ಭಾರತದ ಪ್ರಾಕೃತಿಕ ಲಕ್ಷಣಗಳು ಪೀಠಿಕೆ ಚಟುವಟಿಕೆ1
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು ಸ್ಥಳೀಯ ಭೂಸ್ವರೂಪಗಳನ್ನು ಅರ್ಥೈಸಿಕೊಳ್ಳುವಿಕೆ
ಅಂದಾಜು ಸಮಯ
೧ ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು, ಪೇಪರ,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ನಾಲ್ಕು ಜನರ ಗುಂಪಿನಲ್ಲೇ ವೀಕ್ಷಿಸಿ, ಹಾಗೂ ಹಿರಿಯರ ಜೊತೆಯಲ್ಲಿ ವೀಕ್ಷಿಸಿ.
- ವೀಕ್ಷಿಸಿದ ವಿಷಯ ಚರ್ಚೆನಂತರದಲ್ಲಿ ಪಟ್ಟಿ ಮಾಡಿ
- ಗುಂಪಿನಲ್ಲಿ ವೀಕ್ಷಿಸುವಾಗ ಜಾಗರೂಕತೆ ಕಾಯ್ದುಕೊಳ್ಳಿ, ಹಾಗೂ ಪರಸ್ಪರ ಸಹಾಯ ಸಹಕಾರವನ್ನು ಮಾಡಿ.
- ಕೇವಲ ಎರಡು ಗಂಟೆ ಮಾತ್ರ ವೀಕ್ಷಣೆಗೆ ಸಮಯ ನೀಡಲಾಗಿದೆ .ಆದ್ದರಿಂದ ಅತೀಯಾದ ವೇಳೆಯನ್ನು ಕೇವಲ ವೀಕ್ಷಣೆಯಲ್ಲಿಯೇ ಕಳೆಯಬೇಡಿ, ಏಕೆಂದರೆ ತದನಂತರದಲ್ಲಿ ಚರ್ಚಿಸಿ ಪಟ್ಟಿಮಾಡಬೇಕಿದೆ.
- ವೀಕ್ಷಿಸಲು ಹೋಗುವಾಗ ಹಾಳೆ , ಪೆನ್ನು, ನೀರು ಹೀಗೆ ಅವಶ್ಯಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ .
ಬಹುಮಾಧ್ಯಮ ಸಂಪನ್ಮೂಲಗಳು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಬೆಟ್ಟಗುಡ್ಡಗಳು, ನದಿ, ಕೆರೆ , ಸರೋವರ , ಪ್ರಸ್ಥಭೂಮಿಗಳು, ಮೈದಾನಗಳು,
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪಾಠ ಅನುಕೂಲಿಸುವ ಹಿಂದಿನ ದಿನ ಅಥವಾ ಶನಿವಾರ ಶಾಲೆಯ ನಂತರದಲ್ಲಿ ಮೇಲಿನ ಕೆಲವು ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಸ್ಥಳೀಯ ಭಸ್ವರೂಪಗಳನ್ನು ವೀಕ್ಷಿಸಿ, ಚರ್ಚಿಸಿ , ಪಟ್ಟಿ ಮಾಡಿಕೊಂಡು ಬರಲು ತಿಳಿಸಿ. ನಂತರದಲ್ಲಿ ಪಾಠ ಅನುಕೂಲಿಸುವಾಗ ಭಾರತದ ಭೂಸ್ವರೂಪವನ್ನು ವಿವರಿಸಿದ ನಂತರ ಸ್ಥ ಳೀಯ ಭೂಸ್ಚರೂಪವು ಯಾವ ವಿಧದಲ್ಲಿ ಬರುವುದು ಮತ್ತು ಏಕೆ ಎಂಬುದನ್ನು ವಿವರಿಸಲು ತಿಳಿಸುವುದು (ಉದಾ: ಪರ್ವತಗಳು, ಮೈದಾನಗಳು,ಕರಾವಳಿ, ಮತ್ತು ಪ್ರಸ್ಥಭೂಮಿ ಇತ್ಯಾದಿ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಸ್ಥಳಿಯ ಪ್ರದೇಶವನ್ನು ಭೂಮೇಲ್ಮೈ ಲಕ್ಷಣಗಳ ಆಧಾರಿತವಾಗಿ ಯಾವ ಭೂಸ್ವರೂಪದಲ್ಲಿದೆ ಎಂಬುದನ್ನು ತಿಳಿಸಿ.
- ನಿಮ್ಮ ಸ್ಥಳೀಯಸ್ವರೂಪವನ್ನು ಆ ಭೂಸ್ವರೂಪದಲ್ಲಿದೆ ಎಂದು ಹೇಗೆ ನಿರ್ಧರಿಸಿದಿರಿ?
- ನಿಮ್ಮ ಸ್ಥಳೀಯ ಭೂಸ್ವರೂಪವು ನಿಮ್ಮ ಪ್ರದೇಶದ ವಾಯುಗುಣದ ಮೇಲೆ ಹೇಗೆ ಪ್ರಭಾವ ಬೀರಿದೆ? ಮತ್ತು ಏಕೆ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ವಿವಿಧ ಭೂಸ್ವರೂಪಕ್ಕೆ ಕಾರಣಗಳೇನು?
- ಭೂಸ್ವರೂಪಗಳನ್ನು ತಿಳಿಸಿ.
- ಭೂಸ್ವರೂಪಗಳಿಂದಾಗುವ ಪರಿಣಾಮಗಳನ್ನು ವಿವರಿಸಿ.
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ಲಕ್ಷಣಗಳು