ವಿವಿಧ ಆಕೃತಿಗಳೊಂದಿಗೆ ಸರ್ವಸಮತೆಯ ಪರಿಚಯ(೫ ಗಣಗಳು)
Jump to navigation
Jump to search
ಉದ್ದೇಶಗಳು
- ವಿವಿಧ ಆಕೃತಿಗಳೊಂದಿಗೆ ಸರ್ವಸಮತೆಯನ್ನು ಪರಿಚಯಿಸುವುದು
- ವಿವಿಧ ಆಕೃತಿಗಳೊಂದಿಗೆ ಸರ್ವಸಮತೆಯನ್ನು ಅರ್ಥೈಸಿಕೊಳ್ಳುವುದು
ಅಂದಾಜು ಸಮಯ
10 ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ತ್ರಿಭುಜ ಮತ್ತು ಚೌಕದ ಅಂಶಗಳು ಮತ್ತು ತ್ರಿಭುಜ ಮತ್ತು ಚೌಕದ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಸರ್ವಸಮ ವಸ್ತುಗಳು ಯಾವುವು?
- 1 ನೇ ಗಣವನ್ನು ತಪಶೀಲ ಚೌಕವನ್ನು ಕ್ಲಿಕ್ ಮಾಡುವುದರ ಮೂಲಕ ತೋರಿಸಿ,ಕೆಳಗಿನ ಪ್ರಶ್ನೆಗಳನ್ನು ಕೇಳಿ.
- ಗಣ 1 ರಲ್ಲಿ ಯಾವ ರೇಖೆಗಳು ಸರ್ವಸಮವಾಗಿವೆ?
- ಗಣ 2 ರಲ್ಲಿ ಯಾವ ಕೋನಗಳು ಸರ್ವಸಮವಾಗಿವೆ?
- ಗಣ 3 ರಲ್ಲಿ ಯಾವ ತ್ರಿಭುಜಗಳು ಸರ್ವಸಮವಾಗಿವೆ?
- ಗಣ 4 ರಲ್ಲಿ ಯಾವ ಆಯತಗಳು ಸರ್ವಸಮವಾಗಿವೆ?
- ಗಣ 5 ರಲ್ಲಿ ಯಾವ ಆಕೃತಿಗಳು ಸರ್ವಸಮವಾಗಿವೆ?
- ಸರ್ವಸಮವನ್ನು ನೋಡಲು ,ನಿಮ್ಮ ಮೌಸ್ ಬಳಸಿ,ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಎಳೆದು ಬಿಡಿ.ಎರಡು ವಸ್ತುಗಳು ಪರಸ್ಪರ ಐಕ್ಯವಾದರೆ , ಅವು ಸರ್ವಸಮವಾಗಿವೆ. ವಸ್ತುಗಳನ್ನು ಸರಿಸಲು/ಜರುಗಿಸಲು ಕೆಂಪು ಬಿಂದುಗಳನ್ನು ಮತ್ತು ತಿರುಗಿಸಲು ಹಳದಿ ಬಿಂದುಗಳನ್ನು ಬಳಸಿ.