ಬದಲಾವಣೆಗಳು

Jump to navigation Jump to search
ಹೊಸ ಪುಟ: === ಉದ್ದೇಶ === ನಟ / ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ...
=== ಉದ್ದೇಶ ===
ನಟ / ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು

ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಮಾಧ್ಯಮಗಳಲ್ಲಿ ಲಿಂಗ ತಾರತಮ್ಯ ಹೇಗೆ ಮಾಡುತ್ತಾರೆ ಅಂತ

ಗುರುತಿಸಿ ಅದರ ಬಗ್ಗೆ ಕಿಶೋರಿಯರು ಚರ್ಚಿಸುವಂತೆ ಮಾಡುವುದು.

=== ಮಾರ್ಕೇಟ್ / ಜಾಹಿರಾತುಗಳು ===
• ಹಿಂದಿನ ತರಬೇತಿಯ ವಿಷಯಗಳನ್ನ / ಟಾಸ್ಕ್ ಕೊಟ್ಟದರೆ ಅದನ್ನ ನೇನಪಿಸಿ ಏನಾಗಿತ್ತು ಅಂತ ಚರ್ಚೆಮಾಡಿಕೊಳ್ಳೂವುದು - 5 ನಿಮಿಷ

• ಒಂದಷ್ಟು ಚಿತ್ರಗಳನ್ನ ಕಿಶೋರಿಯರಿಗೆ ತೋರಿಸಿ ಇದನ್ನ ನೊಡಿದಾಗ ನಿಮಗೆ ಏನು ನೆನಪು ಆಗುತ್ತೆ ಅಂತ ಕೇಳುವುದು. ಅವರುಗಳು ಹೇಳುವ ವಿಷಯಗಳನ್ನ ಬರೆದುಕೊಳ್ಳುವುದು. (ಚಿತ್ರಗಳನ್ನ ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್ ಬಳಸಿ ತೋರಿಸಿ ಚರ್ಚೆಮಾಡುವುದು ) - ಪೌಡರ್, ಶ್ಯಾಂಪೂ, ಫೆಸ್ ಕ್ರಿಮ್, ಜೂಸ್, ಟೀ/ಕಾಫಿ, ಶೂ / ಸ್ಲಿಪ್ಪರ್, ಬಟ್ಟೆಗಳ, ಬೈಕ್/ಕಾರ್, ಅಭರಣಗಳು, ಟೂತ್ ಪೆಷ್ಟ್. - 10 ನಿಮಿಷ.

• ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ ( ಕನ್ನಡ ಜಾಹೀರಾತುಗಳು ಮಾತ್ರ )

# ಶ್ಯಾಂಪೂ
# ಫೆಸ್ ಕ್ರಿಮ್
# ಜೂಸ್ - ಫಾಂಟ/ ಪೆಪ್ಸಿ/ಸ್ಪರೈಟ್/
# ಟೀ/ಕಾಫಿ,
# ಶೂ / ಸ್ಲಿಪ್ಪರ್
# ಬೈಕ್ /ಕಾರ್
# ಅಭರಣಗಳು
# ಟೂತ್ ಪೆಷ್ಟ್
# ಪ್ರತಿ ಜಾಹೀರಾತನ್ನು ತೋರಿಸಿದ ನಂತರ ಆ ಜಾಹೀರಾತನ ವಿಷಯದ ಬಗ್ಗೆ, ಅದರಲ್ಲಿರುವ ವ್ಯಕ್ತಿಗಳ ಬಣ್ಣ,ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಬಗ್ಗೆ ಕೇಳುವುದು. - 10 ನಿಮಿಷ
# ಕೊನೆಯ ಜಾಹೀರಾತನ್ನು ತೋರಿಸುವಷ್ಟೊತ್ತಿಗೆ ಕಿಶೋರಿಯರೇ ಎಲ್ಲವನ್ನು ಗುರುತಿಸುವಂತರಬೇಕು.
# ಕೊನೆಯಲ್ಲಿ, ಈ ಜಾಹೀರಾತುಗಳು ಪುರುಷರಿಗೆ ಮತ್ತು ಮಹಿಳೆಯರಿಗೆ ಏನು ಹೇಳುತ್ತಿವೆ ಅಂತ ಪುನರ್ ಮನನ ಮಾಡಿ, ಮುಂದಿನ ವಾರಗಳಲ್ಲಿ ಚರ್ಚಿಸೋಣ. ಮನೆಯಲ್ಲಿ ಟ.ವಿ. ನೋಡುವಾಗ ಬರುವ ಜಾಹೀರಾತುಗಳ ವೀಡಿಯೋಗಳನ್ನು ಗಮನಿಸಿ, ಅವುಗಳಲ್ಲಿ ಯಾವ ಥರಹದ ವ್ಯಕ್ತಿಗಳು ಇರತ್ತಾರೆಂದು ಗಮನಿಸಲು ಹೇಳುವುದು. - 5 ನಿಮಿಷ

=== ಮೀಡಿಯಾ / ಇಂಟರ್ವಿವ್ ===
• ಮಹಿಳೆಯರಿಗೆ ಮೀಡಿಯಾ ಕೇಳುವ ಪ್ರಶ್ನ ಗಳನ್ನ ತೋರಿಸಿ, ಇದರ ಬಗ್ಗೆ ಅವರ ಜೊತೆ ಚರ್ಚೆಮಾಡುವುದು. ಯಾಕೆ ಮಹಿಳೆಯರಿಗೆ ಹೆಚ್ಚು ಈತರ ಪ್ರಶ್ನಗಳನ್ನ ಕೇಳುತ್ತಾರೆ? ಇದನ್ನ ನೋಡಿದವರ ಮನಸಿನಲ್ಲಿ ಏನೇನು ವಿಷಯ ಉಳಿದುಕೊಳ್ಳಬಹುದು!. ಯಾರು ಈ ಪ್ರಶ್ನಗಳನ್ನ ತಾಯರು ಮಾಡಿರಬಹುದು. ಇದರ ಹಿಂದಿನ ಪಿತೃಪ್ರಧಾನತೆ ವ್ಯವಸ್ಥೆಯ ಬಗ್ಗೆ ಅರ್ಥ ಮಾಡಿಸುವುದು. - 15 ನಿಮಿಷ.

• ಪುರುಷರಿಗೆ ಮೀಡಿಯಾ ಕೇಳುವ ಪ್ರಶ್ನಗಳನ್ನ ತೋರಿಸಿ, ಇದರ ಬಗ್ಗೆ ಅವರ ಜೊತೆ ಚರ್ಚೆಮಾಡುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಕೇಳಿರುವ ಪ್ರಶ್ನಗಳಲ್ಲಿ ವ್ಯತ್ಯಾಸ ಏನಿತ್ತು!. ಯಾಕೆ ಇಬ್ಬರಿಗೂ ಬೇರೆ ಬೇರೆ ಪ್ರಶ್ನಗಳನ್ನ ಕೇಳಿದ್ದರು ಅಂತ ಸ್ಪಷ್ಟ ಮಾಡುವುದು. - 15 ನಿಮಿಷ.

=== ಮುಕ್ತಾಯ ===
ಒಟ್ಟಾರೆಯಾಗಿ ಈ ಮಾಧ್ಯಮಗಳು ಮಹಿಳೆ ಮತ್ತು ಪುರುಷರನ್ನ ಯಾವ ರೀತಿ ಬಿಂಬಿಸುತ್ತಿದೆ. ನಾವುಗಳು ಈ

ವ್ಯವಸ್ಥೆಯನ್ನು ಅನುಕರಣೆ ಮಾಡುತಿದ್ದಿವಾ? ಅಂತ ಯೊಚಿಸೋಣ ಮತ್ತು ಗುರುತಿಸೊಣ ಅಂತ ಹೇಳಿ ಈ ದಿನ

ಚಟುವಟಿಕೆಯನ್ನು ಮುಕ್ತಾಯ ಮಾಡುವುದು.

=== ಬೇಕಾದ ಸಂಪನ್ಮೂಲಗಳು ===
1. ಲ್ಯಾಪ್ ಟಾಪ್ ಮತ್ತು ಪ್ರೊಜೆಚ್ಟರ್ 1 ನಂಬರ್

2. ಸ್ಪಿಕರ್ 1 ನಂಬರ್

3. ಮುಂಚೆಯೇ ಗುರುತಿಸಿಕೊಂಡ ಜಾಹೀರಾತು ಮತ್ತು ಇಂಟರ್ವಿವ್ ತುಣುಕುಗಳು

=== ಒಟ್ಟೂ ಬೇಕಿರುವ ಫೆಸಿಲಿಟೇಟರ್ಗಳು ===
1 ಜನ
೨೮

edits

ಸಂಚರಣೆ ಪಟ್ಟಿ