ಮಾದರಿ ಹೂವಿನ ಭಾಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಮಾದರಿ ಹೂವಿನ ಭಾಗಗಳು

ಅಂದಾಜು ಸಮಯ

40 Min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ದಾಸವಾಳದ ಹೂವು ,

  • ಸೂಜಿ,
  • ಫಾರ್ಸೆಪ್ಸ್ ,
  • ಬ್ಲೇಡ್ ,
  • ಗಾಜಿನ ಫಲಕ ,
  • ಗಾಜಿನ ತಟ್ಟೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಆಗಷ್ಟೆ ಅರಳಿದ ದಾಸವಾಳ ಹೂ ಒಂದನ್ನು ತೆಗೆದುಕೊಳ್ಳಿ.. ಹೊರಬಾಗದಿಂದ ಒಳಭಾಗವನ್ನು ಗಮನಿಸಿದಾಗ ಈ ನಾಲ್ಕು ಭಾಗಗಳನ್ನು ಕ್ರಮವಾಗಿ ಪುಷ್ಪಪಾತ್ರೆ (calyx)

ಪುಷ್ಪದಳ (carolla) ಹೂವಿನ ಗಂಡು ಭಾಗ ಕೇಸರ ಮಂಡಳ (androecium) ಹಾಗು ಹೂವಿನ ಹೆಣ್ಣು ಭಾಗ ,ಶಲಾಕೆ (gyenoceium) ಈ ನಾಲ್ಕು ಭಾಗಗಳು ಒಂದರ ಒಳಗೆ ಒಂದರಾಗಿ ಅವ್ರುತ್ತವಾಗಿ ಜೋಡನೆ ಆಗಿರುತ್ತದೆ.

  • ಹೂವಿನ ಅತ್ಯಂತ ಹೊರಭಾಗ ಪುಷ್ಪಪಾತ್ರೆ(sepals)ಯಾಗಿದ್ದು ಎಲೆಯಾಕಾರದ ಹಸಿರು ಬಣ್ಣದ ರಚನೆಗಳನ್ನು ಹೊಂದಿರಿತ್ತದೆ. ಪುಷ್ಪಪಾತ್ರೆ ಮೊಗ್ಗಿನ ಸ್ಥಿತಿಯಲ್ಲಿ ಹೂವಿನ ಒಳ ಭಾಗಗಳನ್ನು ರಕ್ಶಿಸುತ್ತದೆ.
  • ಹೂವಿನ ಎರಡನೆಯ ಪದರ ಪುಷ್ಪದಳ (petals) ಇದು ಸಾಮಾನ್ಯವಾಗಿ ಆಕಷಕ ಬಣ್ಣಗಳನ್ನು ಹೊಂದಿರುತ್ತದೆ, ಈ ಪುಷ್ಪದಳವು ವಿಭಿನ್ನ ಆಕರಗಳಲ್ಲಿ ಕಂಡು ಬರುತ್ತ್ತದೆ. ಪರಾಗದಸ್ಪರ್ಷದಲ್ಲಿ ದುಂಬಿಗಳನ್ನ ಆಕರ್ಷಿಸುತ್ತದೆ.
  • ಕೇಸರ ಮಂಡಳವು ಹೊರಗಿನಿಂದ ಮೂರನೇ ಅವರ್ತ. ಇದರಲ್ಲಿ ಪುರುಷ ಪ್ರಜನನ ರಚನೆಗಳಾದ ಪುಂಕೇಸರ (stamens)ಗಳಿವೆ , ಅವು ಪರಾಗವನ್ನು ಉತ್ಪತ್ತಿಮಾಡುತ್ತವೆ.

ಪರಾಗಗಳಲ್ಲಿ ಪುರುಷಾಣುಗಳು ಉತ್ಪತ್ತಿಯಾಗುತ್ತವೆ.

  • ಅತ್ಯಂತ ಒಳಗಿನ ಅವರ್ತವೇ ಶಲಾಕೆ. ಇದು ಹೆಣ್ಣು ಪ್ರಜನನರಚನೆಗಳಾದ ಕಾರ್ಪೆಲ್ ಗಳನ್ನೊಳಗೊಂಡಿದೆ. ಪ್ರತಿ ಕಾರ್ಪೆಲ್ ನಲ್ಲಿ ಕೆಳಭಾಗವನ್ನು ಅಂಡಾಶಯ (ovary) ಎಂದೂ , ನೀಳವಾದ ಮಧ್ಯಭಾಗವನ್ನು ಶಲಾಕಾ ನಳಿಕೆ (style) ಎಂದೂ ತುದಿಯ ಭಾಗವನ್ನು ಶಲಾಕಾಗ್ರ (stigma)ಎಂದೂ ಕರೆಯಲಾಗುತ್ತದೆ.
  • ಹೂವಿನ ಹೆಣ್ಣು ಭಾಗವನ್ನು ನಾವು ನೊಡಬೇಕೆಂದರೆ ಉದ್ದ ಸೀಳಿಕೆಯನ್ನು ತೆಗೆದಾಗ ಈ ಅಂಡಾಶಯದ ಒಳಭಾಗದಲ್ಲಿ ಅಂಡಕಗಳು ಎಂಬ ರಚನೆಗಳು ಕಳು ಕಾಳಾಗಿ ಕಂಡು ಬರುತ್ತದೆ ಇದನ್ನ (ovules) ಎಂದು ಕರೆಯುತ್ತೆವೆಅಂಡಕಗಳ ಒಳಗೆ ಹೆಣ್ಣು ಲಿಂಗಾಣುಗಳಾದ ಅಂಡಾಣು ಉತ್ಪತ್ತಿಯಾಗುತ್ತವೆ.
  • ಅಂಡಾಶ ಇಂದ ಹೋರಾಟ ನಳಿಕೆಯು ಶಲಾಕ ನಳಿಕೆಯಾಗಿದ್ದು ಶಲಾಗ್ರಕ್ಕೆ ಜೋಡಣೆಯಾಗಿರುತ್ತದೆ ಶಲಾಗ್ರವು ಪ್ರೊಟಿನ್ ಯುಕ್ತವಾದ ಅಂಟಾದ ದ್ರವವನ್ನು ಸ್ರವಿಸುತ್ತದೆ,ಶಲಾಗ್ರದಮೇಲೆಬಂದುಬೀಳುವ ಪರಾಗುವ ಈ ಅಂಟಿಕೆ ಅಂಟಿಕೊಳ್ಳುತ್ತದೆ, ಪರಾಗದಲ್ಲಿರುವ ಗಂಡು ಲಿಂಗಾಣುಗಳು ಈ ಶಲಾಕ ನಳಿಕೆಯ ಮೂಲಕ ಸಾಗಿ ಬುಡ ಭಾಗದಲ್ಲಿರುವ ಅಂಡಾಯದ ಒಳಗಿನ ಅಂಡಾಣುಗಳ ಜೊತೆ ಸಂಯೋಗ ಹೊಂದಿ ನೀಶಾಚನ ಕ್ರಿಯೆ ಉಂಟಾಗುತ್ತದೆ.


{{#ev:youtube|XIuBvITN328| 500|left }}






















ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್