ರಚನಾ ಗಣಿತ 9 ಒಂಭತ್ತನೆಯ ತರಗತಿಯ ಹೊಸ ಪಠ್ಯ ಪುಸ್ತಕ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಒಂಭತ್ತನೆಯ ತರಗತಿ ಗಣಿತ ಹೊಸ ಪಠ್ಯಪುಸ್ತಕ :

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) -2005ರ ಆಶಯ

ಒಂಬತ್ತನೆಯ ತರಗತಿ ಗಣಿತ ವಿಷಯದ ಹೊಸ ಪಠ್ಯಪುಸ್ತಕವು 2013-14ನೇ ಸಾಲಿನಿಂದ ಜಾರಿಗೆ ಬರುತ್ತಿದೆ. ಈ ಪಠ್ಯಪುಸ್ತಕದ ರಚನೆಯಲ್ಲಿ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005ರ ಆಶಯಗಳನ್ನು ಬಹಳಷ್ಟು ಅಳವಡಿಸಿಕೊಳ್ಳಲಾಗಿದೆ. ನಮಗೆ ಈಗಾಗಲೇ ತಿಳಿದಿರುವಂತೆ ಎನ್.ಸಿ.ಎಫ್ 2005 ಕೆಲವು ಮಾರ್ಗದರ್ಶಿ ತತ್ವಗಳನ್ನು ಹೊಂದಿದೆ. ಅವುಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ತರಗತಿ ಜ್ಞಾನವನ್ನು ಹೊರಗಿನ ಜೀವನಕ್ಕೆ ಸಂಬಂಧಿಸುವುದು, ಕಂಠಪಾಠವನ್ನು ತಪ್ಪಿಸುವುದು, ಪಠ್ಯಕ್ರಮವು ಪಠ್ಯಪುಸ್ತಕಗಳನ್ನು ಮೀರುವಂತೆ ಮಾಡುವುದು, ಪರೀಕ್ಷೆಗಳನ್ನು ನಮ್ಯ ಮಾಡುವುದು ಇತ್ಯಾದಿ. ಈ ಅಂಶಗಳನ್ನು ಪ್ರಸ್ತುತ 9ನೇ ತರಗತಿ ಗಣಿತ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ ಪಠ್ಯಪುಸ್ತಕ ರಚನೆಯ ತತ್ವಗಳನ್ನೂ ಗಮನದಲ್ಲಿರಿಕೊಂಡು ಪುಸ್ತಕವನ್ನು ರಚಿಸಲಾಗಿದೆ.

ಪ್ರಸ್ತುತ ವರ್ಷದಲ್ಲಿ ಜಾರಿಗೊಳ್ಳುತ್ತಿರುವ ಗಣಿತ ಪಠ್ಯಪುಸ್ತಕ

ಹೊಸ ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005ರಲ್ಲಿನ ಗುರಿಗಳನ್ನು ಸಾಕಾರಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಸದರಿ ಪುಸ್ತಕದಲ್ಲಿ ಹೊಸ ವಿಷಯಗಳ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು. ವಿದ್ಯಾರ್ಥಿಗಳಿಗೆ ಗಣಿತದ ಜ್ಞಾನವನ್ನು ದೈನಂದಿನ ಜೀವನದ ಸನ್ನಿವೇಶಗಳಲ್ಲಿ ಅಳವಡಿಸಿಕೊಳ್ಳುವ ಅವಕಾಶ ಒದಗಿಸಿದೆ. ಪಠ್ಯಪುಸ್ತಕದಲ್ಲಿನ ಹಲವಾರು ಘಟಕಗಳು ಹಿಂದೆ ಅಭ್ಯಸಿಸಿರುವುದೇ ಆದರೂ ವಿಷಯಗಳನ್ನು ಪ್ರಸ್ತಾಪಿಸಿರುವ ವಿಧಾನ ಮಾತ್ರ ಭಿನ್ನವಾಗಿದ್ದು ಪಠ್ಯಕ್ರಮದ ತತ್ವಗಳಿಗೆ ಪೂರಕವಾಗಿದೆ. ಹೊಸ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳು ಭಾಗಾಕಾರ ಕ್ರಮದಿಂದ ವರ್ಗಮೂಲವನ್ನು ಕಂಡುಹಿಡಿಯುವುದು, ಒಂದು ಸಂಖ್ಯೆಯ ವರ್ಗಮೂಲವನ್ನು ಅಂದಾಜಿಸುವುದು, ವಾಸ್ತವ ಸಂಖ್ಯೆಗಳು ಮತ್ತು ಭಾಗಲಬ್ಧ ಹಾಗೂ ಅಭಾಗಲಬ್ಧ ಸಂಖ್ಯೆಗಳ ಗುಣಲಕ್ಷಣಗಳು; ವಿಶೇಷ ರೂಪದ ಅಭಾಗಲಬ್ಧ ಸಂಖ್ಯೆಗಳಾದ ಕರಣಿಗಳು ಸಂಖ್ಯಾಶಾಸ್ತ್ರ ಮತ್ತು ವಾಣಿಜ್ಯ ಗಣಿತಕ್ಕೆ ಸಂಬಂಧಿಸಿದ ಕೆಲವು ಹೊಸ ಪರಿಕಲ್ಪನೆಗಳು; ಸಮಯ ಮತ್ತು ಕಾಲಕ್ಕೆ ಹೆಚ್ಚಿನ ಒತ್ತನ್ನು ನೀಡುವಂತೆ ಪ್ರಮಾಣ ಮತ್ತು ಅನುಪಾತ, ಬೀಜಗಣಿತ, ನಿಬಂಧಿತ ಸಮೀಕರಣಗಳು ಮತ್ತು ಅವುಗಳಿಗೆ ಹೆಚ್ಚಿನ ಒತ್ತನ್ನು ನೀಡುವಂತೆ ಪ್ರಮಾಣ ಮತ್ತು ಅನುಪಾತ, ಬೀಜಗಣಿತ, ನಿಬಂಧಿತ ಸಮೀಕರಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಬಹುಭುಜಾಕೃತಿಗಳು ಮತ್ತು ಚತುರ್ಭುಜಗಳು ಹಾಗೂ ಅವುಗಳ ಲಕ್ಷಣಗಳು, ಸಮಾನಾಂತರ ಚತುರ್ಭುಜದ ಕ್ಷೇತ್ರಫಲ ಮತ್ತು ಘನಫಲ ಇವುಗಳನ್ನು ವೈವಿಧ್ಯಮಯವಾದ ಚಟುವಟಿಕೆಗಳೊಂದಿಗೆ ಅಭ್ಯಸಿಸುತ್ತಾರೆ. ವಿದ್ಯಾರ್ಥಿಗಳಿಗೆ ಗಣಿತದಲ್ಲಿ ಆಸಕ್ತಿಯನ್ನು ಮೂಡಿಸಲು ಮತ್ತು ಒಲವನ್ನು


ಬೆಳೆಸಲು ಹಾಗೂ ನಮ್ಮ ಭಾರತೀಯ ಗಣಿತಜ್ಞರು ಮತ್ತು ಅವರ ಕೊಡುಗೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಭಾರತೀಯ ಗಣಿತದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಗಣಿತದಲ್ಲಿ ಒಂದು ಸೂತ್ರವನ್ನು / ಸಿದ್ಧಾಂತವನ್ನು ಸ್ಥಾಪಿಸಲು ಹಲವಾರು ವಿವಿಧ ಸಾಧನೆಗಳಿದ್ದು ಅವುಗಳ ಬಗೆಗೂ ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಈ ಎಲ್ಲಾ ಅಂಶಗಳು ಗಣಿತ ಪಠ್ಯ ಪುಸ್ತಕವನ್ನು ಜ್ಞಾನಾಧಾರಿತವಾಗಿ ಸಮೃದ್ಧಗೊಳಿಸಿವೆ. ಮುಂದಿನ ವರ್ಷಗಳಲ್ಲಿ ಶೈಕ್ಷಣಿಕ ಮತ್ತು ತಂತ್ರಜ್ಞಾನ ಹಾಗೂ ವಿದ್ಯಾರ್ಥಿಗಳ ತಿಳಿವಳಿಕೆಯಲ್ಲಿನ ಪ್ರಗತಿದಾಯಕ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಪಠ್ಯಪುಸ್ತಕವನ್ನು ರಚಿಸಲಾಗಿದೆ.

ಬ್ಯಾಂಕ್ ವ್ಯವಸ್ಥೆ, ಚಕ್ರಬಡ್ಡಿ, ಮೌಲ್ಯೀಕರಣ ಮತ್ತು ಸವಕಳಿ, ಬಾಡಿಗೆ ಕೊಳ್ಳುವಿಕೆ ಮತ್ತು ಕಂತು ಖರೀದಿ, ಕ್ಷೇತ್ರಗಣಿತ ಇವುಗಳಲ್ಲಿನ ಬಹುತೇಕ ಅಂಶಗಳು ತರಗತಿ ಕಲಿಕೆಯೊಂದಿಗೆ ಜ್ಞಾನವನ್ನು ಹೊರಗಿನ ಜೀವನಕ್ಕೆ ಸಂಬಂಧಿಸುತ್ತವೆ. ಬ್ಯಾಂಕ್ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಅಭ್ಯಸಿಸುವ ಪ್ರತಿ ಅಂಶವು ವ್ಯವಹಾರಿಕ ಜೀವನಕ್ಕೆ ಸಂಬಂಧ ಕಲ್ಪಿಸುತ್ತದೆ. ಚಲನ್‍ಗಳನ್ನು ತುಂಬುವ ಕ್ರಮ, ಬ್ಯಾಂಕ್ ಖಾತೆಯನ್ನು ತೆರೆಯುವುದು, ದಿನನಿತ್ಯದ ಬಡ್ಡಿ ಲೆಕ್ಕಾಚಾರ ಇವುಗಳ ಜ್ಞಾನವು ಪ್ರತಿಯೊಬ್ಬರಿಗೂ ಅಗತ್ಯವಾದುದಾಗಿದೆ. ಇವುಗಳನ್ನು ಪಠ್ಯಪುಸ್ತಕದಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ. ಅದರಂತೆ ಚಕ್ರಬಡ್ಡಿಗೆ ಸಂಬಂಧಿಸಿದ ಹಲವಾರು ಪರಿಕಲ್ಪನೆಗಳೂ ವಿದ್ಯಾರ್ಥಿಗಳ ಜ್ಞಾನವನ್ನು ನೈನಜೀವನದೊಂದಿಗೆ ಸಮೀಕರಿಸುತ್ತವೆ. ಕೆಲವು ಮುಖ್ಯ ಘಟಕಗಳು ಉದಾಹರಣೆಗೆ ವಾಸ್ತವ ಸಂಖ್ಯೆಗಳು, ಕರಣಿಗಳು, ಪ್ರಮಾಣ ಮತ್ತು ಅನುಪಾತ, ಏಕಕಾಲಿಕ ಸಮೀಕರಣಗಳು, ಬಹುಪದೋಕ್ತಿಗಳು ಗುಣಾಕಾರ ಇತ್ಯಾದಿಗಳು ನೇರವಾಗಿ ನೈಜಜೀವನದ ಸನ್ನಿವೇಶಗಳಲ್ಲಿ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳದಿದ್ದರೂ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತವೆ. ಗಣಿತ ಪಠ್ಯಕ್ರಮದಲ್ಲಿನ ಎಲ್ಲ ವಿಷಯಗಳೂ ಮುಂದಿನ ಶೈಕ್ಷಣಿಕ ಜೀವನಕ್ಕೆ ವಿಧ್ಯಾರ್ಥಿಗಳನ್ನು ಅಣಿಗೊಳಿಸುತ್ತದೆ.

ಬಾಯಿಪಾಠ ಮಾಡುವುದನ್ನು ಮತ್ತು ಒಂದೇ ರೀತಿಯ ಸಮಸ್ಯೆಗಳನ್ನು ಹಲವಾರು ಸಲ ಬಿಡಿಸಿ ಅರ್ಥರಹಿತವಾಗಿ ವಿಷಯವನ್ನು ತಿಳಿಯುವುದನ್ನು ಕಡಿಮೆಗೊಳಿಸಲು ವಿಭಿನ್ನ ಚಟುವಟಿಕೆ ಗಳನ್ನು ಪ್ರತಿ ಘಟಕದಲ್ಲೂ ನೀಡಲಾಗಿದೆ. ಈ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಆಲೋಚಿಸಲು ಪ್ರೇರಿಸುವುದಲ್ಲದೆ ಪರಿಕಲ್ಪನೆಗಳನ್ನು ಗ್ರಹಿಸಲೂ ಉಪಯುಕ್ತವಾಗಿವೆ. ಪಠ್ಯಪುಸ್ತಕದಲ್ಲಿನ ಮಾಹಿತಿಯನ್ನು ವಿವಿಧ ಸಂದರ್ಭಗಳಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವಂತಹ ಚಟುವಟಿಕೆಗಳನ್ನೂ ಸೂಚಿಸಲಾಗಿದೆ. ಪಠ್ಯಪುಸ್ತಕದ ಹಲವಾರು ವಿಷಯಗಳಲ್ಲಿ ರಚನಾವಾದಕ್ಕೆ ಪ್ರಾಶಸ್ತ್ಯವನ್ನು ನೀಡಲಾಗಿದೆ. ಪಠ್ಯಕ್ರಮ ರಚನೆಯ ತತ್ವಗಳಿಗೆ ಪೂರಕವಾಗಿ ಸುರುಳಿಯಾಕಾರದಲ್ಲಿ ವಿಷಯಗಳನ್ನು ಆಯೋಜಿಸಲಾಗಿದ್ದು, ಮುಂದುವರೆದಂತೆ ವಿಷಯದ ಆಳವು ಹೆಚ್ಚುತ್ತಾ ಹೋಗುತ್ತದೆ.

ಬಹುತೇಕ ವಿಷಯಗಳನ್ನು ಪ್ರಸ್ತುತಪಡಿಸುವಾಗ ಅನುಗಮನತೆಗೆ ಒತ್ತನ್ನು ನೀಡಲಾಗಿದೆ. ಮೊದಲು ತಿಳಿದಿರುವ ವಿಷಯಗಳಿಂದ ಆರಂಭಿಸಿ ದೃಷ್ಟಾಂತಗಳನ್ನು ನೀಡಿದ ನಂತರ ವಿದ್ಯಾರ್ಥಿಗಳೇ ಪರಿಕಲ್ಪನೆಗಳನ್ನು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಇದು ವಿದ್ಯಾರ್ಥಿಗಳ ಆಲೋಚನಾ ಸಾಮಥ್ರ್ಯವನ್ನು ವೃದ್ಧಿಗೊಳಿಸಲು ಉಪಯುಕ್ತವಾಗಿದೆ. ಮಾದರಿ ಲೆಕ್ಕಗಳನ್ನು ಸೂಕ್ತ ವಿವರಣೆ ಯೊಂದಿಗೆ ಬಿಡಿಸಲಾಗಿದೆ. ಇದು ಸಮಸ್ಯಾ ಪರಿಹಾರದ ಹಂತಗಳಲ್ಲಿ ಗ್ರಹಿಸಲು ಮತ್ತು ಸ್ವತಃ ಸಮಸ್ಯೆಗಳನ್ನು ರೂಪಿಸಲು ಪ್ರೇರಣೆಗೊಳಿಸುತ್ತದೆ. ಹೀಗೆ ಹೊಸ ಪಠ್ಯಪುಸ್ತಕವು ವಿದ್ಯಾರ್ಥಿಗಳು ವೈವಿಧ್ಯಮಯವಾಗಿ ಆಲೋಚಿಸಲು, ಸಮಸ್ಯೆಗಳನ್ನು ಸ್ವ-ಆಸಕ್ತಿಯಿಂದ ಬಿಡಿಸಲು, ತರಗತಿಯ ಕಲಿವನ್ನು ಹೊರಗಿನ ಪ್ರಪಂಚದಲ್ಲಿ ಉಪಯೋಗಿಸಿಕೊಳ್ಳಲೂ ಯುಕ್ತ ಅವಕಾಶಗಳನ್ನು ಒದಗಿಸಿದೆ.