ಪ್ರವೇಶದ್ವಾರ:ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ/ಪೀಠಿಕೆ
ಶಾಲಾ ಶಿಕ್ಷಣದಲ್ಲಿ ದಿನನಿತ್ಯವೂ ಅರ್ಥಪೂರ್ಣ ಕಲಿಕೆಯ ವಾತಾವರಣ ನಿರ್ಮಿಸುವ ಅಗತ್ಯವಿದೆ. ಆದರೂ ಕೂಡ ವಿವಿಧ ಬಗೆಯ ಒಳಹರಿವು ಹಾಗೂ ವ್ಯವಸ್ಥೆಯನ್ನು ಸಮರ್ಪಕವಾಗಿ ತಂದರೆ ಶಾಲೆಗಳು ಕಲಿಕಾ ಸಂಘಟನೆಗಳಂತೆ ಗುರಿಗಳನ್ನು ಸಾಧಿಸಬಹುದು.ಶಾಲಾ ಸದಸ್ಯರಿಂದ ಮತ್ತು ಬೆಂಬಲಿತ ಸಂಸ್ಥೆಗಳಿಂದ ಶಾಲೆಗೆ ಬೇಕಾದ ವಿವಿಧ ಅವಶ್ಯಕತೆಗಳಲ್ಲಿ ಮುಖ್ಯವಾಗಿ : ಶಾಲೆಗಳನ್ನು ಸಂಸ್ಥೆಗಳಾಗಿ ನಿಕಟವಾಗಿ ವೀಕ್ಷಿಸುವುದು , ಹಾಗೂ ಶಾಲೆಗೆ ಬೇಕಾದ ನಾಯಕತ್ವ ಹಾಗೂ ನಿರ್ವಹಣೆ ಇವುಗಳ ಪಾತ್ರ.
ಇದು ಹೆಚ್ಚಾಗಿ ಶಾಲೆಗಳಿಗೆ ಬೇಕಾಗುವ ಕಾರ್ಯನೀತಿ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಂಬಲ ಹಾಗೂ ಜವಾಬ್ದಾರಿ ಹೊರುವಂತ ಸಂಸ್ಥೆಗಳನ್ನು ಒಳಗೊಂಡಿರುವ ಶಾಲಾ ವ್ಯವಸ್ಥೆಗೆ ಒಟ್ಟಾರೆಯಾಗಿ ಅನ್ವಯಿಸುತ್ತದೆ.
ಶಿಕ್ಷಣ ನಾಯಕತ್ವ ಹಾಗೂ ನಿರ್ವಹಣೆ (ELM) ಇವುಗಳು, ಶಿಕ್ಷಣ ವ್ಯವಸ್ಥೆಯಲ್ಲಿ ವಿಭಿನ್ನ ವ್ಯಕ್ತಿಗಳ ಪಾತ್ರ, ಹಾಗೂ ಅವರ ಕ್ರಿಯೆ ಮ ತ್ತು ಸಂಬಂಧಗಳು ,ವ್ಯವಸ್ಥೆಯ ಉದ್ದೇಶ ಪೂರೈಸುವುದರ ಅಭ್ಯಾಸ ಮಾಡಲು ಬಯಸುತ್ತದೆ.