ವೃತ್ತದ ಆಂತರಿಕ ಮತ್ತು ಹೊರಭಾಗ
Jump to navigation
Jump to search
ಅದರ ಪರಿಧಿಯೊಳಗಿನ ವೃತ್ತದ ಒಳ ಸಮತಲದಲ್ಲಿರುವ ಬಿಂದುಗಳು ಆಂತರಿಕ ಬಿಂದುಗಳು ಮತ್ತು ಪರಿಧಿಯ ಹೊರಭಾಗದಲ್ಲಿರುವ ಬಿಂದುಗಳು ಅದರ ಬಾಹ್ಯ ಬಿಂದುಗಳು ಎಂದು ಹೇಳಲಾಗುತ್ತದೆ.
ಕಲಿಕೆಯ ಉದ್ದೇಶಗಳು :
ವೃತ್ತದಿಂದ ರಚಿಸಲಾದ ವಿಭಿನ್ನ ಸಮತಲೀಯ ಪ್ರದೇಶಗಳನ್ನು ಅರ್ಥಮಾಡಿಕೊಳ್ಳಲು.
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಒಂದು ಮೀಟರ್ ಉದ್ದದ ದಾರದ ಒಂದು ತುದಿಯಲ್ಲಿ ಮೊಳೆಯನ್ನು ಇಟ್ಟು ನೆಲಕ್ಕೆ ಹೊಡೆಯಲಾಗುತ್ತದೆ (ವೃತ್ತದ ಕೇಂದ್ರವಾಗಿರಬೇಕು) ಮತ್ತು ಇನ್ನೊಂದು ತುದಿಯನ್ನು ಕಡ್ಡಿ ಕಟ್ಟಿ ಅಂಚಿನಲ್ಲಿಟ್ಟುಕೊಳ್ಳಬೇಕು ಇದು ಪರಿಪೂರ್ಣವಾದ ದೊಡ್ಡ ವೃತ್ತವನ್ನು ಎಳೆಯಲು ಸಹಾಯ ಮಾಡುತ್ತದೆ.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವೃತ್ತದ ಪರಿಧಿಯು ಅದರ ಅಂಚು ಆಗಿರುತ್ತದೆ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಮತ್ತು ವೃತ್ತದ ಆಂತರಿಕ ಮತ್ತು ಬಾಹ್ಯ ಪದಗಳನ್ನು ಅರ್ಥಮಾಡಿಕೊಳ್ಳಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಆಟದ ಮೈದಾನದಲ್ಲಿ ವೃತ್ತವನ್ನು ಎಳೆಯಿರಿ.
- ಮಕ್ಕಳನ್ನು ಅದರ ಪರಿಧಿಯ ಮೇಲೆ ನಿಲ್ಲುವಂತೆ ಮಾಡಿ.
- ವೃತ್ತದೊಳಗಿನ ಒಬ್ಬ ವಿದ್ಯಾರ್ಥಿಯನ್ನು ಮೇಕೆ ಎಂದು ಕರೆಯಿರಿ ಮತ್ತು ಹೊರಭಾಗದಲ್ಲಿರುವ ಇನ್ನೊಬ್ಬ ವಿದ್ಯಾರ್ಥಿಯು ಹುಲಿಯಾಗಿರುತ್ತಾನೆ.
- ಹುಲಿ, ಮೇಕೆ ಹಿಡಿಯಲು ವೃತ್ತದ ಒಳಭಾಗಕ್ಕೆ ಹೋಗಲು ಪ್ರಯತ್ನಿಸುತ್ತದೆ.
- ಪರಿಧಿಯಲ್ಲಿರುವ ಇತರ ಎಲ್ಲಾ ವಿದ್ಯಾರ್ಥಿಗಳು ಹುಲಿಯ ಪ್ರವೇಶವನ್ನು ತಡೆಯುತ್ತಾರೆ.
- ಹುಲಿ ಒಳಗೆ ನುಗ್ಗಿದರೆ, ಮೇಕೆ ಹೊರಗೆ ಬಿಡಲಾಗುತ್ತದೆ.
- ಹುಲಿಯು ಮೇಕೆ ಹಿಡಿಯುವಲ್ಲಿ ಯಶಸ್ವಿಯಾದರೆ, ಮೇಕೆ ಜಾಗದಲ್ಲಿರುವ ವಿದ್ಯಾರ್ಥಿಯು ಹೊರಬರುತ್ತಾನೆ.
- ಮುಂದಿನ ಎರಡು ವಿದ್ಯಾರ್ಥಿಗಳು ಮುಂದಿನ ಮೇಕೆ ಮತ್ತು ಹುಲಿಯಾಗಲು ಮುಂದೆ ಬರುತ್ತಾರೆ ಮತ್ತು ಆದ್ದರಿಂದ ಆಟ ಮುಂದುವರಿಯುತ್ತದೆ.
- ಚಟುವಟಿಕೆಯ ಉಪ ಘಟಕಗಳು: ಇದು ಹೊರಾಂಗಣದ ಗುಂಪು ಚಟುವಟಿಕೆಯಾಗಿದೆ
- ಶಿಕ್ಷಕರಿಗೆ ಸೂಚನೆಗಳು: ಇದು ಮೋಜು ತುಂಬಿದ ಚಟುವಟಿಕೆಯಾಗಿರಲಿ ಮತ್ತು ಆಟದ ಸಮಯದಲ್ಲಿ ವೃತ್ತ, ಪರಿಧಿ, ಆಂತರಿಕ ಮತ್ತು ಬಾಹ್ಯ ಪದಗಳನ್ನು ಬಳಸಿ.
- ವಿದ್ಯಾರ್ಥಿಗಳಿಗೆ ಸೂಚನೆಗಳು: ವೃತ್ತದ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿದ್ದಾರೆ ಎಂಬುದನ್ನು ಗುರುತಿಸಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
- ಆಂತರಿಕ ಮತ್ತು ಬಾಹ್ಯ ಪದಗಳ ಅರ್ಥವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದರೆ ಅದನ್ನು ವಿಸ್ತರಿಸಿ.
- ವೃತ್ತದ ಪರಿಧಿಯ ಮೇಲೆ ನಿಂತಿರುವ ವಿದ್ಯಾರ್ಥಿಗಳನ್ನು ಒಳಭಾಗದಲ್ಲಿ ಅಥವಾ ಹೊರಭಾಗದಲ್ಲಿ ಪರಿಗಣಿಸಲಾಗಿದೆಯೇ? ಸಮರ್ಥಿಸಿ.