ಪ್ರಾತ್ಯಕ್ಷಿಕೆಯ ಮೂಲಕ ಆಹಾರ ವಿಷಯ ಬೋಧನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪಾಠ : ಆಹಾರ, ವಿಷಯ: ಸ್ಟಾರ್ಚ್ ಅನ್ನು ಪರೀಕ್ಷಿಸುವುದು (ಸ್ಟಾರ್ಚ್ ಪರೀಕ್ಷೆ), ಅವಧಿ: 40 ನಿಮಿಷಗಳು

ಬೋಧನಾ ಉದ್ದೇಶಗಳು:

  • ವಿದ್ಯಾರ್ಥಿಗಳು ಆಹಾರ ಪದಾರ್ಥದಲ್ಲಿ ಸ್ಟಾರ್ಚ್ ಇರುವಿಕೆಯ ಪರೀಕ್ಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗುವರು.
  • ಕೆಲವು ಸಾಮಾನ್ಯವಾಗಿ ದೊರೆಯುವ ಸ್ಟಾರ್ಚ್ ಇರುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡುವರು
  • ಆಹಾರ ಪದಾರ್ಥಗಳಲ್ಲಿರುವ ಸ್ಟಾರ್ಚ್ ಪರೀಕ್ಷಿಸುವ ವಿಧಾನವನ್ನು ವಿವರಿಸುವರು
  • ಈ ಪಾಠದ ನಂತರ, ವಿದ್ಯಾರ್ಥಿಗಳು ಉಲ್ಲೇಖಿಸಿರುವ ಸಾಮರ್ಥ್ಯವನ್ನು ಗಳಿಸುವರು.

ಪೀಠಿಕೆ:

ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಹುಟ್ಟಿಸಲು ಹಾಗೂ ಸರಳ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅವರಿಗೆ ಈ ವಿಷಯದ ಕುರಿತು ಇರುವ ಹಿಂದಿನ ಜ್ಞಾನವನ್ನು ಪರೀಕ್ಷಿಸಬಹುದು. ಅಹಾರದಲ್ಲಿ ಕಾರ್ಬೋಹೈಡ್ರೆಟ್ ಇರುವುದರ ಅಗತ್ಯತೆ ಏನು? ಸಸ್ಯಗಳಲ್ಲಿ ಕಾರ್ಬೋಹೈಡ್ರೆಟ್ ಹೇಗೆ ಸಂಗ್ರಹವಾಗಿದೆ? ಇದಾದ ನಂತರ ಪ್ರತಿಕ್ರಿಯೆಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ. ಸ್ಟಾರ್ಚ್ ಇರುವಿಕೆಯನ್ನು ಪರಿಶೀಲಿಸಲು ಒಂದು ಸರಳ ಪ್ರಯೋಗವನ್ನು ಕೈಗೊಳ್ಳುವಾಗ ಅವುಗಳನ್ನು ಪರಿಶೀಲಿಸಿ ಹೇಳಲು ತಿಳಿಸಿ. ಹೇಗೆ ಮಾಡುವುದು ಎಂಬುದನ್ನು ಅವರು ನೋಡಲಿ.

ವೀಡಿಯೋ ಸಂಪನ್ಮೂಲ:

Food Test - Starch | ಆಹಾರ ಪರೀಕ್ಷೆ - ಪಿಷ್ಟ | ThinkTac YouTube video - ಇಲ್ಲಿ ಕ್ಲಿಕ್ಕಿಸಿ

ಟೇಬಲ್ 1.1 ಆಹಾರ ಪದಾರ್ಥದಲ್ಲಿ ಸ್ಟಾರ್ಚ್ ಇರುವಿಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಒಂದು ಯೋಜನೆ

ಪ್ರಾತ್ಯಕ್ಷಿಕೆಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೊಟ್ಟಿಸಲು ವಿದ್ಯಾರ್ಥಿಗಳಿಗೆ ಸ್ಟಾರ್ಚ್ ಪರೀಕ್ಷೆಯನ್ನು ತೋರಿಸಲು
ಕಲಿಕಾ ಉದ್ದೇಶಗಳು ಪ್ರಾತ್ಯಕ್ಷಿಕೆಯ ಅಂತ್ಯದಲ್ಲಿ ವಿದ್ಯಾರ್ಥಿಗಳು

ಸ್ಟಾರ್ಚ್ ಪರೀಕ್ಷೆಯನ್ನು ವಿವರಿಸುವರು

ಸ್ಟಾರ್ಚ್ ಇರುವ ಪದಾರ್ಥಗಳನ್ನು ಗುರುತಿಸುವರು

ಬೇಕಾಗಿರುವ ಸಂಪನ್ಮೂಲಗಳು ವಿವಿಧ ಆಹಾರ ಪದಾರ್ಥಗಳು : ರೋಟಿ, ಅಕ್ಕಿ, ಸೊಪ್ಪು. ಬೇಯಿಸಿದ ಬೇಳೆ, ಆಲೂಗಡ್ಡೆ, ಗೆಣಸು ಮುಂತಾದವುಗಳು

ಅಯೋಡಿನ್ ಮತ್ತು ಪಿಪೆಟ್

ಚಿಕ್ಕ ಪ್ಲೇಟ್ ಗಳು

ಉಪಯೋಗಿಸಿದ ಬಕೆಟ್

ಪ್ರಾತ್ಯಕ್ಷಿಕೆಯ ಯೋಜನೆ

ಸುರಕ್ಷತೆ ಹಲವಾರು ಬೇರೆ ಬೇರೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು 'ಶಕ್ತಿ' ಎಂಬ ಪದವನ್ನು ತಿಳಿದಿರುತ್ತಾರೆ. ಇದು ಅವರಿಗೆ ಭೌತಶಾಸ್ತ್ರ (ಶಕ್ತಿಯ ವರ್ಗಾವಣೆ) ರಸಾಯನ ಶಾಸ್ತ್ರ (ಶಕ್ತಿಯನ್ನು ಹೇಗೆ ಉತ್ಪಾದಿಸುವುದು) ಮತ್ತು ಜೀವಶಾಸ್ತ್ರ (ಸಜೀವ ವಸ್ತುಗಳು ಶಕ್ತಿಯನ್ನು ಹೇಗೆ ಪಡೆಯುತ್ತವೆ) ದಲ್ಲಿ ಕಲಿತಿರುವುದನ್ನು ಒಟ್ಟುಗೂಡಿಸಲು ಸಹಾಯವಾಗುವುದು
ವಿದ್ಯಾರ್ಥಿಗಳ ಸ್ಥಾನ ಮುಂದೆ, ನೆಲದ ಮೇಲೆ ಕುಳಿತಿರುವವರು. ಕೆಲವರು ಕುರ್ಚಿಗಳ ಮೇಲೆ, ಎತ್ತರವಿರುವ ವಿದ್ಯಾರ್ಥಿಗಳು ಹಿಂದೆ ನಿಂತಿರುವರು.(ಹೆಸರುಗಳನ್ನು ನಮೂದಿಸಿ
ಪೀಠಿಕೆ ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳನ್ನು ಪರಿಶೀಲಿಸುವುದು.

ಯಾವ ಆಹಾರ ಪದಾರ್ಥ. ಯಾವ ಪೋಷಕಾಂಶಗಳನ್ನು ಹೊಂದಿದೆ ಎಂದು ಗುರುತಿಸಲು ಆಹಾರ ಪದಾರ್ಥ ಪರೀಕ್ಷೆ

ಹಂತ1 ಸ್ಟಾರ್ಚ್ ಇರುವಿಕೆಯನ್ನು ತೋರಿಸಲು ಸ್ಟಾರ್ಚ್ ಇರುವ ಪದಾರ್ಥಗಳ ಪರೀಕ್ಷೆ

ಸ್ಟಾರ್ಚ್ ಇಲ್ಲದಿರುವುದನ್ನು ತೋರಿಸಲು ಸ್ಟಾರ್ಚ್ ಇಲ್ಲದಿರುವ ಪದಾರ್ಥಗಳ ಪರೀಕ್ಷೆ

ಹಂತ 2 ವಿವಿಧ ಆಹಾರ ಪದಾರ್ಥಗಳನ್ನು ಪರೀಕ್ಷಿಸಿ. ಆಹಾರ ಪದಾರ್ಥದ ಹೆಸರನ್ನು ಕಪ್ಪುಹಲಗೆಯ ಮೇಲಿರುವ ಫಲಿತಾಂಶ ಟೇಬಲ್ ನಲ್ಲಿ ಬರೆಯಿರಿ.
ಹಂತ 3 ನಾಲ್ಕು ಪದಾರ್ಥಗಳನ್ನು ಪರೀಕ್ಷಿಸಿ (ಎರಡು ಸ್ಟಾರ್ಚ್ ಇರುವ, 2 ಸ್ಟಾರ್ಚ್ ಇಲ್ಲದೇ ಇರುವ)
ಹಂತ 4 ಪ್ರಶ್ನೆಗಳ ಮೂಲಕ ಸಾರಾಂಶವನ್ನು ಹೇಳುತ್ತಾ ಪ್ರಾತ್ಯಕ್ಷಿಕೆಯನ್ನು ಮುಗಿಸಿರಿ.

ಟೇಬಲ್1.2 ಶಿಕ್ಷಕರು ಏನು ಹೇಳುತ್ತಾರೆ ಮತ್ತು ಮಾಡುತ್ತಾರೆ.

ವಿಷಯ ಶಿಕ್ಷಕರ ಚಟುವಟಿಕೆ ವಿದ್ಯಾರ್ಥಿಗಳ ಚಟುವಟಿಕೆ ಬೋಧನೋಪಕರಣಗಳು ಕಪ್ಪು ಹಲಗೆಯ ಸಾರಾಂಶ
ಕೆಲವು ಆಹಾರ ಪದಾರ್ಥಗಳು ಯಥೇಚ್ಛವಾಗಿ ಕಾರ್ಬೋಹೈಡ್ರೆಟ್ ನ್ನು ಹೊಂದಿರುತ್ತವೆ. ಅವು ನಮಗೆ ಶಕ್ತಿಯನ್ನು ಕೊಡುತ್ತವೆ. ಹಾಗೂ ಅವುಗಳನ್ನು ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳು ಎಂದು ಕರೆಯುತ್ತೇವೆ.

ಸಸ್ಯಗಳಲ್ಲಿ ಸ್ಟಾರ್ಚ್ ಮತ್ತು ಶರ್ಕರ ರೂಪದಲ್ಲಿ ಸಂಗ್ರಹವಾಗಿರುವ ಒಂದು ಮುಖ್ಯವಾದ ಪೋಷಕಾಂಶ ಕಾರ್ಬೋಹೈಡ್ರೇಟ್ ಗಳು

ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳಿರುವ ಚಿತ್ರವನ್ನು ತೋರಿಸುತ್ತಾ. ಹೇಳುವರು ಕೆಲವು ಆಹಾರ ಪದಾರ್ಥಗಳು ಶಕ್ತಿಯನ್ನು ಕೊಡುತ್ತವೆ. ಆದರೆ, ಒಂದು ಬಟ್ಟಲು ಅಕ್ಕಿಯನ್ನು ಅಥವಾ ಆಲೂಗಡ್ಡೆಗಳನ್ನು ಕೈಯಲ್ಲಿ ಹಿಡಿಯುವುದರಿಂದ ಸಾಧ್ಯವೇ?

ಎನ್ನುವುದನ್ನು ಹೇಳಿರಿ.

ಇದನ್ನು ತಿನ್ನುವ ಅವಶ್ಯಕತೆ ಇದೆ ಎಂದು ಪ್ರತಿಕ್ರಿಯಿಸಿ ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳಿರುವ ಚಿತ್ರದ ಚಾರ್ಟ್ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು
ಸ್ಟಾರ್ಚ್ ಇರುವಿಕೆಯನ್ನು ಕಂಡುಕೊಳ್ಳಲು ಆಹಾರ ಪದಾರ್ಥದೊಂದಿಗೆ ಅಯೋಡಿನ್ ಪರೀಕ್ಷೆಯನ್ನು ಮಾಡುವುದು ಅಯೋಡಿನ್‌ ದುರ್ಬಲ(diute) ದ್ರಾವಣವನ್ನು ತಯಾರಿಸುವರು ಮತ್ತು ಸ್ಟಾರ್ಚ್ ಗೆ ಅಯೋಡಿನ್ ಹಾಕುವುದರಿಂದ ಅದು ನೀಲಿ-ಕಪ್ಪು ಬಣ್ಣಕ್ಕೆ ಬರುತ್ತದೆ ಎಂದು ಹೇಳುವರು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುವರು ಆಹಾರ ಪದಾರ್ಥದಲ್ಲಿ ಸ್ಟಾರ್ಚ್ ಇರುವಿಕೆಯನ್ನು ಪರೀಕ್ಷಿಸುವುದು. ಅಯೋಡಿನ್ ನ್ನು ಸ್ಟಾರ್ಚ್ ಗೆ ಹಾಕುವುದರಿಂದ ನೀಲಿ-ಕಪ್ಪು ಬಣ್ಣಕ್ಕೆ ಬರುತ್ತದೆ.
ಸ್ಟಾರ್ಚ್ ಗೆ ಅಯೋಡಿನ್ ನ್ನು ಹಾಕಿದಾಗ, ಅದು ನೀಲಿ-ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಸ್ಟಾರ್ಚ್ ಇರುವ ಆಹಾರ ಪದಾರ್ಥಗಳು ಮಾತ್ರ ನೀಲಿ-ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಒಂದು ಪ್ರನಾಳಕ್ಕೆ ಸ್ವಲ್ಪ ಆಹಾರ ಪದಾರ್ಥವನ್ನು ಹಾಕಿ ಹಾಗೂ ಅಯೋಡಿನ್ ಹಾಕುವ ಮೊದಲು ಮತ್ತು ನಂತರ ಅದರ ಬಣ್ಣವನ್ನು ಬರೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ. ನಂತರ ಸ್ವಲ್ಪ (ಎರಡು ಅಥವಾ ಮೂರು) ಹನಿ ಅಯೋಡಿನ್ ದ್ರಾವಣವನ್ನು ಆಹಾರ ಪದಾರ್ಥಕ್ಕೆ ಸೇರಿಸುವುದು ಪ್ರತಿಕ್ರಿಯೆ- ಅಯೋಡಿನ್ ದ್ರಾವಣ ಹಾಕುವುದಕ್ಕಿಂತ ಮುಂಚೆ ಹಾಗು ನಂತರ ಬಣ್ಣದಲ್ಲಿ ಆಗುವ ಬದಲಾವಣೆ ಕುರಿತು ಆಹಾರ ಮತ್ತು ಬಣ್ಣದಲ್ಲಾಗುವ ಬದಲಾವಣೆ ತೋರಿಸುವ ಟೇಬಲ್
ಪರೀಕ್ಷೆಯನ್ನು ಮಾಡುವಾಗ (ಕೈಗೊಳ್ಳುವಾಗ) ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು (ಹೇಳಿದರು). ಸಂಕ್ಷಿಪ್ತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಬರೆಯಿರಿ.