ಮಾಡ್ಯೂಲ್ ೪- ಪುರುಷ ಪ್ರಧಾನತೆ ಮಾದ್ಯಮ ಮತ್ತು ಮಾರುಕಟ್ಟೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

ನಟ / ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು

ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಮಾಧ್ಯಮಗಳಲ್ಲಿ ಲಿಂಗ ತಾರತಮ್ಯ ಹೇಗೆ ಮಾಡುತ್ತಾರೆ ಅಂತ

ಗುರುತಿಸಿ ಅದರ ಬಗ್ಗೆ ಕಿಶೋರಿಯರು ಚರ್ಚಿಸುವಂತೆ ಮಾಡುವುದು.

ಮಾರ್ಕೇಟ್ / ಜಾಹಿರಾತುಗಳು

• ಹಿಂದಿನ ತರಬೇತಿಯ ವಿಷಯಗಳನ್ನ / ಟಾಸ್ಕ್ ಕೊಟ್ಟದರೆ ಅದನ್ನ ನೇನಪಿಸಿ ಏನಾಗಿತ್ತು ಅಂತ ಚರ್ಚೆಮಾಡಿಕೊಳ್ಳೂವುದು - 5 ನಿಮಿಷ

• ಒಂದಷ್ಟು ಚಿತ್ರಗಳನ್ನ ಕಿಶೋರಿಯರಿಗೆ ತೋರಿಸಿ ಇದನ್ನ ನೊಡಿದಾಗ ನಿಮಗೆ ಏನು ನೆನಪು ಆಗುತ್ತೆ ಅಂತ ಕೇಳುವುದು. ಅವರುಗಳು ಹೇಳುವ ವಿಷಯಗಳನ್ನ ಬರೆದುಕೊಳ್ಳುವುದು. (ಚಿತ್ರಗಳನ್ನ ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್ ಬಳಸಿ ತೋರಿಸಿ ಚರ್ಚೆಮಾಡುವುದು ) - ಪೌಡರ್, ಶ್ಯಾಂಪೂ, ಫೆಸ್ ಕ್ರಿಮ್, ಜೂಸ್, ಟೀ/ಕಾಫಿ, ಶೂ / ಸ್ಲಿಪ್ಪರ್, ಬಟ್ಟೆಗಳ, ಬೈಕ್/ಕಾರ್, ಅಭರಣಗಳು, ಟೂತ್ ಪೆಷ್ಟ್. - 10 ನಿಮಿಷ.

• ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ ( ಕನ್ನಡ ಜಾಹೀರಾತುಗಳು ಮಾತ್ರ )

  1. ಶ್ಯಾಂಪೂ
  2. ಫೆಸ್ ಕ್ರಿಮ್
  3. ಜೂಸ್ - ಫಾಂಟ/ ಪೆಪ್ಸಿ/ಸ್ಪರೈಟ್/
  4. ಟೀ/ಕಾಫಿ,
  5. ಶೂ / ಸ್ಲಿಪ್ಪರ್
  6. ಬೈಕ್ /ಕಾರ್
  7. ಅಭರಣಗಳು
  8. ಟೂತ್ ಪೆಷ್ಟ್
  9. ಪ್ರತಿ ಜಾಹೀರಾತನ್ನು ತೋರಿಸಿದ ನಂತರ ಆ ಜಾಹೀರಾತನ ವಿಷಯದ ಬಗ್ಗೆ, ಅದರಲ್ಲಿರುವ ವ್ಯಕ್ತಿಗಳ ಬಣ್ಣ,ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಬಗ್ಗೆ ಕೇಳುವುದು. - 10 ನಿಮಿಷ
  10. ಕೊನೆಯ ಜಾಹೀರಾತನ್ನು ತೋರಿಸುವಷ್ಟೊತ್ತಿಗೆ ಕಿಶೋರಿಯರೇ ಎಲ್ಲವನ್ನು ಗುರುತಿಸುವಂತರಬೇಕು.
  11. ಕೊನೆಯಲ್ಲಿ, ಈ ಜಾಹೀರಾತುಗಳು ಪುರುಷರಿಗೆ ಮತ್ತು ಮಹಿಳೆಯರಿಗೆ ಏನು ಹೇಳುತ್ತಿವೆ ಅಂತ ಪುನರ್ ಮನನ ಮಾಡಿ, ಮುಂದಿನ ವಾರಗಳಲ್ಲಿ ಚರ್ಚಿಸೋಣ. ಮನೆಯಲ್ಲಿ ಟ.ವಿ. ನೋಡುವಾಗ ಬರುವ ಜಾಹೀರಾತುಗಳ ವೀಡಿಯೋಗಳನ್ನು ಗಮನಿಸಿ, ಅವುಗಳಲ್ಲಿ ಯಾವ ಥರಹದ ವ್ಯಕ್ತಿಗಳು ಇರತ್ತಾರೆಂದು ಗಮನಿಸಲು ಹೇಳುವುದು. - 5 ನಿಮಿಷ

ಮೀಡಿಯಾ / ಇಂಟರ್ವಿವ್

• ಮಹಿಳೆಯರಿಗೆ ಮೀಡಿಯಾ ಕೇಳುವ ಪ್ರಶ್ನ ಗಳನ್ನ ತೋರಿಸಿ, ಇದರ ಬಗ್ಗೆ ಅವರ ಜೊತೆ ಚರ್ಚೆಮಾಡುವುದು. ಯಾಕೆ ಮಹಿಳೆಯರಿಗೆ ಹೆಚ್ಚು ಈತರ ಪ್ರಶ್ನಗಳನ್ನ ಕೇಳುತ್ತಾರೆ? ಇದನ್ನ ನೋಡಿದವರ ಮನಸಿನಲ್ಲಿ ಏನೇನು ವಿಷಯ ಉಳಿದುಕೊಳ್ಳಬಹುದು!. ಯಾರು ಈ ಪ್ರಶ್ನಗಳನ್ನ ತಾಯರು ಮಾಡಿರಬಹುದು. ಇದರ ಹಿಂದಿನ ಪಿತೃಪ್ರಧಾನತೆ ವ್ಯವಸ್ಥೆಯ ಬಗ್ಗೆ ಅರ್ಥ ಮಾಡಿಸುವುದು. - 15 ನಿಮಿಷ.

• ಪುರುಷರಿಗೆ ಮೀಡಿಯಾ ಕೇಳುವ ಪ್ರಶ್ನಗಳನ್ನ ತೋರಿಸಿ, ಇದರ ಬಗ್ಗೆ ಅವರ ಜೊತೆ ಚರ್ಚೆಮಾಡುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಕೇಳಿರುವ ಪ್ರಶ್ನಗಳಲ್ಲಿ ವ್ಯತ್ಯಾಸ ಏನಿತ್ತು!. ಯಾಕೆ ಇಬ್ಬರಿಗೂ ಬೇರೆ ಬೇರೆ ಪ್ರಶ್ನಗಳನ್ನ ಕೇಳಿದ್ದರು ಅಂತ ಸ್ಪಷ್ಟ ಮಾಡುವುದು. - 15 ನಿಮಿಷ.

ಮುಕ್ತಾಯ

ಒಟ್ಟಾರೆಯಾಗಿ ಈ ಮಾಧ್ಯಮಗಳು ಮಹಿಳೆ ಮತ್ತು ಪುರುಷರನ್ನ ಯಾವ ರೀತಿ ಬಿಂಬಿಸುತ್ತಿದೆ. ನಾವುಗಳು ಈ

ವ್ಯವಸ್ಥೆಯನ್ನು ಅನುಕರಣೆ ಮಾಡುತಿದ್ದಿವಾ? ಅಂತ ಯೊಚಿಸೋಣ ಮತ್ತು ಗುರುತಿಸೊಣ ಅಂತ ಹೇಳಿ ಈ ದಿನ

ಚಟುವಟಿಕೆಯನ್ನು ಮುಕ್ತಾಯ ಮಾಡುವುದು.

ಬೇಕಾದ ಸಂಪನ್ಮೂಲಗಳು

1. ಲ್ಯಾಪ್ ಟಾಪ್ ಮತ್ತು ಪ್ರೊಜೆಚ್ಟರ್ 1 ನಂಬರ್

2. ಸ್ಪಿಕರ್ 1 ನಂಬರ್

3. ಮುಂಚೆಯೇ ಗುರುತಿಸಿಕೊಂಡ ಜಾಹೀರಾತು ಮತ್ತು ಇಂಟರ್ವಿವ್ ತುಣುಕುಗಳು

ಒಟ್ಟೂ ಬೇಕಿರುವ ಫೆಸಿಲಿಟೇಟರ್ಗಳು

1 ಜನ