ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಅವಲೋಕನ

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಶಾಲೆಗಳಲ್ಲಿನ ಬೋಧನೆ-ಕಲಿಕೆಯನ್ನು ಮಾರ್ಗದರ್ಶಿಸುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ತಂತ್ರಜ್ಞಾನವನ್ನು ಕೇವಲ ಮಾಹಿತಿ ಹಂಚುವ ಮಾದ್ಯಮವಾಗಿ ಅನ್ಯಮಾರ್ಗದಲ್ಲಿ ಶಿಕ್ಷಕರು ಬಳಸುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ. ಹಾಗು ಶಿಕ್ಷಕರು ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಕೇವಲ ಬಳಕೆದಾರರು ಮಾತ್ರವೇ ಆಗಿರದೇ ಉತ್ಪಾದಕರೂ ಸಹ ಆಗಿರಬೇಕು ಎಂಬ ದೃಡ ಹೇಳಿಕೆಯನ್ನು ನೀಡುತ್ತದೆ. ಏಕಮುಖ ವಾಗಿ ಕೇವಲ ಪಡೆದುಕೊಳ್ಳುವುದಷ್ಟೇ ಅಲ್ಲದೇ ದ್ವಿಮುಖವಾಗಿ ಪರಸ್ಪರ ಭಾಗವಹಿಸುವಿಕೆಯು ತಂತ್ರಜ್ಞಾನವನ್ನು ಶೈಕ್ಷಣಿಕವಾಗಿಸುತ್ತದೆ.

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಯ ಪ್ರಸ್ತುತ ಪಠ್ಯಕ್ರಮವು ರಾಷ್ಟ್ರೀಯ ನೀತಿಗಳು ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳ ಗುರಿಯನ್ನು ಅರ್ಥೈಸಿಕೊಳ್ಳುವ ವಿಧಾನವಾಗಿದೆ. ಇದು ತಂತ್ರಜ್ಞಾನದ ತ್ವರಿತ ಬೆಳವಣಿಗೆಯನ್ನು ಮತ್ತು ಭಾರತೀಯ ಶಾಲಾ ವ್ಯವಸ್ಥೆಯ ತಳಮಟ್ಟದ ವಾಸ್ತವಾಂಶಗಳನ್ನು ಅಳವಡಿಸಿಕೊಂಡಿದೆ. ಶಿಕ್ಷಕರಿಗೆ, ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಸಾದ್ಯತೆಗಳನ್ನು ಕಂಡುಕೊಳ್ಳಲು ಆರಂಭವಾಗಿದೆ. ಯಂತ್ರಾಂಶ, ತಂತ್ರಾಂಶ ಮತ್ತು ಐ.ಸಿ.ಟಿ ಮಧ್ಯವರ್ತನೆಗಳ ಸೂಕ್ತ ಆಯ್ಕೆಯ ಬಗ್ಗೆ ಕಲಿಯಲು ಹಾಗು ತಂತ್ರಜ್ಞಾನದ ಮುಖ್ಯ ಕ್ಲಿಷ್ಟ ಬಳಕೆದಾರರಾಗಿ ಅಭಿವೃದ್ದಿ ಹೊಂದಲು ಸಾದ್ಯವಾಗಿದೆ. ಹಾಗೆಯೇ ಇದು ಮಕ್ಕಳಲ್ಲಿ ಸೃಜನಶೀಲತೆಗೆ, ಸಮಸ್ಯೆ ಬಿಡಿಸುವಿಕೆಗೆ (ಪರಿಹರಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಯುಗಕ್ಕೆ ಪರಿಚಿತವಾಗುವಿಕೆಗೆ ಸಾಧ್ಯವಾಗಿದ್ದು ಈ ಮೂಲಕ ವೃತ್ತಿ ಅನ್ವೇಷಣೆಗೆ ಸಹಾಯಕವಾಗಿದೆ.

ಕೆಲವು ಸಮಯದಲ್ಲಿ, ಶಾಲೆಯಲ್ಲಿ ಬೋದಿಸಬಹುದಾದ ಐಸಿಟಿ ಪಠ್ಯಕ್ರಮವನ್ನು ವ್ಯಾಖ್ಯಾನಿಸುವ ಸತತ ಪ್ರಯತ್ನಗಳು ಮತ್ತು ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಮೂಲಕ ಐಸಿಟಿಯು ಶಿಕ್ಷಕರು ಮತ್ತು ಮಕ್ಕಳನ್ನು ಇತರೇ ತಂತ್ರಜ್ಞಾನಗಳಿಂದ ಭಿನ್ನವಾಗಿಸುತ್ತದೆ. ನಿರಂತರ ಆಧುನಿಕರಣ, ಅನಿವಾರ್ಯ ಬದಲಾವಣಗೆಳೊಂದಿಗೆ ಬದಲಾಗುತ್ತಿರಬೇಕು ಎಂಬ ಪ್ರತಿಪಾದನೆಯನ್ನು ನೀಡುತ್ತದೆ. ಪ್ರಸ್ತುತ ಕ್ರಿಯಾತ್ಮಕ ವಲಯಗಳ ಸ್ವರೂಪದಲ್ಲಿ ಪಠ್ಯಕ್ರಮವು ಮೂಲ ಶೈಕ್ಷಣಿಕ ಉದ್ದೇಶಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಹಾಗು ಕಲಿಯುವವರ ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಹಾಗು ಹೆಚ್ಚು ಅವಕಾಶಳನ್ನು ಸೃಷ್ಟಿಸುವ ಕಡೆಗೆ ಗಮನ ಮತ್ತು ವಿನ್ಯಾಸ ಮಾಡಲಾಗುತ್ತಿದೆ.

ಶಿಕ್ಷಕರು ಐಸಿಟಿಯನ್ನು ವಿವಿಧ ಹಂತಗಳಲ್ಲಿ ಅನಾವರಣಗೊಳಿಸುತ್ತಿರುವ ಗುಂಪಿನ ಪ್ರತಿನಿಧಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿಕ್ಷಕರ ಫಠ್ಯಕ್ರಮವು ಶಿಕ್ಷಕರ ಕಲಿಕಾ ಪಗ್ರತಿಯ ವಿವರಣೆ ಮತ್ತು ಶಿಕ್ಷಕರು ತಮ್ಮ ಸಿದ್ದತೆಯನ್ನು ಅಂದಾಜಿಸುವಂತಹ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಅವರನ್ನು ಪರಿಣಿತ ಐಸಿಟಿ ಬಳಕೆದಾರರಾಗಿ ಸಜ್ಜುಗೊಳಿಸುತ್ತದೆ.

ಐ.ಸಿ.ಟಿ ಸೌಲಭ್ಯ ಮತ್ತು ಸಂಪನ್ಮೂಲಗಳ ಲಭ್ಯತೆಯು ಶಾಲೆಗಳ ಗಾತ್ರ, ಮೂಲಭೂತ ಸೌಕರ್ಯಗಳ ಲಭ್ಯತೆ, ವಿದ್ಯುತ್ ಲಭ್ಯತೆ, ಮಕ್ಕಳ ಸಂಖ್ಯೆಯನ್ನು ಆಧರಿಸಿರುತ್ತದೆ. ಆದ್ದರಿಂದ ಮಕ್ಕಳ ಪಠ್ಯಕ್ರಮವನ್ನು 3 ವರ್ಷಗಳ ಅವಧಿಯ 90 ವಾರಗಳ ವಿಸ್ತರಣೆಯ ವಾರಕ್ಕೆ ಮೂರು ತರಗತಿಗಳಿಗೆ ಅನುಗುಣವಾಗಿ ವಿನ್ಯಾಸಮಾಡಲಾಗಿದೆ. ಶಾಲೆಗಳು ಈ ಪಠ್ಯಕ್ರಮವನ್ನು ತನ್ನ 6ನೇ ತರಗತಿಯ ಹಂತದಿಂದಲೇ ಪ್ರಾರಂಭಿಸಬಹುದು. ಯಾವುದೇ ಸಂದರ್ಭದಲ್ಲಿಯೂ ವಿಧ್ಯಾರ್ಥಿಯು ಶಾಲೆಯಿಂದ ಹೊರಗೆ ಹೋಗುವ ಮೊದಲೇ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು. ಐ.ಸಿ.ಟಿ ಪಠ್ಯಕ್ರಮವು ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ. ಅದೇ ರೀತಿ ಶಾಲಾ ಐಚ್ಚಿಕ ವಿಷಯಗಳು ಮತ್ತು NVEQF ನ ವೃತ್ತಿಪರ ಶಿಕ್ಷಣಗಳಂತಹ ಕಾರ್ಯಕ್ರಮಗಳಿಗಿಂತ ವಿಶಿಷ್ಟವಾಗಿರುತ್ತದೆ.

ಈ ಪಠ್ಯಕ್ರಮವೂ ಶಾಲಾ ವ್ಯವಸ್ಥೆಯು ಶಿಕ್ಷಕರು ಮತ್ತು ಮಕ್ಕಳು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯ ಮೂಲಕ ಸಾಮರ್ಥ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಸಾಧ್ಯವಾಗುವಂತಹ ಕೆಲವು ಮಾರ್ಗದರ್ಶಿ ತತ್ವಗಳನ್ನೊಳಗೊಂಡಿದೆ. ಇದು ಕೇವಲ ತಂತ್ರಜ್ಞಾನವನ್ನು ಬಳಸುವುದಕ್ಕೆ ಅಷ್ಟೇ ಸೀಮಿತವಾಗದೇ ಅವರ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ವಿವೇಚನೆಯಿಂದ ತೊಡಗಿಸುವುದಾಗಿದೆ. ಪಠ್ಯಕ್ರಮದ ಅಗತ್ಯತೆಗಳು ಕೇವಲ ನಿರ್ಧಿಷ್ಟ ತಂತ್ರಾಂಶ ಮತ್ತು ಯತ್ರಾಂಶಗಳಾಗಿರುವುದಿಲ್ಲ. ತಂತ್ರಾಂಶವನ್ನು ಕೇವಲ ಕಛೇರಿ ಅನ್ವಯಕಯಗಳಿಗೆ ಮಿತಿಗೊಳಿಸುವುದನ್ನು ರದ್ದುಗೊಳಿಸುವುದು ಕೇವಲ ಶೈಕ್ಷಣಿಕ ಉದ್ದೇಗಳಿಗಾಗಿ ಮಾತ್ರವಲ್ಲದೇ ಕಂಪ್ಯೂಟರ್ ಮತ್ತು ಐ.ಸಿ.ಟಿಗಳಿಂದ ಏನು ಮಹಾ ಸಾಧಿಸಬಹುದು ಎಂಬ ನಿರ್ಲಕ್ಷ ದೃಷ್ಟಿಕೋನವನ್ನು ಕಡಿಮೆಗೊಳಿಸುವುದಾಗಿದೆ. ಇದರಿಂದಾಗಿಯೇ ವಿಶೇಷವಾಗಿ ಶಿಕ್ಷಣಕ್ಕಾಗಿಯೇ ವಿನ್ಯಾಸಗೊಂಡ ವಿವಿಧ ತಂತ್ರಾಂಶ ಅನ್ವಯಕಗಳನ್ನು ಪರಿಚಯಿಸಲಾಗಿದೆ. ಹಕ್ಕಸ್ವಾಮ್ಯ ಹೊಂದಿರುವ ತಂತ್ರಾಂಶಗಳ ಬಳಕೆಯು ವೆಚ್ಚದಾಯಕವಾಗಿರುತ್ತದೆ ಮತ್ತು ಅನುಷ್ಟಾನಗೊಳಿಸಲು ಸೂಕ್ತವಾಗಿರುವುದಿಲ್ಲ. ಆದ್ದರಿಂದ ಈ ಪಠ್ಯಕ್ರಮದಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಬಳಸಲು ಸಲಹೆ ನೀಡಲಾಗಿದೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆಯೂ ತಂತ್ರಾಂಶ ನಕಲು ಮಾಡುವುದನ್ನು ತಡೆಯುತ್ತದೆ ಮತ್ತು ಸ್ಥಳೀಯ ಅಗತ್ಯಗಳಿಗನುಗುಣವಾಗಿ ಗ್ರಾಹಕೀರಣವನ್ನು ಸಕ್ರಿಯಗೊಳಿಸುತ್ತದೆ.

ಈ ಪಠ್ಯಕ್ರಮವೂ ಸೂಕ್ತ ಉತ್ತಮ ಗುಣಮಟ್ಟದ ಅಂತರ್ಜಾಲ ಸಂಪರ್ಕದ ಅಗತ್ಯತೆಯನ್ನು ತಿಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಶಿಕ್ಷಕರಿಗೆ ಅಂತರ್ಜಾಲ ಬಳಕೆಯು ಕಡ್ಡಾಯವಾಗಿರುತ್ತದೆ. ಶೈಕ್ಷಣಿಕ ಸಾಮರ್ಥ್ಯಗಳನ್ನೊಳಗೊಂಡ ಅಂತರ್ಜಾಲ ಸಂಪನ್ಮೂಲಗಳು ಮತ್ತು ಚರ್ಚೆಗಳು ಬಹಳ ಮಹತ್ವದ್ದಾಗಿವೆ. ಹಾಗು ಬೇರೆ ಬೇರೆ ಶಿಕ್ಷಕರು ಹಾಗು ಶಾಲೆಗಳ ನಡುವೆ ಸಂಪರ್ಕ ಸಾಧಿಸುವ ಬಹು ಅವಶ್ಯಕ ಉದ್ದೇಶವನ್ನು ಸಾಧಿಸುತ್ತದೆ. ತುಂಬಾ ಅಗತ್ಯವಾಗಿದೆ. contributing to bridging of divides.


ವಿದ್ಯುನ್ಮಾನ ವಿಷಯವು ಪ್ರಸ್ತುತ ಮತ್ತೊಂದು ಬೋಧನಾ ಸಾಮಗ್ರಿಯಾಗಿ, ಅಷ್ಟೇನು ಪ್ರಮುಖವಲ್ಲದ ಹಾಗು ಬೋದನಾ ಕಲಿಕಾ ಪ್ರಕ್ರಿಯೆಯ ಮೇಲೆ ಮತ್ತು ಶಿಕ್ಷಕರ ಪಾತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅವಲೋಕನಕ್ಕೆ ಸ್ಪಂದಿಸುವಂತೆ ಐಸಿಟಿ ಪಠ್ಯಕ್ರಮ ವಿದ್ಯುನ್ಮಾನ ವಿಷಯ ರಚನೆ ಪ್ರಕ್ರಿಯೆಯಲ್ಲಿ ಶಿಕ್ಷಕರ ಭಾಗವಹಿಸುವಿಕೆಗೆ ಮತ್ತು ಸಹಯೋಜಿತವಾದ ಹಂಚಿಕೆ ಮೂಲಕ ಕ್ಲಿಷ್ಟಕರ ಮೌಲ್ಯಮಾಪನಕ್ಕೆ ಈ ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕೆ ಉದಾಹರಣೆಯಾಗಿದೆ ನೋಡುವುದಾದರೆ, ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಪನ್ಮೂಲ ಸಂಗ್ರಹಾಲಯಗಳ (NROER) ಪಠ್ಯಕ್ರಮಗಳು ಶಿಕ್ಷಕರ ಸಹಯೋಜಿತ ವೇದಿಕೆಗಳಲ್ಲಿ ಮೌಲ್ಯಮಾಪನಗೊಂಡ ಸಂಪನ್ಮೂಲಗಳ ರಚನೆ/ ಹಂಚಿಕೆಗಳ ಮೂಲಕ ಶಿಕ್ಷಕರ ಭಾಗವಹಿಸುವಿಕೆಯನ್ನು ಪ್ರೊತ್ಸಾಹಿಸುತ್ತವೆ.

ಮಾರ್ಗದರ್ಶಿ ತತ್ವಗಳು

  1. ಪಠ್ಯಕ್ರಮವು ವಿಸ್ತಾರವಾದ ತಂತ್ರಜ್ಞಾನ ಅನ್ವಯಕಗಳ ಲಕ್ಷಣಗಳನ್ನೊಳಗೊಂಡ ಮತ್ತು ಶೈಕ್ಷಣಿಕ ಉದ್ದೇಶವನ್ನೊಂದಿರುವ ಸಾರ್ವತ್ರಿಕ ಪಠ್ಯಕ್ರಮವಾಗಿರಬೇಕು.
  2. ಪಠ್ಯಕ್ರಮದ ಉದ್ದೇಶವು ವಿವಿಧ ಯಂತ್ರಾಂಶ ಮತ್ತು ತಂತ್ರಾಂಶವನ್ನು ಬಳಸಿಕೊಂಡು ಸಂಪನ್ಮೂಲ ರಚಿಸುವುದನ್ನು ಕಲಿಯುವುದನ್ನು ಒಳಗೊಂಡಿರುವ ಸಂಯೋಜಿತ ಕಲಿಕೆಯಾಗಿರಬೇಕು. ಐ.ಸಿ.ಟಿ ಸಾಕ್ಷರತೆಯು, ಕಲಿಕಾರ್ಥಿಯು ಪರಿಕರಗಳು ಮತ್ತು ಸಾಧನಗಳ ಮೇಲೆ ನಿಯಂತ್ರಣ ಹೊಂದುವ ಸಾಮರ್ಥ್ಯ ಮತ್ತು ಜ್ಞಾನ ಹೊಂದಿರುವುದು ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದು ಕಲಿಕೆಯ ಹೆಚ್ಚುವರಿ ಫಲಿತಾಂಶವಾಗಿದೆ.
  3. ಪಠ್ಯಕ್ರಮವು ಪ್ರಯಾಯೋಗಿಕೆ ಕಲಿಕೆಗೆ ಮತ್ತು ಐ.ಸಿ.ಟಿ ಅನ್ವಯಕಗಳ ಮುಕ್ತ ಪರಿಶೋಧನೆಗೆ ಪೂರಕವಾದ ಅವಕಾಶವನ್ನು ಒದಗಿಸುವಂತಿರಬೇಕು. ಕಲಿಕೆಯನ್ನು ಹಂಚಿಕೊಳ್ಳುವುದು ಮತ್ತು ಕಲಿಕೆಯನ್ನು ಮೌಲ್ಯಮಾಪನ ಕಾರ್ಯತಂತ್ರದಲ್ಲಿ ಒಳಗೊಂಡಿರಬೇಕು.
  4. ಸಾಮಾಜಿಕ, ಸೈದ್ದಾಂತಿಕ ಮತ್ತು ಶಾಸನಬದ್ದವಾದ ಐ.ಸಿ.ಟಿ ಬಳಕೆಯ ಅಂಶಗಳ ಬಗೆಗಿನ ಬಹಳ ವಿಸ್ತಾರವಾದ ಅರಿವು ಆರೋಗ್ಯಕರವಾದ ಐ.ಸಿ.ಟಿ ವಾತಾವರಣಕ್ಕೆ ಅತ್ಯಗತ್ಯವಾಗಿರುತ್ತದೆ. ತಂತ್ರಾಂಶ ನಕಲು ಮತ್ತು ಕೃತಿಚೌರ್ಯಗಳು ಸ್ಪಷ್ಟವಾಗಿ ವಿರೋದಿಸಲ್ಪಡಬೇಕು. ಮೂಲ ವಿಷಯದ ರಚನೆಯು, ರಚನೆಯಲ್ಲಿ ಹೆಮ್ಮೆಯನ್ನುಂಟು ಮಾಡುತ್ತದೆ ಹಾಗು ಇತರರಿಮದ ಪ್ರಸಂಶಿಲ್ಪಡುತ್ತದೆ ಹಾಗು ಈ ಮೂಲಕ ಸಂಪನ್ಮೂಲ ಕೊಡುಗೆಗಳನ್ನು ಪ್ರೋತ್ಸಾಹಿಸಬೇಕು. ಸುರಕ್ಷಿತ ಮತ್ತು ಭದ್ರತೆಯ ಐ.ಸಿ.ಟಿ ಬಳಕೆಯನ್ನು ಸಹ ಪ್ರೋತ್ಸಾಹಿಸಬೇಕು.
  5. ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ ಗರಿಷ್ಟ ಪರಿಣಾಮವನ್ನು ಸಾಧಿಸುವುದು. ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು.

ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ

ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. . ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ.

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ವ್ಯಾಖ್ಯಾನಿಸಿರುವ ಸಾಮರ್ಥ್ಯಗಳು

'ಹಂತ 1: ಮೂಲ ಹಂತ'
ಕಂಪ್ಯೂಟರ್‌ ಬಗೆಗೆ ಮೂಲ ಕಲಿಕೆ ಮತ್ತು ಟೂಲ್ಸ್ ಮತ್ತು ತಂತ್ರಜ್ಞಾನದ ಮೂಲ ಬಳಕೆ- ಕಂಪ್ಯೂಟರ್ ಆಪರೇಟ್‌ ಮಾಡುವುದು, ಸಂಗ್ರಹ, ಹಂಚಿಕೆ ಮತ್ತು ದಾಖಲೆ ನಿರ್ವಹಣೆ ಮಾಡುವುದು. ಬೇಸಿಕ್ ವರ್ಡ್‌ ಮತ್ತು ದತ್ತಾಂಶ ಪ್ರೊಸೆಸಿಂಗ್ ಕಲಿಯುವುದು, ಸಂಪರ್ಕ, ಸಂಗ್ರಹ, ಇನ್‌ಪುಟ್ ಮತ್ತು ಔಟ್‌ಪುಟ್‌ ಡಿವೈಸ್ ಗಳನ್ನು ಕಲಿಯಲು ಕಂಪ್ಯೂಟರ್ ಬಳಸುವುದು. ಇಂಟರ್‌ನೆಟ್‌ ಗೆ ಸಂಪರ್ಕ ಹೊಂದುವುದು, ಇಮೇಲ್ ಬಳಸುವುದು ಮತ್ತು ವೆಬ್‌ ಹುಡುಕಾಟ, ಸರ್ಚ್‌ ಎಂಜಿನ್ ಬಳಕೆ, ಕಂಪ್ಯೂಟರ್‌ ನ್ನು ಅಪಡೇಟ್‌ ಮಾಡುವುದು ಮತ್ತು ಸುರಕ್ಷಿತವಾಗಿಡುವುದು, ಹೊರಗಿನಿಂದ ಸಂಪರ್ಕಿತಗೊಂಡ ಡಿವೈಸ್‌ಗಳನ್ನು ಬಳಸುವುದು ( ಉದಾ; ಸೌಂಡ್‌ರೆಕಾರ್ಡರ್, ಡಿಜಿಟಲ್ ಕ್ಯಾಮೆರಾ, ಸ್ಕ್ಯಾನರ್ ). ಸಂಪರ್ಕಗೊಳಿಸುವುದು, ಸುರಕ್ಷಿತವಾಗಿ ಸಂಪರ್ಕ ಕಡಿತಗೊಳಿಸುವುದು, ನಿರ್ವಹಿಸುವುದು ಮತ್ತು ಡಿಜಿಟಲ್ ಡಿವೈಸ್‌ಗಳನ್ನು ಸರಿಪಡಿಸುವುದು.

'ಹಂತ 2 : ಮಧ್ಯಂತರ'
ವಿವಿಧ ಡಿಜಿಟಲ್ ಡಿವೈಸ್‌ಗಳು ಮತ್ತು ವಿವಿಧ ತಂತ್ರಾಂಶಗಳನ್ನು ಬಳಸಿಕೊಂಡು ವಿಷಯ ರಚನೆ ಮತ್ತು ನಿರ್ವಹಿಸುವುದು. ವೆಬ್‌ಸೈಟ್‌ಗಳು ಮತ್ತು ಸರ್ಚ್ ಎಂಜಿನ್‌ಗಳ ಮೂಲಕ ವಿಷಯ ರಚನೆ, ಹಂಚಿಕೆ ಮತ್ತು ನಿರ್ವಹಣೆ. ತಂತ್ರಾಂಶಗಳನ್ನು ಇನ್‌ಸ್ಟಾಲ್‌ ಮತ್ತು ಅನ್‌ಇನ್‌ಸ್ಟಾಲ್‌ ಮಾಡುವುದು, ಸಾಧಾರಣಾ ತಂತ್ರಾಂಶ ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು.

'ಹಂತ 3 : ಮುಂದುವರೆದ - ಉನ್ನತ ಮಟ್'ಟ
ಸ್ವಕಲಿಕೆಗಾಗಿ ಹಾಗು ಸ್ವಕಲಿಕೆಯನ್ನು ಪರಿಣಾಮಕಾರಿಗೊಳಿಸಲು ವಿವಿಧ ತಂತ್ರಾಂಶದ ಅನ್ವಯಕಗಳನ್ನು ಬಳಸುವುದು. ದತ್ತಾಂಶ ಬೇಸ್ ಅನ್ವಯಕಗಳು, ದತ್ತಾಂಶ ಬೇಸ್‌ಗಳ ವಿಶ್ಲೇಷಣೆ ಮತ್ತು ಸಮಸ್ಯೆ ಬಿಡಿಸುವಿಕೆ, ಸಂಗ್ರಹ, ವಿನ್ಯಾಸ, ಗ್ರಾಫಿಕಲ್ ಮತ್ತು ಧ್ವನಿ ಸಂವಹನಗಳ ಬಳಕೆ, ಸಂಶೋಧನೆ ಕೈಗೊಳ್ಳುವುದು, ಅಂತರ್ಜಾಲಾಧಾರಿತ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರೋಜೆಕ್ಟ್‌ ತಯಾರಿ, ದಾಖಲೀಖರಣ ಮತ್ತು ಪ್ರಸ್ತುತಿಯಲ್ಲಿ ಐ.ಸಿ.ಟಿ ಬಳಕೆ, ಸಹಯೋಜಿತ ಮತ್ತು ಸಹವರ್ತಿ ಕಲಿಕೆಗಾಗಿ ಅಂತರ್ಜಾಲಾಧಾರಿತ ವೇದಿಕೆಗಳನ್ನು ರಚಿಸುವುದು ಮತ್ತು ಭಾಗವಹಿಸುವುದು. ಸುರಕ್ಷಿತ ಕಂಪ್ಯೂಟರ್‌ ಬಳಕೆ, ಕಾಪಿರೈಟ್ಸ್, ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಹೊಂದಿರುವುದು, ಐ.ಸಿ.ಟಿ ಸಂಪನ್ಮೂಲಗಳನ್ನು ಸುರಕ್ಷಿತವಾಗಿಡಲು ಅವಶ್ಯಕ ವಿಧಾನಗಳನ್ನು ಅನುಸರಿಸುವುದು.

ಪಠ್ಯಕ್ರಮದಲ್ಲಿನ ವಿಷಯವು ಈ ಮೇಲಿನ ವಿವಿಧ ಹಂತದ ಸಾಮರ್ಥ್ಯಗಳನ್ನು ಓಟ್ಟಿಗೆ ತಲುಪಲು ಸಾದ್ಯವಾಗುವಂತಹ ಚಟುವಟಿಕೆಗಳನ್ನು ಒಳಗೊಂಡಿದೆ


ಕಲಿಕೆಯ ಆಧಾರಗಳು

ಕಲಿಕೆಯ ಆಧಾರಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಶಿಕ್ಷಣದಲ್ಲಿ ಸೂಕ್ತವಾಗಿ ಬಳಸಬಹುದಾದ ತಂತ್ರಜ್ಞಾನವನ್ನು ನಿರ್ವಹಿಸುವ ಸಾಮಾರ್ಥ್ಯಗಳನ್ನು ಅಭಿವೃದ್ದಿಪಡಿಸುತ್ತವೆ. ಐ.ಸಿ.ಟಿ ಮೂಲ ಸೌಕರ್ಯವನ್ನು ನಿರ್ವಹಣೆ ಮಾಡುವುದು, ಶೈಕ್ಷಣಿಕವಾಗಿ ತಂತ್ರಜ್ಞಾನ ಬಳಕೆಯ ಒಳನೋಟವನ್ನು ಸ್ವಾಧೀನಪಡಿಸಿಕೊಳ್ಳಲಿ ಇರುವ ಮಿತಿಗಳನ್ನು ತೆರವುಗೊಳಿಸುವಲ್ಲಿ ತಂತ್ರಜ್ಞಾನ ಬಳಸುವುದು. ಆರು ಕಲಿಕಾ ಆಧಾರಗಳನ್ನು ಇಲ್ಲಿ ನೋಡಬಹುದು:

  1. ಪ್ರಪಂಚದೊಡನೆ ಸಂಪರ್ಕ
  2. ಪರಸ್ಪರರಲ್ಲಿ ಸಂಪರ್ಕ
  3. ಐ.ಸಿ.ಟಿ ಮೂಲಕ ರಚನೆ
  4. ಐ.ಸಿ.ಟಿ ಮೂಲಕ ಪರಸ್ಪರ ಪ್ರತಿಕ್ರಿಯೆ
  5. ಶಿಕ್ಷಣದಲ್ಲಿನ ಸಾಧ್ಯತೆಗಳು
  6. ವಿಂಗಡಣೆಗಳ ನಡುವೆ ಸಂಪರ್ಕ ಬೆಸೆಯುವುದು & ಗುರಿ ತಲುಪುವುದು

ಪ್ರಪಂಚದೊಡನೆ ಸಂಪರ್ಕ

ಐ.ಸಿ.ಟಿ ಪರಿಕರಗಳು ಎಲ್ಲಕಡೆಯೂ ಹಾಗು ಎಲ್ಲ ಸಮಯದಲ್ಲಿಯೂ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಬಳಸಲು ಸಾಧ್ಯವಾಗಿಸುತ್ತವೆ. ಕೊಟ್ಟಿರುವ ಅಂತರ್ಜಾಲ ಸಂಪರ್ಕದ ಪ್ರಸರಣದಲ್ಲಿ ಅಂತರ್ಜಾಲ ಬಳಕೆಯಿಂದ ಬೋಧನಾ-ಕಲಿಕಾ ಪ್ರಕ್ರಿಯೆಗೆ ಬಳಸಬಹುದಾದಂತಹ ವಿವಿಧ ಸಂಪನ್ಮೂಲ ಮತ್ತು ಮಾಹಿತಿಗಳನ್ನು ಬಳಸಬಹುದಾದ ಸಾಧ್ಯತೆಗಳ ಬಗೆಗಗೆ ಶಿಕ್ಷಕರು ಪಡೆದುಕೊಳ್ಳಬಹುದಾದ ಅಧ್ಬುತವಾದ ಸೌಲಭ್ಯಗಳನ್ನು ಈ ಪಠ್ಯಕ್ರಮವು ಗುರುತಿಸುತ್ತದೆ. ಇದು ಕೇವಲ ಶಿಕ್ಷಕರು ಬಳಸುವ ವಿವಿಧ ತಂತ್ರಗಳನ್ನಷ್ಟೇ ಹೆಚ್ಚಿಸುವುದಿಲ್ಲ, ಜೊತೆಗೆ ಮಕ್ಕಳ ಕಲಿಕೆಯಲ್ಲಿಯೂ ವ್ಯತ್ಯಾಸವನ್ನು ಮೂಡಿಸುತ್ತದೆ. ಸಂಪನ್ಮೂಲಗಳ ಗಂಭೀರ ವಿಶ್ಲೇಷಣೆ ಮತ್ತು ಬಳಕೆ ಮಾಡುವ ಸಾಮರ್ಥ್ಯ ಶಿಕ್ಷಕರ ವೃತ್ತಿಪರ ಬೆಳವಣಿಗೆಯಲ್ಲಿ ಬಹಳ ಅಶ್ಯಕವಾದ ಅಂಶಬವಾಗಿದೆ. ಅಂತರ್ಜಾಲದಲ್ಲಿ ದೊರೆಯುವಂತಹ ಶಿಕ್ಷಕರ ಸ್ವಕಲಿಕೆಗೆ ಹಾಗು ಬೋಧನಾ ಪ್ರಕ್ರಿಯೆಗೆ ಬಳಸಬಹುದಾದ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಅರಿವು ಹೊಂದುವುದು, ಮಾಹಿತಿ ಮತ್ತು ಸಂಪನ್ಮೂಲಗಳ ಕ್ಲಿಷ್ಟ ಮೌಲ್ಯಮಾಪನ ಮಾಡುವುದು, ಸಂಪನ್ಮೂಲಗಳ ಸುರಕ್ಷಿತ, ನ್ಯಾಯಸಮ್ಮತ, ನೈತಿಕ ಮತ್ತು ಉತ್ಪಾದಕ ಬಳಕೆ, ವರ್ಚುವಲ್ ಮಾದ್ಯಮದಿಂದಾಗಬಹುದಾದ ಹಾನಿಕಾರಕ ಪರಿಣಾಮಗಳಿಂದ ತನ್ನನ್ನು ಮತ್ತು ಇತರರನ್ನು ಸುರಕ್ಷಿತಗೊಳಿಸುವುದು ಪ್ರತಿಯೊಬ್ಬ ಶಿಕ್ಷಕರ ಮೂಲ ಕಲಿಕೆಯಾಗಿದೆ. ಆದ್ದರಿಂದ ಈ ಕಲಿಕಾ ಆಧಾರವು ಶಿಕ್ಷಕರಿಗೆ ಅಂತರ್ಜಾಲ ಮತ್ತು ಇದರ ಸಂಪನ್ಮೂಲಗಳನ್ನು ಶಿಕ್ಷಕರಿಗೆ ಪರಿಚಯಿಸುತ್ತದೆ. ಬ್ರೌಸರ್ ಬಳಕೆ ಮತ್ತು ಸರ್ಚ್‌ ಎಂಜಿನ್ ಬಳಕೆ ಮಾಡುವುದು: ಸೂಕ್ತವಾದ ಅಂತರ್ಜಾಲ ಪುಟಗಳನ್ನು ಆಯ್ಕೆ ಮಾಡಿಕೊಳ್ಳುವುದು, ಮಾಹಿತಿ ಮತ್ತು ಸಂಪನ್ಮೂಲಗಳನ್ನು ಹುಡುಕುವುದು ಮತ್ತು ಪಡೆದುಕೊಳ್ಳುವುದು: ವಿವಿಧ ರೀತಿಯ ಅಂತರ್ಜಾಲ ಪುಟಗಳನ್ನು ಬಳಸುವುದು ಮತ್ತು ಚರ್ಚಿಸುವುದು; ಅಂತರ್ಜಾಲ ಪುಟ ಹುಡುಕುವುದು, ಬುಕ್‌ಮಾರ್ಕ್‌ ಮಾಡಿಕೊಳ್ಳುವುದು, ಸೇವೆಗಳಿಗೆ ಮತ್ತು ಉತ್ಪನ್ನಗಳಿಗೆ ಚಂದಾದಾರರಾಗುವುದು ಪಡೆಯುವುದು; ಮಾಹಿತಿ ಮತ್ತು ಸಂಪನ್ಮೂಲಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳುವುದು; ವಿವಿಧ ಪಾರ್ಮಾಟ್‌ಗಳು ಮತ್ತು ಟೆಕ್ನಿಕ್‌ಗಳ ಬಗ್ಗೆ ತಿಳಿಯುವುದು; ಕಾಪಿರೈಟ್‌ಗಳು ಮತ್ತು ಸುರಕ್ಷತಾ ವಿಷಯಗಳು; ಮಾಹಿತಿಗಳನ್ನು ಅಪ್‌ಲೋಡ್‌ ಮಾಡುವುದು ಮತ್ತು ಹಂಚಿಕೊಳ್ಳುವುದು; ಅಂತರ್ಜಾಲದ ಮೂಲಕ ಬೋಧನೆ ಮಾಡುವುದು.

ಪರಸ್ಪರ ಸಂಪರ್ಕ

ಜನರು ಪರಸ್ಪರ ಸಂಪರ್ಕದಲ್ಲಿರಲು ಸಾಧ್ಯವಾಗುವಂತಹ ವಿವಿಧ ಮಾರ್ಗಗಳನ್ನು ಐ.ಸಿ.ಟಿಯೂ ಸೂಚಿಸುತ್ತದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಹಯೋಜಿತ ಚರ್ಚಾ ವೇದಿಕೆಗಳನ್ನು ಸೃಷ್ಟಿಸಲು ಪರಸ್ಪರ ಚರ್ಚೆಗಳು ಸಮಕಾಲೀನವಾಗಿ ಹಾಗು ಅಸಮಕಾಲೀನವಾಗಿಯೂ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಕಡಿಮೆ ಸಮಯದಲ್ಲಿ ಸ್ನೇಹಿತರೊಂದಿಗೆ ತ್ವರಿತವಾಗಿ ಸಂವಹನ ಸಾಧಿಸಲು ಸಾಧ್ಯವಾಗುತ್ತದೆ. ಇದು ಶಿಕ್ಷಕರ ಬೇರ್ಪಡುವಿಕೆಯನ್ನು ಮುರಿದು ಪರಸ್ಪರರಲ್ಲಿ ವೃತ್ತಿಪರ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತದೆ. ವಿವಿಧ ಸಂವಹನ ಸಾಧ್ಯತೆಗಳ ಅರಿವನ್ನು ಹೊಂದುವುದು, ವೃತ್ತಿಪರ ಸಮುದಾಯಗಳಲ್ಲಿ ಆಸಕ್ತಿ ಹೊಂದುವುದು ಮತ್ತು ಭಾಗವಹಿಸುವುದು ಮತ್ತು ಸಂವಹನದ ಹೊಸ ಹೊಸ ವಿಧಾನಗಳ ಜೊತೆ ಜೊತೆಗೆ ಶಿಕ್ಷಕರನ್ನು ಕೊಂಡೊಯ್ಯುವುದು, ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಶಿಕ್ಷಕರನ್ನು ವಿಲೀನಗೊಳಿಸುವುದು ಮತ್ತು ಶಿಕ್ಷಕರಲ್ಲಿ ಸ್ವಂತ ಬದಲಾವಣೆಯ ಬಗ್ಗೆ ಹಾಗು ಶೈಕ್ಷಣಿಕ ಪ್ರಯೋಗಗಳ ಬೆಳವಣಿಗೆಯ ಬಗ್ಗೆ ಶಿಕ್ಷಕರಿಗೆ ತಿಳಿಸುವುದು. ಇಮೇಲ್ ಐಡಿ ರಚನೆಯ ಬಗ್ಗೆ ತಿಳಿಯುವುದು , ಇಮೆಲ್ ಕಳುಹಿಸುವುದು ಮತ್ತು ಪಡೆದುಕೊಳ್ಳುವುದು; ಸಂವಹನಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಣೆ ಮಾಡುವುದು. ಲಗತ್ತಿಸಿರುವ ಕಡತಗಳ ಬಗ್ಗೆ ತಿಳಿಯುವುದು, ಡೌನ್‌ಲೋಡ್‌ ಮಾಡುವುದು; ಅಡ್ರೆಸ್‌ಬುಕ್‌ ನಿರ್ವಹಣೆ ಮಾಡುವುದು; ಇಮೇಲ್ ಗುಂಪುಗಳ ರಚನೆ ಮತ್ತು ಸೇರುವುದು; ಚರ್ಚಾವೇದಿಕೆಗಳಲ್ಲಿ, ವಿಕಿ ಆಡಿಯೋ , ವೀಡಿಯೋ ಸಮಾವೇಶಗಳಲ್ಲಿ, ಸಮಾಜಿಕ ವೇದಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ , ಮೈಕ್ರೋಬ್ಲಾಗಿಂಗ್ ಭಾಗವಹಿಸುವುದು; ಸೈಬರ್ ನಕಲುಗಳ ಮತ್ತು ಇತರೆ ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಹೊಂದಿರುವುದು ಶಿಕ್ಷಕರ ಬಹಳ ಮುಖ್ಯಭಾಗವಾಗಿದೆ.

ಐ.ಸಿ.ಟಿ ಮೂಲಕ ರಚನೆ

ಐ.ಸಿ.ಟಿ ಪರಿಕರಗಳು ಸಂಪನ್ಮೂಲ ರಚನೆ ಮತ್ತು ಹಂಚಿಕೆಯ ಅವಕಾಶಗಳಾಗಿವೆ ಆದರೆ ಇವೇ ಅಂತಿಮವಾಗಿಲ್ಲ. ಐ.ಸಿ.ಟಿ ಯು ಟೆಕ್ಸ್ಟ್, ಗ್ರಾಫಿಕ್, ಆನಿಮೇಶನ್, ಆಡಿಯೋ ಮತ್ತು ವೀಡಿಯೋಗಳಂತಹ ವಿವಿಧ ರೂಪದ ಮಾಧ್ಯಮಗಳನ್ನು ಒಳಗೊಂಡಿದ್ದು ಈ ಮೂಲಕ ಪರಿಣಾಮಕಾರಿ ಸಂವಹನ ಸಾಧ್ಯವಾಗಿದೆ ಮತ್ತು ಐ.ಸಿ.ಟಿ ಯೊಡನೆ ಸಂಭಾಷಿಸಲು ಸಾಧ್ಯವಾಗುವಂತಹ ಸುಲಭವಾದ ವಿಧಾನಗಳನ್ನು ಅನ್ವೇಷಿಸಲಾಗಿದೆ. ಈ ಎಲ್ಲಾ ವಿಧಾನಗಳು ಕಲಿಕೆಯ ಅವಕಾಶಗಳನ್ನು ಅಗಾಧವಾಗಿ ವಿಸ್ತರಿಸಿವೆ. ತಂತ್ರಾಂಶ ಅನ್ವಯಕಗಳು ಮತ್ತು ಯಂತ್ರಾಂಶ ಪರಿಕರಗಳು ಕಲಿಕಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ. ಶಿಕ್ಷಕರಿಗೆ ಪರಿಚಿತವಿರುವ ಐ.ಸಿ.ಟಿ ಪರಿಕರಗಳ, ಡಿವೈಸ್‌ಗಳು, ತಂತ್ರಾಂಶ ಅನ್ವಯಕಗಳು ಮತ್ತು ವಿವಿಧ ಕಾರ್ಯತಂತ್ರಗಳು ಶಿಕ್ಷಕರು ತಮ್ಮ ಕಲ್ಪನಾಶಕ್ತಿಯನ್ನು ಅಭಿವೃದ್ದಿಪಡಿಸುಕೊಳ್ಳುವ ಅವಕಾಶಗಳನ್ನು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶಗಳನ್ನು ವಿಸ್ತರಿಸುತ್ತದೆ. ಕಂಪ್ಯೂಟರ್‌ನ್ನು ಕೇವಲ ಮಾಹಿತಿ ವಿನಿಮಯ ಮಾಡಿಕೊಳ್ಳುವ ಪರಿಕರವಾಗಿ ಪರಿಗಣಿಸಿದಾಗ ಇದನ್ನು ಬೊಧನಾ-ಕಲಿಕಾ ಪ್ರಕ್ರಿಯೆಗೆ ಬಳಸುವುದು ಕಡಿಮೆಯಾಗುತ್ತಿದೆ. ವಿವಿಧ ಬಗೆಯ ಪರಿಕರಗಳು ಮತ್ತು ಡಿವೈಸ್‌ಗಳ ಬಳಕೆಯಿಂದಾಗಿ ಸಂವಹನ ಕೌಶಗಳು ಬೆಳವಣಿಗೆಯಾಗುತ್ತವೆ. ಬೊಧನೆ-ಕಲಿಕಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ವೈಶಿಷ್ಟ್ಯಗಳನ್ನು ಹತೋಟಿಗೆ ತರುವ ಸಾಮರ್ಥ್ಯ ಬೆಳವಣಿಗೆಯಾಗುತ್ತದೆ ಹಾಗು ಇದು ವಿದ್ಯಾರ್ಥಿಗಳನ್ನು ತೊಡಗಿಸುವಂತಹ ಹಾಗು ಕಲಿಯುವಂತಹ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಚಿತ್ರಗಳು ಮತ್ತು ದಾಖಲೆಗಳ ರಚನೆ, ತಿದ್ದುಪಡಿ ಮತ್ತು ನಿರ್ವಹಣೆ; ಸಂವಹನದಲ್ಲಿ ಇವುಗಳ ಬಳಕೆ; ದತ್ತಾಂಶ ಸಂಗ್ರಹಿಸುವುದು ಮತ್ತು ಒಟ್ಟುಗೂಡಿಸಿ ಮಂಡನೆ ಮಾಡುವುದು; ಉತ್ತಮವಾದ ಸಂವಹನ ಮಾದ್ಯಮ ರಚನೆಗಾಗಿ ಆಡಿಯೋ ವೀಡಿಯೋ ಬಳಸುವುದು. ಪ್ರೊಗ್ರಾಮಿಂಗ್ ಕಲಿಯುವುದು ಮತ್ತು ಡಿವೈಸ್‌ಗಳನ್ನು & ಪ್ರಕ್ರಿಯೆಗಳನ್ನು ನಿಯಂತ್ರಿಸುವುದು ಶಿಕ್ಷಕರಿಗೆ ಬಹಳ ಮುಖ್ಯವಾಗಿರುತ್ತದೆ.

ಐ.ಸಿ.ಟಿ ಮೂಲಕ ಪರಸ್ಪರ ಚರ್ಚೆ

ಐ.ಸಿ.ಟಿ ಯು ಬಹಳ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಡಿವೈಸ್‌ಗಳ ವಿಧಗಳು ಮತ್ತು ಇದರ ಆಪರೇಟಿಂಗ್ ಪ್ರೊಸೆಸ್‌ಗಳು, ಉದ್ದೇಶಪೂರಕವಾಗಿ ನಿಯೋಜನೆಗೊಂಡ ಪರಿಕರಗಳು, ಐ.ಸಿ.ಟಿಯ ಕಲಿಕಾ ಅಗತ್ಯತೆಯನ್ನು ಯಾವಾಗಲೂ ವಿಸ್ತರಿಸುತ್ತಲೇ ಇರುತ್ತದೆ. ಈಗಿದ್ದಾಗ ಕಂಪ್ಯೂಟರ್ ದಿನದಿನದಿಂದ ದಿನಕ್ಕೆ ಹೊಸ ಹೊಸ ಸಂಕೀರ್ಣವಾದ ಕೆಲಸಗಳನ್ನು ಸುಲಭಗೊಳಿಸುತ್ತಿದೆ. ಕಮಾಂಡ್‌ ಲೈನ್ ಇಂಟರ್‌ಫೇಸ್ ನಿಂದ ಪ್ರಾರಂಭಿಸಿದ ದಿನದಿಂದ ಆಪ್‌ಗಳ ಆಧಾರಿತ ಟಚ್‌ಸ್ಕ್ರೀನ್ ಇಂಟರ್‌ಪೇಸ್‌ ವರೆಗೆ ಬಂದಿರುವ ಕಂಪ್ಯೂಟರ್ ಬಹಳ ಉತ್ಪನ್ನದಾಯಕವಾಗಿದೆ. ಬಹಳಷ್ಟು ಉಪಯುಕ್ತವಾದ ಅನ್ವಯಕಗಳು ದೊರಕುತ್ತಿವೆ ಹಾಗು ವಿಶೇಷವಾಗಿ ಸಮಾನ್ಯಜನರ ದೈನಂದಿನ ಜೀವನಕ್ಕೆ ಅನುಕೂಲಕರವಾದ ಅನ್ವಯಕಗಳು ದೊರೆಯುತ್ತಿವೆ.

ಬೋಧನೆ ಮತ್ತು ಕಲಿಕೆಯ ಅವಕಾಶಗಳನ್ನು ಗುರುತಿಸಲು ಸಹಾಕಯವಾಗಲು ಲಭ್ಯವಿರುವ ಐ.ಸಿ.ಟಿ ಪರಿಕರಗಳ ವ್ಯಾಪ್ತಿಯ ಬಗ್ಗೆ ಮತ್ತು ಐ.ಸಿ.ಟಿ ವ್ಯವಸ್ಥೆಯು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲಾಗುತ್ತಿದೆ. ಶಿಕ್ಷಣಕ್ಕೆ ಸೂಕ್ತವಾದ ಪರಿಕರವನ್ನು ಆಯ್ಕೆಮಾಡಿಕೊಳ್ಳುವಲ್ಲಿ ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ಕಂಪ್ಯೂಟರ್ ಎಂಬುದು ಪ್ರಸ್ತುತ ದಿನಗಳಲ್ಲಿ ಕೇವಲ ಕ್ಯಾಲ್ಕುಲೇಟರ್ ಆಗಿ ಉಳಿದಿಲ್ಲ, ಬದಲಾಗಿ ಬಹಳ ಸಮಗ್ರವಾದ ಸಂವಹನ ಮಾದ್ಯಮವಾಗಿದೆ. ನಿರೀಕ್ಷಿತವಾಗಿಯೇ, ಇದು ಹೆಚ್ಚು ಕಾರ್ಯಗತವಾದಂತೆಯೇ ಹೆಚ್ಚು ಸಂಕೀರ್ಣವೂ ಆಗಿದೆ. ತಂತ್ರಜ್ಞಾನದಿಂದಾಗಿ ಸ್ವತಂತ್ರವಾಗಿ ಭಾಗವಹಿಸುವಿಕೆಯ ಮಾರ್ಗಗಳು ಹೆಚ್ಚಾಗಿವೆ ಹಾಗು ವಿವಿಧ ವೈವಿಧ್ಯತೆಗಳನ್ನು ಸೃಷ್ಟಿಯ ಮೂಲಕ ಯಂತ್ರಾಂಶ ಮತ್ತು ತಂತ್ರಾಂಶಗಳು ಕೆಲವು ಸಾಧನೆಗಳನ್ನು ಮಾಡಿವೆ. ತಂತ್ರಜ್ಞಾನವನ್ನು ಜೊತೆಜೊತೆಯಲ್ಲಿಯೇ ತೆಗೆದುಕೊಂಡು ಹೋಗುವುದು ಒಂದು ಸವಾಲಾಗಿದೆ. ಇದೇ ಸಮಯದಲ್ಲಿ ಪ್ರತಿಯೊಂದು ಹೊಸ ಪರಿಕರಗಳನ್ನು ಒಂದು ಸಾಂಪ್ರದಾಯಕ ರೀತಿಯಲ್ಲಿ ಕಲಿಯುವುದು ಫಲಪ್ರದವಾಗಿಲ್ಲ. ಸಮಸ್ಯೆಗಳನ್ನು ಬಗೆಗಹರಿಸುವುದು ಮತ್ತು ಐ.ಸಿ.ಟಿ ಬಗೆಗಿನ ಸಮಸ್ಯೆಗಳ ಮೇಲೇಯೇ ಕಾರ್ಯನಿರ್ವಹಸಿವುದು, ಐ.ಸಿ.ಟಿಯ ದಕ್ಷ ಹಾಗು ಸುರಕ್ಷಿತ ಕಾರ್ಯನಿರ್ವಹಿಸುವ ಜ್ಞಾನದ ಜೊತೆಗೆ ಐ.ಸಿ.ಟಿ ಪರಿಕರಗಳು ಮತ್ತು ಸಾಧನಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗೆಗಿನ ವಿಸ್ತಾರವಾದ ಪರಿಕಲ್ಪನಾತ್ಮಕ ಅರ್ಥೈಸುವಿಕೆಯು ಮುಖ್ಯವಾದ ಗುರಿಯಾಗಿದೆ. ಇನ್‌ಪುಟ್‌ ಮತ್ತು ಔಟ್‌ಪುಟ್‌ ಡಿವೈಸ್‌ಗಳ ಸಂಪರ್ಕಿಸುವುದು, ಪ್ರಿಂಟರ್, ಸ್ಕಾನರ್, ವೆಬ್‌ಕ್ಯಾಮ್‌, ಡಿಜಿಟಲ್ ಕ್ಯಾಮೆರಾ, ಸೌಂಡ್ ರೆಕಾರ್ಡರ್, ಪ್ರೊಜೆಕ್ಟರ್, ಹೆಡ್‌ಪೋನ್, ಸ್ಟೋರೇಜ್ ಡಿವೈಸ್ ಮತ್ತು ಆಪ್ಟಿಕಲ್ ಡಿಸ್ಕ್‌ಗಳ ಬಳಕೆ, ಡಿವೈಸ್‌ಗಳನ್ನು ಮೌಂಟ್‌ ಮತ್ತು ಅನ್‌ಮೌಂಟ್‌ ಮಾಡುವುದು, ಇಂಟರ್ನೆಟ್‌ ಸಂಪರ್ಕಹೊಂದುವುದು- ಮೋಡೆಮ್, ದತ್ತಾಂಶ ಕಾರ್ಡು, ವೈ-ಪೈ, ಲ್ಯಾನ್, ಬ್ಯಾಂಡ್‌ವಿಡ್ತ್ ಮತ್ತು ಸಂಪರ್ಕದ ವೇಗದ ಬಗ್ಗೆ ತಿಳಿಯುವುದು. ತಂತ್ರಾಂಶ ಅನುಸ್ಥಾಪನೆ ಮಾಡುವುದು, ವಿವಿಧ ಆಪರೇಟಿಂಗ್ ಸಿಸ್ಟಂ ಬಳಸುವುದು, ಕಡತಗಳ ನಿರ್ವಹಣೆ, ಸೆಟ್ಟಿಂಗ್ ಮತ್ತು ಸಂರಚನೆಗಳು, ಪ್ರಾದೇಶಿಕ ಭಾಷೆಗಳನ್ನು ಅಳವಡಿಸುವುದು, ಸಣ್ಣಮಟ್ಟದ ಸಮಸ್ಯೆ ಬಗೆಹರಿಸುವುದು ಮತ್ತು ರಿಪೇರಿ ಮಾಡುವುದು, ವೈರಸ್‌ ಪ್ರೊಟೆಕ್ಷನ್ ಮತ್ತು ಸಾಧನದ ಮತ್ತು ಬಳಕೆದಾರರ ಸುರಕ್ಷತೆಯ ಬಗ್ಗೆ ಗಮನವಹಿಸುವುದು.

ಶಿಕ್ಷಣದಲ್ಲಿನ ಸಾಧ್ಯತೆಗಳು

ಐ.ಸಿ.ಟಿ ಸಾಮರ್ಥ್ಯಗಳು ವಿವಿಧ ರೀತಿಯ ಶೈಕ್ಷಣಿಕ ಅನ್ವಯಕಗಳ ವಿಸ್ತಾರಕ್ಕೆ ಕಾರಣವಾಗಿವೆ. ತಂತ್ರಾಂಶ ಅನ್ವಯಕಗಳು ಕಲಿಕೆಯನ್ನು ವಿಸ್ತರಿಸುತ್ತವೆ ಮತ್ತು ವಿಧ್ಯಾರ್ಥಿಗಳು ಸಮಸ್ಯೆಗಳನ್ನು ಬಿಡಿಸುವಲ್ಲಿ ಮತ್ತು ಪ್ರಯೋಗಗಳಲ್ಲಿ ತಲ್ಲೀನರಾಗಿಸುತ್ತವೆ, ಅವಶ್ಯಕವಾಗಿರುವ ದತ್ತಾಂಶಗಳನ್ನು ಲಭ್ಯವಾಗಿಸುವ ಮೂಲಕ ಶಿಕ್ಷಣದಲ್ಲಿ ಸಾಮನ್ಯವಾಗಿ ಬಳಸುವ ಮಾಹಿತಿಗಳನ್ನು ಪಡೆಯಲು ಮತ್ತು ಪ್ರಕ್ರಿಯೆನಡೆಸಲು ಸಾಧ್ಯಾವಾಗಿಸಿದೆ. ಆನ್‌ಲೈನ್‌ ಸಂಪನ್ಮೂಲಗಳು, ಬುಕ್ಸ್, ಕೋರ್ಸ್‌ಗಳು, ಮಾದ್ಯಮ ಸಂಪನ್ಮೂಲಗಳು ಇದರಲ್ಲಿ ಸಾಮಾನ್ಯವಾಗಿವೆ. ಪರಸ್ಪರ ಪ್ರಭಾವ ಬೀರುವ ಸಾಧ್ಯತೆಗಳು, ಪತ್ರಿಯೊಬ್ಬರು ಸಿದ್ದಗೊಂಡಿರುವ ಸಂಪನ್ಮೂಲಗೊಡನೆ ಸಂವಹನ ನಡೆಸಲು, ಹಾಗು ಒಂದು ಗುಂಪಿನ್ ಜನರು ಪರಸ್ಪರರಲ್ಲಿ ಸಂವಹನ ಚರ್ಚೆ ನಡೆಸಲು ಮಾರ್ಗಗಳು ಹುಟ್ಟುಕೊಂಡಿದ್ದು ಕಲಿಕೆ-ಬೋಧನೆಯನ್ನು ಸಾಧ್ಯವಾಗಿಸಿವೆ. ಈ ರೀತಿಯ ಮೋಹಕ ಮತ್ತು ನವೀನ ಮಾದರಿಗಳಯ ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ, ಐ.ಸಿ.ಟಿಯನ್ನು ಬಹಳ ಸೂಕ್ಷ್ಮದೃಷ್ಟಿಯುಳ್ಳವರಾಗಿ ನೋಡುವುದು ಬಹಳ ಅಗತ್ಯವಾದುದು. ಮೇಲ್ಮಟ್ಟಕ್ಕೆ ಒಳ್ಳೆಯ ಮಾತುಗಳುಳ್ಳ ಮಾಹಿತಿಯು ಪ್ರಬಲವಾದ ಅನುಭವವನ್ನು ನೀಡಲಾರದು. ಐ.ಸಿ.ಟಿ ಹೇಗೆ ಕಾರ್ಯನಿರ್ವಹಿಸುತ್ತದೆ, ಬೋಧನೆ-ಕಲಿಕೆಯಲ್ಲಿಇದರ ಪರಿಣಾಮಗಳೇನು, ಕಲಿಕೆಗೆ ಯಾವ ರೀತಿಯ ಮಾಧ್ಯಮಗಳು ಮತ್ತು ಮಾಹಿತಿಗಳು ಸೂಕ್ತವಾದವು, ಶೈಕ್ಷಣಿಕ ಗುರಿಗಳು ಹೇಗೆ ಐ.ಸಿ.ಟಿ ಆಯ್ಕೆಯಲ್ಲಿನ ನಿರ್ಧಾರಗಳಾಗುತ್ತವೆ, ಡಿವೃಸ್‌ಗಳು, ಐ.ಸಿ.ಟಿ ಪರಿಕರಗಳು, ಮಾಃಇತಿಗಳು, ಸಂಪನ್ಮೂಲಗಳು ಹೇಗೆ ಮೌಲ್ಯಮಾಪನವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾದುದದು. ಒಂದು ವೇಳೇ ಇದು ವೆಚ್ಚದಾಯಕವಾದಲ್ಲಿ, ಆರ್ಥಪೂರ್ಣವಾದ ರೀತಿಯಲ್ಲಿ ಮಾತ್ರ ಐ.ಸಿ.ಟಿಯನ್ನು ಪ್ರೋತ್ಸಾಹಿಸಬೇಕು. ಇದು ಶಿಕ್ಷಣ ವ್ಯವಸ್ಥೆಯಲ್ಲಿನ ಆಕಾಂಕ್ಷೆಗಳಿಗೆ ಹಾಗು ಐ.ಸಿ.ಟಿ ಯಲ್ಲಿನ ಬೆಳವಣಿಗೆ ಸಂಪರ್ಕಕೊಂಡಿಯಾಗಿದೆ . ಶೈಕ್ಷಣಿಕ ಸಂಪನ್ಮೂಲಗಳಲ್ಲಿನ ಮುಕ್ತ ಶೈಕ್ಷಣಿಕ ಸಂಪನ್ಮೂಲ- ಲಭ್ಯತೆ, ಬಳಕೆ ಮತ್ತು ಮೌಲ್ಯಮಾಪನ, ರಚನೆ, ಹಂಚಿಕೆಗಳ ಪರಿಶೋಧನೆ ಮತ್ತು ಪ್ರಯೋಗಳನ್ನು ಇದು ಒಳಗೊಂಡಿದೆ. ಐ.ಸಿ.ಟಿ ಡಿವೈಸ್‌ಗಳ ಮತ್ತು ಪರಿಕರಗಳ ಪರಿಣಾಮಕಾರಿತ್ವವನ್ನು ಸಂಶೋದಿಸುವ ಮತ್ತು ಸೂಕ್ಷ್ಮವಾಗಿ ಅಂದಾಜಿಸುವಿಕೆ; ಬೋಧನೆ ಕಲಿಕೆಗಾಗಿ ಮತ್ತು ಸ್ವಕಲಿಕೆಗಾಗಿ ವರ್ಚುಯಲ್ ಪರಿಸರಗಳೊಂದಿಗೆ ನಿಕಟತೆ; ವೆಬ್‌ ಮತ್ತು ಇದರ ಸಂಪನ್ಮೂಲಗಳ ವ್ಯಾಪ್ತಿಯೊಡನೆ ನಿಕಟತೆ; ಉತ್ಪಾದಕ ಪರಿಕರಗಳು ಮತ್ತು ಅವುಗಳ ಅರ್ಥಪೂರ್ಣ ಬಳಕೆ; ಯೋಜನೆಗೆ, ನಿರ್ವಹಣೆಗೆ, ಬೋಧನೆ-ಕಲಿಕೆಗೆ, ಮೌಲ್ಯಮಾಪನ್ಕಕೆ ಪರಿಕರಗಳ ಮತ್ತು ವೇದಿಕೆಗಳ ಬಳಕೆ; ವೃತ್ತಿಪರ ಬೆಳವಣಿಗೆ ಪರಿಕರಗಳು ಮತ್ತು ವೇದಿಕೆಗಳ ಬಳಕೆ.

Reaching Out and Bridging Divides

ಐ.ಸಿ.ಟಿ ಯು ಭೌಗೋಳಿಕ ಮತ್ತು ಸಾಮಾಜಿಕ ಮಿತಿಗಳನ್ನು ಮೀರಿ ವಿಸ್ತಾರವಾಗಿ ಲಬ್ಯವಾಗುವಂತದ್ದಾಗಿದೆ. ಆದರೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಲು ಸ್ವಾಭಾವಿಕಕವಾಗಿ ಸಾಧ್ಯವಾಗಿಲ್ಲ. ಐ.ಸಿ.ಟಿ ಯು ತನ್ನಲ್ಲೇ ತಂತ್ರಗಳನನ್ನು ಅಭಿವೃದ್ದಿಪಡಸಿಕೊಂಡಿದೆ- ಒಂದು ಡಿ.ವಿ.ಡಿ ಅಥವಾ ಮ್ಯೂಸಿಕ್‌ ಪ್ಲೇಯರ್ ಬದಲವಾಣೆಗೆ ಉದಾಹರಣೆ, ಸಾರ್ವಜನಿಕ ಸಹಾಯವಾಣಿ ಮತ್ತು ಬೆಂಬಲ, ಸಾರ್ವಜನಿಕ ಹಂಚಿಕೆ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳೇ ವೇದಿಕೆಗಳೇ ಉದಾಹರಣೆ; ವಿಸ್ತಾರವಾದ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳು- ಅಭಿವೃದ್ದಿಗೊಂಡ ಪ್ರಕ್ರಿಯೆಗೆ ಪೂರಕವಾಗಿವೆ. auguring well for im- proved access.

ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ವಿಸ್ತಾರವಾದ ವಿದ್ಯುನ್ಮಾನ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಬಳಸಲು ಭಾಷಾ ಅಡೆತಡೆಗಳು ಮತ್ತು ವೃತ್ತಿಪರರನ್ನು ಬೇರ್ಪಡಿಸುವಿಕೆಗಳು ಅಡ್ಡಿಯಾಗಿವೆ. ಈ ಬಗ್ಗೆ ಅರಿವು ಹೊಂದಿರಿವುದು, ಇದರೊಂದಿಗೆ ಪ್ರಯೋಗಗಳನ್ನು ಮಾಡುವುದು, ಇದರಲ್ಲಿ ಭಾಗವಹಿಸುವುದು, ಸಂಪನ್ಮೂಲಗಳ ರಚನೆ ಮತ್ತು ಬೆಂಬಲಗಳು ಈ ರೀತಿಯ ಅಡೆತಡೆಗಳನ್ನು ನಿವಾರಿಸಲು ಸಹಾಯಕವಾಗುತ್ತವೆ. ದೈಹಿಕ ಅಂಗವಿಕಲು, ಅದರಲ್ಲೂ ದೃಷ್ಟಿ ದೋಷವುಳ್ಳವರು ಸುಲಭವಾಗಿ ಮಾಹಿತಿ ಬಳಸಲು ಸಾಧ್ಯವಾಗುತ್ತಿಲ್ಲ.

ಈ ವಿಷಯವು ವಿದ್ಯುನ್ಮಾನ ಸಮುದಾಯಗಳನ್ನು ನಿರ್ಮಾಣಮಾಡುವುದನ್ನು ಒಳಗೊಂಡಿರುತ್ತದೆ; ಹಂಚಿತ ಕಾರ್ಯಸೂಚಿಯ ಬೆಳವಣಿಗೆ ಮತ್ತು ಅವಶ್ಯಕತೆಯನ್ನು ಅರ್ಥೈಸಿಕೊಳ್ಳುವುದು; ರಚನೆ, ಹಂಚಿಕೆ, ಮತ್ತು ಶಿಕ್ಷಕರ ಮತ್ತು ವಿಧ್ಯಾರ್ಥಿ ಸಮುದಾಯಗಳಿಗಾಗಿ ಸಂಪನ್ಮೂಲಗಳ ಆಯ್ಕೆ; ಸಮುದಾಯ ರೇಡಿಯೋ; ಸ್ಥಳೀಯ ಭಾಷಾ ಪರಿಕರ ಮತ್ತು ಸ್ಥಳೀಯ ವಿಷಯ, ಅನುವಾದ, ಅನುವಾದಕರು; ಸಬ್‌ಟೈಟಲ್‌ಗಳುಳ್ಳ ವೀಡಿಯೋ; ಅಂಗವೈಕಲ್ಯವುಳ್ಳವರಿಗೆ ನೆರವಾಗುವಂತಹ ತಂತ್ರಜ್ಞಾನ- ದೃಷ್ಟಿ ದೋಷ ವುಳ್ಳವರಿಗಾಗಿ ಸ್ಕ್ರೀನ್ ರೀಡರ್; ಆಡಿಯೋ ಬುಕ್ಸ್; ಟಾಕಿಂಗ್ ಬುಕ್ಸ್; ಸಹಯೋಜತೆ ಅವಕಾಶಗಳು- ವಿಕಿ, ಓಪನ್ ಮ್ಯಾಪ್, ದತ್ತಾಂಶ ರೆಪಾಸಿಟರಿ ಮತ್ತು ವೇದಿಕೆಗಳು.

ಪಠ್ಯಕ್ರಮ

ಶಿಕ್ಷಕರು ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಬಲಗೊಳಿಸಲು ಮತ್ತು ತಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯೆಲ್ಲಿ ಐ.ಸಿ.ಟಿ ಪರಿಕರಗಳನ್ನು ಮತ್ತು ಡಿವೈಸ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ಸಿದ್ದಗೊಳ್ಳಲು ಐ.ಸಿ.ಟಿ ಪಠ್ಯಕ್ರಮವು ಪ್ರಯತ್ನಿಸುತ್ತದೆ. ಶಾಲೆಯಲ್ಲಿ ಐ.ಸಿ.ಟಿ ವಾತಾವರಣವನ್ನು ನಿರ್ವಹಣೆ ಮಾಡಲು ಸಾಧ್ಯವಾಗುವಂತೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಮತ್ತು ಶಿಕ್ಷಕರು ಸ್ಥಳೀಯವಾಗಿ ಸಾಮರ್ಥ್ಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಯೋಜಕರಾಗಿ ಕಾರ್ಯನಿರ್ವಹಿಸುವರು.

ಆದ್ದರಿಂದಲೇ, ಐ.ಸಿ.ಟಿ ಪಠ್ಯಕ್ರಮವು ಹಲವು ಶಾರ್ಟ್‌ ಕೋರ್ಸ್‌ ಗಳನ್ನು (ಅಲ್ವಾವದಿ ತರಗತಿ), ಆರು ಕಲಿಕಾ ಆಧಾರಗಳನ್ನು ಒಳಗೊಂಡಿದೆ ಹಾಗು ಮೂಲ ಹಂತದ, ಮಧ್ಯಂತರ ಹಂತದ ಮತ್ತು ಮುಂದುವರೆದ ಹಂತದ ಸಾಮರ್ಥ್ಯಗಳನ್ನು ಖಾತರಿಪಡಿಸುತ್ತದೆ. ಮೂರು ಪ್ರಾರಂಭಿಕ ಕೋರ್ಸ್‌ಗಳು ಮತ್ತು ಹದಿನಾಲ್ಕು ಪುನಶ್ಚೇತನ ಕೋರ್ಸ್‌ಗಳನ್ನು ಶಿಕ್ಷಣದಲ್ಲಿ ಐ.ಸಿ.ಟಿ ಯ ಡಿಪ್ಲೋಮಕ್ಕೆ ಸೇರಿಸಲು ಪ್ರಸ್ತಾಪಿಸಲಾಗಿದೆ. ಮೊದಲ ಹಂತ ೬ ಪುನಶ್ಚೇತನ ಕೋರ್ಸ್‌ಗಳನ್ನು ಮೊದಲ ಮತ್ತು ಎರಡನೇ ಪ್ರಾರಂಭಿಕ ಕೋರ್ಸ್‌ನ ಮಧ್ಯದಲ್ಲಿ ನಡೆಸಲಾಗುವದು ಮತ್ತು ಎರಡನೇ ಹಂತದ ೮ ಪುನಶ್ಚೇತನ ಕೋರ್ಸ್‌ಗಳನ್ನು ಎರಡನೇ ಮತ್ತು ಮೂರನೇ ಪ್ರಾರಂಬಿಕ ಕೋರ್ಸ್‌ನ ಮಧ್ಯದಲ್ಲಿ ನಡೆಸಲಾಗುವದು. ೧೦ ರಿಂದ ೧೩ ರವರೆಗಿನ ಪುನಶ್ಚೇತನ ಕೋರ್ಸ್‌ಗಳು ಐಚ್ಚಿಕ ಕೋರ್ಸ್‌ಗಳನ್ನು ಒಳಗೊಂಡಿರುತ್ತವೆ; ನಿರ್ಧಿಷ್ಟ ವಿಷಯಾಧಾರಿತ ಮತ್ತು ಆಸಕ್ತಿಗನುಗುಣವಾದ ಕೋರ್ಸ್‌ಗಳನ್ನು ಸಹ ಈ ಪುನಶ್ಚೇತನ ಕೋರ್ಸ್‌ಗಳಲ್ಲಿ ನೀಡಲಾಗುವುದು. ಹೀಗಾಗಿ ಶಿಕ್ಷಕರು ತಮ್ಮ ಬೇಕಾದ ನಾಲ್ಕು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಉದ್ದೇಶಗಳು

ಈ ಕೋರ್ಸ್‌ ಪೂರ್ಣಗೊಳಿಸಿದ ನಂತರ ಶಿಕ್ಷಕರು ಈ ಕೆಳಗಿನ ಸಾಮರ್ಥ್ಯಗಳನ್ನು ಹೊಂದುವರು. 1. ಐ.ಸಿ.ಟಿ ಪರಿಕರಗಳು, ತಂತ್ರಾಂಶ ಅನ್ವಯಕಗಳು ಮತ್ತು ವಿದ್ಯುನ್ಮಾನ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ. 2. ಬೋಧನೆ-ಕಲಿಕೆಯಲ್ಲಿ ಮತ್ತು ಇದರ ಮೌಲ್ಯಮಾಪನದಲ್ಲಿ ಐ.ಸಿ.ಟಿ ಅಳವಡಿಕೆ 3. ಸ್ವಂತ ವಿದ್ಯುನ್ಮಾನ ಸಂಪನ್ಮೂಲ ನಿರ್ವಹಣೆ, ರಚನೆ ಮತ್ತು ಬಳಕೆ. 4. ಶಿಕ್ಷಕರ ನೆಟ್‌ವರ್ಕ್‌ಗಳಲ್ಲಿ ಭಾಗವಹಿಸುವುದು 5. ಐ.ಸಿ.ಟಿ ಸಂಪನ್ಮೂಲಗಳ ಮೌಲ್ಯಮಾಪನ ಮತ್ತು ಆಯ್ಕೆಯಲ್ಲಿ ಭಾಗವಹಿಸುವುದು 6. ಸುರಕ್ಷಿತ, ನೈತಿಕ ಮತ್ತು ಕಾನೂನು ಮಾರ್ಗದಲ್ಲಿ ಐ.ಸಿ.ಟಿ ಬಳಕೆದಾರರ 7. ವಿವಿಧ ಹಂತದ ಕಲಿಕಾ ಅರ್ಹತೆಗಳನ್ನು ಸಾಧಿಸಲು ಮತ್ತು ತರಗತಿ ಕೋಣೆ ಪ್ರಕ್ರಿಯೆಯನ್ನು ಹೆಚ್ಚ್ ಒಳಗೊಳ್ಳಿಸು ಐ.ಸಿ.ಟಿ ಬಳಸುವುದು.

ಕಲಿಕೆಯನ್ನು ನಿರ್ವಹಿಸುವುದು

ಪ್ರಾರಂಭಿಕ ಮತ್ತು ಪುನಶ್ಚೇತನ ಕೋರ್ಸ್‌ಗಳಲ್ಲಿ ಅಧಿವೇಶನಕ್ಕೆ ತಕ್ಕಂತೆ ವಿಷಯಗಳನ್ನು ಪೂರ್ಣಗೊಳಿಸಲಾಗುವುದು.

ಪ್ರಾರಂಬಿಕ -೦೧

ಉದ್ದೇಶಗಳು 1. ಐ.ಸಿ.ಟಿ ವಾತಾವರಣದ ವಿಂಗಡಿಸುವುದು / 2. ಐ.ಸಿ.ಟಿ ವಾತಾವರಣದಲ್ಲಿ ಚರ್ಚೆ ನಡೆಸುವುದು 3. ಇಂಟರ್‌ನೆಟ್ ಮತ್ತು ವೆಬ್‌ ಮೂಲಕ ಚರ್ಚೆ ನಡೆಸುವುದು 4. ಐ.ಸಿ.ಟಿ ಶೈಕ್ಷಣಿಕ ಅನ್ವಯಕಗಳೊಂದಿಗೆ ನಿಕಟವಾಗುವುದು

ಆಧಿವೇಶನ ವಿಂಗಡನೆ

ಅಧಿವೇಶನ ೧ : ವೆಬ್‌ ಬಳಕೆ I- ಬ್ರೌಸರ್ ಮತ್ತು ಬ್ರೌಸಿಂಗ ಪರಿಚಯ ಅಧಿವೇಶನ ೨ : ವೆಬ್‌ ಬಳಕೆ II - ವೆಬ್‌ ಪರಿಚಯಿಸಲಾಗಿದೆ ಅಧಿವೇಶನ ೩ : ಐ.ಸಿ.ಟಿ ವಾತಾರವಣದೊಂದಿಗೆ ನಿಕಟತೆ ಹೊಂದುವುದು- ಸಂಪರ್ಕಗಳು ಮತ್ತು ಸಂಪರ್ಕ ಸಾಧನಗಳು ಅಧಿವೇಶನ ೪ : ಭಾರತೀಯ ಭಾಷೆಗಳ ಸೇರಿಸುವಿಕೆ- ಪಾಂಟ್ಸ್‌ ಮತ್ತು ಕೀಬೋರ್ಡ್‌ ಅಧಿವೇಶನ ೫ : ಐ.ಸಿ.ಟಿ ಮೂಲಕ ರಚನೆ - ಪಠ್ಯ ನಿರ್ವಹಣೆ ಅಧಿವೇಶನ ೬ : ಐ.ಸಿ.ಟಿ ಮೂಲಕ ರಚನೆ - ಡೇಟ ನಿರ್ವಹಣೆ ಅಧಿವೇಶನ ೭ : ಐ.ಸಿ.ಟಿ ಮೂಲಕ ರಚನೆ - ಮಾಧ್ಯಮ ನಿರ್ವಹಣೆ ಅಧಿವೇಶನ ೮ : ಆಪರೇಟಿಂಗ್ ಸಿಸ್ಟಂ ಮತ್ತು ಇದರ ಅವಶ್ಯಕತೆಗಳು ಆಧಿವೇಶನ ೯ : ತಂತ್ರಾಂಶ ಮತ್ತು ಯಂತ್ರಾಂಶವನ್ನು ಒಟ್ಟಿಗೆ ತರುವುದು ಅಧಿವೇಶನ ೧೦ : ಮಾಹಿತಿ ಪಡೆಯಲು ಇಂಟರ್‌ನೆಟ್‌ I - ವೆಬ್‌ ಸಂಪನ್ಮೂಲಗಳ ಹುಡುಕಾಟ ಅಧಿವೇಶನ ೧೧ : ಮಾಹಿತಿ ಪಡೆಯಲು ಇಂಟರ್‌ನೆಟ್‌ II -ವೆಬ್‌ ಸಂಪನ್ಮೂಲಗಳ ಹುಡುಕಾಟ ಅಧಿವೇಶನ ೧೨ : ತರಗತಿಯಲ್ಲಿ ಐ.ಸಿ.ಟಿ - ಯಂತ್ರಾಂಶ ಮತ್ತು ತಂತ್ರಾಂಶಗಳ ಅಧಿವೇಶನ ೧೩ : ಸಹಾಯಕ ತಂತ್ರಜ್ಞಾನಗಳು ಅಧಿವೇಶನ ೧೪ : ದತ್ತಾಂಶ ಜೊತೆ ಕಾರ್ಯನಿರ್ವಹಿಸುವುದು I- ಸ್ಪ್ರೆಡ್‌ಶೀಟ್‌ ಕಲಿಕೆ ಅಧಿವೇಶನ ೧೫ : ದತ್ತಾಂಶ ಜೊತೆ ಕಾರ್ಯನಿರ್ವಹಿಸುವುದು I- ಸ್ಪ್ರೆಡ್‌ಶೀಟ್‌ ಕಲಿಕೆ ಅಧಿವೇಶನ ೧೬ : ಇಮೇಲ್ ಮತ್ತು ವೆಬ್‌ ಆಧಾರಿತ ವೇದಿಕೆಗಳು ಅಧಿವೇಶನ ೧೭ : ವೆಬ್‌ ಮೂಲಕ ಬೋಧನೆ - ಇ ಕಾಮರ್ಸ್‌ ಅಪ್ಲಿಕೇಶನ್ ಅನ್ವೇಷಣೆ ಅಧಿವೇಶನ ೧೮ : ಶೈಕ್ಷಣಿಕ ನಿರ್ವಹಣೆಗಾಗಿ MIS ವ್ಯವಸ್ಥೆಯ ಅಧಿವೇಶನ ೧೯ : ಪ್ರದರ್ಶನ ಮತ್ತು ಸಹವರ್ತಿ ಮೌಲ್ಯಮಾಪನ ಅಧಿವೇಶನ 20 : ಮೌಲ್ಯಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ

ಪುನಶ್ಚೇತನಾ ಕೋರ್ಸ್‌ 1- ವಿದ್ಯುನ್ಮಾನವಾಗಿ ಕಥೆ ಹೇಳುವುದು

ಉದ್ದೇಶಗಳು 1. ಪಠ್ಯೇತರವಾಗಿ ಮಾಹಿತಿ ಸಂಗ್ರಹಿಸುವುದು; ಈ ಸಂವಹನಕ್ಕೆ ಸೂಕ್ತವಾದ ಮಾದ್ಯಮವನ್ನು ಆಯ್ಕೆ ಮಾಡಿಕೊಳ್ಳುವುದು 2. ಪಠ್ಯ, ಚಿತ್ರಗಳು, ಆಡಿಯೋ ಗಳನ್ನು ಸಂಯೋಜಿಸಿ ಸಂವಹನ ನಡೆಸುವುದು 3. ಬಹು ವಿದ್ಯುನ್ಮಾನವಾದ ವಿಧಾನಗಳ ಮೂಲಕ ಕಥೆ ಮತ್ತು ಚಿತ್ರಕಥೆಗಳನ್ನು ಅಭಿವೃದ್ದಿಗೊಳಿಸುವುದು 4. ತರಗತಿಯಲ್ಲಿ ಸಂವಹನ ನಡೆಸಲು ವಿದ್ಯುನ್ಮಾನ ಕಥೆ ರಚಿಸುವುದು 5. ವಿದ್ಯುನ್ಮಾನ ಕಥೆಗಳನ್ನು ಮೌಲ್ಯಮಾಪನ ಮಾಡುವುದು 6. ವಿದ್ಯುನ್ಮಾನವಾದ ಕಥೆ ಹೆಳುವುದನ್ನು ಒಳಗೊಳಿಸಲು ಇರುವ ಸಾಧ್ಯತೆಗಳನ್ನು ಹುಡುಕುವುದು

ಆಧಿವೇಶನ ವಿಂಗಡನೆ ಅಧಿವೇಶನ ೧ : ವಿದ್ಯುನ್ಮಾನ ಕಥೆಗಳ ವಿಂಗಡಣೆ ಅಧಿವೇಶನ ೨ : ಚಿತ್ರ ಮತ್ತು ವೀಡಿಯೋ ರೆಕಾರ್ಡಿಂಗ್ ಮತ್ತು ಸಂಕಲನ ವಿಶೇಷ ಉಪನ್ಯಾಸ : ಪೋಟೋ ಸಂಕಲನದ ಪ್ರಸ್ತುತಿ ಅಧಿವೇಶನ ೩ : ಬಹು ಮಾಧ್ಯಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಕಥೆ ಹೇಳುವುದು- ಚಿತ್ರಕಥೆ ಅಧಿವೇಶನ ೪ : ವಿದ್ಯುನ್ಮಾನ ಕತೆಗಳ ಮೌಲ್ಯಮಾಪನ ವಿಶೇಷ ಉಪನ್ಯಾಸ : ಮಾಹಿತಿ ಮೂಲ ಮತ್ತು ಕಲಿಕಾ ಪ್ರಕ್ರಿಯೆಯಾಗಿ ಚಿತ್ರಕಥೆ ರಚನೆ ಮತ್ತು ವೀಡಿಯೋ ದಾಖಲೀಕರಣ ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು ಅಧಿವೇಶನ ೬ : ಸಂವಹನಕ್ಕೆ, ಕಲಿಕೆಗೆ ಮತ್ತು ಒಳಗೊಳ್ಳುವಿಕೆಗಾಗಿ ವಿದ್ಯುನ್ಮಾನ ಸಂಪನ್ಮೂಲಗಳು ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .


ಪುನಶ್ಚೇತನಾ ಕೋರ್ಸ್‌ 2 - ದತ್ತಾಂಶ ವಿಶ್ಲೇಷಣೆ

ಉದ್ದೇಶಗಳು 1. ದತ್ತಾಂಶ ವೀಕ್ಷಿಸುವುದು, ಓದುವುದು ಮತ್ತು ಅರ್ಥ ನೀಡುವುದು ( ವಿವಿಧ ರೀತಿಯ ದತ್ತಾಂಶ ಸೆಟ್‌ ಬಳಸುವುದು) 2. ದತ್ತಾಂಶ ಸೆಟ್‌ ಗಳ ಮೂಲಕ ಗ್ರಾಪ್‌ ರಚನೆಗೆ ಯತ್ನಿಸುವುದು ಮತ್ತು ಓದುವುದು 3. ದತ್ತಾಂಶ ಸೆಟ್‌ಗಳನ್ನು ಪ್ರಶ್ನಿಸುವುದು, ವಿಶ್ಲೇಷಿಸುವುದು, ವಿವಿಧ ದತ್ತಾಂಶ ಸೆಟ್‌ಗಳನ್ನು ಸೇರಿಸುವುದು. 4. ದತ್ತಾಂಶ ದೃಶ್ಯೀಕರಣವನ್ನು ಬಳಸುವುದು 5. ದತ್ತಾಂಶ ಸಂಗ್ರಹವನ್ನು ಹುಡುಕುವುದು. ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ ನಮೂನೆಗಳು 6. ದತ್ತಾಂಶ , ದತ್ತಾಂಶ ಮೂಲ, ಮತ್ತು ದೃಶೀಕರಣವನ್ನು ಮೌಲ್ಯಮಾಪನ ಮಾಡುವುದು. 7. ಸಂವಹನಕ್ಕಾಗಿ ದತ್ತಾಂಶ ಕೋಷ್ಟಕಗಳು ಮತ್ತು ಗ್ರಾಪ್ ಬಳಸುವುದು

ಆಧಿವೇಶನ ವಿಂಗಡನೆ ಅಧಿವೇಶನ ೧ : ದತ್ತಾಂಶ ವೀಕ್ಷಿಸುವುದು, ಓದುವುದು ಮತ್ತು ಅರ್ಥ ನೀಡುವುದು ಅಧಿವೇಶನ ೨ : ಪ್ಲಾಟ್ಸ್‌ ಮತ್ತು ಗ್ರಾಫ್‌ ವಿಶೇಷ ಉಪನ್ಯಾಸ : ಯಾವ ಪ್ರಶ್ನೆ ಕೇಳಬೇಕು ? ಯಾವ ವಿಧಾನದ ದತ್ತಾಂಶ ನಿರೂಪಣೆ ಮತ್ತು ದೃಶೀಕರಣವನ್ನು ಯಾವಾಗ ಬಳಸಬೇಕು ? ದತ್ತಾಂಶ ಮೂಲದ ಮಿತಿಗಳು, ದತ್ತಾಂಶ ನಿರೂಪಣೆ ಮತ್ತು ವಿಶ್ಲೇಷಣೆ. ಅಧಿವೇಶನ ೩ : ದತ್ತಾಂಶ ಸೆಟ್‌ಗಳನ್ನು ಮತ್ತು ಪ್ಲಾಟ್‌ ಗಳನ್ನು ಪ್ರಶ್ನಿಸುವುದು ಅಧಿವೇಶನ ೪ : ದತ್ತಾಂಶ ಮೂಲ ಹುಡುಕುವುದು ಮತ್ತು ದತ್ತಾಂಶ ಮೌಲ್ಯಮಾಪನ

ವಿಶೇಷ ಉಪನ್ಯಾಸ : ವೀಡಿಯೋಗಳ ಆಯ್ಕೆ , ದತ್ತಾಂಶ ದ ಬಗೆಗಿನ ಇದುವರೆವಿಗೂ ನೋಡಿರದ ಮುಖ್ಯವಾದ ವೀಡಿಯೋಗಳು ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು ಅಧಿವೇಶನ ೬ : ದತ್ತಾಂಶ ಮತ್ತು ದತ್ತಾಂಶ ವಿಶ್ಲೇಷಣೆಯ ಸಂವಹನ ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪುನಶ್ಚೇತನಾ ಕೋರ್ಸ್‌ 3- ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ

ಉದ್ದೇಶಗಳು 1. ವೈಯುಕ್ತಿಕ ಬೆಳವಣಿಗೆಗಾಗಿ ಮತ್ತು ವೃತ್ತಿಪರ ಕಲಿಕೆಗಾಗಿ, ಬೋಧನಾ -ಕಲಿಕಾ ಯೋಚನೆಗಳಿಗಾಗಿ ಮತ್ತು ವಿವಿಧ ಕಲಿಕಾ ಅವಕಾಶಗಳ ರಚನೆಗಾಗಿ ಅಂತರ್ಜಾಲ ಬಳಸುವುದು. 2. ಈ ಮೇಲಿನ ಕಲಿಕಾ ಅವಶ್ಯಕತೆಗಳಿಗಾಗಿ ಸೂಕ್ತ ಸಂಪನ್ಮೂಲಗಳನ್ನು ಗುರುತಿಸುವುದು 3. ಗುರುತಿಸಿದ ಸಂಪನ್ಮೂಲಗಳನ್ನು ನಿರ್ವಹಸಿಸುವುದು 4. ನಿರ್ಧಿಷ್ಟ ಸಂದರ್ಭದಲ್ಲಿನ ಬಳಕೆಗಾಇ ಸಂಪನ್ಮೂಲವನ್ನು ಮೌಲ್ಯಮಾಪನ ಮಾಡುವುದು


ಆಧಿವೇಶನ ವಿಂಗಡನೆ ಅಧಿವೇಶನ ೧ : ವೈಯುಕ್ತಿಕ ಕಲಿಕಾ ಸಾಧ್ಯತೆಗಳುಳ್ಳ ವಿವಿಧ ರೀತಿಯ ವೆಬ್‌ಸೈಟಗಳನ್ನು ನೋಡುವುದು. ಅಧಿವೇಶನ ೨ : ವೆಬ್‌ ಆಧಾರಿತ ಕಲಿಕಾಂಶಗಳು, ಸಿಮುಲೇಶನ್ ಮತ್ತು ಟ್ಯುಟೋರಿಯಲ್ಸ್. ವಿಶೇಷ ಉಪನ್ಯಾಸ : ಅಂತರ್ಜಾಲದ ಪೂರ್ಣ ಪರಿಚಯ ಅಧಿವೇಶನ ೩ : ಕಲಿಕಾ ಸಂಪನ್ಮುಲಗಳನ್ನು ಮತ್ತು ಬೋಧನಾ ಕಲಿಕಾ ಯೋಚನೆಗಳನ್ನು ಗುರುತಿಸಲು ವೇದಿಕೆಗಳಲ್ಲಿ ಭಾಗವಹಿಸುವುದು. ಅಧಿವೇಶನ ೪ : ಬೋಧನಾ ಕಲಿಕಾ ಸಂಪನ್ಮೂಲಗಳಲ್ಲಿ ಬಳಸುವ ತಂತ್ರಾಂಶ ಅನ್ವಯಕಗಳು ಮತ್ತು ಪರಿಕರಗಳು ವಿಶೇಷ ಉಪನ್ಯಾಸ : ನಿರಂತರ ಕಲಿಕೆಗಾಗಿ ಆನ್‌ಲೈನ್‌ ಕೋರ್ಸ್‌ಗಳನ್ನು ಅನ್ವೇಷಿಸುವುದು (MOOCs) ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು ಅಧಿವೇಶನ ೬ : ಸೂಕ್ತತೆ, ಸಂದರ್ಭ ಮತ್ತು ಬಳಕೆಗೆ ಲಭ್ಯತೆಯ ಆಧಾರದ ಮೇಲೆ ಅಂತರ್ಜಾಲ ಸಂಪನ್ಮೂಲದ ಮೌಲ್ಯಮಾಪನ ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪುನಶ್ಚೇತನ – 04 ಬೋಧನೆ-ಕಲಿಕೆಗಾಗಿ ಐ.ಸಿ.ಟಿ ಭಾಗ-೧

ಉದ್ದೇಶಗಳು 1. ಬೋಧನೆ-ಕಲಿಕೆಗಾಗಿ ಐ.ಸಿ.ಟಿಯ ವಿಂಗಡಣೆ ( ಐ.ಸಿ.ಟಿ - ಲಭ್ಯತೆ- ಕಲಿಕೆಯನ್ನುಂಟು ಮಾಡುವ ಮಾರ್ಗವನ್ನು ಬದಲಾವಣೆ ಮಾಡುವುದು) 2. ಕಲಿಕೆಯನ್ನು ನಿರ್ವಹಿಸುವುದು ( ಸ್ವಂತ) ಮತ್ತು ತರಗತಿಗಾಗಿ ಕಲಿಕಾ ವಾತಾವರಣವನ್ನು ವಿನ್ಯಾಸಗೊಳಿಸುವುದು. 3. ಐ.ಸಿ.ಟಿಯನ್ನು ಒಳಗೊಳ್ಳಿಸಲು ಇರುವ ಸಾಧ್ಯತೆಯನ್ನು ಗುರುತಿಸಲು ಪಠ್ಯಕ್ರಮ ವಿಶ್ಲೇಷಣೆ ( ವಿಶ್ಲೇಷಣೆ ಮತ್ತು ಬೇರ್ಪಡಿಸುವಿಕೆ, ಮೌಲ್ಯಮಾಪನ ಮತ್ತು ಸಮಸ್ಯೆ ಬಿಡಿಸುವಿಕೆ) 4. ವಿಷಯ ಮತ್ತು ಕೌಶಲಗಳು ಅಭಿವೃದ್ದಿಯಾಗಬೇಕಿರುವುದನ್ನು ಗುರುತಿಸುವುದು 5. ಈ ಮೇಲಿನ ಮೂರನ್ನು ಸಾಧಿಸಲು ಅನ್ವಯಕಗಳನ್ನು, ಮಾಧ್ಯಮಗಳನ್ನು ಮತ್ತು ಸಾಮಗ್ರಿಗಳನ್ನು ಗುರುತಿಸುವುದು. 6. ತರಗತಿ ಯೋಚನೆಗಳ ವೈಯುಕ್ತಿಕ ಸಂಗ್ರಹಾಲಯವನ್ನು ನಿರ್ಮಿಸುವುದು.

ಆಧಿವೇಶನ ವಿಂಗಡನೆ ಅಧಿವೇಶನ ೧ : ವಿಷಯ ನಿರ್ಧರಿಸಲು ಪಠ್ಯಕ್ರಮ ವಿಶ್ಲೇಷಣೆ (ನಾನು ಏನನ್ನು ಬೋಧಿಸಬೇಕು ಮತ್ತು ನಾನು ಏನನ್ನು ತಿಳಿದಿರಬೇಕು) ಅಧಿವೇಶನ ೨ : ಬೋಧನೆ-ಕಲಿಕೆ ಸಂಪನ್ಮೂಲಗಳನ್ನು ನಿರ್ಧರಿಸುವುದು. ವಿಶೇಷ ಉಪನ್ಯಾಸ : ಐ.ಸಿ.ಟಿ ಒಳಗೊಳ್ಳಿಸುವಿಕೆ ಮತ್ತು ಪಠ್ಯಪುಸ್ತಕದ ವ್ಯಾಪ್ತಿಯಿಂದ ಹೊರಗೆ ಚಿಂತಿಸುವುದು ( ಅಂತರ್ಜಾಲದ ಪೂರ್ಣ ಪರಿಚಯ ಅಧಿವೇಶನ ೩ : ಕಲಿಕಾ ಸಂಪನ್ಮುಲಗಳನ್ನು ಮತ್ತು ಬೋಧನಾ ಕಲಿಕಾ ಯೋಚನೆಗಳನ್ನು ಗುರುತಿಸಲು ವೇದಿಕೆಗಳಲ್ಲಿ ಭಾಗವಹಿಸುವುದು. ಅಧಿವೇಶನ ೪ : ಬೋಧನಾ ಕಲಿಕಾ ಸಂಪನ್ಮೂಲಗಳಲ್ಲಿ ಬಳಸುವ ತಂತ್ರಾಂಶ ಅನ್ವಯಕಗಳು ಮತ್ತು ಪರಿಕರಗಳು ವಿಶೇಷ ಉಪನ್ಯಾಸ : ನಿರಂತರ ಕಲಿಕೆಗಾಗಿ ಆನ್‌ಲೈನ್‌ ಕೋರ್ಸ್‌ಗಳನ್ನು ಅನ್ವೇಷಿಸುವುದು (MOOCs) ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು ಅಧಿವೇಶನ ೬ : ಸೂಕ್ತತೆ, ಸಂದರ್ಭ ಮತ್ತು ಬಳಕೆಗೆ ಲಭ್ಯತೆಯ ಆಧಾರದ ಮೇಲೆ ಅಂತರ್ಜಾಲ ಸಂಪನ್ಮೂಲದ ಮೌಲ್ಯಮಾಪನ ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .


ಪುನಶ್ಚೇತನ 05 - ಬೋಧನೆ -ಕಲಿಕೆಗಾಗಿ ಐ.ಸಿ.ಟಿ ಭಾಗ ೨

ಉದ್ದೇಶಗಳು 1. ಬೋಧನೆ -ಕಲಿಕೆಗಾಗಿ ಐ.ಸಿ.ಟಿಯನ್ನು ವಿಂಗಡಣೆ ಮಾಡುವುದು ( ತರಗತಿ ಕೋಣೆಯಲ್ಲಿ ಐ.ಸಿ.ಟಿ ಬಳಕೆ, ತಂತ್ರಜ್ಞಾನ ಮತ್ತು ವಿಧಾನಗಳು) 2. ಕಲಿಕೆ ನಿರ್ವಹಣೆ ಮತ್ತು ಕಲಿಕಾ ವಾತಾವರಣದ ವಿನ್ಯಾಸ ( ತರಗತಿ ನಿರ್ವಹಣೆ ಮತ್ತು ಐ.ಸಿ.ಟಿ ಅಳವಡಿಕೆ) 3. ತಂತ್ರಾಂಶ ಮತ್ತು ಯಂತ್ರಾಂಶಗಳೊಡನೆ ಸಂವಹನಕ್ಕಾಗಿ 4. ತರಗತಿಕೋಣೆ ಸಂಪನ್ಮೂಲಗಳ ವೈಯುಕ್ತಿಕ ಸಂಗ್ರಹಾಲಯ

ಆಧಿವೇಶನ ವಿಂಗಡನೆ ಅಧಿವೇಶನ ೧ : ಬೋಧನೆ-ಕಲಿಕಾಗಿ ಐ.ಸಿ.ಟಿ ಅನ್ವೇಷಣೆ, ಬೋಧನಾ ವಿಧಾನಗಳಿಗಾಗಿ ಪಠ್ಯಕ್ರಮ ವಿಶ್ಲೇಷಣೆ (ಇದನ್ನ ನಾನು ಹೇಗೆ ಬೋದಿಸಬೇಕು) ಅಧಿವೇಶನ ೨ : ಸೂಕ್ತ ಹಾರ್ಡ್‌ವೇರ್ ಬಳಕೆ ( ಸಿಡಿ/ಡಿವಿಡಿ/ಪ್ರೋಜೆಕ್ಟರ್ ಬೋರ್ಡ್‌) ವಿಶೇಷ ಉಪನ್ಯಾಸ : ಐ.ಸಿ.ಟಿ ಪ್ರದರ್ಶನ, ತರಗತಿಗೆ ಸೂಕ್ತವಾದ ತಂತ್ರಜ್ಞಾನಗಳು ಅಧಿವೇಶನ ೩ : ಸೂಕ್ತ ತಂತ್ರಾಂಶ ಬಳಕೆ (ಏಕ ಮತ್ತು ಬಹು ಮಾದ್ಯಮ, ಆನಿಮೇಶನ್ಸ್ ಮತ್ತು ಸಿಮುಲೇಷನ್ಸ್) ಅಧಿವೇಶನ ೪ : ಐ.ಸಿ.ಟಿ ಅಳವಡಿತ ಪಾಠಕ್ಕಾಗಿ ತರಗತಿಕೋಣೆ ನಿರ್ವಹಣೆ (ಶಿಕ್ಷಕರ ಮಾರ್ಗದರ್ಶನ, ಸ್ವಕಲಿಕೆ ಮತ್ತು ಗುಂಪು ಚಟುವಟಿಕೆ) ವಿಶೇಷ ಉಪನ್ಯಾಸ : ಕಲಿಕೆಯನ್ನು ಪರಿಣಾಮಕಾರಿಗೊಳಿಸಲು ಗಮನವಹಿಸುವುದು-ಸೂಕ್ತವಾದ ತಂತ್ರಜ್ಞಾನ ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಳಬೇಕು (ಲಭ್ಯವಿರುವ ಐ.ಸಿ.ಟಿ ಸಂಪನ್ಮೂಲಗಳನ್ನು ಬೋದನೆಯಲ್ಲಿ ಬಳಸಿಕೊಳ್ಳುವುದು ಮತ್ತು ಮೌಲ್ಯಮಾಪನ ಮಾಡುವುದು) ಅಧಿವೇಶನ ೬ : ತಂತ್ರಜ್ಞಾನಗಳು ಮತ್ತು ಐ.ಸಿ.ಟಿ ಅಳವಡಿತ ತರಗತಿ ಕೋಣೆಗಳ ಮೌಲ್ಯಮಾಪನ - ಪರಿಣಾಮಕಾರಿ ತಂತ್ರಜ್ಞಾನ ಬಳಕೆಗೆ ಮಾನದಂಡಗಳು ಮತ್ತು ತರಗತಿಕೋಣೆಯಲ್ಲಿ ತಂತ್ರಜ್ಞಾನದ ಪರಿಣಾಮಕಾರಿತ್ವ. ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪುನಶ್ಚೇತನ 06 - ಮಾಲ್ಯಮಾಪನಕ್ಕಾಗಿ ಐ.ಸಿ.ಟಿ

ಉದ್ದೇಶಗಳು

  1. ಮೌಲ್ಯಮಾಪನ ಮತ್ತು ಮೌಲ್ಯಮಾಪನಕ್ಕಾಗಿ ಐ.ಸಿ.ಟಿಯ ವಿಂಗಡಣೆ
  2. ಮಾಲ್ಯಮಾಪನಕ್ಕಾಗಿ ಐ.ಸಿ.ಟಿ ಬಳಸಲು ವಿವಿಧ ತಂತ್ರಜ್ಞಾನ ಮತ್ತು ಪರಿಕರಗಳ ಅನ್ವೇಷಣೆಗೆ
  3. ಸೂಕ್ತವಾದ ತಂತ್ರಾಂಶಗಳೊಡನೆ ಸಂವಹನಕ್ಕಾಗಿ
  4. ಮೌಲ್ಯಮಾಪನ ಸಂಪನ್ಮೂಲಗಳ ವೈಯುಕ್ತಿಕ ಸಂಗ್ರಹಾಲಯ ರಚನೆ

ಆಧಿವೇಶನ ವಿಂಗಡನೆ ಅಧಿವೇಶನ ೧ : ಮೌಲ್ಯಮಾಪನ ಮತ್ತು ಮೌಲ್ಯಮಾಪನಕ್ಕಾಗಿ ಐ.ಸಿ.ಟಿ -ಉದ್ದೇಶಗಳು ಮತ್ತು ಮೌಲ್ಯಮಾಪನ ಕಾರ್ಯತಂತ್ರಗಳು, ಮೌಲ್ಯಮಾಪನಕ್ಕಾಗಿ ಐ.ಸಿ.ಟಿಯ ವ್ಯಾಪ್ತಿ ಅಧಿವೇಶನ ೨ : ಮೌಲ್ಯಮಾಪನಕ್ಕಾಗಿ ತಂತ್ರಾಂಶ ಪರಿಕರಗಳ ಅನ್ವೇಷನೆ ವಿಶೇಷ ಉಪನ್ಯಾಸ : ದತ್ತಾಂಶ ದಲ್ಲಿ ಏನನ್ನು ಬಹಿರಂಗಪಡಿಸಬಹುದು - ದತ್ತಾಂಶ ವಿಶ್ಲೇಷಣೆ ಅನ್ವೇಷಣೆ. ಅಧಿವೇಶನ ೩ : ಸೂಕ್ತ ತಂತ್ರಾಂಶ ಬಳಕೆ -1( ಪರೀಕ್ಷೆಗಳು ಮತ್ತು ರಸಪ್ರಶ್ನೆಗಳ ರಚನೆಗೆ) ಅಧಿವೇಶನ ೪ : ಸೂಕ್ತ ತಂತ್ರಾಂಶ ಬಳಕೆ -2 (ದತ್ತಾಂಶ ನಿರ್ವಹಣೆ, ಫಲಿತಾಂಶ ವಿಶ್ಲೇಷಣೆ, ವಿಧ್ಯಾರ್ಥಿಗಳ ಸಾಧನೆಯನ್ನು ಟ್ರಾಕ್‌ ಮಾಡುವುದು) ವಿಶೇಷ ಉಪನ್ಯಾಸ : ಕಲಿಕೆಯನ್ನು ಪರಿಣಾಮಕಾರಿಗೊಳಿಸಲು ಗಮನವಹಿಸುವುದು-ವಿಧ್ಯಾರ್ಥಿಗಳ ಸಾಧನೆಯನ್ನು ಟ್ರಾಕ್‌ ಮಾಡುವುದು ಮತ್ತು ನಿರ್ವಹಣೆ ಮಾಡುವುದು. ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು (ಲಭ್ಯವಿರುವ ಐ.ಸಿ.ಟಿ ಸಂಪನ್ಮೂಲಗಳನ್ನು ಬಳಸಿಕೊಂಡು ಪರೀಕ್ಷೆಗಳು ಮತ್ತು ರಸಪ್ರಶ್ನೆಗಳನ್ನು ಸಂರಚಿಸುವುದು ಮತ್ತು ಅನುಷ್ಟಾನಗೊಳಿಸುವುದು) ಅಧಿವೇಶನ ೬ : ಮೌಲ್ಯಮಾಪನ ಪ್ರಕ್ರಿಯೆಯ ಮೌಲ್ಯಮಾಪನ- ತಂತ್ರಜ್ಞಾನ ಆಯ್ಕೆಗೆ ಮಾನದಂಡ ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪ್ರಾರಂಭಿಕ ತರಗತಿ (ಪರಿಚಯಾತ್ಮಕ)-2 (Induction 02 )

ಉದ್ದೇಶಗಳು

  1. ಐ.ಸಿ.ಟಿ ವಾತಾವರಣದ ವಿಂಗಡಣೆ
  2. ಐ.ಸಿ.ಟಿ ವಾತಾವರಣದಲ್ಲಿ ಚರ್ಚೆ ನಡೆಸುವುದು
  3. ಇಂಟರ್‌ನೆಟ್ ಮತ್ತು ವೆಬ್‌ ಮೂಲಕ ಚರ್ಚೆ ನಡೆಸುವುದು
  4. ಐ.ಸಿ.ಟಿ ಶೈಕ್ಷಣಿಕ ಅನ್ವಯಕಗಳೊಂದಿಗೆ ನಿಕಟವಾಗುವುದು

ಆಧಿವೇಶನ ವಿಂಗಡನೆ ಅಧಿವೇಶನ ೧ : ಸಮಸ್ಯೆ ಬಗೆಹರಿಸುವುದು ಮತ್ತು ಸಹಾಯ ನಿರೀಕ್ಷಿಸುವುದು ಅಧಿವೇಶನ ೨ : ತಂತ್ರಾಂಶ ಮತ್ತು ಯಂತ್ರಾಂಶ ಅನುಸ್ಥಾಪನೆ ಅಧಿವೇಶನ ೩ : ವೆಬ್‌ನಲ್ಲಿ ಸಮಕಾಲಿಕ ಸಂವಹನ ಅಧಿವೇಶನ ೪ : ವೆಬ್‌ ಗೆ ಅಪ್‌ಲೋಡ್‌ ಮಾಡುವುದು ಅಧಿವೇಶನ ೫ : ಉನ್ನತೀಕರೀಸಿದ ಪಠ್ಯ ಪ್ರಕ್ರಿಯೆ 01 ಅಧಿವೇಶನ ೬ : ಉನ್ನತೀಕರಿಸಿದ ಗ್ರಾಫಿಕ್ಸ್ 01 ಅಧಿವೇಶನ ೭ : ಉನ್ನತೀಕರಿಸಿದ ಸ್ಪ್ರೆಡ್‌ಶೀಟ್ 01 ಅಧಿವೇಶನ ೮ : ಸ್ಟೋರೇಜ್ ಮತ್ತು ಬ್ಯಾಕ್‌ಅಪ್ ಅಧಿವೇಶನ ೯ : ಪ್ರದರ್ಶನ ಮತ್ತು ಸಹವರ್ತಿ ಮೌಲ್ಯಮಾಪನ ಅಧಿವೇಶನ ೧೦ : ಮೌಲ್ಯಮಾಪನ ಮತ್ತು ಪೋರ್ಟ್‌ಪೋಲಿಯೋ ಸಲ್ಲಿಸುವುದು

ಪುನಶ್ಚೇತನಾ -೦7 ದಾಖಲೀಕರಣ ಮತ್ತು ಸಂವಹನಕ್ಕಾಗಿ ಐ.ಸಿ.ಟಿ

ಉದ್ದೇಶಗಳು

  1. ದಾಖಲೀಕರಣ ಮತ್ತು ಸಂವಹನದ ವಿಂಗಡಣೆ
  2. ದಾಖಲೀಕರಣ ಮತ್ತು ಸಂವಹನಕ್ಕಾಗಿ ವಿವಿಧ ತಂತ್ರಗಳನ್ನು ಮತ್ತು ಪರಿಕರಗಳನ್ನು ಹುಡುಕುವುದು
  3. ಸೂಕ್ತ ತಂತ್ರಾಂಶಗಳೋಡನೆ ವ್ಯವಹರಿಸುವುದು
  4. ದಾಖಲೀಕರಣ ಮತ್ತು ಸಂವಹನದ ಸಂಪನ್ಮೂಲಗಳ ವೈಯುಕ್ತಿಕ ಸಂಗ್ರಹಾಲಯ ರಚಿಸುವುದು

ಆಧಿವೇಶನ ವಿಂಗಡನೆ ಅಧಿವೇಶನ ೧ : ದಾಖಲೀಕರಣಕ್ಕಾಗಿ ಸೂಕ್ತ ಮಾದ್ಯಮ ( ಲಕ್ಷಣಗಳು ಮತ್ತು ವ್ಯಾಪ್ತಿ) ಅಧಿವೇಶನ ೨ : ದಾಖಲೀಕರಣಕ್ಕಾಗಿ ಸೂಕ್ತ ಮಾದ್ಯಮ ( ಲಕ್ಷಣಗಳು ಮತ್ತು ವ್ಯಾಪ್ತಿ) ವಿಶೇಷ ಉಪನ್ಯಾಸ : ಸಂವಹನದ ಪ್ರದರ್ಶನ- ಮಾಧ್ಯಮ ಸಂಯೋಜನೆ ಏನು ಮತ್ತು ಯಾವಾಗ ಅಧಿವೇಶನ ೩ : ಸಂವಹನದ ವಿನ್ಯಾಸ, ನಮೂನೆ, ಸಂರಚನೆ ಅಧಿವೇಶನ ೪ : ಮುದ್ರಣ, ಮಾಧ್ಯಮ ಮತ್ತು ವೆಬ್‌ ಮೂಲಕ ಸಂವಹನದ ಪ್ರಸ್ತುತಿ ವಿಶೇಷ ಉಪನ್ಯಾಸ : ನಾವಿನ್ಯಯುತ ಮತ್ತು ಪ್ರಭಾವ ಬೀರುವ ಪ್ರಸ್ತುತಿ- ವೆಬ್‌ನ ಅಂಶಗಳನ್ನು ಬಳಸಿಕೊಂಡು ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು (ಬಹುಮಾಧ್ಯಮಗಳ ಬಳಕೆಯ ಮೂಲಕ ಸಂವಹನ ರಚನೆ ಮತ್ತು ಮೌಲ್ಯಮಾಪನ. ಅಧಿವೇಶನ ೬ : ದಾಖಲೀಕರಣ ಮತ್ತು ಸಂವಹನಕ್ಕಾಗಿ ಮಾದ್ಯಮ ಆಯ್ಕೆ ಮತ್ತು ತಂತ್ರಗಳ ಮೌಕ್ಯಮಾಪನ. ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪುನಶ್ಚೇತನಾ 08 - ಆಟಗಳು

ಉದ್ದೇಶಗಳು

  1. ಶೈಕ್ಷಣಿಕ ಆಟಗಳು ಮತ್ತು ಐ.ಸಿ.ಟಿ ಆಟಗಳ ವಿಂಗಡಣೆ
  2. ಶೈಕ್ಷಣಿಕ ಆಟಗಳು ಮತ್ತು ಆಟಗಳ ಮೂಲಗಳ ಅನ್ವೇಷಣೆ
  3. ಕಲಿಕಾ ವಾತಾವರಣವನ್ನೊಳಗೊಂಡ ಆಟಗಳ ರಚನೆ
  4. ಆಟಗಳಿಗೆ ಸಂಭಂದಿಸಿದ ಸಂಪನ್ಮೂಲಗಳ ವೈಯುಕ್ತಿಕ ಸಂಗ್ರಹಾಲಯ ರಚನೆ

ಆಧಿವೇಶನ ವಿಂಗಡನೆ
ಅಧಿವೇಶನ ೧ : ಶಿಕ್ಷಣ/ಕಲಿಕಾಗಿ ಆಟದ ವಾತಾವರಣ (ಶ್ರೇಣಿ ಮತ್ತು ವ್ಯಾಪ್ತಿ)
ಅಧಿವೇಶನ ೨ : ಆಪ್‌ಲೈನ್ ಮತ್ತು ಆನ್‌ಲೈನ್‌ ಆಟಗಳ ಅನ್ವೇಷಣೆ -1
ವಿಶೇಷ ಉಪನ್ಯಾಸ : ಆಟಗಳ ಮನಃಶಾಸ್ತ್ರ- ಆಟಗಳನ್ನು ಒಳಗೊಂಡ ವಾತಾವರಣ
ಅಧಿವೇಶನ ೩ : ಆಪ್‌ಲೈನ್ ಮತ್ತು ಆನ್‌ಲೈನ್‌ ಆಟಗಳ ಅನ್ವೇಷಣೆ -2
ಅಧಿವೇಶನ ೪ : ಬೋಧನೆ-ಕಲಿಕೆಯಲ್ಲಿ ಆಟಗಳನ್ನು ಒಳಗೊಳ್ಳಿಸುವುದು; ಸೂಕ್ತ ತರಗತಿ ವಾತಾವರಣ ನಿರ್ಮಾಣ
ವಿಶೇಷ ಉಪನ್ಯಾಸ :ಆಟಗಳ ಪ್ರದರ್ಶನ- ವಿವಿಧ ವಯಸ್ಸಿಗನುಗುಣವಾದ ಆಟಗಳು
ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು (ಮಕ್ಕಳ ಮೂಲಕ ಶೈಕ್ಷಣಿಕ ಆಟಗಳ ಅನ್ವೇಷಣೆ ಮತ್ತು ಇದರ ಪರಿಣಾಮಗಳ ದಾಖಲೀಕರಣ)
ಅಧಿವೇಶನ ೬ : ಆಟಗಳು ಮತ್ತು ಆಟದ ವಾತಾವಾರಣದ ಮೌಲ್ಯಮಾಪನ
ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ.

ಪುನಶ್ಚೇತನ 09 - ಸಮುದಾಯ ಮತ್ತು ಗುಂಪಿಗಳ ಅಭಿವೃದ್ದಿ

ಉದ್ದೇಶಗಳು

  1. ಅನ್‌ಲೈನ್‌ ಸಮುದಾಯ ಮತ್ತು ಗುಂಪುಗಳ ವಿಂಗಡಣೆ
  2. ಆನ್‌ಲೈನ್‌ ಸಮುದಾಯಗಳ ಅನ್ವೇಷಣೆ ಮತ್ತು ಅವುಗಳಲ್ಲಿ ಭಾಗವಹಿಸುವಿಕೆ
  3. ಬೋಧನೆ-ಕಲಿಕೆಯಲ್ಲಿ ಸಮುದಾಯಗಳ ಅಳವಡಿಕೆ
  4. ಆನ್‌ಲೈನ್‌ ಸಮುದಾಯ ಮತ್ತು ಗುಂಪಿಗಳಲ್ಲಿ ಭಾಗವಹಿಸುವುದು

ಆಧಿವೇಶನ ವಿಂಗಡನೆ
ಅಧಿವೇಶನ ೧ : ಅನ್‌ಲೈನ್ ಸಮುದಾಯ - ಚರ್ಚೆಗಳ ವಿಶ್ಲೇಷಣೆ
ಅಧಿವೇಶನ ೨ : ಯೋಚನೆ ಮತ್ತು ಆಲೋಚನೆಗಳ ಹಂಚಿಕೆ- ಬ್ಲಾಗ್, ವೇದಿಕೆ ಮತ್ತು ಮೇಲಿಂಗ್ ಲಿಸ್ಟ್‌
ವಿಶೇಷ ಉಪನ್ಯಾಸ : ವರ್ಚುವಲ್ ಸುಮದಾಯಗಳು ಮತ್ತು ವರ್ಚುವಲ್ ಗುರುತುಗಳು
ಅಧಿವೇಶನ ೩ : ಸಹಯೋಜಿತ ರಚನೆಗಳು 01- ಆನ್‌ಲೈನ್‌ ಡಾಕ್ಯುಮೆಂಟ್‌
ಅಧಿವೇಶನ ೪ : ಸಹಯೋಜಿತ ರಚನೆಗಳು 02 - ಸಹಸಮ್ಮತ ಗುಂಪಾಗಿ ವಿಕಿ
ವಿಶೇಷ ಉಪನ್ಯಾಸ :ಸಮುದಾಯಗಳ ಪ್ರದರ್ಶನ- ಸಾಮನ್ಯ ಕಾರಣಗಳ ಅಭಿವೃದ್ದಿ
ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಳಬೇಕು (ಆನ್‌ಲೈನ್‌ ಸಮುದಾಯದಲ್ಲಿ ಭಾಗವಹಿಸುವುದು ಮತ್ತು ಅನುಭವವನ್ನು ದಾಖಲೀಕರಿಸುವುದು)
ಅಧಿವೇಶನ ೬ : ಆನ್‌ಲೈನ್‌ ಸಮುದಾಯಗಳು ಮತ್ತು ಭಾವಹಿಸುವಿಕೆಯ ಮೌಲ್ಯಮಾಪನ
ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ.

ಪುನಶ್ಚೇತನ 10-13 ನಿರ್ದಿಷ್ಟ ವಿಷಯದ ಐ.ಸಿ.ಟಿ ಪರಿಕರಗಳು

ಉದ್ದೇಶಗಳು

  1. ತಂತ್ರಾಂಶ ಅನ್ವಯಕಗಳ ವಿಂಗಡಣೆ, ಬೋಧನೆ-ಕಲಿಕೆಯಲ್ಲಿ ಇದರ ವ್ಯಾಪ್ತಿ
  2. ತಂತ್ರಾಂಶ ಅನ್ವಯಕಗಳ ಅನ್ವೇಷಣೆ
  3. ಬೋಧನೆ-ಕಲಿಕೆಗಾಗಿ ವಿಷಯ ರಚನೆ
  4. ವಿಷಯ ಸಂಪನ್ಮೂಲಗಳ ವೈಯುಕ್ತಿಕ ಸಂಗ್ರಹಾಲಯ ರಚನೆ

ಆಧಿವೇಶನ ವಿಂಗಡನೆ
ಅಧಿವೇಶನ ೧ : ಅನ್ವಯಕಗಳನ್ನು ಅರ್ಥೈಸುವಿಕೆ, ಬೋಧನೆ-ಕಲಿಕೆಯಲ್ಲಿ ಇದರ ವ್ಯಾಪ್ತಿ
ಅಧಿವೇಶನ ೨ : ತಂತ್ರಾಂಶ ಅನ್ವಯಕಗಳ ಅನ್ವೇಷಣೆ
ವಿಶೇಷ ಉಪನ್ಯಾಸ : ಅನ್ವಯಕಗಳ ಪ್ರದರ್ಶನ-ಇದರೊಂದಿಗೆ ನೀವೇನು ಮಾಡಬಹುದು ?
ಅಧಿವೇಶನ ೩ : ತಂತ್ರಾಂಶ ಅನ್ವಯಕಗಳ ಅನ್ವೇಷಣೆ
ಅಧಿವೇಶನ ೪ : ವಿಷಯ ಸಂಪನ್ಮೂಲಗಳ ರಚನೆ
ವಿಶೇಷ ಉಪನ್ಯಾಸ : ಕಲಿಕೆಯ ವಿಸ್ತರಣೆ - ಚಟುವಟಿಕೆಗಳು ಮತ್ತು ಪ್ರೊಜೆಕ್ಟ್‌ಗಳಲ್ಲಿ ಅನ್ವಯಕಗಳ ಬಳಕೆ
ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು (ತಂತ್ರಾಂಶ ಅನ್ವಯಕ್ಗಳನ್ನು ಒಳಗೊಂಡ ಅಥವಾ ಇದರ ಮೂಲಕ ವಿಷಯ ಸಂಪನ್ಮೂಲ ರಚಿಸಿದ ಪಾಠದ ಸಂರಚನೆ ಮತ್ತು ಅನುಷ್ಟಾನ)
ಅಧಿವೇಶನ ೬ : ತಂತ್ರಾಂಶ ಅನ್ವಯುಕಗಳ ಮೂಲಕ ರಚಿಸಿದ ವಿಷಯ ಸಂಪನ್ಮೂಲಗಳ ಮೌಲ್ಯಮಾಪನ
ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ.

ಪುನಶ್ಚೇತನ 14 ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಗಾಗಿ ಐ.ಸಿ.ಟಿ

ಉದ್ದೇಶಗಳು

  1. ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಗಾಗಿ ಐ.ಸಿ.ಟಿಯ ವಿಂಗಡಣೆ
  2. ಆಡಳಿತ ಮತ್ತು ನಿರ್ವಹಣೆಗಾಗಿ ಪರಿಕರಗಳು ಮತ್ತು ತಂತ್ರಗಖ ಅನ್ವೇಷಣೆ
  3. ಸೂಕ್ತ ಅನ್ವಯಕಗಳು ಮತ್ತು ದತ್ತಾಂಶ ಮೂಲಗಳೊಡನೆ ಚರ್ಚೆ
  4. ಐ.ಸಿ.ಟಿ ಆಧಾರಿತ ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಯಲ್ಲಿ ಭಾಗವಹಿಸುವಿಕೆ

ಆಧಿವೇಶನ ವಿಂಗಡನೆ
ಅಧಿವೇಶನ ೧ : ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಯಲ್ಲಿ ಐ.ಸಿ.ಟಿಯ ಪಾತ್ರ- ಮಾಹಿತಿ ನಿರ್ವಹಣೆ, ಪ್ರಕ್ರಿಯೆ ಮತ್ತು ಪರಿಕರಗಳ ಪಾತ್ರ
ಅಧಿವೇಶನ ೨ : ಮೂಲಗಳ ವಿಶ್ಲೇಷಣೆ, ಲಕ್ಷಣಗಳು ವಿಶ್ಲೇಷಣೆ
ವಿಶೇಷ ಉಪನ್ಯಾಸ : ಶೈಕ್ಷಣಿಕ ನಿರ್ವಹಣಗೆ ದತ್ತಾಂಶ ಬೇಸ್ -ಅನ್ವಯಕಗಳ ಪ್ರದರ್ಶನ
ಅಧಿವೇಶನ ೩ : ಶೈಕ್ಷಣಿಕ ಆಡಳಿತಕ್ಕಾಗಿ ದತ್ತಾಂಶ ಬೇಸ್ ರಚನೆ
ಅಧಿವೇಶನ ೪ : ದತ್ತಾಂಶ ರಚನೆ, ದತ್ತಾಂಶ ಬೇಸ್‌ ನಿರ್ವಹಣೆ, ದತ್ತಾಂಶ ಪ್ರಶ್ನಿಸುವುದು ಮತ್ತು ಪಡೆಯುವುದು
ವಿಶೇಷ ಉಪನ್ಯಾಸ :ಶೈಕ್ಷಣಿಕ ನಿರ್ವಹಣೆಯಲ್ಲಿ ದತ್ತಾಂಶ ವಿಶ್ಲೇಷಣೆ ಮತ್ತು ದೃಶ್ಯೀಕರಣ
ಅಧಿವೇಶನ ೫ : ಪ್ರೊಜೆಕ್ಟ್ - 3-8 ದಿನಗಳಲ್ಲಿ ಪೂರ್ಣಗೊಳ್ಲಬೇಕು (ಶಾಲಾ ಆಡಳಿತ ಚಟುವಟಿಕೆಗಾಗಿ ದತ್ತಾಂಶ ಬೇಸ್ ರಚನೆ ಮತ್ತು ಇದರ ಅನುಷ್ಟಾನ)
ಅಧಿವೇಶನ ೬ : ಶೈಕ್ಷಣಿಕ ನಿರ್ವಹಣೆಗಾಗಿ MIS ಅನ್ವಯಕಗಳಲ್ಲಿ ಭಾಗವಹಿಸುವಿಕೆ
ಅಧಿವೇಶನ ೭ : ಪ್ರೊಜೆಕ್ಟ್ವ ಪಾಠಗಳ ಸಹವರ್ತಿ ಮೌಲ್ಯಮಾಪನ ಮತ್ತ ಪ್ರಸ್ತುತಿ; ಮೌಲ್ಯ ಮಾಪನ ಮತ್ತು ಪೋರ್ಟ್ ಪೋಲಿಯೋ ಸಲ್ಲಿಕೆ .

ಪ್ರಾರಂಭಿಕ 03

ಉದ್ದೇಶಗಳು

  1. ಐ.ಸಿ.ಟಿ ವಾತಾವರಣದ ವಿಂಗಡಿಸುವುದು
  2. ಐ.ಸಿ.ಟಿ ವಾತಾವರಣದಲ್ಲಿ ಚರ್ಚೆ ನಡೆಸುವುದು
  3. ಇಂಟರ್‌ನೆಟ್ ಮತ್ತು ವೆಬ್‌ ಮೂಲಕ ಚರ್ಚೆ ನಡೆಸುವುದು
  4. ಐ.ಸಿ.ಟಿ ಶೈಕ್ಷಣಿಕ ಅನ್ವಯಕಗಳೊಂದಿಗೆ ನಿಕಟವಾಗುವುದು

ಆಧಿವೇಶನ ವಿಂಗಡನೆ
ಅಧಿವೇಶನ ೧ : ಸುರಕ್ಷಿತ ಮತ್ತು ಸ್ವಚ್ಚ ಐ ಸಿ ಟಿ ವಾತಾವರಣ
ಅಧಿವೇಶನ ೨ : ತಂತ್ರಾಂಶಗಳ ನವೀಕರಣ /ಉನ್ನತೀಕರಣ
ಅಧಿವೇಶನ ೩ : ಬೋಧಕರ ಸಮುದಾಯದ ಅನ್ವೇಷಣೆ
ಅಧಿವೇಶನ ೪ : ಸಾಮಾಜಿಕ ಜಾಲತಾಣಗಳ ಅನ್ವೇಷಣೆ
ಅಧಿವೇಶನ ೫ : ಉನ್ನತೀಕರೀಸಿದ ಪಠ್ಯ ಪ್ರಕ್ರಿಯೆ 02
ಅಧಿವೇಶನ ೬ : ಉನ್ನತೀಕರಿಸಿದ ಗ್ರಾಫಿಕ್ಸ್ 02
ಅಧಿವೇಶನ ೭ : ಉನ್ನತೀಕರಿಸಿದ ಸ್ಪ್ರೆಡ್‌ಶೀಟ್ 02
ಅಧಿವೇಶನ ೮ : ವೆಬ್ ಸಮುದಾಯ ರಚನೆ (ಬ್ಲಾಗ್ ರಚನೆ)
ಅಧಿವೇಶನ ೯ : ಪ್ರದರ್ಶನ ಮತ್ತು ಸಹವರ್ತಿ ಮೌಲ್ಯಮಾಪನ
ಅಧಿವೇಶನ ೧೦ : ಮೌಲ್ಯಮಾಪನ ಮತ್ತು ಪೋರ್ಟ್‌ಪೋಲಿಯೋ ಸಲ್ಲಿಸುವುದು

ಮೌಲ್ಯಮಾಪನ

ಪ್ರಾರಂಭಿಕ ಮತ್ತು ಪುನಶ್ಚೇತನ ಕೋರ್ಸ್‌ಗಳ ಪ್ರತಿಯೊಂದು ಅಧಿವೇಶನಗಳು ಬೋಧಕರ ಅಧಿವೇಶನದ ಜೊತೆಗೆ ಪ್ರಾಯೋಗಿಕ ಅಧಿವೇಶನಗಳನ್ನು ಹೊಂದಿರುತ್ತವೆ ಹಾಗು ಈ ಸಮಯದಲ್ಲಿ ಶಿಕ್ಷಕರು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತಿ ಚಟುವಟಿಕೆಗಳು ಒಂದಕ್ಕೊಂದು ಸಂಭಂದಿಸಿದವಾಗಿದ್ದು ಪೋರ್ಟ್‌ಪೋಲಿಯಾ ದಲ್ಲಿ ದಾಖಲಾಗುತ್ತವೆ ( ಇ-ಪೋರ್ಟ್‌ಪೋಲಿಯಾ). ಶಿಕ್ಷಕರು ಈ ಕೋರ್ಸ್‌ನ ಭಾಗವಾಗಿ ಹಲವು ಕಾರ್ಯಯೋಜನೆಗಳನ್ನು ( assignments) ಸಲ್ಲಿಸಬೇಕು. ಪೋರ್ಟ್‌ಪೋಲಿಯಾದಲ್ಲಿನ ಸಂಚಿತ ದಾಖಲೆಗಳು ಕೋರ್ಸ್‌ನಲ್ಲಿ ಇವರ ಸಾಧನೆಗಳನ್ನು ಪ್ರತಿನಿಧಿಸುತ್ತವೆ ಹಾಗು ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರತಿಯೊಬ್ಬರ ಪ್ರಗತಿಯನ್ನು ಪರಿಣಾಮಗೊಳಿಸಲು ಅವಕಾಶಗಳನ್ನು ಇಲ್ಲಿ ಸೇರಿಸಲಾಗಿರುತ್ತದೆ. ಪ್ರತಿಯೊಂದು ಪ್ರಾರಂಭಿಕ ಮತ್ತಯ ಪುನಶ್ಚೇತನ ಕೋರ್ಸ್‌ಗಳು ಸಂಕಲನಾತ್ಮಕ ಮೌಲ್ಯಮಾಪನವನ್ನು ಹೊಂದಿರುತ್ತವೆ. ಪೋರ್ಟ್‌ಪೋಲಿಯಾವು ಎಲ್ಲಾ ಕಲಿಕೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆ ಮತ್ತು ಈ ಕೋರ್ಸ್‌ ಮೂಲಕ ಆ ಅವಧಿಯ ಸಂಕಲನಾತ್ಮಕ ಮೌಲ್ಯಮಾಪನವನ್ನು ಅಭಿನಂದಿಸುತ್ತದೆ.


ಪ್ರಮಾಣೀಕರಣ ಈ ಕೋರ್ಸ್‌ ಡಿಪ್ಲೋಮಾಗೆ ಮುವತ್ತು ಅಂಕಗಳನ್ನು ನಿಗದಿಮಾಡುತ್ತದೆ. ಯಾವುದೇ ಶಿಕ್ಷಕರು ಮೂರು ಪ್ರಾರಂಭಿಕ ಕೋರ್ಸ್‌ಗಳನ್ನು ಮತ್ತು ಹದಿನಾಲ್ಕು ಪುನಶ್ಚೇತನ ಕೋರ್ಸ್‌ಗಳನ್ನು ಪೂರ್ಣಗೊಳಿಸಿದಲ್ಲಿ, ಅವರು ಶಿಕ್ಷಣದಲ್ಲಿ ಐ.ಸಿ.ಟಿ ಡಿಪ್ಲೋಮಾ ಪರೀಕ್ಷೆ ತೆಗೆದುಕೊಳ್ಳು ಅರ್ಹರಾಗಿರುತ್ತಾರೆ. ಈ ಡಿಪ್ಲೋಮಾ NCERT ಯಿಂದ ಪುರಸ್ಕರಿಸಬಹುದಾಗಿದೆ.


ಫಾಸ್ಟ್‌ ಟ್ರಾಕಿಂಗ್ Fast tracking ಬಹಳಷ್ಟು ಶಿಕ್ಷಕರು ತಮ್ಮನ್ನು ಐ.ಸಿ.ಟಿ ಬಳಕೆದಾರರಾಗಿಸಿಕೊಳ್ಲಲು ತರಭೇತಿ ಹೊಂದಲು ಅಥವಾ ಜ್ಞಾನವನ್ನು ಹೊಂದಲು ಆಸಕ್ತಿ ಉಳ್ಳವರಾಗಿದ್ದಾರೆ. ಈ ಶಿಕ್ಷಕರು ಎಲ್ಲಾ ಚಟುವಟಿಕೆಗಳನ್ನು ಮತ್ತು ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು, ಅವರ ಇ-ಪೋರ್ಟ್‌ಪೋಲಿಯಾವನ್ನು ಅವರದೇ ರೀತಿಯಲ್ಲಿ ರಚಿಸಲು ಅನುಮತಿ ಹೊಂದಿರುತ್ತಾರೆ. ಇದನ್ನು ಪೂರ್ಣಗೊಳಿಸಿದ ನಂತರ ಡಿಪ್ಲೋಮಾ ಪರೀಕ್ಷೆ ತೆಗೆದುಕೊಳ್ಳು ಅವರು ಅರ್ಹರಾಗಿರುತ್ತಾರೆ.

ಭಾಗ 2; ವಿದ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮ

ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ರಾಷ್ಟ್ರೀಯ ನೀತಿಯ ಮಾರ್ಗದರ್ಶನದಂತೆ, ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮವು ಸೃಜನಶೀಲತೆ, ಸಮಸ್ಯೆ ಬಿಡಿಸುವಿಕೆ ಮತ್ತು ವಿಧ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳನ್ನು ಸೂಚಿಸುವ ಮತ್ತು ಅವರ ಚಿಂತನಾ ವ್ಯಾಪ್ತಿಯನ್ನು ವಿಸ್ತರಿಸುವಂತಹ ನಿರ್ಧಿಷ್ಟ ಉದ್ದೇಶದೊಂದಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಮಕ್ಕಳಿಗೆ ಪರಿಚಯಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ವಿಶೇಷವಾಗಿ ಈ ಪಠ್ಯಕ್ರಮವೂ ವಿಧ್ಯಾರ್ಥಿಗಳನ್ನು ವಿವಿಧ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸಲು ತರಬೇತಿ ನೀಡುವುದರ ಕಡೆಗೆ ಗಮನ ನೀಡುತ್ತದೆ. ಮಾಹಿತಿಯನ್ನು ಮತ್ತು ಸಂಪನ್ಮೂಲಗಳನ್ನು ಗಂಭೀರವಾಗಿ ಪರೀಕ್ಷಿಸುವುದನ್ನು ಕಲಿಯುವುದು; ಈ ಸಂಪನ್ಮೂಲಗಳನ್ನು ಸುರಕ್ಷಿತವಾಗಿ, ಉತ್ಪದಾಕವಾಗಿ, ಸೈದ್ದಾಂತಿಕವಾಗಿ ಮತ್ತು ನ್ಯಾಯಯುತವಾಗಿ ಬಳಸುದನ್ನು ಆಭ್ಯಾಸವಾಗಿಸುವುದು.

ವಿಧ್ಯಾರ್ಥಿಗಳಿಗೆ ತರಗತಿ ಹೊರಗಿನ ಸಂದರ್ಭದಲ್ಲಿ ಐ.ಸಿ.ಟಿಯನ್ನು ಪರಿಚಯಿಸಲಾಗಿದೆ. ಅವರ ಆಸಕ್ತಿ ಮತ್ತು ಕಲಿಯುಯ ಆಪೇಕ್ಷೆಯು ಅವರು ಐ.ಸಿ.ಟಿ ಚಟುವಟಿಲೆಗಳಲ್ಲಿ ಹೆಚ್ಚು ತೀವ್ರವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಸಾಮಾಜಿಕ ಜಾಲತಾಣಗಳಿಗೆ ಮತ್ತು ಬ್ಲಾಗ್‌ಗಳಿಗೆ ಇವರನ್ನು ಪರಿಚಯಿಸುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸೈಬರ್‌ ಅಪರಾಧಗಳ ಬಗ್ಗೆ ಮತ್ತು ಇತರೇ ಮಾದರಿಯ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಇವರಿಗೆ ಅರಿವು ಮೂಡಿಸುವುದೇ ತರಭೇತಿಯ ಬಹುಮುಖ್ಯ ಭಾಗವಾಗಬೇಕು. ತಂತ್ರಾಂಶ ಮತ್ತು ಯಂತ್ರಾಂಶಗಳೊಡನೆ ಪ್ರಯೋಗಗಳನ್ನು ನಡೆಸುವಾಗಿನ ಕಲಿಕೆಯ ವಿಸ್ತಾರವಾದುದಾಗಿದೆ. ಬೋದನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಈ ರೀತಿಯ ಪ್ರವೃತ್ತಿಗಳನ್ನು ಅಂತರ್ಗತಗೊಳಿಸುವುದು ಶಿಕ್ಷಕರು ಶಾಲೆಯಲ್ಲಿ ಐ.ಸಿ.ಟಿ ವ್ಯವಸ್ಥೆಯನ್ನು ಶಕ್ತಗೊಳಿಸಲು ಸಹಾಯಕವಾಗುತ್ತದೆ.

ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯಲ್ಲಿ ಐ.ಸಿ.ಟಿ ಯ ಪರಿಣಾಮವು ಅತ್ಯಂತ ಗಮನಾರ್ಹವಾದುದಾಗಿದೆ. ವಿಶೇಷವಾಗಿ ಸಂವಹನ ಕೌಶಲದ ಬೆಳವಣಿಗೆ ಮೇಲಿನ ಇದರ ಪರಿಣಾಮವು ಐ.ಸಿ.ಟಿ ಪಠ್ಯಕ್ರಮದ ಮುಖ್ಯ ಗುರಿಯಾಗಿದೆ.

ಭಾಷಾ ಮಿತಿಗಳು ಮತ್ತು ಬೇರ್ಪಡುವಿಕೆಗಳು ವಿದ್ಯಾರ್ಥಿಗಳು ವಿಸ್ತಾರವಾದ ವಿದ್ಯುನ್ಮಾನ ಮಾಹಿತಿಗಳನ್ನು ಮತ್ತು ಸಂಪನ್ಮೂಲಗಳನ್ನು ಲಭ್ಯತೆಗೆ /ಬಳಸಲು ಅಡ್ಡಿಯನ್ನುಂಟು ಮಾಡಬಹುದು. ದೈಹಿಕ ನ್ಯೂನತೆಯುಳ್ಳವರು, ವಿಶೇಷವಾಗಿ ದೃಷ್ಟಿದೋಷವುಳ್ಳವರು ಮತ್ತು ಶ್ರವಣದೋಷವುಳ್ಳವರಿಗೆ ಹೆಚ್ಚುವರಿ ಸಹಾಯದ ಅವಶ್ಯಕತೆ ಇರುತ್ತದೆ. ಈ ವ್ಯವಸ್ಥೆಯ ಬಗೆಗೆ ಗಂಭೀರವಾದ ಅರಿವು ಮೂಡಿಸುವ ಪ್ರಕ್ರಿಯೆಯು ವಿಧ್ಯಾರ್ಥಿಗಳ ಈ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕವಾಗುತ್ತವೆ.

ಐ.ಸಿ.ಟಿ ಮೂಲ ಸೌಲಭ್ಯಗಳ ಲಭ್ಯತೆ ಮತ್ತು ಶಾಲಾವೇಳಾಪಟ್ಟಿಯಲ್ಲಿ ಐ.ಸಿ.ಟಿ ತರಗತಿಗಳಿಗೂ ಅವಕಾಶಗಳ ಆಧಾರದ ಮೇಲೆ, ಬೇರೆ ಬೇರೆ ಶಾಲೆಗಳು ಅಥವಾ ಶಾಲಾ ಶಿಕ್ಷಣ ಮಂಡಳಿಗಳು ಐ.ಸಿ.ಟಿ ಕಾರ್ಯಕ್ರಮಗಳನ್ನು ಸೂಕ್ತವಾದ ತರಗತಿಗಳಿಗೆ ಪ್ರಾರಂಭಿಸಬಹುದು. ಆದರೆ ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ನೀತಿಯಲ್ಲಿ ಸೂಚಿತವಾಗಿರುವ ಕಲಿಕಾ ಹಂತಗಳನ್ನು ವಿಧ್ಯಾರ್ಥಿಯು ತನ್ನ ಶಾಲಾ ಅವಧಿಯಲ್ಲಿ ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಪಠ್ಯಕ್ರಮವು ಐ.ಸಿ.ಟಿ ಯನ್ನು 6-12 ನೇ ತರಗತಿಯ ಮಕ್ಕಳಿಗೆ ಬಳಸಲು ಸೂಚಿಸುತ್ತದೆ. ಪ್ರಾಥಮಿಕ ಹಂತದ 1-5 ನೇ ತರಗತಿಯ ಮಕ್ಕಳಿಗೆ ಇದನ್ನು ಬಳಸಬಾರದಯು. ವ್ಯವಸ್ಥಿತ ಐ.ಸಿ.ಟಿ ಕಾರ್ಯಕ್ರಮವು ಪ್ರಾಥಮಿಕ ಹಂತದಲ್ಲಿ ಪ್ರಸ್ತುತವಾಗಿರುವುದಿಲ್ಲ ಹಾಗು ಕಲಿಕೆಗೆ ವಿರುದ್ದವಾಗಬಹುದು. ಈ ಪಠ್ಯಕ್ರಮವು ವಾರದಲ್ಲಿ ಮೂರು ತರಗತಿಗಳನ್ನು ಹಾಗು ವರ್ಷದಲ್ಲಿ ಮುವತ್ತು ವಾರಗಳನ್ನು ಕೋರ್ಸ್ ಪೂರ್ಣಗೊಳಿಸಲು ನಿರೀಕ್ಷಿಸುತ್ತದೆ. ಹಾಗು ಈ ಕೋರ್ಸ್ ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ.

ಕಲಿಕಾ ಕಲಿಕಾ ಏಳೆಗಳು

ವಿಧ್ಯಾರ್ಥಿಗಳಿಗಾಗಿ ಐ.ಸಿ.ಟಿ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ಇದು ವಿಧ್ಯಾರ್ಥಿಗಳನ್ನು ಚಲನಶೀಲತೆಗೆ, ಆಗಾಧವಾದ ಪರಿಣಿತ ಕ್ಷೇತ್ರಕ್ಕೆ, ವಿಸ್ತಾರವಾದ ಮಾಹಿತಿ ಮತ್ತು ಸಂಪನ್ಮೂಲಗಳಿಗೆ ಪರಿಚಯಿಸುತ್ತದೆ. ಹೊಸ ಹೊಸ ಅನ್ವೇಷಣೆಗಳಿಗೆ ಮತ್ತು ಭಾಗವಹಿಸುವಿಕಗೆ ವಿಧ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ.

ಇದು ಕೇವಲ ಕಲಿಕೆಗೆ ಮಾತ್ರ ಬೆಂಬಲ ನೀಡುವುದಿಲ್ಲ, ಇದರ ಜೊತೆಗೆ ವಿಧ್ಯಾರ್ಥಿಗಳ ಬುದ್ಧಿಶಕ್ತಿ ಮತ್ತು ಕಲ್ಪನೆಗೆ ಸವಾಲು ನೀಡುವಂತಹ ವಿಭಿನ್ನ ಚಟುವಟಿಕೆಗಳನ್ನು ಸಹ ಪರಿಚಯಿಸುತ್ತದೆ.

ಈ ನಿಟ್ಟಿನಲ್ಲಿ ಪಠ್ಯಕ್ರಮವು ನಾಲ್ಕು ಪ್ರಮುಖ ಕಲಿಕಾ ಎಳೆಗಳಾಗಿ ನಿರ್ವಹಣೆಗೊಂಡಿದೆ.

  1. ಪ್ರಪಂಚದೊಡನೆ ಸಂಪರ್ಕ
  2. ಪರಸ್ಪರರಲ್ಲಿ ಸಂಪರ್ಕ
  3. ಐ.ಸಿ.ಟಿ ಮೂಲಕ ರಚನೆ
  4. ಐ.ಸಿ.ಟಿ ಜೊತೆಗೆ ಪರಸ್ಪರ ಪ್ರತಿಕ್ರಿಯೆ

ಈ ಕಲಿಕಾ ಆಧಾರಗಳ ವ್ಯಾಪ್ತಿಯು ಶಿಕ್ಷಕರ ಪಠ್ಯಕ್ರಮದ ರೀತಿಯದ್ದೇ ಆಗಿರುತ್ತದೆ. ಚಟುವಟಿಕೆಗಳ ವಿಷಯದಲ್ಲಿ ಪಠ್ಯಕ್ರಮವು ವಿಧ್ಯಾರ್ಥಿಗಳ ವಯಸ್ಸು ಮತ್ತು ಅವರ ನಿರ್ಧಿಷ್ಟ ಅಗತ್ಯತೆ , ಉದ್ದೇಶಕ್ಕನುಗುಣವಾಗಿ ವಿಧ್ಯಾರ್ಥಿಗಳನ್ನು ಅವರ ಅವರ ಭವಿಷ್ಯಕ್ಕೆ ಸಜ್ಜುಗೊಳಿಸುವಂತೆ ಪಠ್ಯವಸ್ತುವನ್ನು ವಿಭಿನ್ನವಾಗಿ ಸ್ಪಷ್ಟಪಡಿಸುತ್ತದೆ.

ಪಠ್ಯಕ್ರಮ

ಐ.ಸಿ.ಟಿ ಪಠ್ಯಕ್ರಮವು ವಿಧ್ಯಾರ್ಥಿಗಳು ವಿವಿಧ ರೀತಿಯ ಐ.ಸಿ.ಟಿ ಸಾಧನಗಳು, ಪರಿಕರಗಳು, ಅನ್ವಯಕಗಳು, ಮಾಹಿತಿಗಳು ಮತ್ತು ಸಂಪನ್ಮೂಲಗಳೊಡನೆ ಕಾರ್ಯಪ್ರವೃತ್ತರಾಗುವುದಕ್ಕೆ ಶಕ್ತಗೊಳಿಸಲು ಪ್ರಯತ್ನಿಸುತ್ತದೆ. ಈ ಕೋರ್ಸ್ ವಾರದಲ್ಲಿ ಮೂರು ಅವಧಿಗಳಲ್ಲಿ ನಡೆಯುತ್ತದೆ. ಇದರಲ್ಲಿ ಒಂದು ಶಿಕ್ಷಕರಿಂದ ನಡೆಯುವ ತರಗತಿ ಹಾಗು ಎರಡು ಪ್ರಾಯೋಗಿಕ ತರಗತಿಗಳು ಒಳಗೊಂಡಿರುತ್ತವೆ. ಶಿಕ್ಷಕರ ತರಗತಿಯು ವಿವಿಧ ತಂತ್ರಗಳನ್ನು ಮತ್ತು ಪ್ರಕ್ರಿಯೆಗಳನ್ನು ಪರಿಚಯಿಸುವ ಮತ್ತು ಕಲಿಕೆಗೆ ಸಂದರ್ಭವನ್ನು ಒದಗಿಸುವ ಗುರಿಯನ್ನು ಹೊಂದಿರುತ್ತದೆ. ಇದು ಮುಂದುವರೆದಂತೆ ವಿಧ್ಯಾರ್ಥಿಗಳು ತಮ್ಮನ್ನು ತಾವು ಪ್ರಾಯೋಗಿಕ ಅನುಭವವನ್ನು ನೀಡಲು ವಿನ್ಯಾಸಗೊಳಿಸಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಉದ್ದೇಶಗಳು

ಈ ಕೋರ್ಸನಲ್ಲಿ ಪಾಲ್ಗೊಂಡ ನಂತರ ವಿಧ್ಯಾರ್ಥಿಗಳು ಈ ಕೆಳಕಂಡ ಅಂಶಗಳನ್ನು ಕಲಿಯಲು ಶಕ್ತರಾಗುತ್ತಾರೆ.

  1. ವಿಧ್ಯಾರ್ಥಿಗಳು ಬೆಳವಣಿಗೆಗೊಳ್ಳುತ್ತಿರುವ ವಿದ್ಯುನ್ಮಾನ ಸಮಾಜದಲ್ಲಿ ಉತ್ತಮ ವಿಧ್ಯಾರ್ಥಿಗಳಾಗಲು ಅವಶ್ಯಕವಾದ ವಿದ್ಯುನ್ಮಾನ ಸಾಕ್ಷರ ಕೌಶಲವನ್ನು ಅಭಿವೃದ್ದಿಪಡಿಸುವುದು.
  2. ಕಲಿಕೆಗಾಗಿ ಮತ್ತು ಕೌಶಲ ಬೆಳವಣಿಗೆಗಾಗಿ ವಿವಿಧ ಪರಿಕರಗಳು ಮತ್ತು ಅನ್ವಯಕಗಳ ಬಳಕೆ.
  3. ವಿವಿಧ ತಂತ್ರಾಂಶ ಮತ್ತು ಯಂತ್ರಾಂಶಗಳ ಸ್ವತಂತ್ರವಾಗಿ ಬಳಕೆ ಮಾಡುವುದು ಮತ್ತು ಕೆಲವು ಸಾಮಾನ್ಯವಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು,
  4. ಐ.ಸಿ.ಟಿ ಸೌಲಭ್ಯಗಳನ್ನು ಎಚ್ಚರಿಕೆಯಿಂದ ಬಳಸುವುದು, ತಮ್ಮ, ಇತರರ ಹಾಗು ಪರಿಕರಗಳ ಸುರಕ್ಷತೆಯನ್ನು ಖಾತರಿಪಡಿಸುವುದು.
  5. ಸೂಕ್ತವಾದ ಪರಿಕರಗಳು ಮತ್ತು ಅನ್ವಯಕಗಳನ್ನು ಬಳಸಿ ವಿವಿಧ ವಿದ್ಯುನ್ಮಾನ ಸಂಪನ್ಮೂಲಗಳನ್ನು ರಚಿಸುವುದು. ವಿದ್ಯುನ್ಮಾನ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು, ಸಂಗ್ರಹಿಸುವುದು ಮತ್ತು ನಿರ್ವಹಣೆ ಮಾಡುವುದು.
  6. ಸುರಕ್ಷಿತ, ನೈತಿಕ ಮತ್ತು ಕಾನೂನು ಮಾರ್ಗದಲ್ಲಿ ಐ.ಸಿ.ಟಿ ಬಳಸುವುದು.

ಕಲಿಕೆಯ ನಿರ್ವಹಣೆ

ಮೂರು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ವಿಷಯಗಳ ತರಗತಿವಾರು ಹಂಚಿಕೆ.

ವರ್ಷ-೧ ಕನ್ನಡ ಅಕ್ಷರ ಬಳಕೆ (ಇಂಗ್ಲೀಷ್)

ಹಂಚಿಕೆ

ವಾರ 01-03 : ಕಾರ್ಯಕ್ರಮಿಸುವುದು (ಪ್ರೋಗ್ರಾಮಿಂಗ್ 01) ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು ಉದಾ: ಲೋಗೋ, ಟರ್ಟಲ್ ಗ್ರಾಫಿಕ್ಸ್, ಅಥವಾ ಸ್ಕ್ರಾಚ್ ಅನಿಮೇಶನ್)

ವಾರ 04-05 : ಗ್ರಾಫಿಕ್ಸ್ 01 ( ಡಿಜಿಟಲ್ ಆರ್ಟ್ ಟೂಲ್. ಉದಾ: ಪ್ಲೋಪೈಂಟ್, ಮೈಪೈಂಟ್)

ವಾರ 06-07 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 01 ( ಯಂತ್ರಾಂಶ ಮತ್ತು ತಂತ್ರಾಂಶ, ಬ್ರೌಸಿಂಗ್)

ವಾರ 08-11 : ದತ್ತಾಂಶ ಪ್ರತಿನಿಧಿಸುವಿಕೆ ಮತ್ತು ಸಂಸ್ಕರಣೆ (ಡೇಟಾ ರೆಪ್ರೆಸೆಂಟೇಷನ್ ಮತ್ತು ಪ್ರೊಸೆಸಿಂಗ್ 01) ( ಸ್ಪ್ರೆಡ್‌ಶೀಟ್)

ವಾರ 12-13 : ಆಡಿಯೋ ವಿಷ್ಯುವಲ್ ಸಂವಹನ 01

ವಾರ 14-17 : ಪ್ರೋಗ್ರಾಮಿಂಗ್ 02 ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು)

ವಾರ 18-21 : ಗ್ರಾಫಿಕ್ಸ್ 02 ( ಡಿಜಿಟಲ್ ಆರ್ಟ್ ಟೂಲ್)

ವಾರ 22-25 : ದತ್ತಾಂಶ ಪ್ರತಿನಿಧಿಸುವಿಕೆ 02 (ಪಠ್ಯ ಮತ್ತು ಚಿತ್ರಗಳು)

ವಾರ 26-27 : ದತ್ತಾಂಶ ಪ್ರತಿನಿಧಿಸುವಿಕೆ 03 ( ಲೇಔಟ್‌ ಮತ್ತು ಔಟ್‌ಪುಟ್‌)

ವಾರ 28-29 : ಆಡಿಯೋ ವಿಷ್ಯುವಲ್ ಸಂವಹನ 02

ವಾರ 30 : ಸಂಗ್ರಹಣೆ (ಪೋರ್ಟ್ ಪೋಲಿಯೋ) ಪ್ರದರ್ಶನ ಮತ್ತು ಮೌಲ್ಯಮಾಪನ

ವರ್ಷ - 02

ಹಂಚಿಕೆ ವಾರ 01-03 : ಕಾರ್ಯಕ್ರಮಿಸುವುದು 03 (ಪ್ರೋಗ್ರಾಮಿಂಗ್ 03) ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು) ವಾರ 04-05 : ತಂತ್ರಾಂಶ ಅನ್ವಯಕಗಳು 01 ( ಮ್ಯಾಪ್ ಮತ್ತು ಗ್ಲೋಬ್‌)

ವಾರ 06-07 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 02 ( ವೆಬ್ ಸಂಪನ್ಮೂಲಗಳು, ಇಮೇಲ್)

ವಾರ 08-10 : ಡೇಟಾ ರೆಪ್ರೆಸೆಂಟೇಷನ್ ಮತ್ತು ಪ್ರೊಸೆಸಿಂಗ್ 04 ( ಸ್ಪ್ರೆಡ್‌ಶೀಟ್)

ವಾರ 11-12 : ಆಡಿಯೋ ವಿಷ್ಯುವಲ್ ಸಂವಹನ 03

ವಾರ 13-14 : ಪ್ರೋಗ್ರಾಮಿಂಗ್ 04 ( ಪ್ರೋಗ್ರಾಮಿಂಗ್‌ ಮೇಲೆ ಕಾರ್ಯನಿರ್ವಹಿಸುವುದು)

ವಾರ 15-16 : ತಂತ್ರಾಂಶ ಅನ್ವಯಕಗಳು 01 ( ಜಿಯೋಜೀಬ್ರಾ)

ವಾರ 17-20 : ಗ್ರಾಫಿಕ್ಸ್ ಮತ್ತು ಅನಿಮೇಷನ್ 03

ವಾರ 21-24 : ಡೇಟಾ ಪ್ರೊಸೆಸಿಂಗ್ 05 ( ಪಠ್ಯ ಮತ್ತು ಚಿತ್ರಗಳು)

ವಾರ 25-26 : ಡೇಟಾ ಪ್ರೊಸೆಸಿಂಗ್ 03 ( ಲೇಔಟ್‌ ಮತ್ತು ಔಟ್‌ಪುಟ್‌)

ವಾರ 27-29 : ಆಡಿಯೋ ವಿಷ್ಯುವಲ್ ಸಂವಹನ 04

ವಾರ 30 : ಪೋರ್ಟ್ ಪೋಲಿಯೋ ಪ್ರದರ್ಶನ ಮತ್ತು ಮೌಲ್ಯಮಾಪನ

ವರ್ಷ 03

ಹಂಚಿಕೆ

ವಾರ 01-02 : ತಂತ್ರಾಂಶ ಅನ್ವಯಕಗಳು 03

ವಾರ 03-04 : ತಂತ್ರಾಂಶ ಅನ್ವಯಕಗಳು 04

ವಾರ 05-06 : ತಂತ್ರಾಂಶ ಅನ್ವಯಕಗಳು 05

ವಾರ 07-08 : ತಂತ್ರಾಂಶ ಅನ್ವಯಕಗಳು 06

ವಾರ 09-10 : ತಂತ್ರಾಂಶ ಅನ್ವಯಕಗಳು 07

ವಾರ 11-12 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 03

ವಾರ 13-16 : ಪ್ರೊಜೆಕ್ಟ್‌ 01 (ವೆಬ್ ಸಂಪನ್ಮೂಲಗಳು)

ವಾರ 17-20 : ಪ್ರೊಜೆಕ್ಟ್‌ 02 (ಪ್ರೋಗ್ರಾಮಿಂಗ್)

ವಾರ 21-24 : ಪ್ರೊಜೆಕ್ಟ್‌ 03 (ಆಡಿಯೋ ವಿಷ್ಯುವಲ್ ಸಂವಹನ / ಗ್ರಾಫಿಕ್ಸ್ ಮತ್ತು ಅನಿಮೇಷನ್)

ವಾರ 25-28 : ಪ್ರೊಜೆಕ್ಟ್ 04 (ವೆಬ್ ಡೆವಲಪ್‌ಮೆಂಟ್ / ಅನ್ವಯಕಗಳ ಡೆವಲಪ್‌ಮೆಂಟ್‌)

ವಾರ 29 : ಅಂತರ್ಜಾಲ ಮತ್ತು ಐ.ಸಿ.ಟಿ ವಾತಾವರಣ 04

ವಾರ 30 : ಪೋರ್ಟ್ ಪೋಲಿಯೋ ಪ್ರದರ್ಶನ ಮತ್ತು ಮೌಲ್ಯಮಾಪನ

4.2.3 ಮೌಲ್ಯಮಾಪನ

ಈ ಕೋರ್ಸ್‌ನ ಪ್ರತಿ ತರಗತಿಅಧಿವೇಶನಗಳೂ ಶಿಕ್ಷಕರ ತರಗತಿಪ್ರಸ್ತುತಿಗಳನ್ನು ಗಳನ್ನು ಹಾಗೇಯೇ ಪ್ರಾಯೋಗಿಕ ಚಟುವಟಿಕೆಗಳನ್ನು ತರಗತಿಗಳನ್ನು ಒಳಗೊಂಡಿರುತ್ತವೆ. ಈ ಸಮಯದಲ್ಲಿ ವಿಧ್ಯಾರ್ಥಿಗಳು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ.

ಪ್ರತಿ ಚಟುವಟಿಕೆಗಳು ಒಂದಕ್ಕೊಂದು ಸಂಭಂದಿಸಿದವಾಗಿದ್ದು ಪೋರ್ಟ್‌ಪೋಲಿಯಾ ದಲ್ಲಿ ದಾಖಲಾಗುತ್ತವೆ. ವಿಧ್ಯಾರ್ಥಿಗಳು ಈ ಕೋರ್ಸ್‌ನ ಭಾಗವಾಗಿ ಹಲವು ಕಾರ್ಯಯೋಜನೆಗಳನ್ನು ( assignments) ಸಲ್ಲಿಸಬೇಕು. ಇವು ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರತಿಯೊಬ್ಬರ ಪ್ರಗತಿಯನ್ನು ಪರಿಣಾಮಸುಧಾರಣೆಗೊಳಿಸಲು ಅವಕಾಶಗಳನ್ನು ಇಲ್ಲಿ ಸೇರಿಸಲಾಗಿರುತ್ತದೆ. ಪ್ರತಿ ವರ್ಷದ ಕೊನೆಯಲ್ಲಿ ಸಂಕಲನಾತ್ಮಕ ಮೌಲ್ಯಮಾಪನವನ್ನು ವಿನ್ಯಾಸಮಾಡಲಾಗುತ್ತದೆ. ಈ ಮೌಲ್ಯಮಾಪನವು ಆ ವರ್ಷದಲ್ಲಿ ಮಾಡಿದ ಕಾರ್ಯಗಳ ಪ್ರಸ್ತುತಿ ಮತ್ತು ಸಹವರ್ತಿ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಪೋರ್ಟ್‌ಪೋಲಿಯಾವು ಎಲ್ಲಾ ಕಲಿಕೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆ ಮತ್ತು ಈ ಕೋರ್ಸ್‌ ಮೂಲಕ ಆ ಅವಧಿಯ ಸಂಕಲನಾತ್ಮಕ ಮೌಲ್ಯಮಾಪನವಕ್ಕೆ ಪೂರಕವಾಗಿರುತ್ತದೆ. ಅಭಿನಂದಿಸುತ್ತದೆ.

ಪ್ರಮಾಣೀಕರಣ

ಈ ಕೋರ್ಸ್‌ ತಕ್ಷಣಕ್ಕೆ ಎಲ್ಲಾ ಶಾಲೆಗಳಲ್ಲಿ ಲಭ್ಯವಿರುವುದಿಲ್ಲ, ಅಗತ್ಯವಿರುವ ಐ.ಸಿ.ಟಿ ಮೂಲಸೌಲಭ್ಯಗಳು ಲಭ್ಯವಿರುವುದಿಲ್ಲ, ರಾಜ್ಯ ಪ್ರೌಢಶಿಕ್ಷಣ ಮಂಡಳಿಯು ಪ್ರತ್ಯೇಕ ಪರೀಕ್ಷಾ ವ್ಯವಸ್ಥೆಯನ್ನು ಸೃಷ್ಟಿಸಬಹುದು. ಈ ಮೂಲಕ ಪ್ರಮಾಣಪತ್ರ ನೀಡಬಹುದು. ಎಲ್ಲಾ ಶಾಲೆಗಳು ಸಜ್ಜುಗೊಂಡ ಮೇಲೆ ಈ ಪ್ರಮಾಣ ಪತ್ರವು ಶಾಲಾ ಪ್ರಮಾಣ ಪತ್ರದ ಭಾಗವೇ ಆಗಬಹುದು.

ಐಸಿಟಿ ಪಠ್ಯಕ್ರಮದ ತಂಡ

(ಈ ಭಾಗವನ್ನು ಮೂಲ ಪುಸ್ತಕದಿಂದ ಆಯ್ದುಕೊಳ್ಳಾಗಿದೆ.)
Core Committee Dr. Rajaram S. Sharma, Joint Director, Central Institute of Educational Technology, NCERT, New Delhi Ms. Sriranjani Ranganathan, Programme Associate, ICT & Education, IT for Change, Bengaluru Dr. Indu Kumar, Assistant Professor, Central Institute of Educational Tech- nology, NCERT, New Delhi Dr. Deepa George, Assistant Professor, Central Institute of Educational Technology, NCERT, New Delhi Ms. Praveen Bobby Binjha, Assistant Professor, Central Institute of Educa- tional Technology, NCERT, New Delhi Advisory Group Dr. Nagarjuna G., Associate Professor, Homi Bhabha Centre for Science Education, Mumbai Dr. Sanjaya Mishra, Director, Commonwealth Educational Media Centre for Asia, New Delhi Mr. Arun M., Executive Director (ICT), Society for Promotion of Alterna- tive Computing and Employment, Thiruvananthapuram Dr. M. U. Paily, Associate Professor, Regional Institute of Education, NCERT, Mysore Dr. Ajith Kumar B. P., Scientist SG, Inter University Accelerator Centre, New Delhi 31 32 CHAPTER 5. ICT CURRICULUM GROUP Members Mr. Ajay Gupta, PGT, Mathematics, Kendriya Vidyalaya, Vikaspuri, New Delhi Dr. Amarendra Behera, Head, Department of ICT, Central Institute of Educational Technology, NCERT, New Delhi Dr. Amit Ahuja, Assistant Professor, University School of Education, GGSIPU, Delhi Dr. Anamika Singh, Sr. Lecturer and Head, Educational Technology, DIET, Motibagh, New Delhi Dr. Anubhuti Yadav, Assistant Professor, Central Institute of Educational Technology, NCERT, New Delhi Ms. Anuja Mittal, PGT, Computer Science, Sanskriti School, New Delhi Dr. Asha Jindal, Associate Professor, DESM-NCERT, New Delhi Dr. Hari Krishna Arya, Principal, NBV Senior Secondary School, Hanuman- garh Ms. D. Kavita, Lecturer, Govt. Girls Higher Secondary School, Chittaurgarh Ms. Laxmi Dagar, Head, Educational Technology, DIET, Ghumanhera, New Delhi Ms. Madhukriti Srivastava, IIT-Bombay, Mumbai Dr. Manoj Kumar Dash, Regional Director, IGNOU, New Delhi Dr. M. Kasim, AJK-MCRC, Jamia Millia Islamia, New Delhi Ms. Neelam Gupta, Senior Education Officer, National Institute of Open Schooling, New Delhi Dr. Nisha Singh, Deputy Director, IUC, IGNOU, New Delhi Dr. Nutan Bharati, Programme Officer (Edu), Commonwealth Educational Media Centre for Asia, New Delhi Dr. O. P. Sharma, Deputy Director, NCIDE, IGNOU, New Delhi Mr. Praveen P. Patil, Assistant Professor, GSS College, Belgaum Dr. Radha Ganesan, Education Consultant, Bengaluru Ms. Radha N. Arve, Assistant Teacher, Govt. High School, Begur, Ben- galuru Mr. R. V. Raghavendra Rao, PGT Biology, Jawahar Navodaya Vidyalaya, Vizianagaram 33 Dr. Rajesh Kumar, Principal, DIET, DaryaGanj, New Delhi Mr. Rajesha Y. N., Assistant Teacher, Govt. High School, Mallupura, Mysore Ms. Rashmi Kathuria, PGT Mathematics, Kulachi Hansraj Model School, New Delhi Mr. T. A. Ravisankar, Academic Officer (ICT), IT@School, Govt. of Kerala, Thiruvananthapuram Ms. Rupangi Sharma, Freelance Educator, Gurgaon Mr. Sabarish K., Master Trainer, District office, IT@School, Malapuram Ms. Sangeeta Gulati, Academic Coordinator & Head, Mathematics Depart- ment, Sanskriti School, New Delhi Dr. Sanjay Kumar Pandagale, Assistant Professor, Regional Institute of Education, NCERT, Bhopal Ms. Sapna Yadav, Senior Lecturer, Educational Technology, SCERT, New Delhi Dr. P. Sasikala, Associate Professor, Makhanlal Chaturvedi National Uni- versity, Bhopal Ms. Seema Lal, TGT Social Science, Kulachi Hansraj Model School, New Delhi Mr. Shanavas K., Member of Textbook Committee (ICT), IT@School, Govt. of Kerala, Thiruvananthapuram Mr. S. Sriram, ICT Administrator & HOD Computer Science, Mayo College, Ajmer Mr. Suryaveer Singh, PGT Geography, S.D. Public School, Pitampura, New Delhi Mr. Vasudevan K. P., Master Trainer, District office IT@School, Thrissur Mr. Vijay Nauriyal, Computer Teacher, Rashtriya Pratibha Vikas Vidyalaya, New Delhi