ಮಾಡ್ಯೂಲ್ ೧ - ದಿನಚರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪ್ರಕ್ರಿಯೆ

  • ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
  • ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ)
  • ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು)
  • ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು)
  • ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು)
  • ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು.

ಬೇಕಾದ ಸಂಪನ್ಮೂಲಗಳ

  • ಬ್ರೌನ್ ಶೀಟ್
  • ಸ್ಕೆಚ್ಪೆನ್ಗಳು
  • ಮಾರ್ಕರ್ಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು

ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು

ಒಟ್ಟು ಸಮಯ

  • 6೦ ನಿಮಿಷ