಟು ಮಾಡುವ ಯಾವುದೇ ಲವಣಗಳು ಇರುವುದಿಲ್ಲ.ಆದ್ದರಿಂದ ಅದು ಚೆನ್ನಾಗಿ ನೊರೆಕೊಡುತ್ತದೆ ಹಾಗಾಗಿ ಅದು ಮೆದು ನೀರು
  • ಪ್ರನಾಳ ೩ ರಲ್ಲಿ ತೆಗೆದುಕೊಂಡಿರುವ ನೀರಿನ ಮಾದರಿಯು ಬೋರ್ ವೆಲ್ ನೀರಾಗಿದ್ದು ಇದರಲ್ಲಿ ಚರಟವನ್ನು ಉಂಟು ಮಾಡುವ ಲವಣಗಳು ಇರುವುದರಿಂದ ಇದು ಸಾಬೂನಿಮೊಂದಿಗೆ ವತಿFಸಿ ನೊರೆ ಕೊಡುವ ಬದಲು ಚರಟವನ್ನು ಉಂಟುಮಾಡುತ್ತದೆ ಆದ್ದರಿಂದ ಇದು ಗಡಸು ನೀರು.

{{#ev:youtube|xBflYDw3Hxg| 500|left }}






















ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಇತ್ತೀಚಿಗೆ ಸಾಬೂನಿಗಿ೦ತ ಹೆಚ್ಚಾಗಿ ಮಾಜ೯ಕಗಳನ್ನು ಬಳಸುತ್ತಿರುವುದರಿ೦ದ ,ಮಾಜ೯ಕಗಳು ಗಡಸು ನೀರಿನೊ೦ದಿಗೆ ಚೆನ್ನಾಗಿ ನೊರೆ ಕೊಡುತ್ತದೆ.ಆದರೆ ಗಡಸುನೀರು ನಿತ್ಯಜೀವನದಲ್ಲಿ ಸ್ನಾನಮಾಡುವುದು,ಪಾತ್ರೆ ತೊಳೆಯುವಾಗ ಬಿಳಿಯ ಚರಟವನ್ನು ಉ೦ಟುಮಾಡುತ್ತದೆ.ಗಡಸುನೀರು ಜೈವಿಕಶಿಥಿಲೀಯವಲ್ಲ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಮೆದು ನೀರು ಎಂದರೇನು?
  2. ಗಡಸು ನೀರು ಎಂದರೇನು? ಇದು ಸಾಬೂನಿನೊಂದಿಗೆ ಸ್ವಚ್ಛಗೊಳಿಸುವುಕೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ.
  3. ಇತ್ತೀಚಿಗೆ ಸಾಬೂನಿನ ಬಳಕೆಗಿಂತ ಮಾಜ೯ಕಗಳ ಬಳಕೆ ಹೆಚ್ಚಾಗಲು ಕಾರಣವೇನು?
  4. ಗಡಸು ನೀರು ಉಂಟಾಗಲು ಕಾರಣವೇನೆಂದು ಯೋಚಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ