ರಚನಾ ಸಮಾಜ ವಿಜ್ಞಾನ 9 9ನೇ ತರಗತಿ ಹೊಸ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಂಡಿರುವ ಹೊಸ ಅಂಶಗಳು
Jump to navigation
Jump to search
7. 9ನೇ ತರಗತಿ ಹೊಸ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಂಡಿರುವ ಹೊಸ ಅಂಶಗಳು
ಪ್ರಸ್ತುತ ಹೊಸ ಶಿಕ್ಷಣ ಕ್ರಮವು ಎನ್.ಸಿ.ಎಫ್ 2005, ಮತ್ತು ಸಿ.ಸಿ.ಇ. 2009ರ ಆಶಯದಂತೆ ಮೂಡಿಬಂದದ್ದು ಈ ಹಿನ್ನಲೆಯಲ್ಲಿ ಬದಲಾಗಿರುವ ಒಂಭತ್ತನೇ ತರಗತಿಯ ಪಠ್ಯಪುಸ್ತಕಗಳಲ್ಲಿನ ಸಮಾಜ ವಿಜ್ಞಾನವು ಸಹ ರಚನೆಯಾಗಿದೆ. ಇಂದಿನ ಜೀವನಕ್ಕೆ ಪ್ರತಿಯೊಬ್ಬ ಮಗುವನ್ನು ಅಣಿಗೊಳಿಸುವಲ್ಲಿ ಸಮಾಜ ವಿಜ್ಞಾನ ವಿಷಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಗುವಿನ ಸರ್ವತೋಮುಖ ಪ್ರಗತಿಗಾಗಿ ನೈಜ ಬದುಕಿಗೆ ಹತ್ತಿರವಾದ, ವೈಶಿಷ್ಟ್ಯಪೂರ್ಣವಾದ ಅಂಶಗಳು ಈಗಿನ 9ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ಈ ಮುಂದೆ ಚರ್ಚಿಸಲಾಗಿದೆ.
- ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕದಲ್ಲಿ 6 ವಿಭಾಗಗಳನ್ನು ಈ ವರ್ಷವೂ ಇಡಲಾಗಿದ್ದು, ಅನುಕೂಲಕಾರರು ಆಯ್ದ ವಿಭಾಗಗಳ ಅನುಕೂಲಿಸುವ ಜ್ಞಾನ ಕಟ್ಟಿಕೊಳ್ಳುವ ಉದ್ದೇಶದ ಹಿನ್ನಲೆಯನ್ನು ಅರಿತುಕೊಳ್ಳುವುದು ಹೆಚ್ಚು ಸೂಕ್ತ.
- ಪಠ್ಯದ ಭೂಗೋಳಶಾಸ್ತ್ರ ವಿಭಾಗದಲ್ಲಿ ಕಳೆದ ಪಠ್ಯದಲ್ಲಿದ್ದ ಪ್ರಪಂಚದ ಭೌಗೋಳಿಕ ವಿಚಾರಕ್ಕೆ ಬದಲಾಗಿ ಈಗ ಬದಲಾದ ಪಠ್ಯದಲ್ಲಿ ಕರ್ನಾಟಕದ ಭೂಗೋಳಶಾಸ್ತ್ರವನ್ನು 10 ಅಧ್ಯಾಯಗಳಲ್ಲಿ ಸುರ್ದೀವಾಗಿ ಪರಿಚಯಿಸಲಾಗಿದೆ. ಇದರ ಮುಖ್ಯ ಉದ್ದೇಶ ಮಗು ತನ್ನ ಮತ್ತು ಸುತ್ತಲ ಭೌಗೋಳಿಕ ಹಿನ್ನಲೆಯನ್ನು ಕಡ್ಡಾಯವಾಗಿ ಅರ್ಥೈಸಿಕೊಳ್ಳಬೇಕೆಂಬುದು ಇಲ್ಲಿನ ಆಶಯವಾಗಿದೆ.
- ಹಾಗೆಯೇ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂವಿಧಾನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ಆಧುನಿಕ ಸಮಾಜ ಇನ್ನಿಲ್ಲದಂತೆ ಕೊರಗುತ್ತಿರುವ ಭಿನ್ನತೆ, ಅನೈಕ್ಯತೆ ಸಾಮರಸ್ಯಗಳನ್ನು ತೊಡೆದು ಹಾಕಲು ಬೆಳೆಯುತ್ತಿರುವ ಮಗುವಿನಲ್ಲಿ ಏಕತೆ ಹೊಂದಾಣಿಕೆಯ ಮೌಲ್ಯಗಳನ್ನು ಕಟ್ಟಲು ರಾಷ್ಟ್ರೀಯ ಭಾವೈಕ್ಯತೆ ಎಂಬ ಟಕವನ್ನು ಪ್ರಸ್ತುತಪಡಿಸಲಾಗಿದೆ.
- ಪ್ರತಿಯೊಂದು ಪಾಠದ ಪ್ರಾರಂಭದಲ್ಲಿ ನಾಲ್ಕಾರು ವಾಕ್ಯಗಳಲ್ಲಿ ನೀಡಲಾಗಿರುವ ಅಂಕಣವು ಸೂಕ್ಷ್ಮವಾಗಿ ಪಾಠದ ಪ್ರಧಾನ ವಿಷಯದ ತಿರುಳನ್ನು ನೀಡಿರುವುದರಿಂದ ಟಕಕ್ಕೆ ಸಂಬಂಧಿಸಿದ ಜ್ಞಾನ ರಚನೆ ಏನೆಂಬುದನ್ನು ಟಕದ ಮೊದಲೇ ಪರಿಚಯ ಮಾಡಿಕೊಳ್ಳಬಹುದಾಗಿದೆ.
- ಪಠ್ಯದ ವ್ಯವಹಾರ ಅಧ್ಯಯನ ವಿಭಾಗದಲ್ಲಿ ಮಗು ವ್ಯವಹಾರದ ಪರಿಕಲ್ಪನೆಯನ್ನು ಪ್ರೌಢಹಂತದಿಂದಲೇ ತಿಳಿದುಕೊಳ್ಳುವಂತೆ ಅನುಕೂಲವಾಗಲು ನಿತ್ಯದ ಯಾವುದೇ ವ್ಯವಹಾರ ಪ್ರಕ್ರಿಯೆಯಲ್ಲಿ ಖರ್ಚು, ಆದಾಯಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ಲೆಕ್ಕ ಬರಹ (ಕ್ಯಾಸ್ಬುಕ್)ದ ಪರಿಕಲ್ಪನೆಯನ್ನು ಮೂಡಿಸುವುದರ ಜೊತೆಗೆ ಲಾಭ ನಷ್ಟದ ಪ್ರಮಾಣವನ್ನು ಮಗುವಿಗೆ ಅರ್ಥೈಸುವ ಉದ್ದೇಶವಿದೆ.
- ಪಠ್ಯದ ಅರ್ಥಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ 9ನೇ ತರಗತಿಯಿಂದಲೇ ಮಗು ಹಣಕಾಸಿನ ವ್ಯವಹಾರದ ಪರಿಕಲ್ಪನೆಯನ್ನು ಮಾಡಿಸಿಕೊಳ್ಳುವ ಉದ್ದೇಶಕ್ಕಾಗಿ, ನೂತನವಾಗಿ `ಆಕ ರಚನೆ' ಎಂಬ ಹೊಸ ಟಕವನ್ನು ಪರಿಚಯಿಸಲಾಗಿದೆ.
- ಪ್ರತಿ ಟಕಗಳ ಮುಖ್ಯಾಂಶಗಳನ್ನು ಮನನ ಮಾಡಿಕೊಳ್ಳಬೇಕಾದ ಅಂಶಗಳನ್ನು `ಬಾಕ್ಸ್'ನಲ್ಲಿ ನೀಡಲಾಗಿದ್ದು ಅವುಗಳನ್ನು ಗಮನಿಸಿ, ಮಕ್ಕಳ ಚರ್ಚೆಗೆ ಅವಕಾಶ ಮಾಡಿಕೊಟ್ಟು ಪರಿಕಲ್ಪನಾತ್ಮಕ ಪರಿಧಿಗಳನ್ನು ವಿಸ್ತರಿಸುವುದು, ಅಲ್ಲದೆ ಪ್ರತಿಯೊಂದು ಟಕವೂ ಪೂರಕವಾದ ಚಟುವಟಿಕೆಗಳನ್ನು ಹೊಂದಿದ್ದು, ಮಗು ಈ ಚಟುವಟಿಕೆಯ ಮೂಲಕ ತನ್ನ ಜೀವನವನ್ನು ಅರ್ಥೈಸಿಕೊಳ್ಳುವಂತೆ ಅನುಕೂಲಿಸುವುದು ಹಾಗೂ ಟಕಕ್ಕೆ ಪೂರಕವಾಗುವ ಮತ್ತಷ್ಟು ಚಟುವಟಿಕೆಗಳನ್ನು ಅನುಕೂಲಕಾರರು ಮತ್ತು ಮಕ್ಕಳು ಸೃಷ್ಟಿಸಿಕೊಂಡು ವಿಮರ್ಶಾಯುಕ್ತ ಶಿಕ್ಷಣ ಕ್ರಮದ ಮೂಲಕ ಜ್ಞಾನ ಕಟ್ಟಿಕೊಳ್ಳುವುದು ಬಹುದೊಡ್ಡ ಆಶಯವಾಗಿದೆ.
- ಅರ್ಥಶಾಸ್ತ್ರದ ಆಕ ವಲಯ ಟಕದಲ್ಲಿ ಇಂದಿನ ವಿನೂತನ ಆಕ ವಲಯಗಳಾದ ಕೃಷಿವಲಯ, ಪಶುಪಾಲನೆ, ಮೀನುಗಾರಿಕೆ, ಗಣಿಗಾರಿಕೆಗಳ ಜೊತೆಗೆ `ಪುಷ್ಪ ಕೃಷಿ' ಎಂಬ ಹೆಚ್ಚು ಬೇಡಿಕೆ ಇರುವ ಆಕ ವಲಯದ ಪರಿಕಲ್ಪನೆಯನ್ನು ಸೇರಿಸಲಾಗಿದೆ.
- ಪಠ್ಯದಲ್ಲಿ ಪ್ರತಿ ಟಕಾಂಶವು ಉತ್ತಮವಾದ ಭಾಷಾ ಶೈಲಿಯೊಂದಿಗೆ ಮೂಡಿಬಂದಿದ್ದು, ಸಂದರ್ಭೋಚಿತ ನಕ್ಷೆಗಳು, ಆಕರ್ಷಕ ಚಿತ್ರಪಟಗಳು, ಕಂಡುಬಂದಿದ್ದು, ಪಠ್ಯಪುಸ್ತಕ ಆಕರ್ಷಣೀಯವಾಗಿದೆ.
- ಪ್ರತಿ ಟಕದ ಅಭ್ಯಾಸ ಪ್ರಶ್ನೆಗಳು ಸಿ.ಸಿ.ಇ. ಹಿನ್ನಲೆಯ ಚಟುವಟಿಕೆಗಳೊಂದಿಗೆ ರಚಿತವಾಗಿದ್ದು, ಉತ್ತರವು ಎನ್.ಸಿ.ಎಫ್. ಆಶಯವನ್ನು ಅರ್ಥೈಸಿಕೊಳ್ಳುವಂತೆ ಕೇಳಲಾಗಿದೆ.
- ಕಲಿಕಾ ದೃಷ್ಟಿಯಿಂದ ಪ್ರತಿಟಕವನ್ನು ಚಿಕ್ಕ ಚಿಕ್ಕ ಉಪಟಕಗಳ ಶೀರ್ಷಿಕೆಯಡಿಯಲ್ಲಿ ಚರ್ಚಿಸಲಾಗಿದೆ. ಈ ಉಪಟಕದ ಜ್ಞಾನರಚನಾ ಅಂಶಗಳನ್ನು ವಿವಿಧ ರೀತಿಯ ಕಲಿವಿನ ವಿಧಾನಗಳ ಮೂಲಕ ಅರ್ಥೈಸಲು ಹಾಗೂ ವಿಮರ್ಶಾತ್ಮಕ ಬುದ್ಧಿ ಮತ್ತೆಯನ್ನು ಮಗು ಬೆಳಸಿಕೊಳ್ಳಲು ಪ್ರತಿ ಟಕದಲ್ಲಿ ಎಲ್ಲಾ ರೀತಿಯ ಕಲಿಕೆಯ ಅವಕಾಶ ಕಲ್ಪಿಸಲಾಗಿದೆ.
- ಆಯಾ ಕಾಲದ ರಾಜ, ಆತನ ಆಡಳಿತ, ಆದರ್ಶಗಳು, ಚಿಂತನೆ ತತ್ವ ವಿಮಾಂಸೆಗಳನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಲಾಗಿದೆ.
- ಪಠ್ಯದ ಮುಖಪುಟದ ಹಂಪಿಯ ಕಲ್ಲಿನ ರಥವು ಇತಿಹಾಸದ ಚಲನೆಯನ್ನು ಪ್ರತಿಬಿಂಬಿಸುವಂತೆ ಇದ್ದು ಹಿಂಬದಿಯ ವಿಧಾನ ಸೌಧಕ್ಕೆ ಅದು ಚಲಿಸಿ, ನಮ್ಮ ಕಾಲವನ್ನು ಎಚ್ಚರಿಕೆಯಿಂದ ಗಮನಿಸಿ, ಇಂದಿನ ಸರಕಾರ ಆಡಳಿತ ನಡೆಸಲಿ ಎಂಬ ಸಂದೇಶ ನೀಡುವಂತಿದೆ.
- ಸಮಾಜಶಾಸ್ತ್ರ ವಿಭಾಗದಲ್ಲಿ ಬರುವ ಕುಟುಂಬ, ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳನ್ನು ಮಗು ಅರ್ಥೈಸಿಕೊಳ್ಳುವಾಗ ತನ್ನ ಜೀವನವನ್ನೇ ಪ್ರಯೋಗಾಲಯವನ್ನಾಗಿ ಮಾಡಿಕೊಂಡು ಅನುಭವಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸುವಂತಿದೆ.
- ಪಠ್ಯದ ಪ್ರತಿ ಟಕವು ತನ್ನ ವ್ಯಾಪ್ತಿಯಲ್ಲಿ ಮಗುವಿಗೆ ಮೌಲ್ಯಗಳು, ವ್ಯಕ್ತಿಗೌರವ, ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ, ಸೋಲನ್ನು ಸ್ವೀಕರಿಸುವ ಭಾವ, ರಾಷ್ಟ್ರಭಕ್ತಿ, ಮುಂತಾದ `ಸಮಾಜಮುಖಿ' ಚಿಂತನೆಗಳನ್ನು ಬೆಳೆಸಿಕೊಳ್ಳುವಲ್ಲಿ ಮಾರ್ಗದರ್ಶನ ನೀಡುತ್ತವೆ.
- ಪರಿಸರ ಜಾಗೃತಿ, ಸಂಜೀವನ ವಿಶ್ವಭಾತೃತ್ವದಂತಹ ಭಾವನೆಗಳು ಟಕಗಳ ಮೂಲಕ ಬೆಳೆಸಲು ಯತ್ನಿಸಲಾಗಿದೆ.
- ಐತಿಹಾಸಿಕ ನಿಲವುಗಳ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಮಗು ತಾನೇ ಜ್ಞಾನಕಟ್ಟಿಕೊಳ್ಳಲು ಇತಿಹಾಸ ವಿಭಾಗದ ಟಕಗಳು, ಸರಳ ಮತ್ತು ಸ್ಪಷ್ಟ ರಚನಾ ವಾಕ್ಯಗಳೊಂದಿಗೆ ರಚಿಸಲ್ಪಟ್ಟಿದೆ.
- ವಿಶ್ವದ ವಿವಿಧ ಧರ್ಮಗಳ ಸಮನ್ವಯ, ಸಾಮರಸ್ಯದ ಸಂಕೇತವಾಗಿ ಇತಿಹಾಸ ಸಂಬಂಧ ವಿಭಾಗ ಮೊದಲನೇ ಟಕವು ಮಗುವನ್ನು ತಟ್ಟುತ್ತದೆ.
- ಮಗುವಿನ ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾಗಿ ಪಠ್ಯವು ರಚಿತವಾಗಿದ್ದು, ರಾಷ್ಟ್ರದ ಏಕರೂಪ ಶಿಕ್ಷಣ ಕ್ರಮಕ್ಕೆ ಕಲಿಕಾಯನ್ನು ಸಿದ್ಧಗೊಳಿಸುವಂತಿದೆ.
- ಮಗುವಿನ ಸ್ವಂತ ಉದ್ಯೋಗದ ಪರಿಕಲ್ಪನೆಯನ್ನು ಮೂಡಿಸುವಂತಹ ಟಕಗಳು ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗಗಳು ಹೊಂದಿವೆ.