ರಚನಾ ಗಣಿತ 9 ಗಣಿತ ಪ್ರಯೋಗ ಶಾಲೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗಣಿತ ಪ್ರಯೋಗ ಶಾಲೆ

ಗಣಿತ ಪರಿಕಲ್ಪನೆಗಳನ್ನು ಮೂಡಿಸಲು ತರಗತಿಗಳಲ್ಲಿ ಶಿಕ್ಷಕರು ಮಕ್ಕಳಿಗೆ ಹಲವಾರು ಅವಕಾಶಗಳನ್ನು ಒದಗಿಸಬೇಕು. ಪರಿಕಲ್ಪನೆಗಳ ಬೆಳವಣಿಗೆಗೆ ಪೂರಕವಾದ ಬೆಳವಣಿಗೆಗಾಗಿ ವಿದ್ಯಾರ್ಥಿಗಳು ಸ್ವತಃ ಕೈಗೊಳ್ಳುವಂತೆ ಪ್ರೇರಣೆಯನ್ನು ಒದಗಿಸಬೇಕು. ಪರಿಕಲ್ಪನೆಗಳ ಆಧಾರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಅನುಕೂಲಿಸಬೇಕು. ಇವುಗಳಲ್ಲಿ ಕೆಲವು ಚಟುವಟಿಕೆಗಳನ್ನು ಬಹುತೇಕ ತರಗತಿಗಳಲ್ಲಿ ಅವಕಾಶವಾಗದೇ ಇದ್ದಲ್ಲಿ ಗಣಿತದ ಪ್ರಯೋಗಾಲಯವನ್ನು ಬಳಸಿಕೊಳ್ಳಬಹುದು. ಗಣಿತ ಪ್ರಯೋಗಾಲಯವು ಅಮೂರ್ತ ಪರಿಕಲ್ಪನೆಗಳನ್ನು ಮೂರ್ತಗೊಳಿಸುವುದಕ್ಕೆ ಮತ್ತು ಪ್ರಾಯೋಗಿಕವಾಗಿ ಚಟುವಟಿಕೆಗಳನ್ನು ನಡೆಸಲು ಅವಕಾಶ ದೊರಕಿಸುವಂತಿರಬೇಕು.


ಕಲಿಕೆಯನ್ನು ಅನುಕೂಲಿಸುವಲ್ಲಿ ಗಣಿತ ಪ್ರಯೋಗಾಲಯದ ಬಳಕೆ :

ಗಣಿತ ಪ್ರಯೋಗಾಲಯದ ಅವಶ್ಯಕತೆ ಮತ್ತು ಉದ್ದೇಶ

ಟ ಗಣಿತದ ಬುನಾದಿ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವ ಸಂದರ್ಭವನ್ನು ಮಕ್ಕಳಿಗೆ ಒದಗಿಸುವುದು.

ಟ ತರಗತಿಯಲ್ಲಿ ಪಡೆದ ಜ್ಞಾನವನ್ನು ಒರಗೆ ಹಚ್ಚುವುದು.

ಟ ರೇಖಾಗಣಿತದ ಪರಿಕಲ್ಪನೆಗಳನ್ನು ಮಾದರಿಗಳ ಉಪಯೋಗಿಸುವ ಮೂಲಕ ಅರ್ಥೈಸುವುದು.

ಟ ಅಮೂರ್ತ ಕಲ್ಪನೆಗಳನ್ನು ಮೂರ್ತ ರೂಪದಲ್ಲಿ ಪರೀಕ್ಷಿಸುವುದು.

ಟ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿ, ಕುತೂಹಲ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಹಾಯವಾಗುವುದು.

ಟ ಒಂದೇ ಪರಿಕಲ್ಪನೆಯನ್ನು ವಿಭಿನ್ನವಾಗಿ ಆಲೋಚಿಸುವುದು ಮತ್ತು ಕಲಿಯುವುದು.

ಟ ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ಒದಗಿಸುವುದು.

ಟ ವಿದ್ಯಾರ್ಥಿಗಳಿಗೆ ತಮ್ಮ ಬುದ್ಧಿಮತ್ತೆಯನ್ನು ಒರಗೆ ಹಚ್ಚುವ ಹಾಗೂ ತಮ್ಮ ಕೈಯಿಂದಲೇ ಸ್ವತಃ ಮಾಡಿ, (ಒಚಿಟಿiಠಿuಟಚಿಣive sಞiಟಟ), ಕಲಿಯುವ ಕುತೂಹಲಕರ ಸನ್ನಿವೇಶ ಒದಗಿಸುವುದು.

ಟ ರಚನಾ ವಿಧಾನದಿಂದ ವಿದ್ಯಾರ್ಥಿಯು ಕೆಲವು ಪರಿಕಲ್ಪನೆಗಳನ್ನು ಒರಗೆ ಹಚ್ಚುವುದು.


ಗಣಿತ ಪ್ರಯೋಗಶಾಲೆಯ ವಿನ್ಯಾಸ

ಟ ಗಣಿತ ಪ್ರಯೋಗಾಲಯದಲ್ಲಿ ಸುಮಾರು 20 ವಿದ್ಯಾರ್ಥಿಗಳು ಒಂದೇ ವೇಳೆಗೆ ಅಧ್ಯಯನ ಮಾಡುವಂತಹ ವಿನ್ಯಾಸ ಇರಬೇಕು. ಸ್ಥಳೀಯ ಅವಶ್ಯಕತೆ/ವಾತಾವರಣ/ ಕೊಠಡಿಯ ಲಭ್ಯತೆಗೆ ತಕ್ಕಂತೆ ಉತ್ತಮ ವಿನ್ಯಾಸ ರಚಿಸಿಕೊಳ್ಳಬೇಕು.

ಟ ಕೊಠಡಿ ಲಭ್ಯವಿಲ್ಲದಿದ್ದಲ್ಲಿ ಕಪಾಟುಗಳಾದರೂ ಇರಬೇಕು.

ಟ ಕೊಠಡಿಯಲ್ಲಿ ಮೇಜುಗಳು ಸಮರ್ಪಕವಾಗಿರಲಿ.

ಟ ಗಾಳಿ, ಬೆಳಕು ಸರಿಯಾಗಿ ಒದಗುವಂತೆ ಕೊಠಡಿಯ ವಿನ್ಯಾಸವಿರಲಿ.

ಟ ಗೋಡೆಯಲ್ಲಿ ಕೆಲವು ಚಾಟ್ರ್ಸ್‍ಗಳು ಇರಬೇಕು.

ಟ ಕೊಠಡಿಯಲ್ಲಿ ವಿದ್ಯುತ್ ಸೌಕರ್ಯವಿದ್ದರೆ ಉತ್ತಮ.

ಟ ಡ್ರಾಯಿಂಗ್, ಬೋರ್ಡ್, ಕತ್ತರಿ, ಪೇಪರ್ಸ್‍ಗಳು, ಕಾರ್ಡ್ ಶೀಟ್‍ಗಳು, ಪಿನ್‍ಗಳು, ಗಮ್, ಟೇಪ್.

ಟ ಅಂಕಗಣಿತ ಮಾದರಿಗಳು, ಚಾಟ್ರ್ಸ್‍ಗಳು, ಬೀಜಗಣಿತದ ಮಾದರಿಗಳು ಚಾರ್ಟುಗಳು ಹಾಗೂ ರೇಖಾಗಣಿತ ಮಾದರಿಗಳು ಚಾರ್ಟಗಳನ್ನು ಪ್ರತ್ಯೇಕವಾಗಿಡಬೇಕು.

ಗಣಿತ ಪ್ರಯೋಗಾಲಯದಲ್ಲಿ ಸಾಧಿಸಬಹುದಾದ ವಿಷಯಗಳು :

ಟ ಗಣಿತದ ಆಟಗಳು, ಒಗಟುಗಳು ಮತ್ತು ಚಟುವಟಿಕೆಗಳು.

ಟ ಗಣಿತ ಸಮಸ್ಯೆಗಳನ್ನು ಬಿಡಿಸುವ ಕೌಶಲಗಳನ್ನು ಹೆಚ್ಚಿಸುವುದು.

ಟ ಸ್ವತಃ ಕೆಲಸ ಮಾಡುವ ಅವಕಾಶ ಸಿಗುವುದು.

ಟ ಗುಂಪು ಕಲಿಕೆಗೆ ಪೆÇ್ರೀತ್ಸಾಹ ಕೊಡುವುದು

ಟ ಒಂದೇ ಮಾದರಿ, ಅನೇಕ ಪರಿಕಲ್ಪನೆಗಳು

ಟ ಒಂದೇ ಪರಿಕಲ್ಪನೆ, ಅನೇಕ ಮಾದರಿಗಳು

ಟ ಗಮನ ಸೆಳೆಯುವ ಮಾದರಿಗಳು

ಟ ಶಿಕ್ಷಕರು ಮತ್ತು ಮಕ್ಕಳು ತಾವೇ ತರಿಸಬಹುದಾದ ಮಾದರಿಗಳು

ಟ ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳಿಂದ ತಯಾರಿಸಬಹುದಾದ ಮಾದರಿಗಳು