ವೃತ್ತದ ಮೂಲ ಅಂಶಗಳು
ವೃತ್ತಗಳಿಗೆ ಸಂಬಂಧಿಸಿದ ಮೂಲ ನಿಯತಾಂಕಗಳನ್ನು ಅರ್ಥಮಾಡಿಕೊಳ್ಳಲು ವಿಚಾರಣೆ.
ಕಲಿಕೆಯ ಉದ್ದೇಶಗಳು :
ವೃತ್ತಗಳಿಗೆ ಸಂಬಂಧಿಸಿದ ವಿಭಿನ್ನ ಪದಗಳನ್ನು ಗುರುತಿಸಲು
ಅಂದಾಜು ಸಮಯ:
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್ ) ಮತ್ತು ಪೆನ್ಸಿಲ್, ಕೈವಾರ, ದಾರಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ಕೋನಗಳು, ಬಹುಭುಜಾಕೃತಿಗಳ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಜಿಯೋಜಿಬ್ರಾ ಕಡತ ಬಳಸಿ:
- ವೃತ್ತದ ಮೇಲಿನ ಒಂದು ಬಿಂದು ಮತ್ತು ವೃತ್ತದ ಕೇಂದ್ರವನ್ನು ಸೇರಿಸಿ. ರೇಖಾಖಂಡದ ಅಳತೆಯನ್ನು ತೋರಿಸಲು ತಿರುಗಿಸಿ - ತ್ರಿಜ್ಯವನ್ನು ಸ್ಥಾಪಿಸಿ
- ವೃತ್ತದ ಕೇಂದ್ರದಿಂದ ತ್ರಿಜ್ಯವನ್ನು ವಿಸ್ತರಿಸಿ ವೃತ್ತವನ್ನು ಸೇರಿಸಿ.
- ವೃತ್ತದಲ್ಲಿನ ಎರಡು ಬಿಂದುಗಳನ್ನು ಸೇರಿಸುವ ರೇಖಾಖಂಡದ ಅಳತೆ ಏನು?
- ವ್ಯಾಸದ ಪರಿಕಲ್ಪನೆಯನ್ನು ಸ್ಥಾಪಿಸಿ
- ತ್ರಿಜ್ಯ ಮತ್ತು ವ್ಯಾಸದ ನಡುವಿನ ವ್ಯತ್ಯಾಸವೇನು?
- ಅವು ಹೇಗೆ ಸಂಬಂಧವನ್ನು ಹೊಂದಿವೆ?
- ವೃತ್ತದಲ್ಲಿ ಯಾವುದೇ ಎರಡು ಬಿಂದುಗಳು ಸೇರಿಸಿದರೆ ಏನಾಗುತ್ತದೆ?
- ವೃತ್ತದ ಮೇಲೆ ಒಂದು ಬಿಂದುವನ್ನು ಗುರುತಿಸಿ, ಈ ಬಿಂದುವಿನಿಂದ ಪ್ರಾರಂಭಿಸಿ ಅದೇ ಬಿಂದುವಿನಲ್ಲಿ ಕೊನೆಗೊಳ್ಳುವವರೆಗೆ ವೃತ್ತದ ಉದ್ದವನ್ನು ಅಳೆಯಬಹುದೇ?
- ದೂರ ಸಾಧನವನ್ನು ಬಳಸಿಕೊಂಡು ಪರಿಧಿಯನ್ನು ಅಳೆಯಿರಿ.
- ತ್ರಿಜ್ಯವನ್ನು ಬದಲಾಯಿಸಿದರೆ ಪರಿಧಿ ಬದಲಾಗುತ್ತದೆಯೇ? ಪರಿಧಿ ಮತ್ತು ತ್ರಿಜ್ಯ ಹೇಗೆ ಸಂಬಂಧಿಸಿದೆ.
ಕರ-ನಿರತ ಚಟುವಟಿಕೆ
ಕೈವಾರದೊಂದಿಗೆ ವೃತ್ತವನ್ನು ಎಳೆಯಿರಿ, ವೃತ್ತದಲ್ಲಿ 5 ಬಿಂದುಗಳನ್ನು ಗುರುತಿಸಿ. ವೃತ್ತದ ಕೇಂದ್ರಕ್ಕೆ ಬಿಂದುಗಳನ್ನು ಸೇರಿಸಿ. ದಾರ ತೆಗೆದುಕೊಂಡು ರೇಖಾಖಂಡಗಳ ಉದ್ದವನ್ನು ಅಳೆಯಿರಿ. ಕೋಷ್ಟಕದಲ್ಲಿ ಅಂಕಿ ಸಂಖ್ಯೆ ಮಾಹಿತಿಯನ್ನು ಪಟ್ಟಿ ಮಾಡಿ.
ವೃತ್ತದ ಸಂಖ್ಯೆ | ಬಿಂದು 1 (ಕೇಂದ್ರದಿಂದ ರೇಖಾಖಂಡದ ಅಳತೆ ) | ಬಿಂದು 2 | ಬಿಂದು 3 | ಬಿಂದು 4 | ಬಿಂದು 5 | ಕೇಂದ್ರದ ಮೂಲಕ ವೃತ್ತವನ್ನು ಸ್ಪರ್ಶಿಸುವ ಹಾಗೆ ಎಳೆಯಲಾದ ರೇಖೆಯ ಉದ್ದ | ದಾರದ ಅಳತೆ |
ವೃತ್ತ 1 | |||||||
ವೃತ್ತ 2 | |||||||
ವೃತ್ತ 3 |
ಮೇಲೆ ಚಿತ್ರಿಸಿದ ವೃತ್ತಗಳಿಗೆ ಮೌಲ್ಯಗಳನ್ನು ಗಮನಿಸಲು ದಾರ ಬಳಸಿ ಪರಿಧಿಯನ್ನು ಅಳೆಯಿರಿ. ನಿಮ್ಮ ಅವಲೋಕನಗಳನ್ನು ಸಹ ಗಮನಿಸಿ
ವೃತ್ತದ ಸಂಖ್ಯೆ | ಬಿಂದು 1 (ಕೇಂದ್ರದಿಂದ ರೇಖಾಖಂಡದ ಅಳತೆ ) | ಬಿಂದು 2 | ಬಿಂದು 3 | ಬಿಂದು 4 | ಬಿಂದು 5 | ಕೇಂದ್ರದ ಮೂಲಕ ವೃತ್ತವನ್ನು ಸ್ಪರ್ಶಿಸುವ ಹಾಗೆ ಎಳೆಯಲಾದ ರೇಖೆಯ ಉದ್ದ | ಪರಧಿ | ವೀಕ್ಷಣೆ(ಅವಲೋಕನ) |
ವೃತ್ತ 1 | ||||||||
ವೃತ್ತ 2 | ||||||||
ವೃತ್ತ 3 |
ವೃತ್ತವನ್ನು ಬರೆಯಿರಿ. ವೃತ್ತದ ಇನ್ನೊಂದು ಬಿಂದುವಿನಲ್ಲಿ ಛೇದಿಸಲು ವೃತ್ತದ ಕೇಂದ್ರದ ಮೂಲಕ ಹಾದುಹೋಗುವ ವೃತ್ತದ ಯಾವುದೇ ಬಿಂದುವಿನಿಂದ ರೇಖೆಯನ್ನು ಎಳೆಯಿರಿ. ರೇಖಾಖಂಡವನ್ನು ಗುರುತಿಸಿ. ವೃತ್ತದಲ್ಲಿ ವಿಭಿನ್ನ ಬಿಂದುಗಳನ್ನು ತೆಗೆದುಕೊಳ್ಳುವುದನ್ನು ಪುನರಾವರ್ತಿಸಿ. ನಿಮ್ಮ ಅವಲೋಕನಗಳನ್ನು ಗಮನಿಸಿ
ಕೇಂದ್ರದ ಮೂಲಕ ರೇಖಾಖಂಡ | ಅಳತೆ | ನಿಮ್ಮ ವೀಕ್ಷಣೆ |
ರೇಖಾಖಂಡ 1 | ||
ರೇಖಾಖಂಡ 2 | ||
ರೇಖಾಖಂಡ 3 |