ರಚನಾ ಸಮಾಜ ವಿಜ್ಞಾನ 9 ಭೂಗೋಳಶಾಸ್ತ್ರ ವಿಭಾಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

12. (ಸಿ) ಭೂಗೋಳಶಾಸ್ತ್ರ ವಿಭಾಗ

1) ಪಾಠದ ಹೆಸರು : ಪ್ರಾಕೃತಿಕ ವಿಭಾಗಗಳು (ಕರ್ನಾಟಕ)

2) ಜ್ಞಾನ ರಚನೆಗೆ ಇರುವ ಅವಕಾಶಗಳು:

  • ಕರ್ನಾಟಕದ ಪ್ರಾಕೃತಿಕ ಲಕ್ಷಣಗಳನ್ನು ಅವಲೋಕಿಸುವುದು.
  • ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ಪಟ್ಟಿ ಮಾಡಿಕೊಳ್ಳುವುದು.
  • ಕರ್ನಾಟದಲ್ಲಿನ ಎತ್ತರವಾದ ಶಿಖರಗಳು ಮತ್ತು ಬೆಟ್ಟಗಳನ್ನು ಗಮನಿಸುವುದು.
  • ಕರ್ನಾಟಕದ ಟ್ಟ ಪ್ರದೇಶಗಳನ್ನು ತಿಳಿಯುವರು.

3) ವಿಮರ್ಶಾತ್ಮಕ/ ವಿಶ್ಲೇಷಣಾತ್ಮಾಕ ಕಲಿಕೆಗೆ ಇರುವ ಅವಕಾಶಗಳು

  • ಕರಾವಳಿ, ಪಶ್ಚಿಮದ ಕಡಿದಾದ ಇಳಿಜಾರು, ಪೂರ್ವದ ಇಳಿಜಾರು, ಉತ್ತರ ಮತ್ತು ಮೈದಾನ ಪ್ರದೇಶಗಳ ರಚನೆ ಕರ್ನಾಟಕದ ಭೂಭಾಗದಲ್ಲಿ ಹೇಗೆ ರಚಿಸಲ್ಪಟ್ಟಿವೆ ಎಂಬುದನ್ನು ವಿಶ್ಲೇಷಣಾತ್ಮಕವಾಗಿ ಅರಿಯುವರು.
  • ಅಳಿವೆಗಳು ಕರ್ನಾಟಕದ ಭೂ ಭಾಗದಲ್ಲಿ ಹೇಗೆ ರಚಿಸಲ್ಪಟ್ಟಿವೆ ಎಂಬುದನ್ನು ರಾಜ್ಯದ ಕರಾವಳಿ ಮೈದಾನಗಳ ಹಿನ್ನಲೆಯಲ್ಲಿ ಸ್ಪಷ್ಪಪಡಿಸಿಕೊಳ್ಳುವರು.
  • ಬಂದರುಗಳ ನಿರ್ಮಾಣ ಹಾಗೂ ಕರ್ನಾಟಕದ ಕೆಲವು ಮೀನುಗಾರಿಕಾ ಬಂದರುಗಳ ರಚನೆ, ಕರಾವಳಿ ತೀರದ ದ್ವೀಪಗಳೂ ಸೇರಿದಂತೆ ಇಲ್ಲಿನ ಬೆಳೆಗಳ ವಿಧಗಳನ್ನು ವಿಶ್ಲೇಷಣಾತ್ಮಕವಾಗಿ ಅರಿಯುವರು.
  • ಕರ್ನಾಟಕದ ಮಲೆನಾಡು ಪ್ರದೇಶವನ್ನು ಅರ್ಥೈಸಿಕೊಂಡಂತೆ, ಇಲ್ಲಿನ ಶಿಖರ ಪ್ರದೇಶಗಳು, ಾಟಿ ಪ್ರದೇಶಗಳು, ನದಿ ಉಗಮ ಕೇಂದ್ರಗಳು ಸೇರಿದಂತೆ ಇಲ್ಲಿನ ಮಲೆನಾಡು (ಸಹ್ಯಾದ್ರಿ) ಶ್ರೇಣಿಯ ಮಹತ್ವವನ್ನು ಸ್ಮರಿಸಿಕೊಳ್ಳುವರು ಹಾಗೂ ಮಲೆನಾಡಿನ ಸಂರಕ್ಷಣೆಯ ಅಗತ್ಯತೆ ಅರಿಯುವರು.
  • ಕಾಫಿಯ ನಾಡಾಗಿ ಚಿಕ್ಕಮಗಳೂರು ಹಾಗೂ ಕರ್ನಾಟಕದ ಕಾಶ್ಮೀರವಾಗಿ ಕೊಡಗಿನ ಮಹತ್ವವನ್ನು ಇಲ್ಲಿನ ಬೆಳೆಗಳ ಹಿನ್ನಲೆಯಲ್ಲಿ ತಿಳಿದುಕೊಳ್ಳುವರು.
  • ಕರ್ನಾಟಕದಲ್ಲಿ ಮೈದಾನ ಪ್ರದೇಶಗಳು ಹೇಗೆ ಸೃಷ್ಟಿಯಾಗಿವೆ ಎಂಬುದಕ್ಕೆ ಪೂರಕವಾಗಿ ಕರ್ನಾಟಕ ಭೂ ಮೇಲ್ಮೈ ಪಶ್ಚಿಮದಿಂದ ಪೂರ್ವದ ಕಡೆ ಬಂದಂತೆಲ್ಲಾ ಇಳಿಜಾರಾಗಿರುತ್ತದೆ ಎಂದು ಗಮನಿಸಿಕೊಂಡು ಉತ್ತರ ಮತ್ತು ದಕ್ಷಿಣ ಮೈದಾನಗಳ ವ್ಯತ್ಯಾಸ ಮತ್ತು ಸಾಮ್ಯತೆಯನ್ನು ತಿಳಿಯುವರು.
  • ಹಾಗೆಯೇ ಉತ್ತರ ಮೈದಾನದಲ್ಲಿ ಕಂಡುಬರುವ ಬೆಟ್ಟ ಪ್ರದೇಶಗಳಿಗಿಂತ ದಕ್ಷಿಣ ಭಾಗದ ಬೆಟ್ಟ ಪ್ರದೇಶಗಳು ಹೆಚ್ಚಾಗಿರಲು ಕಾರಣ ಮತ್ತು ಹಿನ್ನಲೆಯನ್ನು ವಿಶ್ಲೇಷಿಸಿ ಅರ್ಥೈಸಿಕೊಳ್ಳುವರು.

4) ಜ್ಞಾನ ಪುನರ್ರಚನೆಗೆ ಇರುವ ಅವಕಾಶಗಳು

  • ಸಹ್ಯಾದ್ರಿ ಶ್ರೇಣಿಯು ಎತ್ತರವಾಗಿರುವುದರಿಂದ ಅತಿಯಾದ ಮಳೆಬರಲು ಸಾಧ್ಯವಾಗಿದೆ ಹಾಗೂ ಇದರಿಂದಲೇ ಮಲೆನಾಡು ಪ್ರದೇಶ ಸದಾ ನಿತ್ಯ ಹರಿದ್ವರ್ಣದ ಕಾಡುಗಳಿಂದ ಕಂಗೊಳಿಸಲು ಕಾರಣವಾಗಿದೆ ಎಂಬುದನ್ನು ಮನನ ಮಾಡಿಕೊಳ್ಳುವರು.
  • ಪಶ್ಚಿಮ ಭಾಗವು ಕಡಲತೀರವಾಗಿರುವುದರಿಂದ ಇಲ್ಲಿನ ಕೃಷಿ ಪ್ರಧಾನ ಬೆಳೆಗಳು ಉತ್ತಮವಾದ ಇಳುವರಿ ಕೊಡುವುದರ ಜೊತೆಗೆ, ಮೀನುಗಾರಿಕಾ ಉದ್ಯೋಗವು ಲಾಭದಾಯಕವಾಗಿದ್ದು, ಈ ಎಲ್ಲಾ ಆಕ ಚಟುವಟಿಕೆಗಳಿಗೆ ಪೂರಕವೆಂಬಂತೆ ನವ ಮಂಗಳೂರು ಬಂದರು ಕರ್ನಾಟಕದ ವ್ಯಾಪಾರದ ಹೆಬ್ಬಾಗಿಲಾಗಿ ಪರಿವರ್ತಿತವಾಗಿದೆ. ಈ ಎಲ್ಲಾ ಅಂಶಗಳ ಆಕ ಸಂರಚನೆಯಲ್ಲಿ ನಿರ್ವಹಿಸುವ ಪಾತ್ರವನ್ನು ಸ್ಪಷ್ಟಪಡಿಸಿಕೊಳ್ಳುವರು.
  • ಕರ್ನಾಟಕದ ಪಶ್ಚಿಮ ಟ್ಟಗಳು ಎತ್ತರವಾಗಿದ್ದು, ಕಡಿದಾದ ಕಣಿವೆಗಳನ್ನು ಹೊಂದಿರುವುದರಿಂದಲೇ `ಾಟಿ' ಪ್ರದೇಶಗಳು ರಚನೆಯಾಗಲು ಸಾಧ್ಯ ಎಂಬ ಜ್ಞಾನವನ್ನು ಕಟ್ಟಿಕೊಳ್ಳುವರು.
  • ಕಣಿವೆ ಪ್ರದೇಶಗಳಲ್ಲಿಯೇ ಜಲಪಾತಗಳು ಕಂಡುಬರುತ್ತವೆ ಹಾಗೂ ಅಳಿವೆಗಳು ಉಂಟಾಗುತ್ತವೆ ಎಂಬ ಪರಿಜ್ಞಾನವನ್ನು ತಮ್ಮದಾಗಿಸಿಕೊಳ್ಳುವರು.
  • ಬೆಟ್ಟ ಪ್ರದೇಶಗಳಲ್ಲಿ ಅತಿಯಾಗಿ ಮಳೆಯಾಗುವುದರಿಂದ ಹಾಗೂ ಇಳಿಜಾರು ಮತ್ತು ಮರಗಳ ಪ್ರದೇಶವಾಗಿರುವುದರಿಂದ ಕಾಫಿ ಮತ್ತು ಕಿತ್ತಲೆ ಹಣ್ಣು, ಚಹಾ, ರಬ್ಬರ್
  • ಉತ್ತರದ ಮೈದಾನದ ಮಣ್ಣು, ಇಲ್ಲಿ ಬೆಳೆಯುವ ಬೆಳೆಗಳು, ಬೀಳುವ ಮಳೆ, ಇಲ್ಲಿನ ಉಷ್ಣಾಂಶವನ್ನು ಇವುಗಳ ನಡುವೆ ಸಾಮ್ಯತೆಯನ್ನು ಅರ್ಥೈಸಿಕೊಳ್ಳುವರು. ಅಲ್ಲದೆ ಸಮತಟ್ಟಾದ ಈ ಮೈದಾನ ಪ್ರದೇಶದಲ್ಲಿ ಕಂಡುಬರುವ ಟ್ಟ ಭಾಗಗಳಾದ ನರಗುಂದ ಬೆಟ್ಟ, ಪರಸಗಡ ಗುಡ್ಡ, ಇಳಕಲ್ ಗುಡ್ಡ ಪ್ರದೇಶವನ್ನು ಪರಿಚಯ ಮಾಡಿಕೊಳ್ಳುವರು.
  • ಕರ್ನಾಟಕದ ಉತ್ತರದ ಮೈದಾನ ಪ್ರದೇಶಗಳಲ್ಲಿಯೂ ಹೆಚ್ಚು ಏರಿಳಿತದ ಭೂ ಸ್ವರೂಪಗಳುಂಟಾಗಿದ್ದು ಛಾಯಭಗವತಿ ಹಾಗೂ ಸೊಗಲ ಜಲಪಾತಗಳು ಇಲ್ಲಿ ಕಂಡುಬರಲು ಕಾರಣಗಳೇನೆಂಬುದನ್ನು ತಿಳಿದುಕೊಳ್ಳುವರು.
  • ಕರ್ನಾಟಕದ ದಕ್ಷಿಣದ ಮೈದಾನ ಭಾಗವು ಸಮುದ್ರ ಮಟ್ಟಕ್ಕಿಂತ 900-975 ಮೀಟರ್ ಎತ್ತರವುಳ್ಳದ್ದಾಗಿದ್ದು ಪೂರ್ವದ ಕಡೆಗೆ ಇಳಿಜಾರಾಗಿ ನದಿ ಪ್ರದೇಶಗಳನ್ನು ಹೊಂದಿದ ಭಾಗವಾಗಿದೆ. ಹಾಗೂ ಎತ್ತರವಾದ ಬೆಟ್ಟ ಗುಡ್ಡಗಳ ಸಾಲುಗಳನ್ನು ಹೊಂದಿದೆ. ಈ ಬೆಟ್ಟ ಪ್ರದೇಶಗಳೇ ಚಿತ್ರದುರ್ಗ, ನಾರಾಯಣದುರ್ಗ, ಸಾವನದುರ್ಗ, ಶಿವಗಂಗೆ, ಮಧುಗಿರಿ ಬೆಟ್ಟ, ನಂದಿಬೆಟ್ಟ, ಚೆನ್ನಕೇಶವ ಬೆಟ್ಟ, ಕವಲೆದುರ್ಗ, ಆದಿಚುಂಚನಗಿರಿ ಬೆಟ್ಟ, ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗಯ್ಯನ ಬೆಟ್ಟ, ಚಾಮುಂಡಿ ಬೆಟ್ಟಗಳೆಂದು ಗುರುತು ಮಾಡಿಕೊಳ್ಳುವರು. ಹಾಗೂ ತಮ್ಮ ಜಿಲ್ಲೆಗಳು ಕರ್ನಾಟಕದ ಯಾವ ಭಾಗದಲ್ಲಿವೆ ಎಂದು ತಿಳಿದುಕೊಳ್ಳುವರು.

5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು

  • ಕರ್ನಾಟಕದ ಪ್ರಾಕೃತಿಕ ಲಕ್ಷಣಗಳನ್ನು ಪಟ್ಟಿಮಾಡಿ ಅವುಗಳನ್ನು ಕರ್ನಾಟಕದ ನಕ್ಷೆಯಲ್ಲಿ ಗುರುತು ಮಾಡುವುದು.
  • ಕರ್ನಾಟಕದ ಹೆಚ್ಚು ನದಿಗಳು ಪಶ್ಚಿಮದಿಂದ ದಕ್ಷಿಣಕ್ಕೆ ಏಕೆ ಹರಿಯುತ್ತವೆ ಎಂಬುದನ್ನು ತರಗತಿಯಲ್ಲಿ ಗುಂಪುಗಳನ್ನು ಮಾಡಿ ಚರ್ಚಿಸಿ ತೀರ್ಮಾನಕ್ಕೆ ಬರುವುದು.
  • ಕರ್ನಾಟಕದ ಪ್ರಮುಖ ಕರಾವಳಿ ಬಂದರುಗಳನ್ನು ಗುರುತಿಸುವಿಕೆ ಹಾಗೂ ಈ ಬಂದರುಗಳು ಉಂಟಾಗಲು ಪ್ರಮುಖ ನೈಸರ್ಗಿಕ ಕಾರಣಗಳನ್ನು ಅನುಕೂಲಕಾರರ ಮಾರ್ಗದರ್ಶನದಲ್ಲಿ ತಿಳಿದುಕೊಳ್ಳುವರು.
  • ಕರ್ನಾಟಕಕ್ಕೆ ಪಶ್ಚಿಮ ಟ್ಟಗಳಿಂದಾಗುವ ಅನುಕೂಲಗಳನ್ನು ಪಟ್ಟಿ ಮಾಡಿ ಪ್ರತಿಯೊಂದು ಅಂಶವನ್ನು ಮಿಂಚು ಪಟ್ಟಿಗಳನ್ನು ಬಳಸಿ ಮನನ ಮಾಡಿಕೊಳ್ಳುವಂತೆ ತಿಳಿಸುವುದು.
  • ಪಶ್ಚಿಮ ಟ್ಟಗಳ ಾಟಿ ಪ್ರದೇಶಗಳು, ಅವುಗಳ ನಡುವಿನ ದುರ್ಗಮ, ಕಿರಿದಾದ, ಅಂಕುಡೊಂಕಿನ ದಾರಿಗಳ ಚಿತ್ರರಚನೆ ಮತ್ತು ಈ ಭಾಗದ ಸಂಚಾರದ ತೊಂದರೆಗಳೇನೆಂಬುದನ್ನು ಚರ್ಚಿಸಿ, ಸ್ಮರಿಸಿಕೊಂಡು ಅನುಭವಗಳ ಮೂಲಕ ಉತ್ತರಗಳನ್ನು ಕಂಡುಕೊಳ್ಳುವರು.
  • ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಕಾಡುಗಳು ದಟ್ಟವಾಗಿದ್ದು ಸದಾ ಹಸಿರಿನಿಂದ ಕೂಡಿರುತ್ತವೆ. ಇಂತಹ ದಟ್ಟ ಅರಣ್ಯ ಪ್ರದೇಶವು ಎತ್ತರವಾದ ಟ್ಟ ಪ್ರದೇಶಗಳಲಿ ಕಂಡುಬರುತ್ತವೆ. ಆದ್ದರಿಂದಲೇ ಇಲ್ಲಿ ನದಿಗಳು ಜನಿಸುತ್ತವೆ. ಜಲಪಾತಗಳು ಕಂಗೊಳಿಸುತ್ತವೆ ಎಂಬ ತಾರ್ಕಿಕ ವಿಚಾರದಿಂದ ಜ್ಞಾನ ಕಟ್ಟಿಕೊಳ್ಳುವರು.
  • ಇಂತಹ ಜಲಪಾತಗಳೆಂದರೆ ಪಶ್ಚಿಮಟ್ಟದ ಜೋಗ್ ಜಲಪಾತ, ಮಾಗೋಡು, ಗೋಕಾಕ್, ಶಿವನಸಮುದ್ರ, ಅಬ್ಬಿ ಜಲಪಾತಗಳ ಬಗ್ಗೆ ಚಿತ್ರಸಂಗ್ರಹ, ಇವುಗಳ ಸಾಂಸ್ಕೃತಿಕ ಹಿರಿಮೆ, ಪ್ರಕೃತಿ ರಮ್ಯತೆಯನ್ನು ಕುರಿತು ಪ್ರಬಂಧ ರಚಿಸಲು ತಿಳಿಸುವುದು.
  • ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಕಾಫಿಯ ನಾಡೆಂದು ಕರೆಯಲು ಕಾರಣಗಳೇನೆಂದು ಚರ್ಚೆ ಮಾಡುವುದು.
  • ಉತ್ತರದ ಮೈದಾನಗಳು ಮತ್ತು ದಕ್ಷಿಣದ ಮೈದಾನಗಳಿಗಿರುವ ವ್ಯತ್ಯಾಸವನ್ನು ಸಂಗ್ರಹಿಸುವುದು.
  • ಕರ್ನಾಟಕದ ನಕ್ಷೆಯಲ್ಲಿ ಜೋಳ, ಸಜ್ಜೆ, ಶೇಂಗಾ, ರಾಗಿ, ಹತ್ತಿ ಬೆಳೆಯುವ ಪ್ರದೇಶಗಳನ್ನು ಗುರುತಿಸುವುದು.
  • ಕರ್ನಾಟಕದ ಪ್ರಮುಖ ಬೆಟ್ಟ ಪ್ರದೇಶಗಳು, ಇವುಗಳ ನಡುವಿನ ವ್ಯತ್ಯಾಸವನ್ನು ಗುಂಪಿನಲ್ಲಿ ಕಲಿಕಾ ನಿಲ್ದಾಣದ ಮೂಲಕ ಚರ್ಚಿಸುವುದು.

6) ಕಲಿಕೆ ಅನುಕೂಲಿಸುವ ವಿಧಾನ

  • ಚರ್ಚಾ ವಿಧಾನ

ತರಗತಿಯಲ್ಲಿ ಅನುಕೂಲಕಾರರು ನಾಲ್ಕು ಗುಂಪುಗಳನ್ನು ಮಾಡಿ ಒಂದೊಂದು ಗುಂಪಿಗೆ ಒಂದೊಂದು ಜ್ಞಾನರಚನಾ ಅಂಶವನ್ನು ನಿಗಧಿಪಡಿಸಿ ಗುಂಪಿನಲ್ಲಿ ಚರ್ಚೆ ಮಾಡುವುದರ ಮೂಲಕ ಜ್ಞಾನ ಕಟ್ಟಿಕೊಂಡು ಪ್ರತಿ ಗುಂಪಿನಿಂದ ಒಂದಿಬ್ಬರು ಕಲಿತ ವಿಷಯದ ಅನುಭವವನ್ನು ತರಗತಿಗೆ ಪ್ರಸ್ತುತಪಡಿಸುವರು. ನಂತರ ಪೂರ್ಣತರಗತಿ ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿಸುವುದು.

7) ಕೈಗೊಳ್ಳಬಹುದಾದ ಚಟುವಟಿಕೆಗಳು

    1. ಕರ್ನಾಟಕದ ನಕ್ಷೆ ಬರೆಸುವುದು
    2. ಪ್ರಮುಖ ಟ್ಟ ಪ್ರದೇಶಗಳನ್ನು ಗುರುತಿಸಲು ತಿಳಿಸುವುದು.
    3. ನದಿ ಪ್ರದೇಶಗಳ ಗುರುತು
    4. ಧಾನ್ಯಗಳ ಸಂಗ್ರಹ
    5. ಕಪ್ಪು ಮತ್ತು ಕೆಂಪು ಮಣ್ಣು ಸಂಗ್ರಹ
    6. ಪಶ್ಚಿಮ ಟ್ಟಗಳಿಗೆ ಪ್ರವಾಸ ಕೈಗೊಳ್ಳುವುದು.
    7. ನಂದಿ ಬೆಟ್ಟ ಬೇಸಿಗೆಯಲ್ಲಿ ತಂಪಾಗಿರಲು ಕಾರಣ ಬರೆಯುವುದು.
    8. ಉತ್ತರ ಮತ್ತು ದಕ್ಷಿಣ ಮೈದಾನ ಕುರಿತ ಗುಂಪು ಚರ್ಚೆ.
    9. ಬೇಸಿಗೆಯಲ್ಲಿ ಬಿಸಿಲ ನಾಡಿನ ಅನುಭವ ಕುರಿತು ಪ್ರಬಂಧ ರಚನೆ.
    10. ಮಳೆಗಾಲದ ಒಂದು ದಿನದ ಅನುಭವ ಕುರಿತು ಗೆಳೆಯರೊಂದಿಗೆ ಚರ್ಚಿಸಿ.

8) ಸಂಪನ್ಮೂಲ ಕ್ರೂಢೀಕರಣ / ಕಲಿಕಾ ಸಾಮಗ್ರಿಗಳು

    1. ಕರ್ನಾಟಕದ ಭೂಗೋಳಶಾಸ್ತ್ರ
    2. ಭಾರತದ ಭೂಗೋಳ ನಕ್ಷೆ
    3. ಮಲೆನಾಡು ಪ್ರದೇಶದ ಚಿತ್ರ
    4. ಬೆಟ್ಟಗಳ ಚಿತ್ರ. ಉದಾ: (ಮಧುಗಿರಿ ಏಕಶಿಲಾ ಬೆಟ್ಟ)
    5. ನದಿ ಹರಿಯುತ್ತಿರುವ ಚಿತ್ರ.
    6. ಭೂಗೋಳ ಸಂಗಾತಿ.
    7. ಬಾಬಾ ಬುಡನ್ಗಿರಿ ಬಿಳಿಗಿರಿ ರಂಗಯ್ಯನ ಬೆಟ್ಟ ಚಿತ್ರ.

9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು

    1. ನಾಡಿನ ಬಗ್ಗೆ ಹೆಮ್ಮೆ
    2. ನೈಸರ್ಗಿಕ ಸಂಪನ್ಮೂಲಗಳು ಕಡಿಮೆಯಾಗುವುದರ ಬಗ್ಗೆ ಎಚ್ಚರ
    3. ಪರಿಸರ ಜಾಗೃತಿ
    4. ಕಾಡು ಪ್ರಾಣಿಗಳ/ಪಕ್ಷಿಗಳ ರಕ್ಷಣೆ
    5. ಕರ್ನಾಟಕದ ಬಹುತೇಕ ನದಿಗಳು ಪೂರ್ವಕ್ಕೆ ಹರಿಯಲು ಕಾರಣ.
    6. ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು.
    7. ನೈಸರ್ಗಿಕ ಬಂದರುಗಳು ಉಂಟಾಗಲು ಕಾರಣ ತಿಳಿಯುವುದು.
    8. ಬೆಟ್ಟಗಳುಂಟಾಗಲು ಜ್ವಾಲಾಮುಖಗಳೇ ಕಾರಣವೆಂದು ಅರ್ಥೈಸಿಕೊಳ್ಳುವುದು.