ಭೂ ಬಳಕೆ-ಭೂ ಬಳಕೆ ಮೇಲೆ ಪ್ರಭಾವ ಬೀರುವ ಅಂಶಗಳು-ಗುಂಪು ಚಟುವಟಿಕೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search


ಚಟುವಟಿಕೆ - ಸ್ಥಳೀಯ ಬೆಳೆಗಳನ್ನು ಬೆಳೆಯುವ ಪ್ರದೇಶಗಳ ಪಟ್ಟಿ ಮಾಡುವುದು-ಗುಂಪುಚಟುವಟಿಕೆ

ಅಂದಾಜು ಸಮಯ

20 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

 1. ಪೆನ್
 2. ಪೇಪರ್
 3. ಕೆಲವು ಚಿತ್ರ ಪಟಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮನೆಯಿಂದ ಬರುವಾಗ ಸ್ಥಳೀಯವಾಗಿ ಕಂಡು ಬರುವ ಬೆಳೆಗಳ ಬಗ್ಗೆ ಹೆಸರುಗಳನ್ನು ಹಿರಿಯರಿಂದ ಕೇಳಿಕೊಂಡು ಬರಲು ಮೊದಲಿನ ದಿನವೇ ಹೇಳುವುದು. ಯಾವುದೇ ನಿರ್ದಿಷ್ಟ ಬೆಳೆಗಳ ಬಗ್ಗೆ ಹೇಳ ಬೇಡಿ.

 1. ಯಾವ ಪ್ರದೇಶದಲ್ಲಿ ಹೆಚ್ಚು ಮಳೆಗಾಲದ ಬೆಳೆಗಳನ್ನು ಬೆಳೆಯುತ್ತಾರೆ ಎಂದು ತಿಳಿದುಕೊಂಡು ಬರಲು ಹೇಳುವುದು.
 2. ಸ್ಥಳೀಯವಾಗಿ ಕೆಲವು ಬೆಳೆಗಳ ಹೆಸರನ್ನು ಹೇಳಿ ಅವುಗಳನ್ನು ಇಲ್ಲಿ ಮಾತ್ರ ಯಾಕೆ ಬೆಳೆಯುತ್ತಾರೆ.?
 3. ವ್ಯವಸಾಯದಲ್ಲಿ ತಾಂತ್ರಿಕತೆ ನಮ್ಮ ಊರಿನಲ್ಲಿ ಹೇಗೆ ಇದೆ? ಮುಂತಾದ ಮಾಹಿತಿಯನ್ನು ಕೇಳುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಕೆಲವೊಂದು ಪೇಪರ್ ಕಟ್ಟಿಂಗ್ಸ್ , ಅವಕಾಶವಿದ್ದರೆ ಅಂತರ್ ಜಾಲವನ್ನು ಉಪಯೋಗಿಸಿಕೊಂಡು ಚಿತ್ರಗಳನ್ನು ತೋರಿಸುವುದು. ಗೂಗಲ್ ಸರ್ಚ್ ಮಾಡುವುದರ ಮೂಲಕ ಗೂಗಲ್ ಮೇಪ್ ಮೂಲಕ ಸಾಧ್ಯವಾದರೆ ಶಾಲೆ ಇರುವ ಪ್ರದೇಶವನ್ನು ತೋರಿಸುತ್ತಾ ಕೆಲವು ವ್ಯವಸಾಯ ಪ್ರದೇಶಗಳನ್ನು ತೋರಿಸುವುದು.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಶ್ಥಳೀಯ ಪ್ರಗತಿಪರ ರೈತರನ್ನು ಕರೆದು ಮಾಹಿತಿ ಕೊಡುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

 1. ಯಾವ ಪ್ರದೇಶದಲ್ಲಿ ಹೇಗೆ ಮತ್ತು ಯಾಕೆ ಬೆಳೆಗಳನ್ನು ಬೆಳೆಯುತ್ತಾರೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ
 2. ವಿವಿಧ ಬೆಳೆಗಳನ್ನು ಬೆಳೆಯುವ ಪ್ರದೇಶಗಳನ್ನು ತೋರಿಸುವ ಚಿತ್ರಗಳು ಇಲ್ಲಿವೆ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

 1. ವಿದ್ಯಾರ್ಥಿಗಳನ್ನು ಗುಂಪು ಮಾಡುವುದು.
 2. ಪ್ರತೀ ಗುಂಪಿಗೆ ಅವರು ಹಿರಿಯರಿಂದ ಕೇಳಿಕೊಂಡು ಬಂದ ಬೆಳೆಗಳ ಮಾಹಿತಿಯನ್ನು ಪಟ್ಟಿ ಮಾಡಲು ಹೇಳುವುದು.
 3. ಅವರು ಪಟ್ಟಿ ಮಾಡಿದ ಬೆಳೆಗಳಲ್ಲಿ ಯಾವ ಬೆಳೆಗಳನ್ನು ಯಾವ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ ಎಂದು ವರ್ಗೀಕರಿಸಲು ಹೇಳುವುದು.
 4. ಅವರ ಊರಿನಲ್ಲಿ ಕೆಲವೋಂದು ಬೆಳೆಗಳು ಯಾಕೆ ಹೆಚ್ಚು ಇವೆ ಎಂದು ಬರೆಯಲು ಹೇಳುವುದು.
 5. ನಂತರ ಒಂದೊಂದೇ ಗುಂಪು ತಾವು ಮಾಡಿದ ಪಟ್ಟಿಯನ್ನು ಓದಲು ಹೇಳುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

 1. ಗೋಡಂಬಿ ಯಾಕೆ ಗುಡ್ಡ ಪ್ರದೇಶದಲ್ಲಿ ಬೆಳೆಯುವರು?
 2. ಭತ್ತ ಬೆಳೆಗೆ ಯಾಕೆ ಪ್ರತಿ ದಿನ ನೀರು ಇರಬೇಕು?
 3. ನಿನ್ನ ಊರಿನಲ್ಲಿ ರಬ್ಬರ್ ಮಾತ್ರ ಯಾಕೆ ಬೆಳೆಯುತ್ತಾರೆ? (ಅವರವರ ಊರಿಗೆ ಸರಿಯಾಗಿ ಸ್ಥಳೀಯ ಹೆಚ್ಚು ಬೆಳೆಯುವ ಬೆಳೆಗಳನ್ನು ಹೇಳುವುದು)
 4. ನಿನ್ನ ಊರಿನಲ್ಲಿ ಕ್ಯಾಬೇಜ್ ಯಾಕೆ ಬೆಳೆಯಲು ಸಾಧ್ಯವಿಲ್ಲ?
 5. ಭೂ ಒಡೆತನಗಳು ಕೃಷೀ ಭೂಮಿಯು ನಿರುಪಯುಕ್ತ ಭೂಮಿಯಾಗಲು ಕಾರಣವಾಗುತ್ತವೆ ಹೇಗೆ?
 6. ಕೆಲವು ಸಾಮಾಜಿಕ ಅಂಶಗಳು ಭೂಮಿ ಪಾಳು ಬೀಳಲು ಕಾರಣವಿರಬಹುದೇ?ಚರ್ಚಿಸಿ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

 1. ಭೂ ಬಳಕೆಯ ಮೇಲೆ ಯಾವುದೆಲ್ಲಾ ಅಂಶಗಳು ಪ್ರಭಾವ ಬೀರುತ್ತವೆ?
 2. ಪ್ರಾಕೃತಿಕವಾಗಿ ಪ್ರಭಾವ ಬೀರುವ ಅಂಶಗಳು ಯಾವುವು?
 3. ತಾಂತ್ರಿಕತೆಯು ಭೂ ಬಳಕೆಯ ಮೇಲೆ ಪ್ರಭಾವ ಬೀರಿತ್ತಿದೆಯೇ?ಹೇಗೆ?

ಪ್ರಶ್ನೆಗಳು

 1. ಅಭ್ಯಾಸದಲ್ಲಿರುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಉತ್ತರಿಸಲು ಹೇಳುವುದು.
 2. ವರ್ಕ್ ಬುಕ್ನಲ್ಲಿರುವ ಪ್ರಶ್ನೆಗಳನ್ನು ಉತ್ತರಿಸಲು ಹೇಳುವುದು.

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ