ರಚನಾ ಗಣಿತ 9

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ರಚನಾ 9ನೇ ತರಗತಿ ಗಣಿತ materials created by content enrichment team of DSERT

ರಚನಾ 9ನೇ ತರಗತಿ ವಿಜ್ಞಾನ materials for download & print

ರಚನಾ 9ನೇ ತರಗತಿ ಗಣಿತ

ರಚನಾ

ಎನ್.ಸಿ.ಎಫ್-2005

ಹೊಸ ಪಠ್ಯ ಪುಸ್ತಕ ಆಧಾರಿತ

ತರಬೇತಿ ಸಾಹಿತ್ಯ

2013-14

ತರಗತಿ : 9

ವಿಷಯ : ಗಣಿತ

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,

ಬೆಂಗಳೂರು.

ಮತ್ತು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, 100 ಅಡಿ ವರ್ತುಲ ರಸ್ತೆ, ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿ,

ಬೆಂಗಳೂರು-560085.



1. ಹೊಸ ಪಠ್ಯಪುಸ್ತಕಗಳ ಆಧಾರಿತ

ತರಬೇತಿ ಸಾಹಿತ್ಯ : ಗಣಿತ, 9ನೇ ತರಗತಿ

2. ಪ್ರಕಟಣೆ : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,

ಬೆಂಗಳೂರು-560001

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ

ಇಲಾಖೆ, 100 ಅಡಿ ವರ್ತುಲ ರಸ್ತೆ,

ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ,

ಬೆಂಗಳೂರು - 560 085.

3. ಮುದ್ರಣ ವರ್ಷ : 2013-14

4. ಪ್ರತಿಗಳ ಸಂಖ್ಯೆ : 4000

5. ಮುದ್ರಕರು : ಭಾಗ್ಯಂ ಬೈಂಡಿಂಗ್ ವಕ್ರ್ಸ,

ನಂ. 25/1, 1ನೇ ಮುಖ್ಯ ರಸ್ತೆ, 1ನೇ ಅಡ್ಡರಸ್ತೆ,

ಹೊಸ ಟಿಂಬರ್ ಲೇಔಟ್, ಮೈಸೂರು ರಸ್ತೆ,

ಬೆಂಗಳೂರು - 560 026.


ಮುನ್ನುಡಿ

2013-14ನೇ ಸಾಲಿನಿಂದ ಓಅಈ-2005ರ ಆಧಾರದ ಮೇಲೆ ಕರ್ನಾಟಕ ರಾಜ್ಯದಲ್ಲಿಯೂ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2013-14) 6 ಮತ್ತು 9ನೇ ತರಗತಿಗಳಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನು ರಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಓಅಈ-2005ರ ಪರಿಕಲ್ಪನೆಗಳನ್ನು ಈ ಪರಿಷ್ಕೃತ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಪರಿಷ್ಕರಣೆಯಲ್ಲಿ ಮೂಡಿಬಂದಿರುವ ಹೊಸ ಪರಿಕಲ್ಪನೆಗಳ ಬಗ್ಗೆ ಮತ್ತು ಬೋಧನಾ-ಕಲಿಕಾ ಸನ್ನಿವೇಶದಲ್ಲಿ ಶಿಕ್ಷಕರು ಅನುಸರಿಸಬೇಕಾಗಿರುವ ವಿಧಿ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡುವುದು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳುವುದು ಹಾಗೂ ರಚನಾವಾದದ ಬಗ್ಗೆ ಅರಿವು ಮೂಡಿಸುವುದು, ಅತ್ಯಂತ ಅವಶ್ಯವಾಗಿದೆ. ಈ ದಿಸೆಯಲ್ಲಿ 6 ಮತ್ತು 9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕಲಿಕೆ ಮತ್ತು ಬೋಧನೆಗೆ ಅಳವಡಿಸಲು ಮಾರ್ಗದರ್ಶಿ ರೂಪದಲ್ಲಿ ಶಿಕ್ಷಕ ತರಬೇತಿ ಮಾಡ್ಯೂಲನ್ನು ರಚಿಸಲಾಗಿದೆ. 6ನೇ ತರಗತಿಗೆ ಒಂದು ಸಂಪೂರ್ಣ ಮಾಡ್ಯೂಲ್ ತಯಾರಿಕೆಯಾಗಿದ್ದು 9ನೇ ತರಗತಿಗೆ ವಿಷಯವಾರು ಶಿಕ್ಷಕರ ತರಬೇತಿ ಸಾಹಿತ್ಯ ರೂಪಿಸಲಾಗಿದೆ.

ಈ ತರಬೇತಿ ಸಾಹಿತ್ಯವನ್ನು ಮುಂಬರುವ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಈ ಪುಸ್ತಿಕೆಯಲ್ಲಿ ಅಳವಡಿಸಿರುವ ಅಂಶಗಳನ್ನು ಶಿಕ್ಷಕ ಸಮುದಾಯ ತಮ್ಮ ಬೋಧನಾ ಮತ್ತು ಕಲಿಕಾ ಸನ್ನಿವೇಶದಲ್ಲಿ ಅಳವಡಿಸಿ ತರಗತಿಗಳಲ್ಲಿ ಹೆಚ್ಚು ಕಾರ್ಯಕ್ಷಮತೆಯನ್ನು ಉಂಟು ಮಾಡುವರೆಂದು ಆಶಿಸಲಾಗಿದೆ.

(ಹೆಚ್. ಎಸ್. ರಾಮರಾವ್)

ನಿರ್ದೇಶಕರು


ಸಂಶೋಧನೆ ಮತ್ತು ತರಬೇತಿ


ರಚನಾ ತರಬೇತಿ ಸಾಹಿತ್ಯ

ಪ್ರಿಯರೇ,

ಹೊಸ ಪಠ್ಯಪುಸ್ತಕ ಬಂದಾಗ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ತರಗತಿಯಲ್ಲಿ ಅದನ್ನು ಕಲಿಕೆಯ ಸನ್ನಿವೇಶಕ್ಕೆ ಹೊಂದಿಸಿಕೊಳ್ಳುವ ಪ್ರಯತ್ನವು ನಮ್ಮೆಲ್ಲರದ್ದು. ಶಿಕ್ಷಣ ಇಲಾಖೆಯು ಪಠ್ಯಪುಸ್ತಕದ ಆಶಯಗಳನ್ನು ಈ ತರಬೇತಿಯಲ್ಲಿ ಪರಿಚಯಿಸಲು ಉದ್ದೇಶಿಸಿರುವುದು ಸರ್ವ ವಿದಿತ. ಈ ಸಾಹಿತ್ಯವನ್ನು ತಾವು ಪೂರ್ತಿ ಓದಬೇಕು, ಮನನ ಮಾಡಿಕೊಳ್ಳಬೇಕು, ಹಾಗೂ ಅರ್ಥೈಸಿಕೊಳ್ಳಬೇಕು. ಇದಕ್ಕಿಂತಲೂ ಉತ್ತಮ ವಿಧಾನ/ಕ್ರಮಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರೆ ಅದನ್ನು ಇಲಾಖೆಗೆ ತಿಳಿಸಿ. ಮುಂದಿನ ತರಬೇತಿಗಳಿಗೆ ಅಳವಡಿಸಿಕೊಳ್ಳಲು ನೆರವಾಗಬಹುದು.

ಈ ಸಾಹಿತ್ಯ ಸಂಚಿಕೆಯಲ್ಲಿ ಕೆಲವು ವಿಶೇಷ ಲೇಖನಗಳು, ಮಾಹಿತಿಗಳನ್ನು ಸೇರಿಸಿದೆ. ಇವುಗಳ ಮೂಲ ಲೇಖಕರಿಗೆ, ಪ್ರಕಾಶಕರಿಗೆ ನಾವು ಋಣಿ. ಬಾಲವಿಜ್ಞಾನ, ಕ.ರಾ.ವಿ.ಪ.ದ ಪ್ರಕಟಣೆಗಳನ್ನು ತಾವು ಗಮನಿಸುತ್ತಲೇ ಇದ್ದೀರಿ. ಅವುಗಳನ್ನು ಇಲ್ಲಿ ಉಲ್ಲೇಖಿಸಿದೆ. ಕ.ರಾ.ವಿ.ಪ ಘಟಕ ಸ್ಥಾಪಿಸಿ ಅದರ ಮೂಲಕ `ಗಣಿತ ಸಂಘ'ದ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗಣಿತ ಕಲಿಕೆ ಅರ್ಥಪೂರ್ಣವಾಗುವ ಆಶಯಕ್ಕೆ ತಮ್ಮೆಲ್ಲರ ಕ್ರಿಯಾಶೀಲತೆ ಅವಶ್ಯಕ. ತಾವು ನನ್ನನ್ನು ದೂರವಾಣಿಯಲ್ಲೂ ಸಂಪರ್ಕಿಸಬಹುದೆಂದು ವಿನಮ್ರವಾಗಿ ತಿಳಿಸ ಬಯಸುತ್ತೇನೆ.

ಈ ಕಾರ್ಯಕ್ಕೆ ನನನ್ನು ತೊಡಗಿಸಿಕೊಳ್ಳುವಂತೆ ಮಾಡಿದ ನಿರ್ದೇಶಕರು ಹಾಗೂ ಇಲಾಖೆ ಅಧಿಕಾರಿ ಮಿತ್ರರಿಗೆ, ಸಾಹಿತ್ಯ ರಚನೆಯಲ್ಲಿ ನೆರವಾದ ಎಲ್ಲ ಗೆಳೆಯರಿಗೂ ನಾನು ಅಭಾರಿ.

ಇಂತು

ಎನ್. ಕಾಳೇಶ್ವರ ರಾವ್



ಪರಿಕಲ್ಪನೆ ಮತ್ತು ಮಾರ್ಗದರ್ಶನ

1. ಶ್ರೀ ಹೆಚ್.ಎಸ್. ರಾಮರಾವ್, ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು.

2. ಶ್ರೀಮತಿ ಯಶೋಧ ಬೋಪಣ್ಣ, ಸಹ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು.

3. ಶ್ರೀಮತಿ ಸಿರಿಯಣ್ಣನವರ ಲಲಿತ ಚಂದ್ರಶೇಖರ್, ಉಪ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು


ಸಂಪನ್ಮೂಲ ವ್ಯಕ್ತಿಗಳು

1. ಶ್ರೀ ಕಾಳೇಶ್ವರ ರಾವ್ ಎನ್., ಶೈಕ್ಷಣಿಕ ಸಲಹೆಗಾರರು, ಜೆ.ಪಿ. ನಗರ, ಬೆಂಗಳೂರು.

ಫೆÇೀನ್ : 9448944389 e-mಚಿiಟ : ಡಿಚಿo.ಞಚಿಟesh@gmಚಿiಟ.ಛಿom

2. ಶ್ರೀ ಟಿ.ಕೆ. ರಾಘವೇಂದ್ರ, ಕಾರ್ಯಕ್ರಮಾಧಿಕಾರಿಗಳು, ಕೆ.ಎಸ್.ಕ್ಯೂ.ಎ.ಎ.ಸಿ. ಕ.ಪ್ರೌ.ಶಿ.ಪ. ಮಂಡಳಿ, ಬೆಂಗಳೂರು

3. ಶ್ರೀ ಎಂ.ಟಿ. ಶರಣಪ್ಪ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಕಂದನಕೋವಿ, ದಾವಣಗೆರೆ ಜಿಲ್ಲೆ

4. ಶ್ರೀ ಎಸ್.ಎನ್. ಲಿಂಗರಾಜು, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಮಾದಾಪುರ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.

5. ಶ್ರೀ ಬಿ.ಆರ್.ಎಸ್. ಬ್ಯಾನರ್ಜಿ, ಸಮಾಲೋಚಕರು, ನಂ. 174, 5ನೇ `ಬಿ' ಕ್ರಾಸ್, ಕೆಂಗೇರಿ ಉಪ ನಗರ, ಬೆಂಗಳೂರು.

6. ಶ್ರೀ ಎಸ್. ವಿಜಯಕುಮಾರ, ಅಜೀಮ್ ಪ್ರೇಮ್‍ಜಿ ಪ್ರತಿಷ್ಠಾನ, ಬೆಂಗಳೂರು.

7. ಶ್ರೀ ಸದಾಶಿವ ಪೂಜಾರಿ, ಶಿಕ್ಷಕರು, ಎಸ್.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ, ಬೆಳ್ತಂಗಡಿ.


ಕಾರ್ಯಕ್ರಮ ನಿರ್ವಹಣೆ

1. ಶ್ರೀ ಹೆಚ್.ಎಂ. ಬಸಪ್ಪ, ಹಿರಿಯ ಸಹಾಯಕ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು.

ಪರಿವಿಡಿ

1.ಗಣಿತ ಕಲಿಕೆ : ಗಣಿತದ ಭಾಷೆ, ಗಣಿತ ಬೋಧನೆಯಲ್ಲಿ ರಚನಾವಾದ

2.ಗಣಿತ ಪಠ್ಯಪುಸ್ತಕ : ನೆಲೆ ಹಿನ್ನೆಲೆ ಹಾಗೂ ಆಶಯಗಳು

3.ಒಂಭತ್ತನೆಯ ತರಗತಿಯ ಹೊಸ ಪಠ್ಯ ಪುಸ್ತಕ

4.ಗಣಿತ ಕಲಿಕೆಗೆ ಆಯೋಜಿಸಬಹುದಾದ ಕೆಲವು ಚಟುವಟಿಕೆಗಳು

5.ಶಿಕ್ಷಕರೇ, ಚಿಂತನೆ ಮಾಡಿ

6.ದೈನಂದಿನ ಆಗು ಹೋಗುಗಳು ಹಾಗೂ ಗಣಿತ ಕಲಿಕೆಯನ್ನು ಸಮ್ಮಿಳಿತಗೊಳಿಸುವ ಸಾಧ್ಯತೆ

7.ಗಣಿತ ಪ್ರಯೋಗ ಶಾಲೆ

8.ಚಿಂತನೆಗೆ ಮೀಟುಗೋಲು (9ನೇ ತರಗತಿ ಗಣಿತ ಪಠ್ಯಪುಸ್ತಕದ ವಿವಿಧ ಘಟಕಗಳ ಪ್ರಸ್ತಾಪ)

9.ವಿಶೇಷ ಮಾಹಿತಿಗಳು ಹಾಗೂ ಲೇಖನಗಳು

10.ಗಣಿತದಲ್ಲಿ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ

11.ಸ್ವ ಅವಲೋಕನ

12.ಆಕರ ಗ್ರಂಥಗಳು