ಮಾಡ್ಯೂಲ್‌-೩-ಕಂಪ್ಯೂಟರ್‌ ಸಾಕ್ಷರತೆಯ ಪರಿಚಯ -ಭಾಗ ೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಹಿಂದಿನ ವಾರದಲ್ಲಿ ಕಿಶೋರಿಯರು ಕಂಪ್ಯೂಟರ್‌ ಬಗ್ಗೆ ತಿಳಿತುಕೊಳ್ಳುವತ್ತ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವಾರ ಅವರು ಅದರ ಮುಂದಿನ ಹೆಜ್ಜೆಯಾಗಿ ಟೈಪಿಂಗ್‌ ಅನ್ನು ಕಲಿಯುತ್ತಾರೆ. ಇದರ ಜೊತೆಗೆ ಕಂಪ್ಯೂಟರ್‌ ಬಗೆಗಿನ ಮಿಥ್ಯವನ್ನು ಹೋಗಲಾಡಿಸುವುದಕ್ಕಾಗಿ ಹಾಗೂ ಎಲ್ಲರೂ ಕೂಡಿಕೊಂಡು ಕಂಪ್ಯೂಟರ್‌ ಅಂದರೆ ಏನು ಎಂದು ಚರ್ಚಿಸುವುದಕ್ಕಾಗಿ ಗುಂಪಿನ ಚಟುವಟಿಕೆ ಮಾಡಲಾಗುತ್ತದೆ.

ಊಹೆಗಳು

1. ನಮಗೆ ಇನ್ನು ೨ ಕ್ಲಾಸುಗಳು ಸಿಗುತ್ತವೆ.

2. ಒಟ್ಟು ಕಿಶೋರಿಯ ಸಂಖ್ಯೆ ೩೬.

3. ಕಿಶೋರಿಯರಿಗೆ ಕಂಪ್ಯೂಟರ್‌ನ ಬೇಸಿಕ್‌ ಜ್ಞಾನ ಇದೆ.

4. ಹಿಂದಿನ ವಾರ ಕಿಶೋರಿಯರು ಮಾತುಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

5. ಕಿಶೋರಿಯರಲ್ಲಿ  ಬೇರೆ ಬೇರೆ ಗುಂಪುಗಳು ಈಗಾಗಲೇ ಇವೆ.

6. ಕೆಲವು ಕಿಶೋರಿಯರನ್ನು ಉಳಿದ ಕಿಶೋರಿಯರು ಹಿಯಾಳಿಸುವುದರಿಂದ ಅವರಿಗೆ ಕಂಪ್ಯೂಟರ್‌ ಬಳಕೆ ಮಾಡಲು ಹಿಂಜರಿಕೆ ಇದೆ.

7. ಮೌಸ್‌ ಮತ್ತು ಕೀ-ಪ್ಯಾಡ್‌ನ ಬಳಕೆ ಇನ್ನು ಕರಗತ ಆಗಿಲ್ಲ.

8. ಇದು ಡಿಜಿಟಲ್‌ ಸಾಕ್ಷರತೆಯ ಭಾಗವಾಗಿರುವುದರಿಂದ ಹೊಸ ಹೆಜ್ಜೆ ಹೊಸ ದಿಶೆಯ ಬೇರೆ ತರಗತಿಗಳನ್ನು ಯೋಜಿಸಿದಂತೆ ಇಲ್ಲಿ ಕಿಶೋರಾವಸ್ಥೆಯ ಅಂಶಗಳನ್ನು ಹೆಚ್ಚು ತರಲು ಸಾಧ್ಯವಾಗದಿರಬಹುದು.

9. ಕಿಶೋರಿಯರೊಂದಿಗೆ ನಮ್ಮ rapport ಪೂರ್ಣವಾಗಿ ಆಗಿಲ್ಲ. ಸಮಯದ ಅಭಾವವಿರುವುದರಿಂದ ನಮಗೆ ಅದಕ್ಕೆ ಜಾಸ್ತಿ ಸಮಯ ನೀಡಲು ಆಗಿಲ್ಲ.

10. ಇಂಗ್ಲಿಷ್‌ ಮಾಧ್ಯಮವಾದ್ದರಿಂದ ಕಿಶೋರಿಯರು ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ.ಕೆಲವು ಕಿಶೋರಿಯರಿಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಆಗದಿರುವುದರಿಂದ ಅವರ ಅಭಿವ್ಯಕ್ತಿಗೆ ತೊಂದರೆಯಾಗುತ್ತಿದೆ.

11. ಕಂಪ್ಯೂಟರ್‌ ಬಳಸಲು ಕಿಶೋರಿಯರು ಉತ್ಸುಕರಾಗಿದ್ದಾರೆ.

12. ಅಪರ್ಣ ಇನ್ನು ಒಂದು ಬಾರಿಯೂ ಅವರೊಂದಿಗೆ ಮಾತನಾಡಿಲ್ಲ.

13. ಲ್ಯಾಬ್‌ನಲ್ಲಿರುವ ಎಲ್ಲ ಕಂಪ್ಯೂಟರ್‌ ಕೆಲಸ ಮಾಡುತ್ತಿಲ್ಲ. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದರಿಂದ ಎಲ್ಲರೂ ಹಾಜರಿದ್ದರೆ ಕಂಪ್ಯೂಟರ್‌ ಎಲ್ಲರಿಗೂ ಸಿಗದಿರಬಹುದು.

14. ಹಿಂದಿನ ವಾರ ಕಂಪ್ಯೂಟರ್‌ ಬಳಕೆ ಹೆಚ್ಚು ಮಾಡಲು ಸಮಯಾವಕಾಶವಿರಲಿಲ್ಲ.

15. ಕೆಲವು ಕಿಶೋರಿಯರ ಮನೆಯಲ್ಲಿ ಕಂಪ್ಯೂಟರ್‌ ಇವೆ ಹಾಗೂ ಇನ್ನು ಕೆಲವರು ಕಂಪ್ಯೂಟರ್‌ ಅನ್ನು ಕೇವಲ ಶಾಲೆಯಲ್ಲಿ ನೋಡಿದ್ದಾರೆ.

16. ಕನ್ನಡ ಟೈಪ್‌ ಮಾಡಲು ಇನ್ನೂ ಕಲಿತಿಲ್ಲ.

17.  ಕಂಪ್ಯೂಟರ್‌ನಲ್ಲಿ ಫೋಲ್ಡರ್‌ ಮಾಡುವುದನ್ನು ಕಲಿತಿದ್ದಾರೆ.

18.  ಲಿಂಗತ್ವದ ಬಗೆಗಿನ ವಿಚಾರಗಳನ್ನು ಒಂದೇ ಸಲ ಪರಿಚಯಿಸಿದರೆ short circuit ಥರ ಆಗುತ್ತದೆ.

19.  ಇದು ಫ್ಯಾಸಿನೇಟಿಂಗ್‌ ಟೂಲ್‌ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾವು ಮಾತನಾಡಬೇಕಿದೆ.

ಉದ್ದೇಶ

1. ಕಂಪ್ಯೂಟರ್‌ ಅಂದರೆ ಏನು ಎನ್ನುವುದನ್ನು ಕಿಶೋರಿಯರಿಗೆ ಮನವರಿಕೆ ಮಾಡಿ ಕೊಡುವುದು.

2. ಟೈಪಿಂಗ್‌ ಅನ್ನು Text Editerನಲ್ಲಿ ಕಲಿಯುವುದು.

ಪ್ರಕ್ರಿಯೆ

ನಮಸ್ಕಾರ ಎಂದು ಹೇಳುತ್ತಾ ಮಾತುಕಥೆಯನ್ನು ಆರಂಭಿಸುತ್ತೇವೆ.

ಹಿಂದಿನ ವಾರದಲ್ಲಿ ಚರ್ಚಿಸಿದ ಕಟ್ಟುಪಾಡುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಕಿಶೋರಿಯರು ಹೇಳದಿದ್ದರೆ ನಾವೇ ಜ್ಞಾಪಿಸುತ್ತೇವೆ. ೧೦ ನಿಮಿಷ

ಕಿಶೋರಿಯರನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿಕೊಂಡು ನಾವು ಸಣ್ಣ ಚಟುವಟಿಕೆಯನ್ನು ಮಾಡುತ್ತೇವೆ. ಕೆಳಗಿನ ೧೨ ವಿಷಯಗಳನ್ನು ಸಣ್ಣ ಚೀಟಿಗಳಲ್ಲಿ ಬರೆದು ಅವರಿಗೆ ೩ ಗುಂಪುಗಳಲ್ಲಿ ಒಂದೊಂದು ಚೀಟಿಯನ್ನು ಎತ್ತಿ, ಅದು ಕಂಪ್ಯೂಟರ್‌ಗೆ ಹೊಂದುತ್ತದೆಯೋ ಇಲ್ಲವೋ ಎಂದು ಮಾತನಾಡುತ್ತೇವೆ.

ಕಂಪ್ಯೂಟರ್‌ ಅಂದರೆ ಏನು? ಎನ್ನುವುದು ಎಲ್ಲರಿಗೂ ಇರುವ ಸಾಮಾನ್ಯ ಪ್ರಶ್ನೆ.   ೨೦ ನಿಮಿಷ

  1. ಮಾಯಾ ಡಬ್ಬಿ (magic box)
  2. dumb box
  3. ಆಯುಧ
  4. ಸಾಧನ
  5. ಸಕಲ ಕಲಾವಲ್ಲಭ
  6. ಆಳು
  7. ಸ್ವತಂತ್ರ ವಸ್ತು
  8. ಅಗತ್ಯವಿಲ್ಲದ್ದು
  9. fly over
  10. ಶಕುಂತಲಾ ದೇವಿ
  11. ಮಿನಿ ಥಿಯೇಟರ್‌
  12. ever evolving

ಇದಾದ ನಂತರ ನಾವು ಕಿಶೋರಿಯರನ್ನು ಕಂಪ್ಯೂಟರ್‌ ಎಂದರೆ ಏನು ಎನ್ನುವ ಬಗ್ಗೆ ಸಣ್ಣ ಗುಂಪುಗಳಲ್ಲೇ ಮಾತನಾಡುತ್ತೇವೆ. ನಂತರ ಕಂಪ್ಯೂಟರ್‌ ಲ್ಯಾಬ್‌ಗೆ ಹೋಗುತ್ತೇವೆ.  

text editerನಲ್ಲಿ ಇಂಗ್ಲಿಷ್‌ ಪಠ್ಯದ "All the World Her Stage” title ಬರೆದು ಸೇವ್‌ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ೧೦ ನಿಮಿಷ

ಅವರಿಗೆ ಅವರ ಇಂಗ್ಲಿಷ್‌ ಪಠ್ಯದ "All the World Her Stage” ಪಾಠದ ೧೨, ೧೩, ಮತ್ತು ೧೪ನೇ paragraph ಅನ್ನು ಟೈಪ್‌ ಮಾಡಲು ಹೇಳುತ್ತೇವೆ.                        

ಹೀಗೆಯೇ ಮುಂದಿನ ವಾರಗಳಲ್ಲೂ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಎಂದು ಮಾತುಕತೆಯನ್ನು ಮುಗಿಸುತ್ತೇವೆ.  ೪೦ ನಿಮಿಷ

ಬೇಕಾದ ಸಂಪನ್ಮೂಲಗಳು

  • ಕಂಪ್ಯೂಟರ್‌ ಇರುವ ಲ್ಯಾಬ್‌
  • ಲ್ಯಾಪ್‌ಟಾಪ್‌
  • ಪ್ರೊಜೆಕ್ಟರ್‌
  • spike buster
  • ಕ್ಯಾಮೆರಾ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು  ೩

ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೮೦ ನಿಮಿಷಗಳು

ಇನ್‌ಪುಟ್‌ಗಳು

೧೨ ವಿಷಯಗಳ ಚೀಟಿಗಳು

ಔಟ್‌ಪುಟ್‌ಗಳು

ಕಿಶೋರಿಯರು ಟೈಪಿಸಿದ ಫೈಲ್‌ಗಳು