ಬದಲಾವಣೆಗಳು

Jump to navigation Jump to search
೭೭ ನೇ ಸಾಲು: ೭೭ ನೇ ಸಾಲು:     
===ವ್ಯಕ್ತಿ ಪರಿಚಯ===
 
===ವ್ಯಕ್ತಿ ಪರಿಚಯ===
 +
ಭಾರತದ ಪಿತಾಮಹ ಸತ್ಯ ಅಹಿಂಸೆಗಳ ಪ್ರತೀಕ ಸ್ವಾತಂತ್ರ್ಯದ ಹೋರಾಟಗಾರ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ವ್ಯಕ್ತಿ ಮಾಹಾತ್ಮಾ ಗಾಂಧೀಜಿಯವರು. ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ.
 +
ಜೀವನಕ್ಕಾಗಿ ಶಿಕ್ಷಣ ಹಾಗೂ ಜೀವನದ ಮುಖಾಂತರ ಶಿಕ್ಷಣ ಎಂದು ಅರಿತ ಮಹಾನ್ ವ್ಯಕ್ತಿ ಗಾಂಧೀಜಿ ಮೂಲ ಶಿಕ್ಷಣದ (ಬೇಸಿಕ್ ಎಜ್ಯುಕೇಶನ್) ಜನಕನೆಂದು ಕರೆಯುತ್ತಾರೆ.
 +
 +
ಜೀವನ ಚರಿತ್ರೆ : ಮಹಾತ್ಮಾ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮ್‍ಚಂದ ಗಾಂಧಿ ಜನಿಸಿದ್ದು ಗುಜರಾತನ ಪೋರ್ ಬಂದರನಲ್ಲಿ ಅಕ್ಟೋಬರ್ 2, 1869 ರಂದು ಜೀವ ಪರ್ಯಂತ ಸತ್ಯ, ಧರ್ಮ, ಅಹಿಂಸೆಗಳನ್ನು ಚಾಚೂ ತಪ್ಪದೇ ಪಾಲಿಸಿ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ಸು ಕಂಡರು. ಆದ್ದರಿಂದ ಅವರನ್ನು ಭಾರತದ ‘ರಾಷ್ಟ್ರಪಿತ’ ಎಂದೇ ಕರೆಯಲಾಗುತ್ತದೆ.
 +
ಬಾಲ್ಯದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಪ್ರಭಾವಿತರಾದ ಅವರು ಸತ್ಯ ಹೇಳುವುದನ್ನು ಜೀವನಪರ್ಯಂತ ಪಾಲಿಸಿದರು. ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋದಿಸಿ ಉಪ್ಪಿನ ಸತ್ಯಾಗ್ರಹ ನಡೆಸಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ವರ್ಣಬೇದ ನೀತಿಯನ್ನು ಖಂಡಿಸಿ ಅದನ್ನು ಹೋಗಲಾಡಿಸುವಲ್ಲಿ ಸಫಲರಾದರು.
 +
ಎಂದಿಗೂ ಸತ್ಯ, ಧರ್ಮಕ್ಕಾಗಿಯೇ ಹೋರಾಟ ಮಾಡಿದ ಇವರು ಬ್ರಿಟಿಷರಿಂದ ಜೈಲುವಾಸ ಅನುಭವಿಸಬೇಕಾಯಿತು. “ಮೈ ಎಕ್ಸ್‍ಪೆರಿಮೆಂಟ್ಸ್ ವಿಥ್ ಟ್ರುಥ್” (ಸತ್ಯದೊಂದಿಗೆ ನನ್ನ ಅನುಭವಗಳು) ಪುಸ್ತಕ ಬರೆದರು. ಅದು ಅವರ ಜೀವನ ಚರಿತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ರಾಮಭಕ್ತರಾಗಿದ್ದ, ಅವರು ಜನೆವರಿ 30, 1948ರಂದು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಹೊರ ಬರುವಾಗ ನಾಥೋರಾಮ್ ಗೋಡ್ಸೆ ಎಂಬ ದೇಶದ್ರೋಹಿಯ ಪಿಸ್ತೂಲಿನಿಂದ ಹಾರಿದ ಗುಂಡಿಗೆ ಬಲಿಯಾದರು. ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಹಿಂಸಾ ದಿನಾಚರಣೆ ಎಂದೂ, ಅವರು ಗುಂಡೇಟಿಗೆ ಬಲಿಯಾದ ದಿನವನ್ನು ‘ಹುತಾತ್ಮರ ದಿನಾಚರಣೆ ಎಂದೂ ಆಚರಿಸಲಾಗುತ್ತದೆ.
 +
ಗಾಂಧೀಜಿ ಹಾಗೂ ಶಿಕ್ಷಣ
 +
ಕ್ರಿ.ಶ. 1935 ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಎಂಬ ಸ್ಥಳದಲ್ಲಿ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೂಲ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ವರ್ಧಾ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣವೆಂದು ಕರೆಯುವರು. ಇದು ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮಾ ಗಾಂಧೀಜಿಯವರು ನೀಡಿದ ಮಹಾನ್ ಕೊಡುಗೆಯಾಗಿದೆ.
 +
• ಶೈಕ್ಷಣಿಕ ತತ್ವಗಳು
 +
ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು.
 +
ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು.
 +
1. ಪ್ರಾಥಮಿಕ ಶಿಕ್ಷಣವು ಉಚಿತವಾಗಿಯೂ ಹಾಗೂ ಕಡ್ಡಾಯವಾಗಿ ಕೊಡಲ್ಪಡಬೇಕು.
 +
2. ಶಿಕ್ಷಣವು ಉತ್ಪಾದಕವಾದ ಕೈ ಕೆಲಸಗಳಲ್ಲಿ ಕೇಂದ್ರಿಕೃತವಾಗಿರಬೇಕು.
 +
3. ಸ್ವಾವಲಂಬನ ಹಾಗೂ ಉದ್ಯೋಗ ಪ್ರಧಾನ ಶಿಕ್ಷಣಕ್ಕೆ ಪ್ರಶಸ್ತ್ಯವಿರಬೇಕು.
 +
4. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕೊಡಬೇಕು.
 +
5. ಅಹಿಂಸೆಯನ್ನು ಶಿಕ್ಷಣದ ತಳಹದಿಯಾಗಬೇಕು.
 +
6. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸಿಬೇಕು.
 +
7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು.
    
===ಕೃತಿಗಳ ಪರಿಚಯ===
 
===ಕೃತಿಗಳ ಪರಿಚಯ===

ಸಂಚರಣೆ ಪಟ್ಟಿ