ಬಲಿಯನಿತ್ತೊಡೆ ಮುನಿಯೆಂ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಮಾರಿಯ ಗುಡಿಯಲ್ಲಿ ಎಳೆಯರು
ಸಂಪದ್ಭರಿತವಾದ ಭರತಖಂಡ. ಅದರಲ್ಲಿ ಪ್ರಸಿದ್ಧವಾದ ಅಯೋಧ್ಯಾದೇಶ. ಅದರ ರಾಜಧಾನಿ ರಾಜಪುರ. ಅದನ್ನು ಆಳುತ್ತಿದ್ದ ದೊರೆ ಮಾರಿದತ್ತ. ಆ ಊರಿನ ದೇವತೆ ಚಂಡಮಾರಿ. ಆಕೆಗೆ ಪ್ರತಿ ಚೈತ್ರ, ಆಶ್ವಯುಜಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಆಗ ಆಕೆಗೆ ಮನುಷ್ಯರನ್ನೂ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದರು.

ಒಮ್ಮೆ ಚೈತ್ರ ಜಾತ್ರೆ ನಡೆಯಬೇಕಾಗಿತ್ತು. ಜಾತ್ರೆಯ ಪೂಜೆಯಲ್ಲಿ ದೊರೆ ಮಾರಿದತ್ತನಿಗೆ ಬಹಳ ಆಸಕ್ತಿ. ಅವನು ಚಂಡಕರ್ಮ ಎನ್ನುವ ತಳವಾರನನ್ನು ಕರೆದು, ‘ದೇವಿಗೆ ಬಲಿ ಕೊಡಬೇಕು, ಇಬ್ಬರು ಮನುಷ್ಯರನ್ನು ಹಿಡಿದು ಕೊಂಡು ಬಾ’ ಎಂದು ಹೇಳುತ್ತಾನೆ.

ತಳವಾರನು ಹುಡುಕಿ ಹುಡುಕಿ, ದಾರಿಯಲ್ಲಿ ಹೋಗುತ್ತಿದ್ದ ಕಿರು ವಯಸ್ಸಿನ, ಶುಭಲಕ್ಷಣದ ಅಣ್ಣ-ತಂಗಿಯರಿಬ್ಬರನ್ನು ಹಿಡಿದು ತರುತ್ತಾನೆ.

ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ.

ಆ ಗುಡಿಯಾದರೋ ಯಮಧರ್ಮನ ಅಡಿಗೆಮನೆಯಂತಿತ್ತು. ಬಲಿಕೊಟ್ಟಿದ್ದ ಅನೇಕ ಪ್ರಾಣಿಗಳ ರುಂಡ, ಮುಂಡಗಳು ಚೆಲ್ಲಾಡಿವೆ. ಸಾಯುತ್ತಿರುವ ಪ್ರಾಣಿಗಳು ಅರಚುತ್ತಿವೆ. ನೋಡಿದವರಿಗೆ ಹೆದರಿಕೆಯಿಂದ ಪ್ರಜ್ಞೆ ತಪ್ಪುವಂತಿದೆ. ಆ ಧೀರ ಮಕ್ಕಳು ಅದನ್ನು ನೋಡಿಯೂ ಅಧೀರರಾಗದೆ ಮಾರಿದತ್ತನ ಮುಂದೆ ಹೋಗಿ ನಿಲ್ಲುತ್ತಾರೆ

ಎಂತಹ ಮಕ್ಕಳು! ಯಾರಿವರು?

ಆ ಮಕ್ಕಳ ಲಲಿತಾಕಾರಕ್ಕೂ ಧೈರ್ಯಕ್ಕೂ ಮಾರಿದತ್ತ ಆಶ್ಚರ್ಯಗೊಳ್ಳುತ್ತಾನೆ. ತಲೆ ಕತ್ತರಿಸಿಕೊಳ್ಳುವುದಕ್ಕೆ ಮೊದಲು ದೊರೆಯನ್ನು ಹರಸಬೇಕೆಂದು ಅಲ್ಲಿಯ ಜನರು ಅಭಯರುಚಿ, ಅಭಯಮತಿಯರಿಗೆ ಹೇಳುತ್ತಾರೆ. ಆಗ ಅಭಯರುಚಿ ಮಾರಿದತ್ತನಿಗೆ ‘ನಿರ್ಮಲ ಧರ್ಮದಿಂದ ಭೂಮಿಯನ್ನು ಪಾಲಿಸ” ಎಂದು ಆಶೀರ್ವದಿಸುತ್ತಾನೆ.

ಮೊದಲೇ ಆ ಮಕ್ಕಳ ರೂಪು, ಧೈರ್ಯಕ್ಕೆ ಆಶ್ಚರ್ಯಗೊಂಡಿದ್ದ ಮಾರಿದತ್ತನ ಮನಸ್ಸು ಈ ಮಂಗಳದ ಮಾತುಗಳನ್ನು ಕೇಳುತ್ತಿದ್ದಂತೆಯೇ ಸೋತುಹೋಗುತ್ತದೆ. ಅವನಿಗೆ ಆಶ್ಚರ್ಯ. ’ಇಷ್ಟು ಚಿಕ್ಕ ವಯಸ್ಸಿನವರಿಗೆ ಇಂತಹ ಧೈರ್ಯ ಹೇಗೆ ಬಂದಿತು? ಇಂತಹ ಮನಸ್ಸಿನ ಶಾಂತಿ ಹೇಗೆ ಬಂದಿತು? ಎಂದು ಅವನು ಬೆರಗಾಗುತ್ತಾನೆ. ಆ ಮಕ್ಕಳ ಕೊರಳನ್ನು ಕಡಿಯಲು ಎತ್ತಿದ್ದ ಅವನ ಖಡ್ಗದ ಕೈ ಹಾಗೇ ಕೆಳಕ್ಕೆ ಇಳಿಯುತ್ತದೆ. ಅವರ ವಿಷಯವನ್ನು ತಿಳಿಯಲು ಮನಸ್ಸು ಹಾತೊರೆಯುತ್ತದೆ. ಆಗ ಅವರು ಆ ಮಕ್ಕಳನ್ನು, “ನಿಮ್ಮದು ಯಾವ ಕುಲ? ನೀವು ಯಾರ ಮಕ್ಕಳು? ನೀವು ಎಲ್ಲಿಂದ ಬಂದಿರಿ? ಈ ಚಿಕ್ಕ ವಯಸ್ಸಿನಲ್ಲಿ ಈ ಭಿಕ್ಞಾ ವೃತಿ ಏಕೆ?” ಎಂದು ಒಮ್ಮೆಲೇ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ಆಗ, “ನಮ್ಮ ನಿರ್ಮಲ ಚರಿತ್ರೆ, ಧರ್ಮವಾಗಿ ಬದುಕುವವರಿಗೆ ಮಾತ್ರ ರುಚಿಸುತ್ತದೆ, ಇತರರಿಗೆ ರುಚಿಸದು” ಎಂದು ಅಭಯರುಚಿ ಹೇಳುತ್ತಾನೆ. ಆದರೆ ದೊರೆ ಮತ್ತೊಮ್ಮೆ ಕೈಮುಗಿದು ಆ ಮಕ್ಕಳನ್ನು ಪ್ರಾರ್ಥಿಸುತ್ತಾನೆ. ದಯೆಯಿಂದ ತುಂಬಿದ ಮಾರಿದತ್ತನ ಮನಸ್ಸನ್ನು ಕಂಡು, ಅಭಯರುಚಿ ತಮ್ಮ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ.

ಕಲಿಕೋದ್ದೇಶಗಳು

ಕವಿ ಪರಿಚಯ

ಕವಿ ಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ (ಕಾಲ :ಕ್ರಿ.ಶ.೧೧೮೦-೧೨೬೦) ಜನ್ನನ ತಂದೆ ಶಂಕರ (ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು.ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಜೈನಮತೀಯನಾದರೂ, ಅವನ ಸಾಹಿತ್ಯ ಕೃಷಿ, ಸರ್ವಪ್ರಾಕಾರಗಳನ್ನು ವ್ಯಾಪಿಸಿತ್ತು. ಜನ್ನನು, ಸಿಂದಗಿ ತಾಲೂಕಿನ ಕೊಂಡಗೂಳಿಯಲ್ಲಿ ಹುಟ್ಟಿ, ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧,೦೦೦, ತಾಳೆಗರಿಗಳ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು, ಗೌರವಿಸಿದನೆಂದು ತಿಳಿದುಬರುತ್ತದೆ. ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು, ಜನ್ನನ ಆಧ್ಯಾತ್ಮಿಕ ಗುರು ಮಕಾಶಿಗಳಾಗಿದ್ದರು.
ಜನ್ನನ ರಚನೆಗಳು :

 1. ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು.
 2. ಜನ್ನನ ಎರಡನೆಯ ರಚನೆ ಅನಂತನಾಥಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.
 3. ಶಾಸನ ರಚನೆಯಲ್ಲಿ ಜನ್ನ ಎತ್ತಿದ ಕೈ :ಜನ್ನನ ಪ್ರತಿಭೆಯನ್ನು, ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

'ಕಣಜ'ದಲ್ಲಿನ ಜನ್ನನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿರ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ