ಮರ ಕಡಿಯುವಾತ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾರಿ ಎಚ್ಚರಿಸಿದ. ಮುಂದೇನಾಯಿತು ಎಂದು ತಿಳಿಯಲು ಇಥಿಯೋಪಿಯಾದ ಈ ಜಾನಪದ ಕಥೆ ಓದಿ.
ಉದ್ದೇಶಗಳು :
ಕಥೆಯ ಮೂಲಕ ಮಕ್ಕಳಿಗೆ ಮರಗಳ ಅವಶ್ಯಕತೆ ಹಾಗೂ ಅವುಗಳ ನಾಶದಿಂದ ಆಗುವ ಪರಿಣಾಮಗಳ ಕರಿತು ತಿಳಿಸಿಕೊಡಬಹುದು.
ಕಥಾ ವಸ್ತು :ದುರಾಸೆ,ಹಾಸ್ಯ,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Marakadiyuvatha.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಹಣ್ಣಿನ ಗಿಡ - ಶಿಶು ಗೀತೆ ಹಾಡಿಸುವುದು.
- ಗಿಡವೆ ಗಿಡವೆ ಹಸಿರಿನ ಗಿಡವೆ.
ಆಲಿಸುವ ಪೂರ್ವದ ಚಟುವಟಿಕೆ
- ಸಂಗ್ರಹಿಸಿದ ವಿವಿಧ ಎಲೆಗಳನ್ನು ಮಕ್ಕಳಿಗೆ ಗುರುತಿಸಲು ತಿಳಿಸುವುದು.
- ವಿವಿಧ ವೃತ್ತಿಗಳ ಚಿತ್ರವನ್ನು ತೋರಿಸಿ ಮಕ್ಕಳಿಂದ ಉತ್ತರ ಪಡೆಯುವುದು.
ಆಲಿಸುವ ಸಮಯದ ಚಟುವಟಿಕೆ
- ಮರಕಡಿಯುವವನ ಜೀವನ ಪರಿಚಯ.
- ಮರವನ್ನು ಏಕೆ ಕಡಿಯುತ್ತಾರೆ
- ಮರಕಡಿಯುವ ಶಬ್ದ - ಅನುಕರಣಾವ್ಯಯ ಪರಿಚಯ
- ವ್ಯಾಕರಣಾಂಶಗಳು - ವಿಶೇಷಣ, ಅನ್ಚರ್ಥನಾಮ, ದ್ವಿರುಕ್ತಿ, ಲೇಖನ ಚಿನ್ಹೆಗಳು, ವಚನ, ಲಿಂಗ.
- ಮರ ಕಡಿಯಲು ಬಳಸುವ ಸಾಧನಗಳ ಪರಿಚಯ ಹಾಗೂ ಅವುಗಳ ತಯಾರಿಕೆ.
- ಗುರ್ರನ ಮೂರ್ಖತನದ ಅನಾವರಣ – ಶಿಕ್ಷಣದ ಅಗತ್ಯತೆ.
- ಗುರ್ರನ ಮೂರ್ಛೆ - ಪ್ರಥಮ ಚಿಕಿತ್ಸೆಯ ಪರಿಚಯ.
- ಕವಲು ದಾರಿ - ರಸ್ತೆ ನಿಯಮಗಳ ಪರಿಚಯ. ಅಪರಿಚಿತ ಸ್ಥಳಗಳಲ್ಲಿ ನೀವು ತಲುಪಬೇಕಾದ ಸ್ಥಳವನ್ನು ಹೇಗೆ ಗುರುತಿಸುವಿರಿ.
ಆಲಿಸಿದ ನಂತರದ ಚಟುವಟಿಕೆಗಳು
- ಮರದ ಚಿತ್ರವನ್ನು ಬರೆದು ಬಣ್ಣ ಹಚ್ಚಿ ಭಾಗಗಳನ್ನು ಗುರ್ತಿಸಿ.
- ಮರ ಕಡಿಯುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಚರ್ಚಿಸಿ ಬರೆಯಿರಿ.
- ವಿವಿಧ ಮರಗಳ ಚಿತ್ರಪಟಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ
- ಗಾದೆ ಮಾತುಗಳನ್ನು ಸಂಗ್ರಹಿಸಿ.
- ಮರದಿಂದಾಗುವ ಉಪಯೋಗಗಳನ್ನು ಚರ್ಚಿಸಿ ತಿಳಿಸಿ.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
4 ನೇ ತರಗತಿ
ಪರಿಸರ ಅಧ್ಯಯನ – ವನಸಂಚಾರ
5 ನೇ ತರಗತಿ
ಕನ್ನಡ - ಗಿಡಮರ
6 ನೇ ತರಗತಿ
ಕನ್ನಡ - ಮಂಗಳ ಗ್ರಹದಲ್ಲಿ ಪುಟ್ಟಿ, ಚಗಳಿ ಇರುವೆ.
7 ನೇ ತರಗತಿ
ಕನ್ನಡ - ಹಿಲ್ಟನ್ ಹೆಡ್ ನ ಚಳುವಳಿ. ಪರಿಸರ ಸಮತೋಲನ.