ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ
Jump to navigation
Jump to search
ಚಟುವಟಿಕೆ - ಗುಂಪು ಚಟುವಟಿಕೆ
ಅಂದಾಜು ಸಮಯ
40 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೆನ್
- ಪೇಪರ್
- ಲೈಬ್ರೇರಿ ಪುಸ್ತಕ
- ಇಂಟರ್ನೆಟ್ ಬಳಕೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪುಷ್ಪ ಕೃಷಿ, ಹೂವಿನ ಕೃಷಿಯಲ್ಲಿ ಹೆಚ್ಚು ವಿಶ್ವಾಸ ಮೂಡಿಸುವುದು.
- ವಿದ್ಯಾರ್ಥಿಗಳಲ್ಲಿ ಮೊದಲಿನ ದಿನವೇ ಕೆಲವು ಲಭ್ಯವಿರುವ ವಿವಿಧ ಜಾತಿಯ ಹೂಗಳನ್ನು ತರಲು ಹೇಳುವುದು.
- ಈ ಅಧ್ಯಾಯ ಮಾಡುವಾಗ ಪುಷ್ಪ ಕೃಷಿಯು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸಹಾಯ ಎಂದು ತಿಳಿಸಬಹುದು.
- ಅತೀ ಕಡಿಮೆ ಕೃಷಿ ಭೂಮಿ ಹೊಂದಿರುವವರು ಕೂಡ ಪುಷ್ಪ ಕೃಷಿಯ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.
- ಕಡಿಮೆ ಭೂಮಿ ಹೊದಿರುವವರು ತರಕಾರಿ ಕೃಷಿಯ ಮೂಲಕ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
- ಪೇಪರ್ ಲೇಖನಗಳು
- ಇಂಟರ್ನೆಟ್
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ರೈತರನ್ನು ಕರೆದು ತರಗತಿಯಲ್ಲಿ ಮಾಹಿತಿಯನ್ನು ಕೊಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಚಹಾ ಕೃಷಿ ಮಾಡುವ ರೀತಿ,ಚೀನಾದ ಚಹಾ ಕೃಷಿ,ಸಂಸ್ಕರಣೆ ಮತ್ತು ವರ್ಗೀಕರಣ,ಮೂಲದ ಕುರಿತಾದ ಪುರಾಣಗಳು,ಬೇರೆ ಬೇರೆ ದೇಶದಲ್ಲಿ ಚಹಾ ಕೃಷಿ ಇತ್ಯಾದಿ ಮಾಹಿತಿ ಇದೆ
- tea cultivation in india
- tea cultivation in india
- coffee cultivation in india
- mango farming in india
- grapes farming in india
- floriculture in india
- floriculture in india
- Image:
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಶಿಕ್ಷಕರು ಪ್ರಾರಂಭದಲ್ಲಿ ಕೆಲವು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಅವರಿಗೆ ಗುಂಪು ಚಟುವಟಿಕೆ ಮಾಡಬೇಕಾದ ಪಠ್ಯವನ್ನು ಹಂಚಿಕೆ ಮಾಡುವುದು.
- ಶಿಕ್ಷಕರು ಗುಂಪು ಚಟುವಟಿಕೆಗೆ ಸಂಬಂದಿಸಿದ ಪಠ್ಯಕ್ಕೆ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿ ಸಂಕ್ಷಿಪ್ತ ಚರ್ಚೆಯನ್ನು ಮಾಡಿ , ವಿದ್ಯಾರ್ಥಿಗಳು ಸ್ವ ಕಲಿಕೆಗೆ ಅನುಕೂಲ ಮಾಡಿಕೊಡುವುದು.
- ನಂತರ ವಿದ್ಯಾರ್ಥಿಗಳು ಗುಂಪುಗಳಲ್ಲಿ ಕುಳಿತು ತಮಗೆ ಕೊಟ್ಟಿರುವ ಪಠ್ಯಕ್ಕೆ ಸಂಬಂದಿಸಿದಂತೆ ಲೈಬ್ರೇರಿ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸುವುದು.
- ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದ ಲೈಬ್ರೇರಿಗಳನ್ನು ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.
- ವಿದ್ಯಾರ್ಥಿಗಳು ಗುಂಪು ಚರ್ಚೆ ಮಾಡಿ ಮಾಹಿತಿ ತಿಳಿಯುವರು.
- ಅವಧಿಯ ಕೊನೆಗೆ ತಾವು ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವರು.
- ಈ ಸಂದರ್ಬದಲ್ಲಿ ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದಂತೆ ವಿಷಯ ಚರ್ಚೆ ಮಾಡುವರು.
- ಶಿಕ್ಷಕರು ಅವದಿಯ ಪ್ರಾರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ ಪಠ್ಯಕ್ಕೆ ,ಅವರು ಯಾವ ಮಾಹಿತಿಯನ್ನು ಸಂಗ್ರಹಿಸ ಬೇಕು ಎಂದು ಪ್ರಶ್ನಾವಳಿಯನ್ನು ಕೊಡುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಹತ್ತೀ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ನಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಯಾಕಾಗಿರಬಹುದು?
- ತೋಟಗಾರಿಕಾ ಬೆಳೆಯು ಬೆಳೆಯುದರಿಂದ ಮಹಿಳೆಯರನ್ನು ಸ್ವಾವಲಂಬಿ ಯಾಗಿಸಬಹುದೇ?
- ಭಾರತದಲ್ಲಿ ರೈತರ ಸಾಲಮನ್ನ ಮುಂತಾದ ಕಾರ್ಯಕ್ರಮಗಳು ರೈತರಲ್ಲಿ ಉದಾಸಿನ ಮನೋಭಾವ ಬೆಳೆಯಲು ಕಾರಣವಾಗುತ್ತಿದೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಪ್ರಮುಖ ಪಾನಿಯ ಬೆಳೆ ಯಾವುದು?
- ಚಹ ಬೆಳೆಯಲು ಬೇಕಾದ ವಾತಾವರಣ ಯಾವುದು?
- ಹೂವು ಕೃಷಿಯ ಉಪಯೋಗವೇನು?
- ನಿಮ್ಮ ಊರಿನ ತೋಟಗಾಟಿಕಾ ಬೆಳೆಗಳು ಯಾವುವು?
ಪ್ರಶ್ನೆಗಳು
ಪಠ್ಯಪುಸ್ತಕದ ಪ್ರಶ್ನೆಗಳನ್ನು ಕೇಳುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ