ವಿಷಯ ಪರಿವೀಕ್ಷಕರ ಒಂದು ದಿನದ ಅಭಿಶಿಕ್ಷಣ ಕಾರ್ಯಕ್ರಮ ಮೇ 2019

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು

VTC ಮತ್ತು ITFC ಸಹಯೋಗದಲ್ಲಿ ವಿಷಯ ಪರಿವೀಕ್ಷಕರನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಇದು ದಕ್ಷಿಣ ವಲಯ ೩ ರ ವಿಷಯ ಪರಿವೀಕ್ಷಕರನ್ನು ಶೈಕ್ಷಣಿಕವಾಗಿ ಸಬಲಗೊಳಿಸುವ ಉದ್ದೇಶವನ್ನು ಹೊಂದುವ ಮೂಲಕ ವಲಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ವೃತ್ತಿಪರತೆಯನ್ನು ವೃದ್ದಿಸುವ ಗುರಿಯನ್ನು ಹೊಂದಲಾಗಿದೆ.

ಇದರ ಗುರಿಗಳು:

  1. ವಿಷಯ ಪರಿವೀಕ್ಷಕರ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.
  2. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.
  3. ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು. ಉದಾ : ವಾಟ್ಸಾಪ್ ಗುಂಪು
  4. ವೃತ್ತಿಪರ ಕಲಿಕಾ ಸಮುದಾಯದ ಅಭಿವೃದ್ಧಿಪಡಿಸುವುದು.

ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್‌ಸೈಟ್‌ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು
  • ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ
  • ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ,
  • ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.

ವಿಷಯ ಶಿಕ್ಷಕರ ಮಾಹಿತಿ ನಮೂನೆ

ಒಂದು ದಿನದ ಅಭಿಶಿಕ್ಷಣದ ಕಾರ್ಯಕ್ರಮ ಪಟ್ಟಿ

ಸಮಯ ಅವಧಿಯ ವಿವರ ಸಂಪನ್ಮೂಲಗಳು
10.00 - 10.15 ವಿಷಯ ಪರಿವೀಕ್ಷಕರ ಆಗಮನ
10.15 to 10.45 ಶಿಕಸ ಕಾರ್ಯಕ್ರಮಕ್ಕೆ ಪರಿಚಯ . TCOL ವೀಡಿಯೋ
10.45- 11.30 ಅಡಾಸಿಟಿ - ಒಳ್ಳೆಯ ಗುಣಮಟ್ಟದ ಧ್ವನಿ ಇರುವ ಇಂಗ್ಲೀಷ್‌ ಮತ್ತು ಕನ್ನಡ ಧ್ವನಿ ಸಂಪನ್ಮೂಲ

H5P - ಉದಾಹರಣೆಗಾಗಿ ವಿವಿಧ ನಮೂನೆಯ ಸಂಪನ್ಮೂಲಗಳು

ಇಂಡಿಕ್‌ ಅನಾಗ್ರಾಮ್‌ - ವಿವಿಧ ವಿಷಯಗಳಿಂದ ಸಂಗ್ರಹಿಸಿದ ಪದ ಪಟ್ಟಿ

ಅಡಾಸಿಟಿ ಕಲಿಯಿರಿ

ಇಂಡಿಕ್ ಅನಗ್ರಾಮ್ ಕಲಿಯಿರಿ

11.30- 12.00

ಟಕ್ಸ್ ಪೈಂಟ್‌ - ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಚಿತ್ರಗಳನ್ನು ಬಿಡಿಸಲು

ಡಿಜಿಟಲ್ ಕಥಾ ಪ್ರಸ್ತುತಿ ವಿಡಿಯೋಗಳು ೨

ಗೂಗಲ್‌ ಮ್ಯಾಪ್‌ - ರಾಧ ನಾರ್ವೆರವರು ಸೃಷ್ಟಿಸಿರುವ ಮ್ಯಾಪಿಂಗ್‌ ವೀಡಿಯೋ

ಟಕ್ಸ್ ಪೈಂಟ್‌ ಕಲಿಯಿರಿ
12.00- 12.20 PhET - simulations to be identified, pendulum, gravity lab, heat (effects of heat)
12.20-1.30

Geogebra- parallel lines, types of angles, pi, number line, concurrency of triangles

Robo compass - to identify good construction