ರಚನಾ ವಿಜ್ಞಾನ 9 ಶಿಕ್ಷಣದ ನಾಲ್ಕು ಆಧಾರ ಸ್ತಂಭಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಶಿಕ್ಷಣದ ನಾಲ್ಕು ಆಧಾರ ಸ್ತಂಭಗಳು

(ಈouಡಿ Piಟಟಚಿಡಿs oಜಿ ಇಜuಛಿಚಿಣioಟಿ)

ಇಪ್ಪತ್ತನೇ ಶತಮಾನ ಅಂತ್ಯವಾಗುವುದಕ್ಕೆ ದಶಕಗಳ ಮೊದಲೇ `ಮುಂದಿನ ಶತಮಾನಕ್ಕೆ ಏನು ಸಿದ್ಧತೆ ಆಗಬೇಕು?' ಎಂಬ ಬಗ್ಗೆ ಜಗತ್ತಿನ ಎಲ್ಲೆಡೆ -ಎಲ್ಲ ಸ್ತರಗಳಲ್ಲಿ-ಚಿಂತನ ಮಂಥನಗಳು ನಡೆದು ಅಪಾರ ಸಾಹಿತ್ಯ ಹೊರಬಂದಿತು. ರಾಜ್ಯ ಭಾಷೆಗಳಿಂದ ತೊಡಗಿ ಜಾಗತಿಕ ಮಟ್ಟದಲ್ಲಿಯೂ ಈ ಕೆಲಸ ಆಯಿತು. ವಿಶ್ವಸಂಸ್ಥೆಯ ಶೈಕ್ಷಣಿಕ, ವಿಜ್ಞಾನ ಮತ್ತು ಸಾಂಸ್ಕೃತಿಕ ಅಂಗವಾದ ಯುನೆಸ್ಕೊ ಜಗತ್ತಿನ ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಪ್ರಾತಿನಿಧಿಕ ಸಮಿತಿಯೊಂದನ್ನು ಸ್ಥಾಪಿಸಿ, ವಿಶ್ವಬ್ಯಾಂಕ್‍ನ ಮಾಜಿ ಅಧ್ಯಕ್ಷರಾದ ಡೆಲೋರ್ಸ್ ಅವರನ್ನು ಅಧ್ಯಕ್ಷರಾಗಿ ನೇಮಿಸಿತು. ಭಾರತದ ಪ್ರತಿನಿಧಿಯಾಗಿ ಪ್ರಸಿದ್ಧ ಶಿಕ್ಷಣವೇತ್ತರೂ, ವಿದ್ವಾಂಸರೂ, ಮುತ್ಸದ್ದಿಗಳೂ ಆದ ಡಾ|| ಕರಣ್ ಸಿಂಗ್ ಅವರು ನೇಮಕ ಪಡೆದರು. ಈ ಸಮಿತಿಯನ್ನು `ಇಪ್ಪತ್ತೊಂದನೇ ಶತಮಾನದಲ್ಲಿ ಜಾಗತಿಕ ಶಿಕ್ಷಣ ಹೇಗಿರಬೇಕು?' ಎಂಬ ವಿಷಯವನ್ನು ಕುರಿತು ಸಮಿತಿಯು ತನ್ನ ವರದಿಯನ್ನೂ, ಶಿಫಾರಸುಗಳನ್ನೂ ಸಲ್ಲಿಸಲು ಕೇಳಲಾಯಿತು. ಈ ಸಮಿತಿಯು 20ನೇ ಶತಮಾನದ 9ನೇ ದಶಕದಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅದರ ಶೀರ್ಷಿಕೆ `ವಿದ್ಯೆ ಆಂತರಿಕ ಸಂಪತ್ತು' ಪ್ರಾರಂಭದಲ್ಲಿ ಸಮಿತಿಯು 12ನೇ ಶತಮಾನದಲ್ಲಿ ಶಿಕ್ಷಣದ ಆಧಾರ ಸ್ತಂಭಗಳಾಗಿ ಈ ನಾಲ್ಕು ಸೂತ್ರಗಳು ಇರಬೇಕೆಂದು ಶಿಫಾರಸು ಮಾಡಿತು:

ಅವುಗಳೆಂದರೆ 1) ಐeಚಿಡಿಟಿiಟಿg ಣo ಐeಚಿಡಿಟಿ ಕಲಿಯಲು ಕಲಿಕೆ

2) ಐeಚಿಡಿಟಿiಟಿg ಣo ಜo ಕೈಗೊಳ್ಳಲು ಕಲಿಕೆ

3) ಐeಚಿಡಿಟಿiಟಿg ಣo be ಬಾಳಲು ಕಲಿಕೆ

4) ಐeಚಿಡಿಟಿiಟಿg ಣo ಟive ಣogeಣheಡಿ ಕೂಡಿಬಾಳಲು ಕಲಿಕೆ

ಈ ನಾಲ್ಕು ಸೂತ್ರಗಳನ್ನು ನಾವು ನಮ್ಮ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು - 2005ರಲ್ಲಿಯೂ ಅಳವಡಿಸಿಕೊಂಡಿರುವುದರಿಂದ ಶಾಲಾ ಪ್ರಕ್ರಿಯೆಗಳಲ್ಲಿ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬ ಚಿಂತನೆ ಅವಶ್ಯಕವಾಗಿದೆ.

ಕಲಿಯಲು ಕಲಿಕೆ ಐeಚಿಡಿಟಿiಟಿg ಣo ಐeಚಿಡಿಟಿ

ಕಲಿಕೆ ಎಂಬ ಪದವು ನಾಲ್ಕು ಸೂತ್ರಗಳಲ್ಲಿ ಒಟ್ಟು 8 ಬಾರಿ ಉಪಯೋಗಿಸಲಾಗಿದೆ ಕಲಿಕೆಯು ಕಲಿಯುವಿಕೆ ಕಲಿಸುವಿಕೆ ಗಳೆರಡನ್ನೂ ಒಳಗೊಳ್ಳುವ ಶಬ್ದ. ಐeಚಿಡಿಟಿiಟಿg ಣo ಐeಚಿಡಿಟಿ ಎಂಬ ಮಾತಿನಲ್ಲಿ `ಕಲಿಯಲು ಕಲಿಕೆ' ಎಂಬ ವಿದ್ಯಾರ್ಥಿಯ ಹೊಣೆಗಾರಿಕೆಯೂ `ಕಲಿಯಲು ಕಲಿಸಿಕೆ' ಎಂಬ ಶಿಕ್ಷಕರ ಜವಾಬ್ದಾರಿಯ ಭಾವವೂ ಅಡಗಿದೆ.

ಟೀಚರ್ ಎಂಬ ಇಂಗ್ಲೀಷ್ ಪದಕ್ಕೆ ಅನಾದಿ ಕಾಲದಿಂದಲೂ- ಶಿಕ್ಷಕ, ಉಪಾಧ್ಯಾಯ, ಗುರು, ಅಧ್ಯಾಪಕ, ಬೋಧಕ ಎಂಬ ಪದಗಳು ಪರ್ಯಾಯವಾಗಿ ಬಳಕೆಯಲ್ಲಿವೆ. ಈ ಎಲ್ಲ ಪದಗಳಿಗೂ `ಬೋಧಿಸುವವನು/ಳು' ಎಂಬರ್ಥ ದೃಢವಾಗಿದೆ ಕಲಿಸುವವರು ಯಾಂತ್ರಿಕವಾಗಿ ಜ್ಞಾನವನ್ನು ಧಾರೆ ಎರೆಯುವವರೆಂಬ ಬದಲಾಗಿ ಕಲಿಕೆಯನ್ನು ಸುಗಮಗೊಳಿಸುವವರು (ಈಚಿಛಿiಟiಣಚಿಣioಟಿ) ಎಂಬ ಅರ್ಥ ಬಂದಿದೆ. ಕನ್ನಡದಲ್ಲಿ ಈ ಪರಿಕಲ್ಪನೆಗೆ ಮಗುವಿನ ಕಲಿಕೆ ಏನೇನುಬೇಕೋ ಅದನ್ನೆಲ್ಲ ಒದಗಿಸಿ ಸಹಾಯ ಮಾಡುವವನ/ಳು ಎಂಬ ಅರ್ಥದಲ್ಲಿ `ಸುಗಮಕಾರ' ಅಥವಾ `ಅನುಕೂಲಕಾರ' ಎನ್ನುವ ಪದಗಳು ಬಳಕೆಯಲ್ಲಿವೆ.

ಐeಚಿಡಿಟಿiಟಿg ಕಲಿಕೆ ಎನ್ನುವುದಕ್ಕೆ ಜ್ಞಾನವನ್ನು, ಕೌಶಲಗಳನ್ನು, ವಿಚಾರವನ್ನು ಗ್ರಹಿಸುವುದು, ಮನನ ಮಾಡುವುದು, ನೆನಪಿನಲ್ಲಿ ಉಳಿಸಿಕೊಳ್ಳುವುದು, ಬೇಕಾದಾಗ ನೆನಪಿಗೆ ತಂದುಕೊಂಡು ಸಂದರ್ಭಕ್ಕೆ ತಕ್ಕ ಹಾಗೆ ಅನ್ವಯಿಸುವುದು ಎಂಬ ಅರ್ಥಗಳುಂಟು.

ಕಲಿಕೆ ಎಲ್ಲ ಶಿಶುಗಳ- ಪ್ರಾಣಿಗಳನ್ನೂ ಒಳಗೊಂಡಂತೆ- ಸಹಜ ಕ್ರಿಯೆ. ಅದರ ನಿಜಾರ್ಥದಲ್ಲಿ, ಕಲಿಕೆ ಸಹಜವಾಗಿಯೇ ಒಂದು ಆನಂದದಾಯಕ ಪ್ರಕ್ರಿಯೆ. ತರಗತಿ ವಾತಾವರಣ ನಾವು ಸೃಷ್ಟಿಸಿರುವಂತಹುದು. ಅಲ್ಲಿ ಕಲಿಕೆ ಏನಿರಬೇಕು, ಹೇಗಿರಬೇಕು ಎಂಬಿತ್ಯಾದಿ ವಿಷಯಗಳನ್ನು ನಾವು ನಿರ್ಧರಿಸಿರುತ್ತೇವೆ. ಈ ಕಾರಣಕ್ಕಾಗಿಯೇ ಅದು ಅಸಹಜ. ಆದ್ದರಿಂದ ಕಲಿಕೆ ಅದರ ಸಹಜವಾದ ಆನಂದ ನೀಡುವ ಗುಣವನ್ನು ಕಳೆದುಕೊಳ್ಳುವ ಸಂಭವ ಜಾಸ್ತಿ. ತರಗತಿ ಕಲಿಕೆಯನ್ನು ಎಷ್ಟು ಸಹಜಗೊಳಿಸಬಹುದು ಎನ್ನುವುದು ನಮ್ಮ ಮುಂದಿರುವ ಮುಖ್ಯ ಪ್ರಶ್ನೆ.

ಕಲಿಯಲು ಕಲಿಯುವ ಕೌಶಲಗಳನ್ನು ಗಳಿಸಿದವರು ಸ್ವತಂತ್ರ ಕಲಿಕಾದಾರರಾಗುತ್ತಾರೆ. ಇದೇ ತರಗತಿ ಪ್ರಕ್ರಿಯೆಗಳ ಮುಖ್ಯ ಉದ್ದೇಶವಾಗಬೇಕು.

ಕಲಿಯಲು ಬೇಕಾದ ಕೌಶಲಗಳು ಯಾವುವು?

ಟ ಭಾಷಾ ಕೌಶಲಗಳು

ಟ ಮಾಹಿತಿ ಆಕರಗಳನ್ನು ಗುರುತಿಸುವುದು.

ಟ ಪರಾಮರ್ಶನಾ ಕೌಶಲಗಳು (ಖeಜಿeಡಿeಟಿಛಿe Sಞiಟಟ)

ಟ ಟಿಪ್ಪಣಿ ಮಾಡಿಕೊಳ್ಳುವುದು.

ಟ ಟಿಪ್ಪಣಿ ಬರೆದುಕೊಳ್ಳುವುದು.

ಟ ಸ್ಮೃತಿ (ಜ್ಞಾಪನ) ಕೌಶಲ (ಒemoಡಿಥಿ Sಞiಟಟs)


ಕೈಗೊಳ್ಳಲು ಕಲಿಕೆ ಐeಚಿಡಿಟಿiಟಿg ಣo ಜo

`ಕೈಗೊಳ್ಳಲು' ಎನ್ನುವ ಪದ ವಿಪುಲವಾದ ಅರ್ಥಗಳಿವೆ. ಅವುಗಳಲ್ಲಿ ಪ್ರಯತ್ನ ಮಾಡು, ಯತ್ನಿಸು, ಶ್ರಮಿಸು ಎಂಬ ಅರ್ಥಗಳು ನಮ್ಮ ಉದ್ದೇಶಕ್ಕೆ ಹೊಂದಿಕೆಯಾಗುತ್ತವೆ. ಯತ್ನವು ಮಾನವ ಜೀವನದ ಮುಖ್ಯ ಲಕ್ಷಣ. ಚಲನೆಯೂ ಪ್ರಯತ್ನವೆ. ಪ್ರಯತ್ನವನ್ನು ದೈಹಿಕ ಮತ್ತು ಬೌದ್ಧಿಕ ಎಂಬ ಎರಡು ರೀತಿಯಲ್ಲಿ ನೋಡಬಹುದು. ಬೌದ್ಧಿಕ ಪ್ರಯತ್ನವು ನಾವು ಹಿಂದೆ ನೋಡಿದ ಕಲಿಕೆಯ ಸಾಧನೆಯಾಗುತ್ತದೆ. ಈ ಸೂತ್ರವು ದೈಹಿಕ ಶಿಕ್ಷಣ, ವ್ಯಕ್ತಿತ್ವದ ಬೆಳವಣಿಗೆ, ಪ್ರದರ್ಶನ ಕಲೆಗಳು, ಕುಶಲಕಲೆಗಳು ಇತ್ಯಾದಿಗಳ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯವೆಂಬುದು ಸರಿಯೆನ್ನಿಸುತ್ತದೆ.


ಮನುಷ್ಯನ ಕಾಯಕಕ್ಷೇತ್ರದ ಲಕ್ಷಣಗಳನ್ನು ಕೌಶಲಗಳಾಗಿ ವಿಂಗಡಿಸಲಾಗಿದೆ.

1. ಸ್ವಸಹಾಯ ಕೌಶಲಗಳು - ಆಹಾರ, ಆರೋಗ್ಯ, ಸ್ನಾನ, ಶೌಚ, ಇತ್ಯಾದಿಗಳಲ್ಲಿ.

2. ಸ್ಥೂಲ ಕೌಶಲಗಳು - ಎಸೆಯುವುದು, ಒದೆಯುವುದು, ಓಡುವುದು, ಎಗರುವುದು, ಇವು ಪರಾಕಾಷ್ಠೆಗೆ ಮುಟ್ಟಿದಾಗ ಶ್ರೇಷ್ಠ ಕ್ರೀಡಾಪಟುಗಳು, ನೃತ್ಯಪಟುಗಳು ಸಿಗುವರು.

3. ಸೂಕ್ಷ್ಮ ಕೌಶಲಗಳು - ಹೊಲಿಯುವುದು, ದಾರ ಪೆÇೀಣಿಸುವುದು ಇತ್ಯಾದಿಗಳು ವೃದ್ಧಿಯಾದಾಗ ಚಿತ್ರಕಾರರೂ, ಕಲಾಕಾರರೂ, ಕೆತ್ತನೆಗಾರರೂ, ಸಮಾಜಕ್ಕೆ ದೊರೆಯುವರು.

4. ಗೃಹಕೌಶಲಗಳು - ಮನೆಗಳಲ್ಲಿ ಬೇಕಾಗುವ ಕೌಶಲಗಳನ್ನು ಕಲಿತರೆ ಉತ್ತಮ ಗೃಹಸ್ಥರೂ, ಗೃಹಿಣಿಯರೂ ಲಭಿಸುತ್ತಾರೆ.

5. ಚಲನಕೌಶಲ - ವಸ್ತುಗಳನ್ನು ಹಿಡಿಯುವುದು, ಉಪಕರಣಗಳ ಬಳಕೆ, ಬರಹ ಇತ್ಯಾದಿ ಮುಂತಾದ ಮನೋದೈಹಿಕ ಕೌಶಲಗಳನ್ನು ಕಲಿತ ಮಗುವು ಉಳಿದ ಕೌಶಲಗಳನ್ನು ಪ್ರಭುತ್ವಮಟ್ಟದಲ್ಲಿ ಗಳಿಸಿಕೊಳ್ಳಲು ಸುಲಭವಾಗುತ್ತದೆ.

6. ಸಂವಹನ ಕೌಶಲ - ತನ್ನ ವಿಚಾರಗಳನ್ನು ಇತರರಿಗೆ ತಿಳಿಸುವುದು ಹಾಗೂ ಇತರರ ವಿಚಾರಗಳನ್ನು ತಿಳಿದುಕೊಳ್ಳುವುದು.

ಬಾಳಲು ಕಲಿಕೆ ಐeಚಿಡಿಟಿiಟಿg ಣo ಟive

`ಬಾಳು' ಎಂದರೆ ಜೀವನ ನಡೆಸು, ಜೀವಿಸು; ಬಾಳು, ಬದುಕು ಎಂಬ ಅರ್ಥಗಳನ್ನು ನೀಡುತ್ತದೆ. ಈ ನಾಲ್ಕು ಪದಗಳನ್ನು ಪರ್ಯಾಯ ಪದಗಳನ್ನಾಗಿ ಬಳಸಬಹುದು. ಒಟ್ಟಾರೆ ಜೀವನ ನಡೆಸುವುದನ್ನು ಕಲಿಯಬೇಕೆಂಬುದು ಈ ಉಕ್ತಿಯ ಆಶಯ. `ಬದುಕಲು ಕಲಿಯಿರಿ' ಎಂಬ ಪ್ರಸಿದ್ಧ ಗ್ರಂಥವೇ ಕನ್ನಡದಲ್ಲಿದೆ. ಅಂದಮೇಲೆ ಬದುಕುವುದನ್ನು ಕಲಿಯಲು ನಮಗೆ ಸಾಕಷ್ಟು ವಿಷಯಗಳಿವೆಯೆಂದು ಅರ್ಥ. ಪ್ರಾಣಿಗಳ ಜೀವನ ಸರಳಸಹಜ (ಅಲ್ಲಿಯೂ ಸಂಕೀರ್ಣತೆ ಇದೆಯೆಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ) ನಮ್ಮ ಜೀವನವನ್ನು ಪ್ರಕೃತಿ ರೂಪಿಸಿರುವುದು ಒಂದಂಶವಾದರೆ ನಾವು ರೂಪಿಸಿಕೊಂಡಿರುವುದು ಹಲವು ಪಟ್ಟು ಜಾಸ್ತಿ. ಆದ್ದರಿಂದ ನಾವು ಜೀವಿಸಲು ಅನೇಕ ಅಂಶಗಳನ್ನು ಕಲಿಯಲೇಬೇಕಾಗಿದೆ. ಅದನ್ನೇ ಈ ಸೂತ್ರ ಪ್ರತಿನಿಧಿಸುತ್ತದೆ.


ಬದುಕಲು ಬೇಕಾದ ಕೆಲವು ಕೌಶಲಗಳು ಹೀಗೆ ಇವೆ:

ವೈಯಕ್ತಿಕ

1. ಉತ್ಪಾದಕ ಕೆಲಸ ಮಾಡಬೇಕು.

2. ಕಲಿಕಾ ಸಾಮಥ್ರ್ಯ ಹಾಗೂ ಆಸಕ್ತಿ

3. ಸಂವಹನ ಕೌಶಲ

4. ಸಹಕರಿಸಿ ಕೆಲಸ ಮಾಡುವುದು.

5. ಜವಾಬ್ದಾರಿ ವರ್ತನೆ.

6. ಆತ್ಮವಿಶ್ವಾಸ

7. ವಿಮರ್ಶಾತ್ಮಕ ಮತ್ತು ಸೃಷ್ಟಿಶೀಲ ಚಿಂತನೆ


ಸಾಮಾಜಿಕ ಕೌಶಲಗಳು

1. ಇತರರ ವಿಚಾರ, ಸ್ನೇಹ ಮತ್ತು ಭಾವನೆಗಳನ್ನು ಗೌರವಿಸುವುದು. ಅವಶ್ಯವಿದ್ದಲ್ಲಿ ಸಮರ್ಥಿಸಿಕೊಳ್ಳಬಲ್ಲ ದೃಢತೆ.

2. ಸಂಧಾನ ಕೌಶಲ - ಇಬ್ಬರ ನಡುವಿನ ಸಮಾನಾಂಶಗಳನ್ನು ಗ್ರಹಿಸುವುದು. ತನ್ನ ಅಭಿಪ್ರಾಯವನ್ನು ಸ್ಪಷ್ಟ ನಿರೂಪಣೆ ಮಾಡುವವು. ಅವಶ್ಯವಿದ್ದಲ್ಲಿ ವಿವೇಕಯುತವಾದ ರಾಜೆ ಮಾಡಿಕೊಳ್ಳಬಲ್ಲರು.

ನಾಯಕತ್ವ

ಉತ್ತಮ ಸಂವಹನಕಾರ, ಉತ್ತೇಜನೆ, ನಿಯಮ ಮತ್ತು ಮೌಲ್ಯಗಳ ಮನ್ನಣೆ ಸೌಹಾರ್ದಯುತ ಸಂಬಂಧ.

ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಸೌಹಾರ್ದ

ವಿವಿಧ ರೀತಿ ನೀತಿ, ಸಂಸ್ಕೃತಿಗಳ ಜನರೊಡನೆ ಬಾಂಧವ್ಯ

ವೈಯಕ್ತಿಕ ಗುಣಗಳು

ಆತ್ಮಾಭಿಮಾನ, ಆತ್ಮಾವಲಂಬನೆ ಮತ್ತು ಹೊಣೆಗಾರಿಕೆ

ಆಲೋಚನಾ ಸಾಮಥ್ರ್ಯ

ಸೃಷ್ಟಿಶೀಲ ಚಿಂತನೆ, ಸಮಸ್ಯಾ ಪರಿಹಾರ, ತೀರ್ಮಾನ ತೆಗೆದುಕೊಳ್ಳುವುದು, ದಾರ್ಶನಿಕತೆ ಇತ್ಯಾದಿ.

ಗಣಕಯಂತ್ರದ ಬಳಕೆ ಮತ್ತು ಅನ್ವಯ ಇದು ಇಂದಿನ ಅನಿವಾರ್ಯ ಅಗತ್ಯ. ಆದುದರಿಂದ ಇದು ಶಿಕ್ಷಕರ ಬಲವನ್ನು ಹೆಚ್ಚಿಸುತ್ತದೆ. ಕಲಿಕಾ ಪ್ರಕ್ರಿಯೆಯ ತೊಡಕುಗಳನ್ನು ನಿವಾರಿಸಿಕೊಳ್ಳುವಲ್ಲಿ ಇದು ಬೇಕೇಬೇಕು.

ಶಾಲಾ ಜೀವನದಲ್ಲಿ ಬಾಳಲು ಕಲಿಕೆಗಿರುವ ಅವಕಾಶಗಳು

ಟ ಸಹಪಠ್ಯ ಚಟುವಟಿಕೆಗಳು

ಟ ಚರ್ಚಾಕೂಟಗಳು

ಟ ಕ್ಲಬ್‍ಗಳು

ಟ ಸ್ಪರ್ಧೆಗಳು

ಟ ಮೌಖಿಕ-ಲಿಖಿತ ಸ್ಪರ್ಧೆಗಳು

ಟ ಸ್ವ ಅಧ್ಯಯನಕ್ಕೆ ಪೆÇ್ರೀತ್ಸಾಹ

ಟ ಅಧ್ಯಯನ ಕೂಟಗಳು

ಟ ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ರಮಗಳು.


ಕೂಡಿ ಬಾಳಲು ಕಲಿಕೆ ಐeಚಿಡಿಟಿiಟಿg ಣo ಟive ಣogeಣheಡಿ.

ಹಿಂದೆಂದೂ ಕಾಣದಂತಹ ಅಸಹನೆಯ, ಮತಾಂಧತೆಯ, ವ್ಯಾಜ್ಯ, ತಿರಸ್ಕಾರ, ಕ್ರೌರ್ಯ ಇವುಗಳಿಂದ ಕೂಡಿದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಧರ್ಮಕ್ರಿಯೆ, ಶಾಂತಿ ಮತ್ತು ಅಭಿವೃದ್ಧಿಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಬಿಕ್ಕಟ್ಟುಗಳು ಯಾವಾಗಲೂ ಯುದ್ಧ, ಹಿಂಸೆಗೆ ಎಡೆಮಾಡಿಕೊಡುವುದಿಲ್ಲವಾದರೂ ಯುದ್ಧ ಮತ್ತು ಹಿಂಸೆಗಳು ಬಗೆಹರಿಯದ ಬಿಕ್ಕಟ್ಟುಗಳಿಂದ ಉದ್ಭವಿಸುತ್ತವೆ. ಆದ್ದರಿಂದ ಶಾಲಾ ಪಠ್ಯಕ್ರಮದಲ್ಲಿ ಶಾಂತಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಒಂದು ಮೌಲ್ಯವಾಗಿ ಇದು ಎಲ್ಲ ಪಠ್ಯಕ್ರಮದ ಪರಿಧಿಯನ್ನು ಮೀರುತ್ತದೆ. ಒತ್ತು ಕೊಟ್ಟ ಮೌಲ್ಯದ ಜೊತೆಗೂಡಿ ಪೂರಕವಾಗಿ ನಡೆದುಕೊಳ್ಳುತ್ತದೆ. ಇದು ಎಲ್ಲ ಪಠ್ಯಕ್ರಮದ ಎಲ್ಲೆಗಳನ್ನು ಮೀರುತ್ತದೆ. (ರಾ.ಪ.ಕ್ರ.ಚೌ.ಪು.28)


ಸಮರಸದ ಬಾಳ್ವೆ ಕಲಿಕೆ -ಚಟುವಟಿಕಗಳು

1. ಶಾಲೆಗಳಲ್ಲಿ ಶಾಂತಿ ಭಾವನೆಯನ್ನು ಬೆಳೆಸುವ ಕಾರ್ಯಗಳನ್ನು ನಡೆಸಿ, ನ್ಯಾಯ, ಸಮಾನತೆಗಳಿಗೆ ವಿರುದ್ಧವಾಗಿರುವ ವರ್ತನೆ ಚರ್ಚಿಸಲು ಕ್ಲಬ್ಬುಗಳನ್ನು ತೆರೆಯಿರಿ. ಅಲ್ಲಿ ಆ ಕೃತಿಗಳು ಸಾಮಾಜಿಕ ಸಾಮರಸ್ಯವನ್ನು ಹೇಗೆ ಹಾಳುಗೆಡವುತ್ತವೆ ಎಂಬ ಬಗ್ಗೆ ಅರಿವು ಮೂಡಿಸುವಂತಹ ಚರ್ಚೆ ನಡೆಸಿ.

2. ಶಾಂತಿ ಪುರುಷರ ದಿನಾಚರಣೆಗಳನ್ನು ಆಚರಿಸಿ.

3. ಶಾಂತಿ ಮತ್ತು ನ್ಯಾಯಗಳನ್ನು ಎತ್ತಿ ಹಿಡಿಯುವ ಸಿನಿಮಾಗಳನ್ನು, ವಾರ್ತಾಚಿತ್ರಗಳನ್ನು ಪ್ರದರ್ಶಿಸಿ.

4. ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಮಾಧ್ಯಮದಲ್ಲಿ ಪ್ರಕಟಿಸುವಂತೆ ಮಾಧ್ಯಮಗಳೊಡನೆ ಮಾತನಾಡಿ ಏರ್ಪಡಿಸಿ.

5. ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಿ.

6. ಎಲ್ಲರ ಬಗ್ಗೆ ಗೌರವ ತರುವ, ಜವಾಬ್ದಾರಿಯನ್ನು ಕಲಿಸಿ.

7. ಶಾಂತಿಯ ಬಗ್ಗೆ ಹೇಳಲು ಶಿಕ್ಷಕರು ಪಾಠದ ಮಧ್ಯೆ ಪ್ಲಗ್ ಪಾಯಿಂಟ್‍ಗಳನ್ನು ಗುರುತಿಸಲಿ.

8. ಅಂತರವ್ಯಕ್ತಿಯ ಸಂಬಂಧಗಳ ನಿರ್ವಹಣೆ ಕುರಿತಂತೆ ತರಬೇತಿ ನೀಡಿ. ನೀವೇ ಮಕ್ಕಳಿಗೆ ಮಾದರಿಯಾಗಿ.

ಆಲೋಚಿಸಿ

ಈ ಅಂಶಗಳನ್ನು ನಿಮ್ಮ ತರಗತಿ ಪ್ರಕ್ರಿಯೆಗಳೊಳಗೆ ಹೇಗೆ ಮೇಳೈಸುವಿರಿ? ಇವುಗಳಲ್ಲಿ ಯಾವ ಅಂಶಗಳನ್ನು ನೇರವಾಗಿ ತರಗತಿಯಲ್ಲಿಯೇ ಅಳವಡಿಸಿಕೊಳ್ಳಬಹುದು ಹಾಗೂ ಯಾವ ಅಂಶಗಳನ್ನು ಒಟ್ಟಾರೆ ಶಾಲಾ ಅನುಭವಗಳಲ್ಲಿ ಅಳವಡಿಸಿಕೊಳ್ಳಬೇಕಾದೀತು ಎಂದು ನಿಮ್ಮ ಸಹೋದ್ಯೋಗಿಗಳೊಡನೆ ಚರ್ಚಿಸಿ.

ಆಧಾರ

1. ಐeಚಿಡಿಟಿiಟಿg ಣo ಐeಚಿಡಿಟಿ - ಉ.S. ಒuಜಚಿmbಚಿಜiಣhಚಿಥಿಚಿ

2. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005