ವೃತ್ತದ ಕಂಸ
Jump to navigation
Jump to search
ಎರಡೂ ದಿಕ್ಕುಗಳಲ್ಲಿನ ಎರಡು ಬಿಂದುಗಳೊಳಗಿನ ಪರಿಧಿಯ ಭಾಗವನ್ನು ಅದರ ಕಂಸಗಳು ಎಂದು ಕರೆಯಲಾಗುತ್ತದೆ.
ಕಲಿಕೆಯ ಉದ್ದೇಶಗಳು :
- ಒಂದು ಕಂಸವು ವೃತ್ತದ ಪರಿಧಿಯ ಮೇಲೆ ಎರಡು ವಿಭಿನ್ನ ಬಿಂದುಗಳ ನಡುವೆ ಒಳಗೊಂಡಿರುವ ವೃತ್ತದ ಒಂದು ಭಾಗವಾಗಿದೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ.
- ದೊಡ್ಡ ಕಂಸವನ್ನು ಅಧಿಕ ಕಂಸ ಮತ್ತು ಸಣ್ಣದನ್ನು ಲಘು ಕಂಸ ಎಂದು ಕರೆಯಲಾಗುತ್ತದೆ ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ.
ಅಂದಾಜು ಸಮಯ:
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ(ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು
ಜಿಯೋಜಿಬ್ರಾ ಕಡತಗಳು: ವೃತ್ತದಲ್ಲಿ ಕಂಸಗಳು .ggb
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಕೈವಾರ ಬಳಸಿ ವೃತ್ತವನ್ನು ಹೇಗೆ ಎಳೆಯಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿದಿರಬೇಕು.
ಕಂಸವು ಪರಿಧಿಯ ಭಾಗವಾಗಿದೆ ಎಂದು ಅವರು ತಿಳಿದಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವೃತ್ತವನ್ನು 2 ಭಾಗಗಳಾಗಿ ವಿಂಗಡಿಸಿದರೆ,
- ಎಷ್ಟು ಕಂಸಗಳು ರೂಪುಗೊಳ್ಳುತ್ತವೆ?
- ಎರಡು ಕಂಸಗಳು ಸಮಾನವಾಗಿದೆಯೇ?
- ಲಘು ಕಂಸ(ಸಣ್ಣ ಕಂಸ) ಮತ್ತು ಅಧಿಕ ಕಂಸ (ದೊಡ್ಡ ಕಂಸ) ಸ್ಥಾಪಿಸಿ
- ದೊಡ್ಡ ಕಂಸ ಮತ್ತು ಸಣ್ಣ ಕಂಸದಿಂದ ಸುತ್ತುವರಿದ ಪ್ರದೇಶವನ್ನು ಹೋಲಿಸಿ, ಯಾವುದು ದೊಡ್ಡದಾಗಿದೆ?
- ವೃತ್ತಖಂಡವನ್ನು ಸ್ಥಾಪಿಸಿ - ಅಧಿಕ ವೃತ್ತಖಂಡ ಮತ್ತು ಲಘು ವೃತ್ತಖಂಡ
- ಜಿಯೋಜೆಬ್ರಾ ಫೈಲ್ ಅನ್ನು ಅನಿಮೇಟ್ ಮಾಡಿ ಅಧಿಕ ಕಂಸ ಲಘು ಕಂಸವಾಗುವುದನ್ನು ತೋರಿಸಿ.
- ಒಂದು ಅಧಿಕ ಕಂಸ, ಇನ್ನೊಂದು ಲಘು ಕಂಸ; ಎರಡು ಕಂಸಗಳು ಸಮಾನವಾಗಿರಬಹುದೇ? ಅವುಗಳನ್ನು ಏನೆಂದು ಕರೆಯಲಾಗುತ್ತದೆ?
- ಕಂಸಗಳು ಸಮಾನವಾಗಿದ್ದಾಗ ವೃತ್ತದ ಕೇಂದ್ರಕ್ಕೆ ಸಂಬಂಧಿಸಿದಂತೆ ಎರಡು ಬಿಂದುಗಳು ಹೇಗಿರುತ್ತವೆ?
- ತ್ರಿಜ್ಯದ ನಡುವಿನ ಕೋನವನ್ನು ಸ್ಥಿರವಾಗಿರಿಸಿ ಆದರೆ ವೃತ್ತದ ತ್ರಿಜ್ಯವನ್ನು ಹೆಚ್ಚಿಸಿದರೆ, ಎರಡು ಕಂಸಗಳ ಬಗ್ಗೆ ನೀವು ಏನು ಹೇಳಬಹುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
- ವೃತ್ತದ ಉದ್ದದ ಕಂಸ ಯಾವುದು?
- ಅಧಿಕ ಮತ್ತು ಲಘು ಕಂಸಗಳು ಒಂದೇ ಗಾತ್ರದಲ್ಲಿದ್ದಾಗ ಕಂಸಗಳನ್ನು ಏನೆಂದು ಕರೆಯಲಾಗುತ್ತದೆ?