ಮಾಡ್ಯೂಲ್ ೯-Body Image

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

  • ಮಾಧ್ಯಮ ಮತ್ತು ಮಾರುಕಟ್ಟೆಗಳು ಹೇಗೆ ಪರುಷ ಪ್ರಧಾನತೆಯ ಭಾಗ ಎನ್ನುವುದರ ಬಗ್ಗೆ ಮಾತನಾಡುವುದು plus recap of what happened
  • ಮಾಧ್ಯಮ ಮತ್ತು ಮಾರುಕಟ್ಟೆಗಳು ಹೇಗೆ ದೇಹದ ಚಿತ್ರಣದ ಮೇಲೆ ಪ್ರಭಾವ ಬಿರುತ್ತದೆ?

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು


ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು.

They need to remember the word ಪುರುಷ ಪ್ರಧಾನತೆ - ಪುರುಷ ಪ್ರಧಾನತೆ ಅಂದರೆ ಏನು ಅನ್ನೋದನ್ನ ಹೇಳುವುದು. 05 ನಿಮಿಷ ನಂತರ ಪ್ರೊಜೆಕ್ಟರ್‌ನಲ್ಲಿ ಮಹಿಳೆಯರಿಗಾಗಿ ಮಾಡಿದ ಒಂದೊಂದೇ ಒಂದೊಂದೇ ಜಾಹಿರಾತುಗಳನ್ನು ತೋರಿಸುವುದು. ಒಟ್ಟೂ ೪ ಜಾಹಿರಾತುಗಳನ್ನು ತೋರಿಸುವುದು   ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ಬಣ್ಣ ಹೇಗಿದೆ, ಉದ್ದನ ಗಿಡ್ಡನ, ದಪ್ಪನ ಸಣ್ಣನ, - ಜೋರಾಗಿ ಹೇಳಿಸುವುದು

Shampoo -

https://youtu.be/bW7OgCI5CwQ?si=mncck30MH1PwgoaG](https://youtu.be/bW7OgCI5CwQ?si=mncck30MH1PwgoaG

Face cream-

https://youtu.be/upeHlpN4fw0?si=5NOIaMca96GaONjF](https://youtu.be/upeHlpN4fw0?si=5NOIaMca96GaONjF

Perfume

https://youtu.be/_VDkNQidoNE?si=B6JL5daER4TGTUfw](https://youtu.be/_VDkNQidoNE?si=B6JL5daER4TGTUfw

Hair removal -

https://youtu.be/a6l7YdOTrKQ?si=vO134rsiQwZb8Sas](https://youtu.be/a6l7YdOTrKQ?si=vO134rsiQwZb8SasAliya Bhat - Garnier ad Men’s perfume - https://youtu.be/vyJ5UspkQiQ?si=b9fxAH9KOrwnyV9E](https://youtu.be/vyJ5UspkQiQ?si=b9fxAH9KOrwnyV9E Beer shampoo - https://youtu.be/4Oz9R64yYY4?si=vtzxezA-bGwhvhro](https://youtu.be/4Oz9R64yYY4?si=vtzxezA-bGwhvhro

Axe  - https://youtu.be/dGGe8UNtxfE?si=T8w0GkALaSOd6u7-](https://youtu.be/dGGe8UNtxfE?si=T8w0GkALaSOd6u7-

Baniyan ad - Akshya Kumar

ಇದೇ ರೀತಿ ಪುರುಷರಿಗಾಗಿ ಮಾಡಿದ ೪ ಜಾಹಿರಾತುಗಳನ್ನು ತೋರಿಸುವುದು. ಪ್ರತಿ ಜಾಹಿರಾತು ಆದ ಮೇಲೆ, ಇದರಲ್ಲಿರುವವರು ನಿಮ್ಮ ಪ್ರಕಾರ ಹೇಗಿದ್ದಾರೆ ಅಂತ ಕೇಳುವುದು, ನೋಡಲು ಹೇಗಿದ್ದಾರೆ, ಬಾಡಿ ಹೇಗಿದೆ,

ಕಿಶೋರಿಯರು ಹೇಳುವುದನ್ನು ಬೋರ್ಡಿನ ಮೇಲೆ ಬರೆಯುವುದು.

ಕೊನೆಯ ಜಾಹೀರಾತನ್ನು ತೋರಿಸುವಷ್ಟೊತ್ತಿಗೆ ಕಿಶೋರಿಯರೇ ಎಲ್ಲವನ್ನು ಗುರುತಿಸುವಂತರಬೇಕು.

ಎಲ್ಲ ಜಾಹಿರಾತುಗಳನ್ನು ತೋರಿಸಿದ ನಂತರ, ಬೋರ್ಡಿನ ಮೇಲೆ ಬರೆದಿರುವುದನ್ನು ಗಮನಿಸಲು ಹೇಳುವುದು. ಈ ಪ್ರಶ್ನೆಗಳನ್ನು ಕೇಳುವುದು

ಪುರುಷರ ಮತ್ತು ಮಹಿಳೆಯರ ಜಾಹಿರಾತುಗಳು ಒಂದೇ ಥರ ಇತ್ತ? ಬೇರೆ ಥರ ಇತ್ತ? 15 ನಿಮಿಷ

ಅದೇ ರೀತಿ ಗಂಡ್ಮಕ್ಳೂ ಕೂಡ moisturiser ಬಳಸಬಹುದಲ್ವ ?

ತೆಳ್ಳಗಿರೋದ್ರಿಂದ ಏನು ಲಾಭ - ಮಾರ್ಕೆಟಿಗೆ, ಕಂಪನಿಗಳಿಗೆ ?

ಎಷ್ಟೊಂದು ಪ್ರಾಡಕ್ಟ್‌ಗಳನ್ನು ಮಾರಬಹುದು - ಸ್ಲಿಮ್ಮಿಂಗ್‌, ಲೆಗಿಂಗ್ಸ್‌ etc

ಅದೇ ಥರ - ಬೆಳ್ಳಗಿರೋದು, ಎತ್ತರ. shampoo etc

ಅವರು ಹೇಳಿದ ಪ್ರತಿ ಅಂಶಗಳಿಗೂ ಹೇಗೆ ತಲೆಯಿಂದ ಕಾಲಿಸವರೆಗೆ ಬೇರೆ ಬೇರೆ ಪ್ರಾಡಕ್ಟ್‌ಗಳು ಇದರಿಂದ ಯಾರಿಗೆ ಲಾಭ ಹುಡುಗಿ ಚೆನ್ನಾಗಿರೋದು ಟೈಮ್‌ ಇಂದ ಟೈಮ್‌ಗೆ ಬದಲಾಗ್ತಿದೆ. ಅದೇ ಥರ ಪ್ರಾಡಕ್ಟ್‌ಗಳು. ನಿಮಗೆ ನಾನು ಕಪ್ಪಗಿದೀನಿ, ಎತ್ತರ ಇಲ್ಲ, ಕೂದಲು ಚೆನ್ನಾಗಿಲ್ಲ ಅಂತ ನಿಮಗೆ ಅನಿಸಿದರೇನೇ ನೀವು ಈ ಪ್ರಾಡಕ್ಟ್‌ಗಳನ್ನ ತಗೋಳೋದು. ಇದರ ಜೊತೆಗೆ ಪುರುಷ ಪ್ರಧಾನತೆನೂ ಅದನ್ನೇ ಹೇಳುತ್ತೆ. ನೀವು ಅವುಗಳನ್ನ ತಗೊಂಡ್ರೇನೆ ಅವರಿಗೆ ಲಾಭ ಸೋ ನೀವೇ ನೋಡಿ. ಈ ಪ್ರಾಡಕ್ಟ್‌ಗಳು ನಿಗೆ ಬೇಕೆ ಬೇಡವೇ ಅಂತ ಈಗ ನೋಡಿ. ಅವ್ರು ಇಷ್ಟೋಂದೆಲ್ಲ ಟೈಮು, ಜನ್ರು, ಬೇರೆ ಬೇರೆ ಸಾವಿರಾರು ಪ್ರೋಡಕ್ಟ್‌ಗಳನ್ನು ಬಳಸಿ ಆದ್ಮೇಲೆ ಅವರು ಜಾಹಿರಾತಲ್ಲಿ ನಮಗೆ ಕಾಣ್ಸೋದು. ನಾವು ನೋಡೋದು ಅದನ್ನ ಆಮೇಲೆ ಅದನ್ನೇ ಬ್ಯೂಟಿ ಅಂತ ಅಂದ್ಕೊಂಡ್ಬಿಡ್ತೀವಿ. ಸಿನೆಮಾ ಮತ್ತೆ ಜಾಹಿರಾತಿನ ಮುಖಾಂತರ ಬ್ಯೂಟಿ ಅಂದರೆ ಏನು ಅನ್ನೋ ಅಭಿಪ್ರಾಯನ ನಾವು ಫಾರ್ಮ್‌ ಮಾಡ್ಕೋತೀವಿ. ಆದರೆ ಟೀವಿನಲ್ಲಿ ಬರೋರು, insta ನಲ್ಲಿ ರೀಲ್‌ ಮಾಡೋರು ಮೇಕ್‌ ಅಪ್‌ ಮಾಡ್ಕೊಂಡು, ಬಂದಿರೋರನ್ನ ನೋಡಿ ಸೌದರ್ಯ ಅಂದ್ರೆ ಇದೇನೇ. ಬ್ಯೂಟಿಫುಲ್‌ ಆಗಿರೋದು, ಚೆನ್ನಾಗಿರೋದು ಅಂತ ಅಂದ್ಕೋತೀವಿ. ಹಾಗಾಗಿ ನಮಗೆ, ನಾವು ಹೇಗಿದ್ರೂ ನಮ್ಗೆ ನಾವು ಚೆನ್ನಾಗನ್ಸಲ್ಲ , ನಾನು ಎತ್ರ ಇಲ್ಲ, ನಾನು ಬೆಳ್ಳಗಿಲ್ಲ, ನನ್ ಮೂಗು ಚೆನ್ನಾಗಿಲ್ಲ, ನನ್ ಕೂದ್ಲು ಇನ್ನೂ ಚೆನ್ನಾಗಿರ್ಬೇಕಿತ್ತು, ನಾನು ಇನ್ನು ದಪ್ಪ ಇರ್ಬೇಕಿತ್ತು, ಸಣ್ಣ ಇರ್ಬೇಕಿತ್ತು, ಕಣ್ಣು ಅಗಲ ಇರ್ಬೇಕಿತ್ತು, ಹಿಂಗೆ ಇನ್ನೂ ಇನ್ನೂ ಎಷ್ಟೊಂದು ಅನ್ಸುತ್ತಲ್ಲ? Explain get ready with me video - tips and tricks, products used, product endorsement, how to do make up to make nose look small, long, concealer, colour corrector, highlighter, lip liner . nails etc

ಇನ್ಸ್ಟ ಬಳಸ್ತಾ ಇರೋವ್ರಿಗೆ ಗೊತ್ತು, ಫಿಲ್ಟರ್ ಗಳಿಂದ ಮುಖ ಮೇಕಪ್ ಮಾಡಿದಹಾಗೆ ಮತ್ತೆ ಬೆಳ್ಳಗೆ, ಮೊಡವೆ ಇಲ್ಲದೆ, ಯಾವ್ದೆ ಥರದ ಮಚ್ಚೆಗಳು ಇಲ್ಲದೆ ಇರೋಹಾಗೆ ಕಾಣುತ್ತೆ ಅಂತ, ಹಾಗೇನೇ ಅಡ್ವರ್ಟೈಸ್ಮೆಂಟ್ ಗಳಲ್ಲಿ ಫಿಲಮ್ಮಲ್ಲಿ ಬರೋ ಹೆಣ್ಮಕ್ಳಿಗೆ ತುಂಬಾ ಮೇಕಪ್ ಆಗಿರುತ್ತೆ, ಸ್ಪೆಶಲ್ ಲೈಟಿಂಗಲ್ಲಿ ಶೂಟಿಂಗ್ ಆಗುತ್ತೆ, ಅದನ್ನ ಎಡಿಟಿಂಗಲ್ಲಿ ಇನ್ನೂ ಜಾಸ್ತಿ ಕಣ್ಣಿಗೆ ಕುಕ್ಕುವಹಾಗೆ ಮಾಡ್ತಾರೆ. ಆದ್ರೆ ನಾವು ಅವ್ರನ್ನ ನೋಡಿದಾಗ ಚೆ ಎಂತಾ ಬ್ಯೂಟಿ ಇದು, ನಾನ್ಯಾಕಿಂಗಿಲ್ಲ ಅನ್ನೋದೇ ಮನ್ಸಿಗೆ ಬರೊದು. ಇದೆ ಇದರ ಡೇಂಜರ್. ನಾರ್ಮಲ್ ಆಗಿ ಅನ್ನೋ ಥರ ಎಲ್ಲಾ ಕಡೆ ಕಾಣುವ ಬಣ್ಣಗಲಿರುವವರು ಯಾವ ಫಿಲಮ್ಮಲ್ಲೂ ಹೀರೋ ಹೀರೋಯಿನ್ ಆಗಿರಲ್ಲ. ಲಕ್ಷಣ ಸೀರಿಯಲ್ - ಒಂದು ಹುಡುಗಿಯ ಕಥೆ ಅನ್ನಕ್ಕಿಂತಾ, ಒಂದು ಕಪ್ಪು ಹುಡುಗಿಯ ಕಥೆ - ಬಿಳಿಹುಡುಗಿಯನ್ನ ಆಯ್ಕೆ ಮಾಡ್ಕಂಡು, ಅವ್ಳಿಗೆ ಕಪ್ಪು ಬಣ್ಣ ಹಚ್ಚಿ ತೆಗೆದಿರೋ ಸೀರಿಯಲ್ Especially ಟೀನೇಜಲ್ಲಿ ನಾವು ಇದನ್ನೆಲ್ಲ ನೋಡದಾಗ ನಮಗೆ ಇನ್ನೂ ಜಾಸ್ತಿ ಇದ್ರ ಬಗ್ಗೆ ಫೀಲ್‌ ಆಗುತ್ತೆ. ನಮ್ಮ ಬಗ್ಗೇನೇ ನಮಗೆ ಕೀಳರಿಮೆ ಬರೋದು, ಅದರಿಂದ ನಾನಲ್ಲೂ ಜಾಸ್ತಿ ಮಾತಾಡದೇ ಇರೋದು, ಹೀಗೆ ನಮ್ಮನ್ನ ನಾವೇನೇ ತುಂಬಾ ಕೀಳಾಗಿ ನೋಡ್ತೀವಿ. Insta ನಲ್ಲಿ ಯಾರ್ಗಾದ್ರೂ ಜಾಸ್ತಿ ಲೈಕ್ಸ್‌ ಬಂದ್ರೆ ಅವರು ಚೆನ್ನಾಗಿದಾರೆ ನೋಡೊಕೆ ಅದಿಕ್ಕೆ ಅಂತ ಅಂದ್ಕೋಳೋದು, ಎಲ್ಲಾನೂ ಆಗ್ತ ಇರುತ್ತೆ.

ಇದನ್ನೆಲ್ಲ ಅಟ್ವಾಂಟೇಜ್‌ ತಗೊಂಡು ಬೇರೆ ಬೇರೆ ಬ್ಯೂಟಿ productಗಳು ಒಂದೇ ವಾರದಲ್ಲಿ ಮೈಹೊಳೆಯುವ ಕಾಂತಿ ಅಂತಾನೇ, ಶೈನಿ ಶೈನಿ ಕೂದಲು ಅಂತಾನೋ, ಇಲ್ಲ ಈ ಬೈಕ್‌ನ ಬಳಸಿದ್ರೆ ಹುಡಗೀರೆಲ್ಲ ನಿಮ್ಮ ಬುಟ್ಟಿಗೆ ಬಿದ್ದೇ ಬೀಳ್ತಾರೆ ಅಂತ ನಮ್ಮನ್ನ ಸೆಳೀತಾವೆ., ಇವುಗಳನ್ನೆಲ್ಲ ನಾವು ಗಮನದಲ್ಲಿ ಇಟ್ಕೊಂಡು ನಾವು ನೋಡಿರೊದರ ಬಗ್ಗೆ ಯೋಚಿಸ್ಬೇಕು ಅಂತ ನಂಗನ್ಸುತ್ತೆ? ನಿಮಗೆ?

ಇನ್ನೊಂದು ಸೀರಿಯಸ್‌ ಆಗಿರೋ ವಿಷಯ ಅಂದರೆ ಇಷ್ಟೊಂದೆಲ್ಲ ಆದಾಗ ಯಾರಾದರೂ ಒಂದು ಸ್ವಲ್ಪ ಅಟೆನ್ಶನ್‌ ನೀಡಿದ್ರೂ ಅಯ್ಯೋ ಯಾರೋ ಒಬ್ರೂ ನನಗೆ ಅಟೆನ್ಶನ್‌ ಕೊಡ್ತಿದಾರಲ್ಲ ಅಂತ ಅನಿಸಿಬಿಡುತ್ತೆ. ಅದನ್ನೂ ಕೂಡ ನೀವ ಜ್ಞಾಪಕ ಇಟ್ಕೋಬೇಕು. ಹಂಗಿದ್ರೆ ಬ್ಯೂಟಿ ಅನ್ನೋದನ್ನ ಬೇರೆಯವರು ನಮಗೆ ಹೇಳೋದಕ್ಕಲಿಂತ ನಾವೇ ಅದೇನು ಅಂತ ಡಿಸೈಡ್‌ ಮಾಡೋಣ್ವ? ಪೋಷಕಾಂಸ ಚೆನ್ನಾಗಿರೋ ಊಟ ಮಾಡಿದ್ರೆ ನನ್‌ ಕೂದಲು, ಸ್ಕಿನ್‌ ಎಲ್ಲ ಚೆನ್ನಾಗಿರುತ್ತೆ, ನನಗೆ ಚೆನ್ನಾಗಿ ನಿದ್ದೆ ಮಾಡಿದ್ರೆ ಡಾರ್ಕ್‌ ಸರ್ಕಲ್‌ ಇರಲ್ಲ, ಸ್ಕಿನ್‌ ಬ್ರೈಟ್‌ ಆಗಿರುತ್ತೆ ಅಂತ ತಿಳ್ಕೊಳೋದು.

ಆದರೂನು ನನಗೆ ನಾನು ಚೆನ್ನಾಗಿಲ್ಲ ಅಂತ ಅನಿಸಿದರೆ, ಜೊತೆಗೆ ಇದೆಲ್ಲದರ ಹಿಂದಿನ ರಾಜಕೀಯನ ಅರ್ಥ ಮಾಡ್ಕೊಳೋದು. ಒಂದೊಂದು ಕಡೆ ಒಂದೊಂದ ಥರ ಇರುವ ಬಾಡಿ ಸುಂದರ ಅಂತ ಕರೀತಾರೆ. ನಿಮಗೆ ನೀವು ಚೆನ್ನಾಗಿದೀರ ಅಂತ ಅನಿಸಬೇಕು. ಹೆಲ್ತಿಯಾಗಿರೋದು ಬ್ಯೂಟಿ ಆಗ್ಬೋದಲ್ವ? ಒಳ್ಳೆ ಸ್ಕಿನ್‌ ಇರ್ಬೋದು. ರಕ್ತದಂಶ ಮೈಯಲ್ಲಿ ಚೆನ್ನಾಗಿರೋದ್‌ ಇರ್ಬೋದು. ವೇಟು ಹೈಟಿಗೆ ತಕ್ಕಾಗಿ ಇರೋದ್‌ ಇರ್ಬೋದು. ಇದನ್ನ ಬಿಟ್ಬಿಟ್ಟು ಅಯ್ಯೋ ನಾನ್‌ ದಪ್ಪ ಇದೀನಿ, ರೈಸ್‌ ತಿಂದ್ರೆ ದಪ್ಪ ಆಗ್ಬೊಡ್ತೀನಿ, ಹಾಲು ಕುಡಿದ್ರೆ ವೇಟ್‌ ಆಗ್ಬಿಡ್ತೀನಿ ಅಂದ್ಕೊಂಡು ಸರಿಯಾಗಿ ಊಟ ಮಾಡಿಲ್ಲ ಅಂದರೆ ಹೇಗೆ? ಟೀನೇಜ್‌ ಅಂತ ಇರೋದು ನಮ್ಮನ್ನ ನಾವೇ ಪ್ರೌಢಾವಸ್ತೆಗೆ ಬಂದಾಗ ಬೇಕಾಗಿರೋ ತರ ಮಾನಸಿಕವಾಗಿ, ದೈಹಿಕವಾಗಿ, ಬೌಧ್ಧಿಕವಾಗಿ ಪ್ರಿಪೇರ್‌ ಆಗೋ ಟೈಮ್‌ ಇದು. ಇದೆಲ್ಲದರ ಕಡೆ ಗಮನ ಕೊಡೋದು ತುಂಬ ತುಂಬ ಇಂಪಾರ್ಟೆಂಟು. ಇದರ ಬಗ್ಗೆ ನೀವೆಲ್ರೂ ಯೋಚನೆ ಮಾಡ್ತೀರ ?15 ನಿಮಿಷ

ಮುಂದಿನ ಚಟುವಟಿಕೆ ಮಾಡೋಕೆ ೪ ಗುಂಪುಗಳನ್ನು ಮಾಡುವುದು. 5 ನಿಮಿಷ ಪ್ರತಿ ಗುಂಪಿನಲ್ಲೂ ಈ ಕೆಳಗಿನ ಅಂಶವನ್ನು ಹೇಳುವುದು ಈಗ ಒಂದು ಆಟದ ಆಡೋಣ, ಆಟದ ನಿಯಮ ಏನಂದ್ರೆ ಪ್ರತಿಯೊಬ್ಬರೂ ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರ ಬಗ್ಗೆಯೂ ಒಂದೊಂದು ಒಳ್ಳೆಯ ಅಂಶ ಹೇಳಬೇಕು.  ಈ ಅಂಶ ಅವರ ದೇಹಕ್ಕೆ ಸಂಬಂದ ಪಟ್ಟಿದ್ದಾಗಿರಬೇಕು. ಯಾರ ಬಗ್ಗೆ ಮಾತನಾಡುತ್ತಿರುವವರೋ ಅವರ ಬಗ್ಗೆ ಅವರೇ ಬರೆದುಕೊಳ್ಳುವುದು. ಒಬ್ರು ಹೇಳಿದ್ದನ್ನ ಇನ್ನೊಬ್ಬರು ರಿಪೀಟ್‌ ಮಾಡಬಾರದು, ಹಾಗೂ ಪ್ರತಿಯೊಬ್ಬರೂ  ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳಬೇಕು ಎಂದು ಹೇಳಿ ಫೇಸಿಲಿಟೇಟರ್‌ಗಳು ಗುಂಪಿನಿಂದ ಹೊರಬೀಳಬೇಕು.    

ಇದಾದ ನಂತರ ದೊಡ್ಡ ಗುಂಪಿಗೆ ಬರುವುದು ನಮ್ಮ ಬಗ್ಗೆ ಇಷ್ಟೋಂದೆಲ್ಲ ಒಳ್ಳೊಳ್ಳೆ ಮಾತುಗಳನ್ನ ಕೇಳಿ ಏನನ್ಸ್ತು ಎಂದು ಕೇಳುವುದು. ಇದೇ ಥರ ನಮ್ಮ ದೇಹದ ಬಗ್ಗೆ ಪಾಸಿಟೀವ್‌ ಆಗಿರುವಂತ ಯೋಚನೆಯನ್ನ ನಾವೂನೂ ಪ್ರಾಕ್ಟೀಸ್‌ ಮಾಡೋಣ ಅಂತ ಎಲ್ರ ಹತ್ರ ಆಣೆ ಮಾಡಿಸಿಕೊಳ್ಳುವುದು. 35 ನಿಮಿಷ ಇವುಗಳ ಬಗ್ಗೆ ಮುಂದಿನ ವಾರಗಳಲ್ಲಿ ಇನ್ನೂ ಜಾಸ್ತಿ ಮಾತಾಡೋಣ. ನಮಸ್ಕಾರ 

ಬೇಕಾಗುವ ಸಾಮಗ್ರಿಗಳು

  1. ಪ್ರೊಜೆಕ್ಟರ್‌
  2. ಪ್ರೊಜೆಕ್ಟರ್‌ ಕೇಬಲ್‌
  3. Extension cord
  4. Speaker
  5. Bedsheets to cover windows
  6. Ads chosen
  7. A4 sheets
  8. Sketch pens

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  1. Ads

ಔಟ್‌ಪುಟ್‌ಗಳು

  • ಕಿಶೋರಿಯರ ಬಗ್ಗೆ ಇತರರು ಹೇಳಿದ ಪಾಯಿಂಟಿನ ಶೀಟ್‌