ಬೆಳೆ ಋತುಗಳು ಮತ್ತು ಬೆಳೆಯ ಮಾದರಿ ನಿರ್ದರಿಸುವ ಅಂಶಗಳು
Jump to navigation
Jump to search
ಚಟುವಟಿಕೆ - ಕಲಿಕಾ ನಿಲ್ದಾಣ
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡ್ರಾಯಿಂಗ್ ಶೀಟ್
- ಸ್ಕೆಚ್ ಪೆನ್
- ಖಾಲಿ ಕಾಗದ
- ಪೆನ್
- ಲೈಬ್ರೇರಿ
- ಕಂಪ್ಯೂಟರ್
- ಹಳೆಯ ಪೇಪರ್ ಮಾಹಿತಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಶಿಕ್ಷಕರು ಮೊದಲೇ ಡ್ರಾಯಿಂಗ್ ಶೀಟ್ನಲ್ಲಿ ವಿವರವನ್ನು ಬರೆದು ಕೊಳ್ಳುವುದು.
- ಶಿಕ್ಷಕರು ಮಾಹಿತಿಯನ್ನು ಅನುಕೂಲಿಸುವ ಸಂದರ್ಬದಲ್ಲಿ ಸ್ಥಳೀಯ ಕೃಷಿಗೆ ಸಂಬಂದಿಸಿದ ಮಾಹಿತಿಯೊಂದಿಗೆ ಹೋಲಿಸಬೇಕು.
- ವಿದ್ಯಾರ್ಥಿ ಊರಿನಲ್ಲಿ ಖಾರಿಫ್ ಬೆಳೆ ಮತ್ತು ರಾಬಿ ಬೆಳೆ ಯಾವುದು ಎಂದು ತಿಳಿಸ ಬೇಕು
- ಸಾಮಾಜಿಕ ಅಂಶಗಳ ಬಗ್ಗೆ ಇರುವ ಕಲ್ಪನೆಯನ್ನು ವೈಜ್ಞಾನಿಕವಾಗಿ ವಿಶ್ಲೇಶಿಸಬೇಕು.
- ಸಾವಯವ ಕೃಷಿಯಲ್ಲಿ ಆಸಕ್ತಿ ಬರುವಂತೆ ಮಾಡುವುದು.
- ವ್ಯವಸಾಯದಲ್ಲಿಯೂ ಭವಿಷ್ಯ ರೂಪಿಸಬಹುದು ಎಂದು ಭರವಸೆ ಮೂಡಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
- ಪೇಪರ್
- ಇಂಟರ್ನೆಟ್
- ಲೈಬ್ರೇರಿ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ಸ್ಥಳೀಯ ರೈತರಿಂದ ಮಾಹಿತಿಯನ್ನು ಕೊಡಿಸುವುದು.
- ಕೃಷಿ ಅಧಿಕಾರಿಯನ್ನು ಶಾಲೆಗೆ ಆಹ್ವಾನಿಸಿ ವೈಜ್ಞಾನಿಕ ಬೇಸಾಯದ ಮಾಹಿತಿ ಕೊಡುವುದು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ತರಕಾರಿ ಕೃಷಿ ಬಗ್ಗೆ ಮಾಹಿತಿ ಇದೆ.ಇದನ್ನು ಕ್ಲಿಕ್ ಮಾಡಿ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಶಿಕ್ಷಕರು ಮೊದಲು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡುವುದು.
- ಪ್ರತೀ ಗುಂಪಿನಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಪ್ರತ್ಯೇಕಿಸಿ ಮತ್ತೊಂದು ಗುಂಪು ರಚಿಸುವುದು.
- ಶಿಕ್ಷಕರು ಮೊದಲೇ ತಯಾರಿಸಿಟ್ಟ ಚಾರ್ಟ್ ನ್ನು ( ವಿದ್ಯಾರ್ಥಿ ಗುಂಪಿಗೆ ಸರಿಯಾಗಿ) ಕೆಲವು ದೂರದ ಅಂತರದಲ್ಲಿ ತೂಗುಹಾಕುವುದು.
- ಆ ತೂಗು ಹಾಕಿದ ಚಾರ್ಟ್ ಗಳೇ ಕಲಿಕಾ ನಿಲ್ದಾಣಗಳು.
- ವಿದ್ಯಾರ್ಥಿಗಳ ಗುಂಪುಗಳು ಪ್ರದಕ್ಷಿಣೆ ಹಾಕುತ್ತಾ ಪ್ರತೀ ನಿಲ್ದಾಣದ ಹತ್ತಿರ ಬರುವುದು.
- ವಿದ್ಯಾರ್ಥಿಗಳು ಪ್ರತೀ ನಿಲ್ದಾಣದಲ್ಲಿ ಬರೆದಿರುವುದನ್ನು ಓದುವುದು.ಮನನ ಮಾಡುವುದು.
- ಪ್ರತೀ ನಿಲ್ದಾಣದಲ್ಲಿ ನಿಲುಗಡೆಯ ಸಮಯ 5 ನಿಮಿಷ. 5 ನಿಮಿಷದಲ್ಲಿ ಚಾರ್ಟ್ ನಲ್ಲಿ ಬರೆದಿರುವುದನ್ನು ಓದಬೇಕು.
- ಪ್ರತಿಭಾವಂತರ ಗುಂಪು ಈ ಎಲ್ಲಾ ಚಟುವಟಿಕೆಯನ್ನು ವೀಕ್ಷಿಸುತ್ತಾ ಇರುತ್ತದೆ.
- ಪ್ರತಿಭಾವಂತರ ಗುಂಪು, ಇತರೇ ವಿದ್ಯಾರ್ಥಿಗಳ ಗುಂಪಿಗೆ ಸಹಾಯವನ್ನು ಮಾಡುತ್ತಿರುತ್ತದೆ. ಅವರಿಗೆ ಬರುವ ಕಲಿಕಾ ಸಮಸ್ಯೆಯನ್ನು ಪರಿಹರಿಸುತ್ತದೆ.
- ವಿದ್ಯಾರ್ಥಿಗಳ ಗುಂಪು ಪ್ರತೀಯಂದು ನಿಲ್ದಾಣದ ಹತ್ತಿರ ಬಂದ ಮೇಲೆ ಅವರವರ ಸ್ಥಳದಲ್ಲಿ ಕುಳಿತುಕೊಳ್ಳಲು ಹೇಳುವುದು.
- ನಂತರ ತಾವು ಪ್ರತೀ ನಿಲ್ದಾಣದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಶಿಸುತ್ತದೆ.
- ನಂತರ ಪ್ರತೀ ಗುಂಪಿನವರು ತಾವು ಸಂಗ್ರಹಿಸಿದ ಮಾಹಿತಿಯನ್ನು ಮಂಡಿಸುವರು.
- ಶಿಕ್ಷಕರು ಈ ಸಂದರ್ಬದಲ್ಲಿ ಚರ್ಚಿಸುವರು.ಲೈಬ್ರೇರಿಯನ್ನು ಉಪಯೋಗಿಸುವರು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಮ್ಮ ಕೃಷಿಯು ಹಿಂದುಳಿಯಲು ಕಾರಣ ಜನರ ನಿರಾಸಕ್ತಿ. ಈ ಹೇಳಿಕೆಯನ್ನು ಒಪ್ಪುವಿರಾ?
- ರೈತರ ಆತ್ಮಹತ್ಯೆಯನ್ನು ತಡೆಯಲು ನೀವು ಕೊಡುವ ಸಲಹೆಗಳು ಏನು?
- ವಿದ್ಯಾವಂತರು ಕೃಷಿಯಲ್ಲಿ ತೊಡಗುವುದರಿಂದ ಕೃಷಿಯಲ್ಲಿ ಬದಲಾವಣೆ ಸಾಧ್ಯವಿದೆಯೇ? ಹೇಗೆ?
- ಸಂಪ್ರದಾಯ, ಮೂಢನಂಬಿಕೆ, ಅನಕ್ಷರತೆ ಕೃಷಿಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಗೆ ಹೇಳಬಹುದು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಪ್ರಮುಖ ಖಾರಿಫ್ ಬೆಳೆಗಳು ಯಾವುವು?
- ರಾಬಿ ಬೆಳೆ ಎಂದರೇನು?
- ಜೆಡ್ ಬೇಸಾಯ ಎಂದರೇನು?
ಪ್ರಶ್ನೆಗಳು
- ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶ ಯಾವುದು?
- ವ್ಯವಸಾಯದ ಅವಧಿಗಳು ಯಾವುವು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ