ರಚನಾ ವಿಜ್ಞಾನ 9 ಹೊಸ ಪಠ್ಯ ಪುಸ್ತಕದ ಆಶಯಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಹೊಸ ಪಠ್ಯಪುಸ್ತಕದ ಆಶಯಗಳು

v ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವಿಶ್ಲೇಷಿಸುವ ಅವಕಾಶ ನೀಡಿದೆ.

v ಪರಿಸರಕ್ಕೆ ಸಂಬಂಧಿಸಿದ ವಿಷಯಗಳು, ಚಟುವಟಿಕೆ ಹಾಗೂ ಪ್ರಾಜೆಕ್ಟ್‍ಗಳ ಮೂಲಕ ಕಲಿಯುವಂತಾಗಿದೆ.

v ಇಂತಹ ಪ್ರಾಜೆಕ್ಟ್‍ಗಳಿಂದ ಬರುವ ಮಾಹಿತಿ ಭಾರತದ ಪರಿಸರದ ಬಗ್ಗೆ ಒಂದು ದೊಡ್ಡ ಮಾಹಿತಿ ಭಂಡಾರವನ್ನೇ ಸೃಷ್ಟಿ ಮಾಡಿದೆ.

v ಅನ್ವೇಷಣಾ ಕಲಿಕೆಗೆ ಒತ್ತು ನೀಡಿದೆ. ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಗೆ ವಿಜ್ಞಾನ ಕಲಿಕೆ ಪೂರಕವಾಗಿದೆ.

v ಮಗುವೇ ಜ್ಞಾನವನ್ನು ಸೃಷ್ಟಿಸಿಕೊಳ್ಳಬಲ್ಲದು ಎನ್ನುವುದರ ನಿಹಿತಾರ್ಥವೇನೆಂದರೆ ಮಗುವಿನ ಸ್ವಭಾವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಂತಹ ಶಾಲಾ ಕಲಿಕಾ ಅನುಭವಗಳನ್ನು ಶಿಕ್ಷಕರು ವಿನ್ಯಾಸಗೊಳಿಸಲು ಅನುವಾಗುವಂತೆ ವಿಜ್ಞಾನ ಪಠ್ಯಪುಸ್ತಕ ರಚನೆಯಾಗಿದೆ.

v ತನ್ನ ಮೊದಲ ಕಲಿಕೆಯನ್ನು ತನ್ನ ಪರಿಸರದಿಂದಲೇ ಕಟ್ಟಿಕೊಳ್ಳಲು ಮಗುವಿಗೆ ಸಾಧ್ಯವಾಗಿ, ಇದರಿಂದ ಕಲಿಕೆ ಆಪ್ತವಾಗಿದೆ.

v ಶೈಕ್ಷಣಿಕ ವರ್ಷಾದ್ಯಂತ ಕಲಿಕೆಯು ನಿರಂತರವಾಗಿ ಮುಂದುವರಿಯುತ್ತಲೇ ಹೋಗುವುದರಿಂದ ಇದು ಕಲಿಕೆಯನ್ನು ಹೆಚ್ಚು ಅರ್ಥೈಸುತ್ತದೆ.

v ಹಾಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿಯ ಬಗೆಗಿರುವ ಮಾನಸಿಕ ಭಯ, ಆತಂಕವನ್ನು ನಿವಾರಿಸಿದೆ.

v ಕಲಿಯುವವರು ಕಂಠಪಾಠದ ಮೂಲಕ ನೆನೆಪಿಡುವುದೊಂದನ್ನೇ ಪರೀಕ್ಷಿಸುವ ರೂಢಿಯನ್ನು ತಪ್ಪಿಸಿದೆ.

v ಅನೇಕ ನವೀನ ಆಚರಣೆಗಳಾದ ಜ್ಞಾನೇತರ ಕ್ಷೇತ್ರಗಳ ಮೌಲ್ಯಮಾಪನ, ಯೋಜನಾ ಚಟುವಟಿಕೆಗಳು (ಪ್ರಾಜೆಕ್ಟ್ ವರ್ಕ್) ಶ್ರೇಣೀಕರಣ (ಗ್ರೇಡಿಂಗ್) ಮೌಖಿಕ ಪರೀಕ್ಷೆ ಮುಂತಾದ ಕಲಿಕೆಗೆ ಪೂರಕವೆನಿಸುವ ವಿಚಾರಗಳನ್ನು ಬಳಸಲಾಗಿದೆ.

v ಪಠ್ಯಕ್ರಮದ ನಿರ್ವಹಣಾ ವಿಧಾನವು ಸ್ವಾನುಭವಗಳನ್ನು ಪ್ರೇರೇಪಿಸುವ ಚಟುವಟಿಕೆಗಳಾಗಿ ಜ್ಞಾನವು ಶಾಲೆಯ ಹೊರಗಿನ ಜೀವನಕ್ಕೆ ಹೊಂದಿಕೆಯಾಗುವಂತೆ ಪಠ್ಯಕ್ರಮ ನೀತಿ ಆದ್ಯತೆ ಕೊಟ್ಟಿದೆ.

v ಏನನ್ನು ಕಲಿಯುವುದು? ಹೇಗೆ ಕಲಿಯುವುದು? ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸುವಂತೆ ಪೆÇ್ರೀತ್ಸಾಹ ನೀಡಿದೆ.

v ಶಿಕ್ಷಕರು ಕೇವಲ ಜ್ಞಾನದ ಸರಬರಾಜುದಾರರಾಗುವುದಕ್ಕಿಂತ ಕಲಿಕೆ ಅನುಕೂಲಿಸುವವರಾಗಿ/ ಸುಗಮಕಾರರಾಗಿ ತಮ್ಮನ್ನು ಮಾರ್ಪಡಿಸಿಕೊಳ್ಳುವಂತಾಗಿದೆ.

v ಮಾಹಿತಿ ಪ್ರದರ್ಶನಕ್ಕಷ್ಟೇ ಶಿಕ್ಷಣ ಸೀಮಿತಗೊಳ್ಳದೇ ಮಕ್ಕಳು ತಾವೇ ಸಂರಚಿಸಿಕೊಳ್ಳುವ ಜ್ಞಾನ ಕ್ಷೇತ್ರಗಳಲ್ಲಿ ಅಧ್ಯಾಪಕರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡಿದೆ.

v ವಿಮರ್ಶಾತ್ಮಕ ಚಿಂತನೆಗೆ ಮಕ್ಕಳನ್ನು ಅಣಿಗೊಳಿಸುವಂತಹ ವಿಧಾನಗಳನ್ನು ಅನುಸರಿಸಿದೆ. ಇದು ಸಾಮಾಜಿಕ, ಆರ್ಥಿಕ, ನೈತಿಕ ಕ್ಷೇತ್ರಗಳಲ್ಲಿ ಚಿಂತನ ಪಾಠ ಬೋಧನೆಗಳು ವರ್ತಮಾನದ ಕಾಳಜಿಗಳನ್ನು ತಾನೇ ವಿಮರ್ಶಿಸಿಕೊಳ್ಳುವ ಅವಕಾಶಗಳನ್ನು ಮಕ್ಕಳಿಗೆ ಒದಗಿಸಿವೆ.

v ಮುಕ್ತವಾದ ಚರ್ಚೆಗಳು, ಒಟ್ಟಾಗಿ ಕುಳಿತು ಅನ್ಯೋನ್ಯ ಚರ್ಚೆಗಳಿಂದ ಸಮಾಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಬಹುದೃಷ್ಟಿಕೋನಗಳನ್ನು ಪರಿಚಯಿಸಿಕೊಳ್ಳುವ ವಿಮರ್ಶಾಯುಕ್ತ ಪಠ್ಯಕ್ರಮ ನೆರವಾಗುತ್ತದೆ. v ಜ್ಞಾನ ಮರು ರಚನೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗಿದೆ ಮತ್ತು ಶಾಲೆಯ ಜ್ಞಾನವನ್ನು ಸ್ಥಳೀಯ ಜ್ಞಾನಕ್ಕೆ ಸಮನ್ವಯಿಸಲಾಗಿದೆ. v ಮಕ್ಕಳ ಮಾನಸಿಕ ಬೆಳವಣಿಗೆಗೆ ಸೂಕ್ತವಾಗಿ ಸ್ಪಂದಿಸುವಂತಹ ವಿಷಯ ಮತ್ತು ಪ್ರಕರಣಗಳಿರುವಂತೆ ಪಠ್ಯವಸ್ತು ಮುತುವರ್ಜಿವಹಿಸಿದೆ.

v ಮಕ್ಕಳ ದೈನಂದಿನ ಅನುಭವಗಳು ಮತ್ತು ಶಾಲೆಯಲ್ಲಿ ಕಲಿಯುವ ವಿವಿಧ ವಿಷಯಗಳ ಜ್ಞಾನಗಳ ನಡುವೆ ಅರ್ಥವತ್ತಾದ ಸೇತುವೆಗಳನ್ನು ನಿರ್ಮಿಸಿದೆ.

v ಮಾಹಿತಿಗಾಗಿ ಮಾಹಿತಿಯನ್ನು ಕೊಡುವುದನ್ನು ಕೈಬಿಟ್ಟಿದೆ. ವಿಭಿನ್ನ ವಿಷಯಗಳ ನಡುವೆ ಉದ್ದೇಶಿತ ಸಂಬಂಧಗಳನ್ನು ಕ್ರೋಢಿಕರಿಸಿ, ಅಂತರ್ಶಿಸ್ತಿಗೆ ಒಳಪಡಿಸಿದೆ.

v ಪರಿಸರ ಸಂಬಂಧಿ ಜ್ಞಾನ, ಕೆಲಸಕ್ಕೆ ಸಂಬಂಧಿಸಿದ ಮನೋಕಾಂಕ್ಷೆಗಳ ಕ್ರೋಢಿಕರಣ ಮಾಡಿ, ಮೌಲ್ಯಗಳನ್ನು ಸೂಕ್ತ ಸಂದರ್ಭದಲ್ಲಿ ಸೇರಿಸಿದೆ.

v ವಿಭಿನ್ನ ರೀತಿಯ ಶಿಕ್ಷಕರು, ಕಲಿಕಾ ಪ್ರಕ್ರಿಯೆಯನ್ನು ಹೆಚ್ಚಿಸಿ ಪ್ರಾವೀಣ್ಯತೆಯಿಂದ ಹಾಗೂ ಸೃಜನಶೀಲತೆಯಿಂದ ನಿರ್ವಹಿಸುವಂತೆ ಪಠ್ಯಪುಸ್ತಕದಲ್ಲಿ ಅವಕಾಶಗಳು ಸಡಿಲ ನೀತಿಗಳನ್ನು ಅವಳಡಿಸಿಕೊಂಡಿವೆ.

v ಶಾಲಾ ಪಠ್ಯಕ್ರಮದಲ್ಲಿ ವಿಜ್ಞಾನ ಕಲಿಕೆ ಏಕೆ ಅಮೂಲ್ಯವಾದದ್ದು? ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಗ್ರಹಿಸುವ, ಪ್ರಶ್ನಿಸುವ ಮತ್ತು ಸಾರವತ್ತಾಗಿ ಆಲೋಚಿಸುವ ಮಕ್ಕಳ ಬುದ್ಧಿ ಬೆಳವಣಿಗೆಯ ಸಾಮಥ್ರ್ಯಗಳ ಅಭಿವೃದ್ಧಿಗೆ ವಿಜ್ಞಾನ ಕಲಿಕೆ ಶಕ್ತಿ ಮತ್ತು ಪುಷ್ಠಿಗಳನ್ನು ಕೊಟ್ಟಿದೆ. ಅವಲೋಕನ, ಅಂತರ್ ಗ್ರಹಿಕೆ, ಪರಿಕಲ್ಪನೆ, ಪ್ರಯೋಗಿಕರಣ ಮತ್ತು ಸಾಬೀತುಮಾಡುವ ಮಾಧ್ಯಮಗಳನ್ನು ವಿಜ್ಞಾನ ಬೆಳೆಸಿದೆ.

v ವಿಜ್ಞಾನ ಕಲಿಕೆಯು ಸಮಾಜದಲ್ಲಿ ಬದಲಾವಣೆ ತರುವ ಅಸ್ತ್ರವೆಂದು ಎನ್.ಸಿ.ಎಫ್-2005 ಭಾವಿಸಿದಂತೆ, ಎಲ್ಲಾ ರೀತಿಯ ಗುಣಾತ್ಮಕ ಬದಲಾವಣೆಯನ್ನು ತರಲು, ವಿಜ್ಞಾನ, ಶಿಕ್ಷಣ ನಿರ್ದಿಷ್ಟ ದೆಸೆಯಲ್ಲಿ ಸಾಗಿದೆ.


ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿರುವ ಹೊಸ ಅಂಶಗಳು

v ಸುತ್ತಲಿನ ಪ್ರಪಂಚವನ್ನು ಅವಲೋಕಿಸಿ, ತಮ್ಮ ಪರ್ಯಾವರಣ ಪರಿಧಿಯೊಳಗಾಗುವ ಸಂಗತಿಗಳು ನೋಟಗಳು, ಅದ್ಭುತಗಳನ್ನು ತಮ್ಮೊಳಗಿನ ಸಂವೇದನೆಗಳಲ್ಲಿ ಹೊಂದಿಸಿಕೊಂಡು ಈ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವ ಹಾಗೆ ಮಗುವಿನ ಅಂತರಂಗ ಹಾಗೂ ಪರ್ಯಾಯವಾಗಿ ಸಮಾಜವೇ ಬದಲಾಯಿಸುವಂತೆ ವಿಜ್ಞಾನ ಕಲಿಕೆಯನ್ನು ಅಣಿಗೊಳಿಸಿದೆ.

v ಚಿಂತನ, ಪ್ರತಿಸ್ಪಂದನ ಕ್ರಿಯೆ ಮತ್ತು ಕ್ರಮಬದ್ಧ ಹಾಗೂ ವಸ್ತುನಿಷ್ಠ ಭಾವನೆಗಳನ್ನು ಮಕ್ಕಳಲ್ಲಿ ಅಭಿವೃದ್ಧಿಯಾಗುವಂತೆ ನೆರವಾಗಿದೆ.

v ಸಮಾಜದಲ್ಲಿ ಬದಲಾವಣೆ ಮತ್ತು ಪ್ರಗತಿಗಳ ಅಗತ್ಯತೆಯನ್ನು ಮನವರಿಸಿಕೊಟ್ಟು ಅವರು ಶಕ್ತಿಯುತವಾಗಿ ನಿರ್ವಹಿಸುವಂತೆ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಅವಕಾಶ ನೀಡಿದೆ.

v ದೈನಂದಿನ ಅನುಭವಗಳನ್ನು ಸ್ವತಃ ಪರೀಕ್ಷಿಸಿ, ವಿಶ್ಲೇಷಿಸಿ, ಚಿಂತನ ಶೀಲ ವಿಧಾನಗಳು ವಿಕಾಸಗೊಳ್ಳುವ ಮಾರ್ಗಗಳು ಸಾರವತ್ತಾಗುವಂತೆ ಮಾಡಲು, ಕುತೂಹಲ ವೃದ್ಧಿಸಲು, ಸೃಜನಶೀಲವಾಗಲು ನೆರವಾಗಿದೆ.

v ಎನ್.ಸಿ.ಎಫ್-2005 ಆಶಯದಂತೆ ಈ ಸಂದರ್ಭದಲ್ಲಿ ಮಗುವಿನ ತಕ್ಷಣದ ಪರ್ಯಾವರಣ ಮತ್ತು ಸುತ್ತಲಿನ ಸಮಾಜದೊಡನೆ ವಿಜ್ಞಾನ ಪಠ್ಯಕ್ರಮವು ಅವಿನಾಭಾವ ಸಂಬಂಧ ಹೊಂದಿರುವಂತೆ ವಿಜ್ಞಾನ ಕಲಿಕೆಯನ್ನು ಪ್ರಗತಿಪರವಾಗಿ ಮೈಗೂಡಿಸಿಕೊಂಡಿದೆ, ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ವಿಜ್ಞಾನ ಕಲಿಕೆ ಅರ್ಥಪುಷ್ಠಿಯಿಂದ ಕೂಡಿಕೊಂಡ ವಿಕಾಸಗೊಳ್ಳುವ ಗುರಿಗಳನ್ನು ಸಾಧಿಸಿದೆ.

v ಪರ್ಯಾವರಣ ಸಂಬಂಧಿತ ಆತಂಕಗಳು ಮತ್ತು ಕಾಳಜಿಗಳನ್ನು ವಿವಿಧ ಪ್ರಕಾರಗಳ ಯೋಜನಾ ಚಟುವಟಿಕೆಗಳಲ್ಲೂ ಹಾಗೂ ಪ್ರತಿ ವಿಷಯದಲ್ಲೂ ಒತ್ತಿಹೇಳಿದೆ.

v ಸತ್ತ್ವಪೂರ್ಣ ವಿಜ್ಞಾನ ಪಠ್ಯಕ್ರಮ ಬೆಳವಣಿಗೆಗೆ ಆಧಾರಭೂತವಾದ 6 ವೈಜ್ಞಾನಿಕ ಅರ್ಹತೆಗಳನ್ನು ಎನ್.ಸಿ.ಎಫ್-2005 ರಂತೆ ಈ ಹೊಸ ವಿಜ್ಞಾನ ಪಠ್ಯಪುಸ್ತಕವು ಒಳಗೊಂಡಿದೆ.

1) ಸಂವೇದನ ಅರ್ಹತೆ

2) ಸಾರಾಂಶ (ವಸ್ತು) ಅರ್ಹತೆ

3) ವೈಧಾನಿಕ (ಕ್ರಮಬದ್ಧತೆಯ) ಅರ್ಹತೆ

4) ಚಾರಿತ್ರಿಕ ಅರ್ಹತೆ

5) ಪರ್ಯಾವರಣ ಅರ್ಹತೆ

6) ನೈತಿಕ ಅರ್ಹತೆ

v ಆಯಾ ಹಂತದ ಸಂವೇದನಾಶೀಲತೆಯ ಬೆಳವಣಿಗೆಯನುಸಾರ ಮಾಹಿತಿಗಳು ಮತ್ತು ವಿಜ್ಞಾನ ನಿಯಮಗಳು, ಅವುಗಳ ಬಳಕೆಯ ಅರಿವನ್ನು ಮೂಡಿಸಿದೆ.

v ರೀತಿಗಳು ಮತ್ತು ಕ್ರಮಗಳು ಚಲನ ವಿಧಿಗಳಿಂದ ಜ್ಞಾನದ ಹುಟ್ಟು ಮತ್ತು ನಂಬಲರ್ಹತೆಯನ್ನು ಮನಗಾಣುವ ಕೌಶಲಗಳ ಗಳಕೆಯನ್ನು ಸಾಧಿಸಿದೆ.

v ವಿಜ್ಞಾನದ ಜಾಗತಿಕ ಮತ್ತು ಅಭಿವೃದ್ಧಿಶೀಲ ದೃಷ್ಟಿಕೋನಗಳನ್ನು ಬೆಳೆಸಿ ವಿಜ್ಞಾನವೊಂದು ಸಾಮಾಜಿಕ ಮಹೋದ್ಯಮ ಎನ್ನುವುದನ್ನು ರೂಢಿಸಿದೆ.

v ಸ್ಥಳೀಯ ಹಾಗೂ ಪ್ರಾಪಂಚಿಕ ಪರ್ಯಾವರಣದೊಳಗಿರುವ ನೈಸರ್ಗಿಕ, ಕೃತಕ ಮತ್ತು ಸಮುದಾಯ ಸಂಬಂಧಗಳನ್ನು ಗುರುತಿಸುವುದು ಮತ್ತು ಪರಸ್ಪರ ಅನುಭೂತ ಕಾಳಜಿಗಳನ್ನು ರೂಢಿಸುವಂತೆ ಮಾಡಿದೆ.

v ಅವಶ್ಯ ಪಠ್ಯಜ್ಞಾನ ಮತ್ತು ಉದ್ಯೋಗಗಳ ಕ್ಷೇತ್ರಕ್ಕೆ ಪ್ರವೇಶ ದೊರಕಿಸುವಂತಹ ಪ್ರಾಯೋಗಿಕ ತಂತ್ರ ಕೌಶಲಗಳ ಗಳಿಕೆಯನ್ನು ಸಾಧಿಸಿದೆ.

v ಸ್ವಭಾವ ಸಹಜ ಕುತೂಹಲದ ಅಂತರಂಗ, ನೈಸರ್ಗಿಕ ಸಂವೇದನೆಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸೃಷ್ಟಿಶೀಲತೆಗಳ ಪರಿಚಯ ಮಾಡಿದೆ.

v ಪ್ರಾಮಾಣಿಕತೆ, ಸ್ವಾಯತ್ತತೆ, ಅನ್ಯೋನ್ಯ, ಸಹಕಾರ ಮನೋಭಾವ ಜೀವಕಾಳಜಿ ಮತ್ತು ಪರಿಸರ ರಕ್ಷಣೆ ಮತ್ತು ಪರಿಸರ ಕಳಕಳಿಗಳ ಬೆಳವಣಿಗೆಗಳು

ವಿಜ್ಞಾನ ಪಠ್ಯಪುಸ್ತಕವನ್ನು ಅವಲೋಕಿಸಿದಾಗ ಕಂಡ ಬಂದ ಧನಾತ್ಮಕ ಅಂಶಗಳು

v ವಸ್ತು ನಿಷ್ಠ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತಾನೇ ಮಾಡಿ ತಿಳಿಯಲು ಉತ್ತೇಜಿಸಿದೆ.

v ಪರಿವೀಕ್ಷಣ ವರ್ಗೀಕರಣ ದಾಖಲೀಕರಣ ಇನ್ನು ಮುಂತಾದ ಅನುಕ್ರಮಾಧಾರಿತ ಅಭಿವೃದ್ಧಿ ಕೌಶಲಗಳಿಗೆ ಅವಕಾಶ ನೀಡಿದೆ.

v ಕಲಿಕಾಂಶಗಳು ಮಗುವಿನ ತಕ್ಷಣದ ವಾತಾವರಣಕ್ಕೆ ಸಂಬಂಧ ಹೊಂದುವಂತಹ ಅವಕಾಶಗಳನ್ನು ಸೃಷ್ಟಿಸಿದೆ.

v ಪ್ರಯೋಗಗಳನ್ನು ಮಾಡುತ್ತಾ ವೈಜ್ಞಾನಿಕ ನಿಯಮಗಳನ್ನು ಮನಗಾಣುವ ನಿಖರ ಮಾರ್ಗಗಳನ್ನು ಅಭಿವೃದ್ಧಿಗೊಳಿಸಿದೆ.

v ಪರಿಸರ ಅಧ್ಯಯನ ಪಾಠಗಳಿಂದ ಆರಂಭಗೊಂಡು ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲತತ್ವಗಳೆಡೆಗೆ ಹಂತ ಹಂತವಾಗಿ ಮಕ್ಕಳನ್ನು ಮುನ್ನಡೆಸಿದೆ.

v ಸರಳ ಪ್ರಯೋಗಗಳು, ಕ್ಷೇತ್ರ ಸಮೀಕ್ಷೆಗಳು ಇತ್ಯಾದಿಗಳಿಂದ ಜ್ಞಾನ ರಚನೆ ಮಾಡಿಕೊಳ್ಳುವುದಕ್ಕೆ ಒತ್ತು ಕೊಟ್ಟಿದೆ.

v ಸಂದರ್ಭಾನ್ವಯ ಸಂವೇದಿ ಯೋಜನೆಗಳನ್ನು ರೂಪಿಸಿ ತಾನೇ ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಉತ್ತೇಜಿಸಲಾಗಿದೆ.

v ವ್ಯವಸ್ಥಿತ ಪ್ರಯೋಗಗಳ ಮೂಲಕ ತರ್ಕಬದ್ಧ ವಿಷಯಗಳತ್ತ ಮಕ್ಕಳನ್ನು ಆಕರ್ಷಿಸುವಂತಾಗಿದೆ.

v ಪಠ್ಯಗಳಲ್ಲಿ ಕಲಿತ ತತ್ವಗಳನ್ನು ಆವಿಷ್ಕರಿಸುವ / ಸಾಬೀತುಗೊಳಿಸುವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿದೆ.



ವಿಜ್ಞಾನ ಕಲಿಕೆ ಅನುಕೂಲಿಸುವುದು.

ಮಕ್ಕಳು ತಮ್ಮ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಪ್ರಕೃತಿಯಿಂದಲೇ ಸಹಜವಾಗಿ ಸಾಮಾನ್ಯ ಜ್ಞಾನವನ್ನು ಹೊಂದಿರುತ್ತಾರೆ. ಈ ಜ್ಞಾನವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಬಳಸಬಹುದು ಎಂಬುದರ ಚಿಂತನೆ, ಮತ್ತು ಅದರ ಬಗ್ಗೆ ಒಂದು ವಿಮರ್ಶಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ವಿಜ್ಞಾನ ವಿಷಯವು ಅನುಕೂಲ ಮಾಡಿಕೊಡುತ್ತದೆ. ವಿಜ್ಞಾನದ ಅಧ್ಯಯನವು ವೈಜ್ಞಾನಿಕ ಮನೋಭಾವವನ್ನು ಬೆಳಸಿಕೊಳ್ಳುವುದು ಮತ್ತು ಮಕ್ಕಳನ್ನು ತಮ್ಮ ಜೀವನದ ಸವಾಲುಗಳನ್ನು ಎದುರಿಸಲು ಅನುಕೂಲವಾಗಿರುವಂತಿರಬೇಕು ಎಂಬುದೇ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಆಶಯ.

ವಿಜ್ಞಾನ ವಿಷಯದ ಅಧ್ಯಯನವು ಮಕ್ಕಳು ತಮ್ಮ ದಿನನಿತ್ಯ ಜೀವನ ಆನುಭವಗಳನ್ನು ಪರೀಕ್ಷಿಸಿ ವಿಶ್ಲೇಷಿಸುವ ಸಾಮಥ್ರ್ಯವನ್ನು ಹೊಂದುವಂತವರಾಗಿರಬೇಕು. ಇದಕ್ಕೆ ಅನುಗುಣವಾಗಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಚಟುವಟಿಕೆಗಳು ಮತ್ತು ಪ್ರಾಜೆಕ್ಟ್‍ಗಳನ್ನು ಕೈಗೊಳ್ಳುವಂತೆ ಮಕ್ಕಳನ್ನು ಉತ್ತೇಜಿಸಬೇಕು.

ಇಂತಹ ಚಟುವಟಿಕೆ ಮತ್ತು ಪ್ರಾಜೆಕ್ಟ್‍ಗಳಿಂದ ತಮ್ಮ ಭವಿಷ್ಯವನ್ನು ತಾನೇ ಹುಡುಕಿಕೊಳ್ಳುವಂತೆ ಮತ್ತು ನಮ್ಮ ದೇಶದ ಮತ್ತು ಪರಿಸರದ ಬಗ್ಗೆ ಸಮಗ್ರಮಾಹಿತಿಯನ್ನು ಸಂಗ್ರಹಿಸಬಹುದು ಎನ್ನುವುದೇ ಎನ್.ಸಿ.ಎಫ್-2005ರ ಭಾವನೆ.

ವಿಜ್ಞಾನ ಕಲಿಕೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ಆಶಯಗಳು

v ಪಠ್ಯಪುಸ್ತಕ ಹೊರತುಪಡಿಸಿ, ಅನುಭವದಿಂದ, ಪ್ರಯೋಗಗಳ ಮೂಲಕ ಅನ್ವೇಷಣೆ, ವರ್ಗೀಕರಣ, ವ್ಯವಸ್ಥಿತ ಚಿಂತನಾಕ್ರಮ ಇವುಗಳ ಸಹಾಯದಿಂದ ಜ್ಞಾನಪಡೆಯುವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು.

v ಗುಂಪು ಚಟುವಟಿಕೆಗಳಿಂದ ಸಾಮಾಜಿಕ ಮೌಲ್ಯಗಳ ಕಲಿಕೆ.

v ವೈಜ್ಞಾನಿಕ ಮನೋಭಾವಗಳಾದ ಮೂಢನಂಬಿಕೆಗಳನ್ನು ಒಪ್ಪದಿರುವುದು, ಸಮಸ್ಯಾಪೂರ್ಣ, ಫಲಪ್ರದ ಪ್ರಯೋಗಗಳು, ಕಾರಣ ಮತ್ತು ಪರಿಣಾಮಗಳನ್ನು ಅನುಸರಿಸುವುದು, ಯೋಜಿತ ಕಾರ್ಯವಿಧಾನ ಇವುಗಳನ್ನು ಹೊಂದುವಂತಹ ಕಲಿಕಾ ಚಟುವಟಿಕೆಗಳು.

v ನೈಸರ್ಗಿಕ ಸೌಂದರ್ಯದ ಮೆಚ್ಚುಗೆ, ವೈಜ್ಞಾನಿಕ ಉಪಗ್ನೆಗಳ ಬಗ್ಗೆ ಅರಿವು, ವಿಜ್ಞಾನದ ತಾಂತ್ರಿಕ ಪದಗಳ ಸ್ಪಷ್ಟ ನಿರೂಪಣೆ ಮತ್ತು ಚರ್ಚೆ ಇವುಗಳನ್ನು ಹೊಂದುವ ಸಲುವಾಗಿ, ಅಧ್ಯಾಪಕರು ಹೊರಸಂಚಾರ, ವಿಜ್ಞಾನಿಗಳ ಜೀವನ ಚರಿತ್ರೆಗಳ ಪ್ರಸ್ತಾಪ ಮುಂತಾದವುಗಳನ್ನು ಕೈಗೊಳ್ಳಬೇಕು.

v ವಿದ್ಯಾರ್ಥಿಗೆ ತನ್ನ ಸುತ್ತಣ ಜಗತ್ತನ್ನು ಪರಿಚಯಿಸಿ ಸಮಾಜದ ಮೇಲೆ ವಿಜ್ಞಾನ ಬೀರುವ ಪರಿಣಾಮವನ್ನು ತಿಳಿಸಿಕೊಡಬೇಕು. ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ಬೆಳೆಸಬೇಕು.

v ವಿಜ್ಞಾನದ ವಿವಿಧ ಶಾಖೆಗಳ ಪರಸ್ಪರಾವಲಂಬನೆ ಹಾಗೂ ಸಹ ಸಂಬಂಧಗಳನ್ನು ತಿಳಿಸಿಕೊಡುವುದು.