ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು – ಕೈ ಮಿಂಗ್ ಚಂಗ್‍ ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ದೀಪಗಳನ್ನು ಆರಿಸಲು ಒಂದು ಶಿಸ್ತನ್ನು ಕಾಪಾಡಿಕೊಳ್ಳದಿರುವುದು

ಯಶಸ್ವೀ ನಾಯಕರಲ್ಲಿರಬೇಕಾದ ಪ್ರಮುಖ ಅಂಶ ಕಾಣ್ಕೆ, ಕನಸು ಕಾಣುವಿಕೆ ಅಥವಾ ದೃಷ್ಠಿಕೋನವನ್ನು ಬೆಳೆಸುವುದರ ಕುರಿತು ಇಲ್ಲಿ ಚರ್ಚಿಸಲಾಗಿದೆ. ಈ ಲೇಖನವು ನಾನು ಸ್ವತಃ ಪ್ರಯೋಗಗಳನ್ನು ಮಾಡುವುದರ ಮೂಲಕ ಕಂಡುಕೊಂಡ ಅನುಭವವಾಗಿದೆ. ಶಾಲಾ ದೃಷ್ಠಿಕೋನವನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿದ ಪ್ರಕ್ರಿಯೆಗಳ ಮೂಲಕ ಖಂಡಿತವಾಗಿ ಬೆಳೆಸಬಹುದು.

ಕಾಣ್ಕೆ ಎಂಬ ಕನಸು ಕಾಣೆ ಎಂದರೇನು?

ಓವನ್ಸ್ ಹೊಸ ಹಾಗೂ ಸುಧಾರಿತ ಸ್ಥಿತಿಯನ್ನು ಭವಿಷ್ಯದಲ್ಲಿ ತಲುಪುವುದು. ಅಂದರೆ ಒಬ್ಬ ವ್ಯಕ್ತಿ ತನಗೇನು ಬೇಕೆಂದು ಬಯಸುತ್ತಾನೋ ಅದೇ ಆ ವ್ಯಕ್ತಿಯ ಕಾಣ್ಕೆ. ಶಾಲೆಗೆ ಸಂಬಂಧಿಸಿದಂತೆ ನಮ್ಮ ಶಾಲೆ ಯಾವ ಸ್ಥಿತಿಯನ್ನು ತಲುಪಬೇಕೆಂದು ನಾವು ಊಹಿಸಿಕೊಳ್ಳುತ್ತೇವೆಯೋ ಅದೇ ಆ ಶಾಲೆಯ ಕಾಣ್ಕೆ. ಯಾವಾಗ ನಮ್ಮ ಶಾಲೆಯ ಕಾಣ್ಕೆ, ಕನಸು ಸಾಕಾರಗೊಳ್ಳುತ್ತದೆಯೋ ಆಗ ಆ ಶಾಲೆಯು ಯಶಸ್ವೀ ಶಾಲೆ ಎನಸಿಕೊಳ್ಳುತ್ತದೆ.

ಶಾಲಾ ನಾಯಕರುಗಳನ್ನು ಕುರಿತು ನಾನು ನನ್ನ ಅಧಿವೇಶನಗಳಲ್ಲಿ ಶಾಲೆಗಳಲ್ಲಿ ದೃಷ್ಠಿಕೋನ ಬೆಳೆಸುವುದರ ಬಗ್ಗೆ ಚರ್ಚಿಸುವಾಗ ನನ್ನ ಮೊದಲ ಪ್ರಶ್ನೆ ನಿಮ್ಮ ಶಾಲೆಯ ಬಗ್ಗೆ ನಿಮ್ಮ ಕನಸುಗಳೇನು? …….. ಎಂದಾಗ ಬರುವ ಉತ್ತರಗಳು ವೈವಿಧ್ಯಮಯ. ಇಲ್ಲಿ ಬರುವ ಉತ್ತರಗಳು ಮುಖ್ಯವಲ್ಲ, ಆದರೆ ಒಬ್ಬ ಶಾಲಾ ನಾಯಕನು ತನ್ನ ಶಾಲೆಯ ಬಗ್ಗೆ ನಿಜವಾಗಿಯೂ ಕನಸನ್ನು ಹೊಂದಿದ್ದಾನೆಯೇ? ಮತ್ತು ಯಾವ ರೀತಿಯ ಕನಸುಗಳನ್ನು ಶಾಲಾ ನಾಯಕರು ಹೊಂದಿರಬೇಕು. ಎಂದು ಸ್ವ ವಿಮರ್ಶೆ ಮಾಡಿಕೊಳ್ಳಲು ಒಂದು ಅವಕಾಶ.

ಒಮ್ಮೆ ನಾನು ಒಂದು ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಪ್ರಾಂಶುಪಾಲರು ಒಬ್ಬ ನಿವೃತ್ತ ಶಿಕ್ಷಣಾಧಿಕಾರಿಗಳು. ಅವರನ್ನು ಕುರಿತು ನೀವು ಈ ಶಾಲೆಯಲ್ಲಿ ಏನನ್ನು ಸಾಧಿಸಬೇಕೆಂದಿದ್ದೀರಿ? ಎಂದು ಕೇಳಿದಾಗ ಅವರು ಶಾಲೆಯ ಬಹಳ ಕೊಠಡಿಗಳು ಬಳಕೆಯಾಗುತ್ತಿಲ್ಲ, ಈ ಹಗಲಿನಲ್ಲೂ ದೀಪಗಳು ಉರಿಯುತ್ತಿವೆ ಇದರಿಂದ ನಮ್ಮ ಶಾಲೆಯ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ. ಆದ್ದರಿಂದ ಮೊದಲು ಈ ದುಂದುವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದರು. ಈ ಸನ್ನಿವೇಶದಲ್ಲಿ ಪ್ರಾಂಶುಪಾಲರು ಶಾಲೆಯ ಸಮಸ್ಯೆಗಳನ್ನು ಪರಿಹರಿಸುವುದನ್ನೇ ತಮ್ಮ ಶಾಲೆಯ ಕಾಣ್ಕೆಯಾಗಿ ಸ್ವೀಕರಿಸಿದ್ದಾರೆ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಹೊಸದಾಗಿ ಪ್ರಾಂಶುಪಾಲರಾಗಿ ಶಾಲೆಗೆ ಬಂದಿರುವವರಿಗೆ ಪರಿಹರಿಸಲು ಸಾಕಷ್ಟು ಸವಾಲುಗಳು ಇರುತ್ತವೆಯಾದರೂ, ಶಾಲಾ ಸಮಸ್ಯೆಗಳಲ್ಲಿನ ಒಂದು ಚಿಕ್ಕ ಸಮಸ್ಯೆ ವಿದ್ಯುತ್ ಬಿಲ್ ಹೆಚ್ಚಾಗಿರುವುದೂ ಕೂಡಾ ಹೌದು.ಆದರೆ ಒಂದು ಶಾಲೆಯ ನಾಯಕರಾದ ಪ್ರಾಂಶುಪಾಲರಿಗೆ ವಿದ್ಯುತ್ ಬಿಲ್ ಉಳಿಸುವುದೇ ಒಂದು ಪ್ರಮುಖ ಗುರಿಯಾಗಬಾರದು.

ಈ ಮೇಲಿನ ಸನ್ನಿವೇಶವನ್ನು ಉದಾಹರಣೆಯಾಗಿ ನನ್ನ ಅಧಿವೇಶನಗಳಲ್ಲಿ ಹಂಚಿಕೊಂಡು ಚರ್ಚೆಯನ್ನು ಉದ್ದೀಪನ ಗೊಳಿಸಲು ಈ ಶಾಲೆಯ ಸಮಸ್ಯೆಯೇನು? ಎಂದು ಪ್ರಶ್ನಿಸಿದಾಗ ಬಂದ ಉತ್ತರಗಳು ವೈವಿಧ್ಯಮಯವಾಗಿದ್ದು ಅವು ಹೀಗಿವೆ.

ದೀಪಗಳನ್ನು ಆರಿಸಲು ಒಂದು ಶಿಸ್ತನ್ನು ಕಾಪಾಡಿಕೊಳ್ಳದಿರುವುದು

ದೀಪಗಳನ್ನು ಆರಿಸುವ ತಾಂತ್ರಿಕ ವ್ಯವಸ್ಥೆಯನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳದಿರುವುದು. ಆ ಶಾಲೆಯ ಸಿಬ್ಬಂದಿಯ ಸಹಕಾರದ ಕೊರತೆ

ಅವರ ಶಾಲೆಯಲ್ಲಿ ನಿರ್ವಹಣೆಯ ಕೊರತೆ ಎಂದು ಬಹಳ ಜನರು ಉತ್ತರಿಸಿದ್ದು, ಯಾರೋ ಕೆಲವರು ಮಾತ್ರ ಆ ಶಾಲೆಗೆ ಪ್ರಾಂಶುಪಾಲರೇ ಸಮಸ್ಯೆ ಎಂದು ಹೇಳಿದರು. ಇಲ್ಲಿನ ಚರ್ಚೆಯನ್ನು ಗಮನಿಸಿದಾಗ ಶಾಲಾ ನಾಯಕರಲ್ಲಿ ಶಾಲೆಯ ಬಗ್ಗೆ ಇರುವ ಕಾಣ್ಕೆಯ ಕೊರತೆಯನ್ನು ಕಾಣಬಹುದು. ಸದರಿ ಶಾಲೆಯ ಪ್ರಾಂಶುಪಾಲರು ವಿದ್ಯುತ್ ಬಿಲ್‍ನ ಬಗ್ಗೆ ಯೋಚಿಸುತ್ತಾ ಅದನ್ನೇ ತಮ್ಮ ಮನಸ್ಸಿನಲ್ಲಿ ತುಂಬಿಕೊಂಡು, ಒಬ್ಬ ಉತ್ತಮ ಶಾಲಾ ನಿರ್ವಾಹಕನಂತೆ ಮಕ್ಕಳ ಕಲಿಕೆ ಬಗ್ಗೆ ಕಾಳಜಿ, ಕಲಿಕೆಯಲ್ಲಿ ನಾವೀನ್ಯತೆ, ಶಾಲಾ ಸಂಸ್ಕøತಿಯ ನಿರ್ವಹಣೆ ಬೆಳೆಸುತ್ತಾನೆಂದು ನಂಬುವುದು ಕಷ್ಠ.

ಎಲ್ಲಾ ಶಾಲಾ ಮುಖ್ಯಸ್ಥರೂ ತಮ್ಮ ಶಾಲೆಯ ಬಗ್ಗೆ ವಿಶೇಷವಾದ ಕಾಣೆಯನ್ನು ಹೊಂದಿರುತ್ತಾರೆಂದು ಭಾವಿಸುವುದು ಕಷ್ಠ. ಅದರಲ್ಲೂ ಅಧಿಕಾರಿಶಾಹಿಯಿಂದ ತುಂಬಿದ ಸರ್ಕಾರಿ ಶಾಲೆಗಳಲ್ಲಿ ಅನುದಾನವನ್ನು ನಿರ್ಧಿಷ್ಠ ಉದೇಶಗಳಿಗೆ ಮಾತ್ರವೇ ಬಳಸಬೇಕಿದೆ. ಈ ಶಾಲೆಗಳಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸುವುದೇ ಶಾಲಾ ಮುಖ್ಯಸ್ಥರ ಗುರಿ ಮತ್ತು ಉದ್ದೇಶಗಳಾಗುತ್ತವೆ. ಇದಕ್ಕೇನಾದರೂ ತಪ್ಪಿದಲ್ಲಿ ಅದು ನಕಾರಾತ್ಮಕ ಎನಿಸಿಕೊಳ್ಳುತ್ತದೆ. ಇಂಥಹ ಶಾಲೆಗಳಲ್ಲಿ ವಿದ್ಯಾರ್ಥಿಯ ಹಾಗೂ ಸಮುದಾಯದವರ ಹಿತರಕ್ಷಣೆಗಿಂತ ಮುಖ್ಯವಾಗಿ ವ್ಯವಸ್ಥಾಪಕರ ಅಥವಾ ರಾಜಕೀಯ ಮುಖ್ಯಸ್ಥರ ಅಣತಿಯಂತೆ ನಡೆದು ಕೊಳ್ಳಬೇಕಾಗುತ್ತದೆ. ಈ ಶಾಲೆಗಳ ಮುಖ್ಯಸ್ಥರ ಕನಸುಗಳು ಗೌಣವಾಗುತ್ತವೆ.


ಕಾಣ್ಕೆಯ ಪರಿಣಾಮ( ವಿಷನ್ ಮೇಕ್ಸ ಅ ಡಿಫರೆನ್ಸ್)

ನಮ್ಮ ಸರ್ಕಾರೀ ಶಾಲೆಗಳಲ್ಲಿ ಒಂದೇ ರೀತಿಯ ಅನುದಾನ ಮತ್ತು ಪ್ರಕ್ರಿಯೆಗಳಿದ್ದಾಗ್ಯೂ ಆ ಶಾಲೆಗಳ ಸಾಧನೆಗಳಲ್ಲಿ ಭಿನ್ನತೆಯನ್ನು ಕಾಣಬಹುದು. ಚೀನ ಮತ್ತು ಜಪಾನ್ ದೇಶಗಳಲ್ಲಿಯೂ ಇದೇ ಸಂಸ್ಕøತಿಯನ್ನು ಕಾಣಬಹುದು. ಚೀನಾ ದೇಶದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಎಷ್ಟೇ ದೊಡ್ಡದಿದ್ದರೂ ಅವುಗಳ ಸಾಧನೆಯೂ ಅಷ್ಟೇ ದೊಡ್ಡದಿದೆ. ಸಮುದಾಯ ಹಾಗೂ ದೇಶವು ನಮ್ಮ ಮಕ್ಕಳು ನಮ್ಮ ದೇಶದ ಗುರಿ ಮತ್ತು ಕಾಣ್ಕೆಗಳನ್ನು ಈಡೇರಿಸಬೇಕು ಎಂದು ನಿರೀಕ್ಷಿಸುತ್ತದೆ. ಚೀನಾ ದೇಶವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಒಂದೇ ರೀತಿಯ ಗುರಿ ಮತ್ತು ಉದ್ದೇಶಗಳನ್ನು ಹೊಂದಿದ್ದಾಗ್ಯೂ ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಾಧನೆ ಅತ್ಯುತ್ತಮವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದೆ. ಸರ್ಕಾರಿ ಶಾಲೆಗಳ ಸಂಖ್ಯೆ ದೊಡ್ಡದಿದ್ದರೂ ಆ ಶಾಲೆಗಳು ಹೊಂದಿರುವ ಸ್ಪಷ್ಟ ಹಾಗೂ ನಿರ್ಧಿಷ್ಟ ಕಾಣ್ಕೆ ಗುರಿಯಿಂದಾಗಿ ಉತ್ಕøಷ್ಟ ಗುಣಮಟ್ಟವನ್ನು ಹೊಂದಿವೆ.

ಹಾಂಕಾಂಗ್‍ನ ಒಂದು ಸುಪ್ರಸಿದ್ಧ ಶಾಲೆಯು ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಆ ಶಾಲೆಯಲ್ಲಿ ಮಕ್ಕಳಿಗೆ ಗೃಹಪಾಠವನ್ನೇ ನೀಡುವುದಿಲ್ಲ. ಮಕ್ಕಳಿಗೆ ಹೆಚ್ಚು ಗೃಹಪಾಠವನ್ನು ನೀಡಬೇಕು ಎಂದು ನಿರೀಕ್ಷಿಸುವ ಪೋಷಕರಿರುವಾಗ ಅದು ಇತರೇ ಶಾಲೆಗಳಿಗಿಂತ ಭಿನ್ನವಾಗಿದೆ. ಅಲ್ಲದೇ ಅವರ ಕಲಿಕೆಯೂ ಉತ್ತಮವಾಗಿದೆ. ಈ ಶಾಲೆಯ ಬಗ್ಗೆ ಅಧ್ಯಯನ ಮಾಡಲು ಹೋದಾಗ ಆ ಶಾಲೆಯ ಪ್ರಾಂಶುಪಾಲರು ಮಕ್ಕಳ ಸಂತಸದಾಯಕ ಶಾಲೆ ಎಂಬುದೇ ಅವರ ಕನಸಾಗಿದ್ದುದು ಮನನವಾಯಿತು. ಅವರ ಸಂತಸದಾಯಕ ಶಾಲೆ ಮಕ್ಕಳ ಸಂತಸದಾಯಕ ಕಲಿಕೆಗೆ ಪ್ರೇರಣೆಯಾಗಿತ್ತು. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಯುತ್ತಿದ್ದೇನೆ ಎಂದು ತಿಳಿಯದಂತೆ ಕಲಿಸಿದ್ದರಿಂದ ಮಕ್ಕಳಲ್ಲಿ ಸಹಜವಾಗಿ ಅವರ ಶೈಕ್ಷಣಿಕ ಮಟ್ಟವೂ ಹೆಚ್ಚಾಗಿ, ಶಾಶ್ವತವಾದ ಕಲಿಕೆಯಾಗಿ ಪೋಷಕರ ಮನ್ನಣೆಗೆ ಒಳಗಾಗಿತ್ತು.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಹಾಂಕಾಂಗ್‍ನ ಇನ್ನೊಂದು ಪ್ರಸಿದ್ಧ ಶಾಲೆಯ ಹಳೇ ವಿದ್ಯಾಥಿಗಳ ಕೂಟದಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗೈದ ಉತ್ತಮ ಪ್ರಜೆಗಳಾದ ಆ ಶಾಲೆಯ ಹಳೇ ವಿದ್ಯಾರ್ಥಿ ಬಗ್ಗೆ ತಿಳಿಯಲು ಪ್ರಾಂಶುಪಾಲರನ್ನು ಸಂದರ್ಶಿಸಿದಾಗ ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಬೆಳೆಸುವುದು ಅವರ ಕನಸಾಗಿತ್ತು ಎಂದು ತಿಳಿಯಿತು. ಆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿಯಮಗಳನ್ನು ಹೇರುವ ಬದಲಾಗಿ ಅವರೇ ಸ್ವ ಪ್ರೇರಣೆಯಿಂದ ಶಾಲೆಯ ನಿರೀಕ್ಷೆಯನ್ನು ತಲುಪುವ ಕ್ರಿಯೆ ಅನಾಯಾಸವಾಗಿ ನಡೆಯುತ್ತಿತ್ತು. ಈ ಸನ್ನಿವೇಶದಲ್ಲಿ ಶಾಲೆಯ ನಿಯಮಗಳಲ್ಲದೆ, ಮೌಲ್ಯಗಳು, ನಿರೀಕ್ಷೆಗಳೂ ಸಹ ಮಕ್ಕಳ ಉನ್ನತ ಭವಿಷ್ಯಕ್ಕೆ ಸಹಾಯಕ ಎಂದು ಮನವರಿಕೆಯಾಯಿತು.

ಈ ಎರಡೂ ಉದಾಹರಣೆಗಳನ್ನು ಗಮನಿಸಿದಾಗ ಪ್ರತಿಯೊಂದು ಶಾಲೆಯು ತನ್ನದೇ ಆದ ಕಾಣ್ಕೆ, ಗುರಿ, ದೂರದೃಷ್ಠಿಯನ್ನು ಹೊಂದ್ದಿದ್ದಲ್ಲಿ, ಆ ಗುರಿಯೇ ಆ ಶಾಲೆಯನ್ನು ಮುನ್ನಡೆಸುತ್ತದೆ ಎಂದು ಸ್ಪಷ್ಟವಾಗುತ್ತದೆ ಹಾಗಾಗಿ ಪ್ರತಿಯೊಂದು ಶಾಲೆಯೂ ತನ್ನದೇ ಆದ ಗುರಿ ಹೊಂದಿರಲೇಬೇಕಾದ ಅನಿವಾರ್ಯತೆ ಇದೆ. ಮೊದಲನೆಯದಾಗಿ ಆ ಶಾಲೆಯ ಗುರಿಯಂತೆ ಆ ಶಾಲೆ ಗುಣಮಟ್ಟ ಇರುತ್ತದೆ. ಎರಡನೆಯದಾಗಿ ಒಂದು ಶಾಲೆಯ ಉತ್ತಮ ಗುರಿ ಆ ಶಾಲೆಯ ಸಂಸ್ಕøತಿ ಮತ್ತು ಮೌಲ್ಯಗಳನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ಚೀನಾ ದೇಶದಲ್ಲಿ ಪರೀಕ್ಷಾಧಾರಿತ ಶಿಕ್ಷಣಕ್ಕೆ ಬದಲಾಗಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಇಂದಿಗೂ ಆ ಶಾಲೆಯ ಪರೀಕ್ಷಾ ಫಲಿತಾಂಶವೇ ಆ ಶಾಲೆಯ ಗುಣಮಟ್ಟವನ್ನು ಸೂಚಿಸುತ್ತದೆ. ಕೇವಲ ಅಂಕಗಳನ್ನು ಗಳಿಸುವುದನ್ನೇ ಗುರಿಯಾಗಿಸಿಕೊಂಡ ಪ್ರಾಂಶುಪಾಲರಿರುವ ಶಾಲೆಯನ್ನು ಉತ್ತಮ ಶಾಲೆಯೆಂದು ಗುರುತಿಸಲಾಗುತ್ತದೆ. ಮೂರನೆಯದಾಗಿ ಆ ಶಾಲೆಯ ಸಾಧನೆಗಳ ಮೂಲಕ ಆ ಶಾಲೆಯ ಗುರಿಯನ್ನು ತಿಳಿಯಬಹುದು. ನಾಲ್ಕನೆಯದಾಗಿ ಗುರಿಗಿಂತ ಹೆಚ್ಚಾಗಿ ಪ್ರಾಂಶುಪಾಲರ ನಿಜವಾದ ಬದ್ಧತೆಯೇ ಆ ಶಾಲೆಯ ಕಾಣ್ಕೆಯನ್ನು ಪೂರೈಸುತ್ತದೆ.

ಒಬ್ಬ ಶಾಲಾ ನಾಯಕನು ತನ್ನ ಶಾಲೆಗೆ ಏನು ಬೇಕೆಂದು ಬಯಸುತ್ತಾನೋ ಅದೇ ಆ ಶಾಲೆಯ ಗುರಿಯಾಗುತ್ತದೆ. ಮೇಲಿನ ಉದಾಹರಣೆಗಳನ್ನು ನೋಡಿದಾಗ, ಒಂದು ಶಾಲೆಯಲ್ಲಿ ಮಕ್ಕಳ ಸಂತಸಕ್ಕಾಗಿ ಮಕ್ಕಳಿಗೆ ಗೃಹಪಾಠವನ್ನು ನೀಡುವುದನ್ನೇ ಕೈಬಿಡಲಾಗಿತ್ತು. ಇನ್ನೊಂದು ಶಾಲೆಯಲ್ಲಿ ಮಕ್ಕಳ ಮೇಲೆ ನಿಯಮಗಳನ್ನು ಒತ್ತಾಯಮಾಡಿ ಹೇರುವ ಬದಲಾಗಿ ಮೌಲ್ಯಗಳ ಮೂಲಕ, ನಿರೀಕ್ಷೆಗಳ ಮೂಲಕ ಮಕ್ಕಳೇ ಸ್ವಪ್ರೇರಣೆಯಿಂದ ನಿಯಮಗಲನ್ನು ಪಾಲಿಸುವಂತೆ ಮನೊಲಿಸಲಾಗಿತ್ತು. ಶಾಲಾ ನಾಯಕರಲ್ಲಿ ಕೇವಲ ಗುರಿಗಳಿದ್ದರೆ ಸಾಲದು ಬದಲಾಗಿ ಆ ಗುರಿಯನ್ನು ಮುಟ್ಟಲೇ ಬೇಕೆನ್ನುವ ಪ್ರಬಲವಾದ ಇಚ್ಚಾಶಕ್ತಿಯೂ ಇರಬೇಕು.


ಕಾಣ್ಕೆ ಮತ್ತು ಸಂಪನ್ಮೂಲ

ಒಮ್ಮೆ 1998ರಲ್ಲಿ ಹಾಂಕಾಂಗ್ನಲ್ಲಿ ಆರು ನೂರು ಮಿಲಿಯನ್ ಡಾಲರ್ ಹಣವನ್ನು ಗುಣಾತ್ಮಕ ಶಿಕ್ಷಣಕ್ಕಾಗಿ ಮೀಸಲಿಟ್ಟದ್ದರು. ಆ ಹಣವನ್ನು ಅಸಾಂಪ್ರದಾಯಿಕ ಶಾಲಾ ಚಟುವಟಿಕೆಗಳಿಗೆ ಬಳಸಬೇಕೆಂಬ ಸೂಚನೆ ಇತ್ತು. ಅದಕ್ಕಾಗಿ ಶಾಲಾ ನಾಯಕರ ಒಂದು ಸಭೆಯನ್ನು ಏರ್ಪಡಿಸಿ ಅವರನ್ನು ಕುರಿತು ನಿಮ್ಮ ಶಾಲೆಗೆ ಒಂದು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದಾಗ ಅಲ್ಲಿದ್ದವರು ಜೋರಾಗಿ ನಗುತ್ತಾ, ಕಡಲೇಕಾಯಿ ಎಂದು ಉತ್ತರಿಸಿದರು. ಹತ್ತು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ? ಎಂದಾಗ, ಅವರಲ್ಲಿ ಪಿಸುಮಾತಿನ ಚರ್ಚೆಯ ಜೊತೆಗೆ ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುವ ಪ್ರಕ್ರಿಯೆ ಸಾಗಿತ್ತು. ಹತ್ತು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ? ಎಂದು ಕೇಳಿದಾಗ ಅವರಲ್ಲಿ ಗದ್ದಲತುಂಬಿತ್ತು ಹಾಗೂ ಅವರು ಅದನ್ನು ನಂಬುವಂತೆಯೇ ಇರಲಿಲ್ಲ. ಅಷ್ಟು ಹಣ ಬರಬಹುದೆಂಬ ನಿರೀಕ್ಷೆಯೂ ಇರಲಿಲ್ಲ. ಮುಂದೆ ಚರ್ಚೆಯನ್ನು ಮುಂದುವರೆಸಿ, ಮಿಲಿಯನ್ ಡಾಲರ್ ಬಗ್ಗೆ, ಹತ್ತು ಮಿಲಿಯನ್ ಡಾಲರ್ ಬಗ್ಗೆ ಪ್ರಶ್ನಿಸಿದಾಗ ಆ ಶಾಲಾ ನಾಯಕರೆಲ್ಲಾ ಬಿಟ್ಟ ಬಾಯಿ ಬಿಟ್ಟಂತೆ ನಿಶಬ್ಧವಾಗಿದ್ದರು. ಏಕೆಂದರೆ ಇಷ್ಟೊಂದು ಹಣ ಅವರ ಕಲ್ಪನೆಗೆ ನಿಲುಕದಾಗಿತ್ತು.


ಇದೆಲ್ಲವನ್ನು ಗಮನಿಸಿದಾಗ ಕಾಣ್ಕೆ ಎಂದರೆ ಕನಸು ಕಾಣುವಿಕೆ. ಕಾಣ್ಕೆ ವಾಸ್ತವದಾಚೆಗೆ ಚಿಂತಿಸುವಂತೆ ಮಾಡುತ್ತದೆ. ಈ ಚಿಂತನೆಗಳಿಗೆ ಯಾವುದೇ ಮಿತಿಗಳಿರುವುದಿಲ್ಲ. ಅದು ಕಲ್ಪನಾತೀತವಾಗಿರುತ್ತದೆ. ಎರಡನೆಯದಾಗಿ ಕಾಣ್ಕೆ ಎಂದರೆ ಬಯಕೆ ಆ ಬಯಕೆ ವಾಸ್ತವದಲ್ಲಿ ತುಂಬಾ ದೂರದಲ್ಲಿದ್ದು,ಅದನ್ನು ಸಾಧಿಸುವತ್ತ ನಾವು ಸಾಗುತ್ತೇವೆ. ಕಾಣ್ಕೆ ಎಂದರೆ ಇರುವುದರಿಂದ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವತ್ತ ಸಾಗುವ ಪ್ರಯಾಣದ ಅಂತರ. ಕೆಲವೊಮ್ಮೆ ಶಾಲಾ ನಾಯಕರು ನನಗೆ ಸಾಕಷ್ಟು ಕಾಣ್ಕೆ ಇದ್ದರೂ ಅದನ್ನು ಸಾಧಿಸಲು ಸಾಕಷ್ಟು ಅಡೆತಡೆಗಳಿವೆ ಎಂದು ಹೇಳೂತ್ತಿರುತ್ತಾರೆ. ಈ ರೀತಿಯ ಹೇಳಿಕೆಗಳು ಆ ವ್ಯಕ್ತಿಯ ಕಾಣ್ಕೆಯ ಕೊರತೆಯನ್ನು ಬಿಂಬಿಸುತ್ತವೆ. ವಾಸ್ತವದಲ್ಲಿ ಕಾಣ್ಕೆ ಎಂದರೆ ಇರುವ ತೊಂದರೆಗಳನ್ನು ದಾಟಿ ಮುಂದೆ ಸಾಗುವುದೇ ಆಗಿದೆ. ಇಲ್ಲದಿದ್ದಲ್ಲಿ ಆ ಶಾಲಾ ನಾಯಕ ತನ್ನ ವಾಸ್ತವಸ್ಥಿತಿಯನ್ನು, ಬಲಹೀನತೆಯನ್ನು ಒಪ್ಪಿಕೊಂಡು ಇರುವಲ್ಲಿಯೇ ಇರುವಂತಾಗಿದೆ. ಅವರು ತಮ್ಮ ಇತಿಮಿತಿಗಳ ಆಚೆ ಏನನ್ನೂ ಆಲೋಚಿಸುವುದಿಲ್ಲ ಹಾಗೂ ಹೊಸದೇನನ್ನೂ ಸೃಷ್ಟಿಸುವುದಿಲ್ಲ.


ಸಂಪನ್ಮೂಲಗಳ ಆಚೆ ಕಾಣ್ಕೆ

ಕಾಣ್ಕೆ ಎಂದರೆ ಕೇವಲ ಸಂಪನ್ಮೂಲಗಳ ಬಗ್ಗೆ ಅಲ್ಲ. ಮೇಲೆ ಚರ್ಚಿಸಿದಮೆ ಒಂದು ಶಾಲೆ ಗೃಹಪಾಠದ ಬಗ್ಗೆ, ಮತ್ತು ಇನ್ನೊಂದು ಶಾಲೆ ಮೌಲ್ಯಗಳಬಗ್ಗೆ ಕಾಣ್ಕೆಯನ್ನು ಹೊಂದಿದೆ. ಇವೆರಡೂ ಶಾಲೆಗಳು ಸಹ ಸಂಪನ್ಮೂಲಗಳ ಕ್ರೋಢೀಕರಣವನ್ನು ತಮ್ಮ ಶಾಲೆಗಳ ಕಾಣ್ಕೆಯಾಗಿ ತೆಗೆದುಕೊಂಡಿಲ್ಲ. ಈ ಶಾಲೆಗಳು ತಮ್ಮ ಶಾಲೆಗಳು ಯಶಸ್ವೀಗೊಳಿಸುವುದರತ್ತ ಕಾಣ್ಕೆಯನ್ನು ಕೇಂದ್ರೀಕರಿಸಿದ್ದಾರೆ.

1986ರಲ್ಲಿ ಸಿಂಗಪೂರ್‍ನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಮುಖ್ಯಸ್ಥರು ಅಮೇರಿಕ ಮತ್ತು ಇಂಗ್ಲೆಂಡ್ ನ ಅತ್ಯುತ್ತಮ ಶಾಲೆಗಳಿಗೆ ಇಲಾಖಾವತಿಯಿಂದ ಕಳುಹಿಸಿ, ಆ ಶಾಲೆಗಳ ಯಶಸ್ಸಿನ ಕಾರಣಗಳನ್ನು ತಿಳಿಯಲು ಭೇಟಿನೀಡಿದರು. ಆ ಎಲ್ಲಾ ಮುಖ್ಯಸ್ಥರು ತುಂಬಾ ಸಂತೃಪ್ತಿಯಿಂದ ಹಿಂದಿರುಗಿದ್ದರು. ಅದರೆ ಅವರೆಲ್ಲಾ ತುಂಬಾ ಆಶ್ಚರ್ಯದಿಂದ ಅವರ ಪ್ರಕ್ರಿಯೆಗಳ ಬಗ್ಗೆ ಗಮನಿಸಿದರು. ಆ ಶಾಲೆಗಲಲ್ಲಿ ಶಾಲಾ ನಿರ್ವಹಣೆಯ ಅಕ್ಷರಸಹ ನಿಜವಾಗಿತ್ತು. ಅದರಲ್ಲೂ ಪ್ರಮುಖವಾಗಿ ಆ ಶಾಲೆಗಳ ಮುಖ್ಯಸ್ಥರು ಮಕ್ಕಳ ಜೊತೆಗೆ ಬೆರೆಯುವ ಪ್ರಕ್ರಿಯೆ ತುಂಬಾ ಸಂತೃಪಿಯನ್ನು ಉಂಟು ಮಾಡಿತು. ಉದಾಹರಣೆಗೆ ಆ ಶಾಲೆಗಳ ಮುಖ್ಯಸ್ಥರು ತಮ್ಮ ಮಕ್ಕಳ ಜೊತೆ ನಾಟಕಗಲಲ್ಲಿ ಅಭಿನಯಿಸುತ್ತಿದ್ದರು, ಬ್ಯಾಸ್ಕೆಟ್ ಬಾಲ್ ಆಡುತ್ತಿದ್ದರು. ಈ ರೀತಿಯಾಗಿ ಮಕ್ಕಳು ಮತ್ತು ಶಿಕ್ಷಕರ ಸಹಭಾಗಿತ್ವದ ಕಲಿಕೆ ಸಿಂಗಪೂರ್ ಸರ್ಕಾರಕ್ಕೆ ಪ್ರೇರಣೆಯನ್ನು ನೀಡುತ್ತಾ, ಇಂಥಹ ಶಾಲೆಗಳಿಂದ ಪ್ರೇರೇಪಿತರಾಗಿ ಸಾರ್ವಜನಿಕ ಶಾಲೆಗಳಿಗೆ ಸಾಕಷ್ಟು ಸ್ವಾಯತ್ತತೆಯನ್ನು ನೀಡಿತು.

ಬೀಜಿಂಗ್ ನ ನಂ 4ನೇ ಮಾಧ್ಯಮಿಕ ಶಾಲೆಯಲ್ಲಿ 1990ರಿಂದ ಬೋಧನಾ ಅವಧಿಗಳನ್ನು ಕಡಿತಗೊಳಿಸಲಾಯಿತು. ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ಭೌತಶಾಸ್ತ್ರ ವಿಷಯದಲ್ಲಿಯೂ ಸಹ ಬೋಧನಾ ಅವಧಿಗಳನ್ನು ಕಡಿತಗೊಳಿಸಲಾಯಿತು. ಉದಾಹರಣೆಗೆ ವಾರಕ್ಕೆ 5ಅವಧಿಯಿದ್ದ ಭೌತಶಾಸ್ತ್ರದ ಅವಧಿಗಳನ್ನು ವಾರಕ್ಕೆ 2 ರಂತೆ ಇಳಿಸಲಾಯಿತು. ಮಕ್ಕಳ ಕಲಿಕೆಯನ್ನು ಗಮನಿಸಿದಾಗ ಕಡಿಮೆ ಭೌತಶಾಸ್ತ್ರದ ಅವಧಿಯಲ್ಲಿ ಕಲಿತ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದರು. ಇದು ಅವರ ಶಿಕ್ಷಣದ ಇಲಾಖೆಯ ಸುಧಾರಣೆಗಳಿಗೆ ಬುನಾದಿಯಾಯಿತು. ನಂತರ ಇದೇ ಪದ್ದತಿಯನ್ನು ಬೇರೆ ಬೇರೆ ನಗರಗಳಿಗೂ ವಿಸ್ತರಿಸಲಾಯಿತು. 1990ರಲ್ಲಿ ಶಾಂಗಾಯ್ ಸರ್ಕಾರ ತನ್ನ ಪಠ್ಯಕ್ರಮವನ್ನೇ ಬದಲಾಯಿಸಿ ಅತ್ಯಂತ ಕಠಿಣ ವಿಷಯಗಳಿಗೂ ಸಹ ವಾರಕ್ಕೆ 2-3 ಅವಧಿಗಳನ್ನು ಸೀಮಿತಗೊಳಿಸಲಾಯಿತು.

ಈ ಎಲ್ಲಾ ಪ್ರಕ್ರಿಯೆಗಳು ಯಾವುದೇ ದೃಷ್ಠಿಕೋನಗಳಿಂದ ಹೊರತಾಗಿಲ್ಲ. ನಾನು ಈ ಹಿಂದೆ ಶಾಲಾ ಕೊಠಡಿಗಳಲ್ಲಿ ಕಲಿಕೆಗೆ, ಅದರಲ್ಲೂ ಬೋಧನೆಗೆ ಒತ್ತು ಕೊಡಬೇಕು ಅಂದುಕೊಂಡಿದ್ದ ನನ್ನ ಅಭಿಪ್ರಾಯ ಬದಲಾಗಿತ್ತು. ಆದರೆ ಈ ಎಲ್ಲಾ ಸುಧಾರಣೆಗಳು ಒಂದು ಉತ್ತಮ ವಿನ್ಯಾಸದೊಂದಿಗೆ ಕಲಿಯುವಂಥಹ ಪಕ್ರಿಯ್ರೆಯಲ್ಲಿ ಮಕ್ಕಳನ್ನು ತೊಡಗಿಸಿದಲ್ಲಿ, ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಒಂದು ಉತ್ತಮವಾದ ಕಾಣ್ಕೆ ಹೊಂದಿದ್ದಲ್ಲಿ ಮಕ್ಕಳ ಕಲಿಕೆಗೆ ಹೆಚ್ಚು ಸಂಪನ್ಮೂಲಗಳ ಅಗತ್ಯವಿಲ್ಲ ಎಂಬುದು ಈ ಮೇಲಿನ ಉದಾಹರಣೆಯಲ್ಲಿ ಸ್ಪಷ್ಟವಾಗುತ್ತದೆ.


ಕಾಣ್ಕೆಯ ಪ್ರಮುಖ ಘಟ್ಟಗಳು ಹಾಗೂ ಮೌಲ್ಯಗಳು

ವಿವಿಧ ಶಾಲೆಗಳ ನಾಯಕರು ತಮ್ಮ ಶಾಲೆಗಳಿಗೆ ಬೇರೆಬೇರೆ ದೃಷ್ಠಿಕೋನ ಹೊಂದುವುದರ ಮೂಲಕ ಶಾಲಾ ಯಶಸ್ಸಿಗೆ ಶ್ರಮಿಸುತ್ತಾರೆ. ಒಂದೊಂದು ಶಾಲೆಯೂ ಒಂದೊಂದು ಮೌಲ್ಯವನ್ನು ಎತ್ತಿ ತೋರಿಸುತ್ತದೆ.

ನಾವು ಏಷ್ಯಾದಲ್ಲೇ ನಂ 1 ಈ ರೀತಿಯ ಕಾಣ್ಕೆಯನ್ನು ವಿಶ್ವ ವಿದ್ಯಾಲಯಗಳು ಹೊಂದಬಹುದಾಗಿದೆ. ಆದರೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ವ್ಯಾಪ್ತಿ ಕಡಿಮೆ ಇರುವುದರಿಂದ ನಗರದಲ್ಲಿಯೇ ಅತ್ಯುತ್ತಮ ಶಾಲೆ ನಗರದ ನಂ 1 ಶಾಲೆ ಎನ್ನುವ ಕಾಣ್ಕೆಯನ್ನು ಹೊಂದಬಹುದಾಗಿದೆ. ‘ನಂ 1 ಶಾಲೆ’ ಎಂದರೆ ಅನೇಕ ಆಯಾಮಗಳ ಅರ್ಥ ಬರುತ್ತದೆ.

ಶಾಲೆಯ ಶೈಕ್ಷಣಿಕ ಗುಣಮಟ್ಟ -ಇದನ್ನು ಬೇರೆ ಬೇರೆ ಪ್ರವೇಶ ಪರೀಕ್ಷೆಗಳಲ್ಲಿ ಮಕ್ಕಳು ಗಳಿಸುವ ಅಂಕಗಳ ಆಧಾರದ ಮೇಲೆ ನಿರ್ಧರಿಸ ಬಹುದಾಗಿದೆ. ಸರ್ವಾಂಗೀಣ ಅಭಿವೃದ್ಧಿ -ಇದನ್ನು ಆಶಾಲೆಯ ವಿದ್ಯಾರ್ಥಿಗಳು ಗಳಿಸುವ ಬೇರೆಬೇರೆ ಬಹುಮಾನಗಳನ್ನು ಅವಲೋಕಿಸುವುದರ ಮೂಲಕ ಗಮನಿಸಬಹುದು.

ಶಾಲೆಯ ಪ್ರಸಿದ್ಧಿ - ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸಿದಾಗ ಆ ಚಶಾಲೆಯ ಪ್ರಸಿದ್ಧಿಯನ್ನು ಸೂಚಿಸುತ್ತದೆ. ಪ್ರಾಯೋಗಿಕವಾಗಿ ಈ ರೀತಿಯ ಕಾಣ್ಕೆಗಳಿದ್ದಲ್ಲಿ, ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ, ಆಟೋಟ ಸ್ಪರ್ಧೆಗಳು, ಬಹುಮಾನಗಳು, ವಿವಿಧ ಸ್ಪರ್ಧೆಗಳಲ್ಲಿ ವಿಜೇತ, ತಾಂತ್ರಿಕತೆ, ಶಾಲಾ ಬೆಳವಣಿಗೆ ಈ ಎಲ್ಲವನ್ನೂ ಸಾಧಿಸಲು ಸಹಕಾರಿಯಾಗುತ್ತದೆ. ಅಲ್ಲದೆ ಶಲೆಗೆ ಉತ್ತಮ ದರ್ಜೆ ಹೆಸರೂ ತಂದುಕೊಡುತ್ತದೆ. ನಂ 1 ಶಾಲೆ

ಯಾವುದೇ ಶಾಲೆ ಹೊಂದಿರುವ ಸಾಮಾನ್ಯ ಗುರಿಗಳಿಗೆ ವಿಷೇಶವಾದ ಸಾಧಿಸಬಹುದಾದ ಹಾಗೂ ಯಶಸ್ಸನ್ನು ಪರಿಮಾಣಿಸ ಬಹುದಾದ ಗುರಿಯನ್ನು ಹೊಂದಿರುತ್ತದೆ. ಉದಾಹರಣೆಗೆ ನಂ 1 ಅನ್ನು ಮಾನವೀಯತೆ ಅಥವಾ ವಿದ್ಯಾರ್ಥಿಗಳ ವರ್ತನೆ ಆಗಿರುತ್ತದೆ. ನಾವು ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 100ಕ್ಕೆ 100ಅಷ್ಟು ಫಲಿತಾಂಶವನ್ನು ಸಾಧಿಸುತ್ತೇವೆ. ಹಾಂಕಾಂಗ್ನಲ್ಲಿ ಶಾಲಾ ಮಂಡಳಿ ಸದಸ್ಯರು ಶಿಕ್ಷಣದ ಬಗ್ಗೆ ಕಡಿಮೆ ಮಾಹಿತಿಯನ್ನು ಹೊಂದಿದ್ದು, ಅವರು ಕೇವಲ ಪಬ್ಲಿಕ್ ಪರೀಕ್ಷೆಯ ಫಲಿತಾಂಶನ್ನೇ ತಮ್ಮ ಪ್ರಮುಖ ಘಟ್ಟ ಎಂದು ಭಾವಿಸುತ್ತಾರೆ. ಈ ರೀತಿಯ ಕಾಣ್ಕೆಯು ಹೊಸ ಶಾಲೆಗಳಲ್ಲಿ ಅದರಲ್ಲು ಹಿಂದುಳಿದ ಪ್ರದೇಶಗಳಲ್ಲಿ ಈ ಸನ್ನಿವೇಶ ಕಾಣ ಬಹುದಾಗಿದೆ. ಶಾಲೆಯ ಫಲಿತಾಂಶ ಆಧಾರಿತ ಕಾಣ್ಕೆ ತಪ್ಪು. ಚೀನಾದಲ್ಲಿ 1980ರಿಂದ ಪರೀಕ್ಷಾ ಆಧಾರಿತ ಶಿಕ್ಷಣದಲ್ಲಿ ಬರುವ ತೊಂದರೆಗಳನ್ನು ಪರಿಹರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತು. ಆದರೆ ಇತ್ತೀಚೆಗೆ ಅದರ ಸ್ಥಾನ ವನ್ನು ಗುಣಮಟ್ಟದ ಶಿಕ್ಷಣ ಆವರಿಸುತ್ತಿದೆ. 2000 ದಿಂದ ಹಾಂಕಾಂಗ್‍ನಲ್ಲಿ ಪ್ರಮುಖವಾಗಿ ಶಿಕ್ಷಣದಲ್ಲಿ ತುಂಬಾ ಸುಧಾರಣೆಗಳನ್ನು ತರುತ್ತಿದೆ. ಅಲ್ಲಿ ನಿರ್ಧರಿಸಿರುವಂತೆ ಪಬ್ಲಿಕ್ ಪರೀಕ್ಷೆಗಳಿಂದ ಮಕ್ಕಳ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡುವುದು ಸಹ ಒಂದು ಪ್ರಮುಖ ಗುರಿಯಾಗಿದೆ.

1999ರಲ್ಲಿ ನಾನು ಬೆಂಗಳುರಿಗೆ ಭೇಟಿನೀಡಿದ ಸಂದರ್ಭದಲ್ಲಿ ಪ್ರಾಂಶುಪಾಲರ ಕೈಪಿಡಿಯನ್ನು ಗಮನಿಸಿದಾಗ ಅದರಲ್ಲಿದ್ದ ಒಂದು ವಾಕ್ಯ ಯಶಸ್ವೀ ಶಾಲಾ ಮುಖ್ಯಸ್ಥರು ಯಾವಾಗಲೂ ತಮ್ಮ ಶಾಲಾ ಫಲಿತಾಂಶವನ್ನು ಉತ್ತಮೀಕರಿಸುವುದರತ್ತ ಗುರಿಯನ್ನು ಕೇಂದ್ರೇಕರಿಸಬೇಕು ಎನ್ನುವ ವಾಕ್ಯ ನನ್ನನ್ನು ಚಿಂತನೆಗೆ ಈಡುಮಾಡಿತು. ಭಾರತದಂಥಹ ದೇಶದಲ್ಲಿ ಸಾಮಾನ್ಯವಾಗಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶಗಳು ಶಾಲಾ ಗುಣಮಟ್ಟವನ್ನು ನಿರ್ಧರಿಸುತ್ತವೆ. ಅದಕ್ಕಾಗಿ ಶಾಲಾ ಫಲಿತಾಂಶಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ.ಈ ಶಾಲೆಗಳು ಪರೀಕ್ಷೆಗಳು ಜೀವನದ ಪ್ರಮುಖ ಘಟ್ಟವೆಂದು ಮತ್ತು ಸಮಾಜದಲ್ಲಿ ಮೇಲೇರುವ ಪ್ರಮುಖ ಅಂಶವೆಂದು ಒಪ್ಪಿರುವ ಗುರಿಯನ್ನು ಹೊಂದಿವೆ.

ನಾಳೆಗಾಗಿ ಶಾಲೆಗಳು ……………

ಈ ರೀತಿಯ ಕಾಣ್ಕೆಯನ್ನು ನಾವು ಊಹೆ ಮಾಡ ಬಹುದಾಗಲಿ ಅವನ್ನು ಸ್ಪಷ್ಟವಾಗಿ ಕಾಣಲಾಗುವುದಿಲ್ಲಿ. ಕಾಣ್ಕೆ ಎಂದರೆ ಹೊಸ ದಾರಿಯತ್ತ ಆವಿಷ್ಕಾರಗಳನ್ನು ಕೊಂಡೊಯ್ಯುವುದಾಗಿದೆ.ಇಲ್ಲಿ ಗಮನಿಸಿದಾಗ ಇಂದಿನ ಶಾಲೆಗಳಿಗಿಂತ ನಾಳಿನ ಶಾಲೆಗಳೂ ಭಿನ್ನವಾಗಿರುತ್ತವೆ.ಇಂದಿನ ಶಾಲೆಗಳ ಗುರಿಗಳು ಮಕ್ಕಳ ನಾಳಿನ ಭವಿಷ್ಯವನ್ನು ಗುರಿಯಾಗಿಸಿರುತ್ತವೆ.

ಈರೀತಿಯ ಕಾಣ್ಕೆಯನ್ನು ಹೊಂದಿರುವ ಶಾಲೆಗಳು ತಮ್ಮ ಶಾಲೆಯ ಭೌತಿಕ ಸೌಲಭ್ಯಗಳನ್ನು ಮತ್ತು ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವುತ್ತ ಗಮನ ಹರಿಸಿವೆ. ಇದರಿಂದಾಗಿ 1999ರಿಂದ ಈಚೆಗೆ ಬಹಳಷ್ಟು ಶಾಲೆಗಳು ತಮ್ಮ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ರಮುಖ ಆದ್ಯತೆಯ ವಿಷಯವಾಗಿ ತೆಗೆದುಕೊಂಡಿವೆ.ಇದು ಶಾಲೆಗಳ ಮಧ್ಯೆ ಪ್ರಮುಖ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿದ್ದು ಮುಂದಿನ ಜ್ಞಾನಾಧಾರಿತ ಸಮಾಜಕ್ಕೆ ಮಕ್ಕಳನ್ನು ಅಣಿಗೊಳಿಸುತ್ತಿದೆ. 1990ರ ನಮತರ ಕೆಲವು ವಿಶ್ವ ವಿದ್ಯಾಲಯಗಳೂ ಸಹ ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದು,ಅವರೂ ಸಹ ತಮ್ಮ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ಹೊಂದುವಂತೆ ಕಡ್ಡಾಯಗೊಳಿಸುತ್ತಿವೆ.ನಾಳಿನ ಶಾಲೆಗಳೂ ಎಂದಾಕ್ಷಣ ಕೇವಲ ತಾಂತ್ರಿಕತೆಯ ಬಗ್ಗೆ ಗಮನ ಹರಿಸದೆ,ಮುಂದಿನ ಬೆಳವಣಿಗೆ ಬಗ್ಗೆಯೂ ಈಗಿರುವುದಕ್ಕಿಂತ ಭಿನ್ನವಾಗಿಯೋಚಿಸಬೇಕಾಗುತ್ತದೆ. ಉದಾಹರಣೆಗೆ- ಶಾಂಗಾಯ್ ನ ಜಿಯಾಮ್ ಪಿಂಗ್ ಶಾಲೆಯಲ್ಲಿ ಮುಂದಿನ ಸಮಾಜದ ಆದ್ಯತೆಗಳನ್ನು ಗುರುತಿಸಿ, ತನ್ನ ಶಾಲೆಯಲ್ಲಿ ಪದವಿಯನ್ನು ಪಡೆಯುವ ಪದವೀಧರ ಯಾವುದಾದರೂ ಒಂದು ಕೌಶಲಕ್ಕೆ ರ್ಸಾಜನಿಕರಿಂದ ಪ್ರಶಸ್ತಿಯನ್ನು ಪಡೆದು ತನ್ನ ಪದವಿಯನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಾಗಿರುತ್ತದೆ. ಈ ಪದ್ಧತಿ ಮುಂದೆಪ್ರಸಿದ್ಧಿಯನ್ನು ಪಡೆಯಿತು.

ನಮ್ಮ ಶಾಲೆಯು ಅತ್ಯಂತ ಮೌಲ್ಯಧಾರಿತವಾಗಿರುತ್ತದೆ. ಇತ್ತೀಚೆಗೆ ಇದು ಒಂದು ಸಾಮಾನ್ಯವಾದ ಕಾಣ್ಕೆಯಾಗೆದ್ದು ವಿವಿಧ ಶಾಲೆಗಳನ್ನು ನಡೆಸುವ ಶಾಲಾ ಮಂಡಳಿಯವರು ಈ ದೃಷ್ಠಿಕೋನಕ್ಕೆ ಬಹಳ ಮಹತ್ವ ಕೊಟ್ಟಿದ್ದಾರೆ. ಇದು ಉತ್ತಮ ವಿದ್ಯಾಥಿಗಳನ್ನು ಆಕರ್ಷಿಸದಿದ್ದರೂ , ಇವರು ತಮ್ಮ ಅಧ್ಯಯನದ ನಂತರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ.

ಈ ರೀತಿಯ ದೃಷ್ಠಿಕೋನದಿಂದ ಅವರು ಯಾವುದೇ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದೂ ಮುಂದೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವುದರ ಮೂಲಕತಮ್ಮ ಶಾಲೆಯನ್ನು ರಚನಾತ್ಮಕವಾಗಿ ಬೆಳೆಸುತ್ತಾರೆ. ಹೀಗಿದ್ದರೂ ಈ ರೀತಿಯ ಶಾಲೆಗಳೂ ಸಹ ಹೊರಗಿನವರ ಮಾನ್ಯತೆ ನಿರೀಕ್ಷಿಸುತ್ತದೆ. ಈ ರೀತಿಯ ಆಯಾಮಗಳು ನೇರವಾಗಿ ಶಿಕ್ಷಕರಿಗೆ ಅಥವಾ ವಿದ್ಯಾರ್ಥಿಗಳಿಗೆ ಸಂಬಂಧಿಸದರಬಹುದು. ಉದಾಹರಣೆಗೆ -ಯಾವುದೇ ಒಂದು ಶಾಲೆಯ ಮೌಲ್ಯವನ್ನು ಆ ಶಾಲೆಯ ಫಲಿತಾಂಶದೊಂದಿಗೆ ತಳಕು ಹಾಕುತ್ತಾರಾದರೂ ಅತೀ ಕಡಿಮೆ ಫಲಿತಾಂಶ ಪಡೆಯುವ ಶಾಲೆಯವರುಇದನ್ನು ಪ್ರಮುಖ ವಿಷಯವಾಗಿ ಪರಿಗಣಿಸುವುದಿಲ್ಲ. ಈ ರೀತಿಯ ಶಾಲೆಗಳು ಶಾಲಾ ಪ್ರಗತಿಯನ್ನು ಪ್ರಮುಖ ಕೇಂದ್ರವಾಗಿಸಿಕೊಂಡಿವೆ. ಏಕೆಂದರೆ ಒಂದು ಒಳ್ಳೆಯ ಶಾಲೆಯು ಸಾಧಕರನ್ನು ಸೃಷ್ಟಿಸುತ್ತದೆ.

ಕಾಣ್ಕೆ ಮತ್ತು ವಿದ್ಯಾರ್ಥಿಗಳು

1970ರಲ್ಲಿ ನಾನು ಒಂದು ಶಾಲೆಯನ್ನು ಸಡೆಸುತ್ತಾಗ ನನ್ನ ಶಾಲೆಗೆ ಅತೀ ಕಡಿಮೆ ಶೈಕ್ಷಣಿಕ ಸಾಧನೆಯನ್ನು ಹೊಂದಿರುವ ಮಕ್ಕಳನ್ನೇ ಶಾಲೆಗೆ ದಾಖಲು ಮಾಡಿಕೊಳ್ಳುತ್ತಿದ್ದೆ. ಏಕೆಂದರೆ ಪ್ರತಿಯೊಬ್ಬರಿಗೂ ಅವಕಾಶ ನೀಡಿ ಪ್ರೋತ್ಸಾಹಿಸಿದಲ್ಲಿ ಅವರೂ ಸಹ ಉತ್ತಮ ಶೈಕ್ಷಣಿಕ ಸಾಧನೆಯನ್ನಯ ಹೊಂದುವರ. ನಮ್ಮ ಶಿಕ್ಷಕರಲ್ಲಿಯೂ ಸಹ ಈ ಕಾಣ್ಕೆಯನ್ನು ಹಂಚಿಕೊಂಡಿದ್ದು, ಅವರೂ ಸಹ ಇದೇ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಯೊಂದು ಮಗುವಿನಲ್ಲಿಯೂ ಸಾಕಷ್ಟು ವಿಭಿನ್ನ ಸಾಮಥ್ರ್ಯಗಳಿದ್ದು, ಮಕ್ಕಳ ಕೆಲವು ಸಾಮಥ್ರ್ಯಗಳನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲ .ಸಮಾಜದ ದೃಷ್ಠಿಯಲ್ಲಿ ಅವರೆಲ್ಲರೂ ವಿಫಲರು. ಅನುತ್ತೀರ್ಣತೆ ಜೀವನದ ವಿಫಲತೆ ಅಲ್ಲ ಎಂದು ಮಕ್ಕಳಿಗೆ ಮೊದಲು ನಾವು ಮನವರಿಕೆ ಮಾಡಿಕೊಡುವುದು ಅತ್ಯಂತ ಪ್ರಮುಖ. ಅಲ್ಲದೇ ಮಕ್ಕಳಿಗೆ ಬೇರೆ ಬೇರೆ ಅವಕಾಶಗಳನ್ನು ನೀಡಿ ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳೆಸಿ ಅವುಗಳನ್ನು ಪ್ರದರ್ಶಿಸುವ ವೇದಿಕೆ ನಿರ್ಮಿಸಬೇಕು.

ಈಗ ಶಾಂಗಾಂಯ್ ನ ಪ್ರಸಿದ್ಧ ಜಾಬೆ ನಂ 8 ನೇ ಶಾಲೆಯ ಮುಖ್ಯ ಗುರಿ ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಲಿ . ಅಂದರೆ ಎಲ್ಲಾ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಬಲ್ಲರು ಎಂಬುದೇ ಅವರ ದೃಷ್ಠಿಕೋನವಾಗಿದೆ. ವಿದ್ಯಾರ್ಥಿಗಳು ವಿಫಲರಾಗಿದ್ದೇವೆ ಎಂದು ಭಾವಿಸುವುದರಿಂದಲೇ ಅವರು ಪದೇ ಪದೇ ವಿಫಲರಾಗುತ್ತಾರೆ.ಬೇರೆಯವರೂ ಸಹ ಅವರ ಅನುತ್ತೀರ್ಣತೆಯನ್ನು ಪದೇ ಪದೇ ಜ್ಞಾಪಿಸುವುದರ ಮೂಲಕ ಅವರ ಅನುತ್ತೀರ್ಣತೆಗೆ ಮತ್ತೆ ಮತ್ತೆ ಕಾರಣರಾಗುತ್ತಾರೆ. ಈ ಶಾಲೆಯಲ್ಲಿ ಸರಳವಾz,À ಚಿಕ್ಕ ಚಿಕ್ಕ ಅಂಶಗಳನ್ನು ಕಲಿಸುವುದರ ಮೂಲಕ ಅವರು ಶೀಘ್ರವಾಗಿ ಪ್ರಗತಿ ಹೊಂದುವಂತೆ ಪ್ರೇರೇಪಿಸುತ್ತವೆ. ಹೀಗೆ ಗೆಲುವಿನ ರುಚಿಯನ್ನು ಹತ್ತಿಸಿಕೊಂಡ ಮಕ್ಕಳು ಪ್ರಾರಂಭದಿಂದಲೂ ಯಶಸ್ಸನ್ನು ಗಳಿಸುತ್ತಾ ಹೋಗುತ್ತಾರೆ. ಇ9ದರಿಂದ ಅವರಲ್ಲಿ ಆತ್ಮ ವಿರ್ಶಔಆಸ ಹೆಚ್ಚಿ ಅವರ ಅಧ್ಯಯನದಲ್ಲಿ ಪ್ರಭುದ್ಧತೆ ಕಾಣಬಹುದು. ಈ ಎಲ್ಲಾ ಪ್ರಕ್ರಿಯೆಗಳಿಂದ 3 ವರ್ಷಗಳ ನಂತರ ಸಾಕಷ್ಟು ವಿದ್ಯಾರ್ಥಿಗಳು ಮಾಧ್ಯಮಿಕ ಶಾಲೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಪ್ರಗತಿಯನ್ನು ತೋರಿಸಿದರು.

ನಾನು ಅಧ್ಯಯನ ಕೈಗೊಂಡಂತೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಕೊರತೆಗೆ ಅವರ ಪೋಷಕರೂ ಹಾಗೂ ಮನೆಯ ಪರಿಸರವೇ ಕಾರಣವಾಗಿತ್ತು. ಉದಾಹರಣೆಗೆ- ವಿಚ್ಚೇದನಗೊಂಡ ಪೋಷಕರು, ವೃದ್ಧ ತಂದೆ ಯೌವ್ವನದಲ್ಲಿರುವ ತಾಯಿ, ಈ ರೀತಿಯ ಪರಿಸ್ತಿತಿಯಲ್ಲಿರುವ ಮಕ್ಕಳು ಸಾಮಾನ್ಯ ಜೀವನ ನಡೆಸುವುದೇ ದುಸ್ಥರವಾಗಿತ್ತು. ಇನ್ನೊಂದು ಶಾಲೆಯಲ್ಲಿ ಮಕ್ಕಳಲ್ಲಿ ಸಮಯ ಪಾಲನೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು. ಕೇವಲ ಈ ಒಂದು ಅಂಶ ಅವರ ಜೀವನದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿತು.

ಈ ರೀತಿಯ ಶಾಲೆಗಳು ಹೆಚ್ಚಿನ ಮಾನ್ಯತೆಯನ್ನೇನೂ ಪಡೆಯುವುದಿಲ್ಲ, ಆದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವಂಥಹ ಮಹತ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ಈ ರೀತಿಯ ಶಾಲೆಗಳಲ್ಲಿ ದೊಡ್ಡದಾಗಿ ಆಲೋಚನೆ ಎನ್ನುವ ಅಭಿಲಾಷೆ ಏನೂ ಇರುವುದಿಲ್ಲ, ಆದರೆ ಮಕ್ಕಳ ಸಾಮಥ್ರ್ಯ ಹಾಗೂ ಸಂತಸದಾಯಕ ಜೀವನ ಅನುಭವ ನೀಡುವ ಉತ್ತಮವಾದ ಕಾಣ್ಕೆಯನ್ನು ಹೊಂದಿದ್ದಾರೆ. ಈ ನಶಾಲೆಯ ಮುಖ್ಯಸ್ಥರೂ ಸಃ ತಮ್ಮನ್ನು ಸಮುದಾಯದ ಒಂದು ಭಾಗ ಎಂದು ಭಾವಿಸಿ ಸಂತಸದಾಂiÀiಕ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ರೀತಿಯ ಕಾಣ್ಕೆಯನ್ನು ಎಲ್ಲ ಶಿಕ್ಷಕರು ಇಚ್ಚಿಸುತ್ತಾರೆ. ಆದರೆ ಶಾಲಾ ಮಂಡಳಿಯವರು ಹೊಂದಿರುವಂತೆ ಮಹತ್ವಾಕಾಂಕ್ಷೀ ಸಾದನೆಗಳು ಈ ಶಾಲೆಯ ಅಜೆಂಡಾದಲ್ಲಿ ಇರುವುದಿಲ್ಲ.


ಅಲೆಯ ವಿರುದ್ಧ ಕಾಣ್ಕೆ

ಶಿಶು ಕೇಂದ್ರಿತ ಕಾಣ್ಕೆಯು ಕೇವಲ ಶೈಕಣಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಮಾತ್ರ ಅನ್ವಯಿಸುವುದಿಲ್ಲ. ಉದಾಹರಣೆಗೆ ನಂ 4ನೇ ಬೀಜಿಂಗ್ ನಲ್ಲಿ ಬೋಧನಾ ಅವಧಿಯನ್ನು ಕಡಿತಗೊಳಿಸಿರುವುದು. ಕಡಿಮೆ ಬೋಧನೆ ಹೆಚ್ಚು ಕಲಿಕೆ ಕಾಣ್ಕೆ ಹೊಂದಿದ್ದು,ಇದು ಜನ ಸಾಮಾನ್ಯರ ಅಭಿಪ್ರಾಯಗಳಿಗೆ ಭಿನ್ನ ವಾಗಿತ್ತು. ಇನ್ನೊಂದು ಶಾಲೆಯಲ್ಲಿ ಗೃಹಪಾಠವನ್ನು ಕಡಿಮೆ ಮಾಡಿರುವುದು ಮಕ್ಕಳ ಸ್ವಾಯತ್ತತೆಗೆ ಒತ್ತು ನೀಡಿ ಮಕ್ಕಳ ಶಾಲಾ ಅವಧಿಯ ಸಮಯವನ್ನು ಸಂತಸಕ್ಕಾಗಿ ಬಳಸಿಕೊಳ್ಳುವುದು ಪೋಷಕರ ನಂಬಿಕೆಗೆ ವಿರುದ್ಧ ವಾಗಿತ್ತು. ಏಕೆಂದರೆ ಅಧ್ಯಯನಕ್ಕಿಂತ ಹೊರತಾದ ಯಾವುದೇ ವಿಷಯವನ್ನು ಅವರು ಸಮಯದ ಅಪವ್ಯಯ ಎಂದೇ ಭಾವಿಸಿದ್ದರು.

25 ವರ್ಷಗಳ ಹಿಂದೆ ಕಿಂಡರ್ ಗಾರ್ಟನ್ ನಾಯಕ ಹಾಂಕಾಂಗ್ ನಲ್ಲಿ ಒಂದು ಪದ್ದತಿಯನ್ನು ಸ್ಥಾಪಿಸಿ ಮಕ್ಕಳಿಗೆ ಬರೆಯುವುದನ್ನು 4ನೇ ವರ್ಷದಿಂದ ಪ್ರಾರಂಭಿಸುವುದಾಗಿ ತಿಳಿಸಿದನು ಆಹೊತ್ತಿಗಾಗಲೇ ಬೇರೆ ಶಾಲೆಗಳಲ್ಲಿ 3 ನೇ ವರ್ಷದಲ್ಲಿ ಬರೆಯಲು ಪ್ರಾರಂಭಿಸಿದ್ದರು. ಈ ಸ್ಥಿತಿಯಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಿದನು. ಕೊನೆಗೆ ತನ್ನ ಶಾಲೆಯ ಮಕ್ಕಳ ಸಾಮಥ್ರ್ಯಗಳನ್ನು ಪೋಷಕರ ಮುಂದೆ ಪ್ರದರ್ಶಿಸಿ ಅವರ ಅಭಿಮಾನಕ್ಕೆ ಪಾತ್ರನಾದನು. ನಂತರ ಈ ಶಾಲೆಗಳು ವಿಶ್ವ ವಿಖ್ಯಾತಿಯನ್ನು ಪಡೆದವು. ಈ ರೀತಿ ಹೊಸ ಕಾಣ್ಕೆಯನ್ನು ಜಾರಿಗೊಳಿಸಬೇಕಾದಾಗ ಸಾಕಷ್ಟು ವಿರೋಧಾಭಾಸವಿದ್ದರೂ ನಂತರ ತಿಳಿಹೇಳಿದಾಗ ಪೋಷಕರೂ ಸಹ ವಿಶ್ವಾಸವಿಡುತ್ತಾರೆ.

ಕಾಣ್ಕೆಯ ಸಾಕ್ಷಾತ್ಕಾರ ಶಾಲಾ ನಾಯಕರು ಕಾಣ್ಕೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅವರ ಕನಸನ್ನು ಸಾಕಾರಗೊಳಿಸಲು ಆಗುವುದಿಲ್ಲ. ಅವರು ಕಾಣ್ಕೆಯ ಮಹತ್ವವನ್ನು ಅರಿಯದಿದ್ದಲ್ಲಿ ಅವರ ಕನಸುಗಳಿಗೆ ಅರ್ಥವಿಲ್ಲ.

ಶಾಲಾ ನಾಯಕರು ತಮ್ಮ ಕಾಣ್ಕೆಯನ್ನು ಕಾರ್ಯಗತಗೊಳಿಸಲು ಅದನ್ನು ತನ್ನ ಧ್ಯೇಯವಾಗಿಸಿಕೊಳ್ಳಬೇಕು. ಕಾಣ್ಕೆ ಎಂಬುದು ಕನಸಾದರೆ ಅದನ್ನು ಸಾಧಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಯೋಜನೆಗಳನ್ನು ಸಾಧಿಸುವ ಘಟ್ಟಗಳನ್ನು ಚಿಕ್ಕ ಚಿಕ್ಕ ಮೆಟ್ಟಿಲುಗಳಾಗಿಸಿಕೊಂಡು ಒಂದೊಂದೇ ಏರುತ್ತಾ ಮುಂದೆ ಸಾಗಬೇಕು, ಸಾಧನೆಯ ಅವಧಿಯು ತುಂಬಾ ವರ್ಷಗಳಾಗದೆ ಒಂದು ವರ್ಷದಲ್ಲಿ ಆಗುವಂತೆ ಸಣ್ಣ ಸಣ್ಣದಾಗಿ ಯೋಜಿಸಿದರೆ ವಾಸ್ತವದಲ್ಲಿ ಉತ್ತಮ. ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸಲು ಹೊರಟಾಗ ಸಾಧಿಸಿದ ಚಿಕ್ಕ ಚಿಕ್ಕ ಯಶಸ್ಸಿನ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳಬೇಕು.ಇದರಿಂದ ಗುರಿ ಸಾಧಿಸಲು ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಶಾಲಾ ನಾಯಕನು ತನ್ನ ಗುರಿಗಳನ್ನು ತಲುಪಲು ಹಾಕಿಕೊಂಡ ಯೋಜನೆಗೆ ಕಾಲಮಿತಿಯನ್ನು ಹಾಕಿ ಕಾರ್ಯತಂತ್ರಗಳನ್ನು ಹಾಕಿಕೊಳ್ಳಬೇಕು. ಆ ಕಾಣ್ಕೆಯನ್ನು ಆದ್ಯತೀಕರಿಸಿ ತುರ್ತಾಗಿ ಆಗಬೇಕಾದ ಅಂಶಗಳ ಬಗ್ಗೆ ಗಮನಹರಿಸುವುದು ಸೂಕ್ತ . ಕೆಲವು ಬಾರಿ ಎಷ್ಟೇ ಉತ್ತಮ ಕಾಣ್ಕೆಯನ್ನು ಹೊಂದಿದ್ದಾಗ್ಯೂ ಉತ್ತಮವಾದ ಕಾರ್ಯತಂತ್ರಗಳಿಲ್ಲದಿದ್ದಲ್ಲಿ ಸಾಕಾರಗೊಳ್ಳುವುದಿಲ್ಲ.

ಕ್ರಮಬದ್ದತೆ- ಯಾವುದೇ ಒಂದು ಗುರಿಯನ್ನು ಯೋಜಿತವಾಗಿ ಜೋಡಿಸಿದಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತದೆ. ತುರ್ತು-ಅತ್ಯಂತ ಪ್ರಮುಖವಾದ ವಿಷಯಗಳನ್ನು ತುರ್ತಾಗಿ ಜಾರಿಗೊಳಿಸಬೇಕು.

ಒತ್ತು-ಸಂಪನ್ಮೂಲಗಳ ಲಭ್ಯತೆ ಹಾಗೂ ಸಮಯವನ್ನು ಅಧರಿಸಿ ಕಾರ್ಯಾಚರಣೆಗೊಳಿಸಬೇಕು. ಮಹತ್ವವಲ್ಲದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿದಲ್ಲಿ ಹೆಚ್ಚಿನ ಸಂಪನ್ಮೂಲವನ್ನು ಮಹತ್ವವಲ್ಲದ ವಿಷಯಗಳು ಆಕ್ರಮಿಸುತ್ತವೆ. ಆದ್ಯತೆ- ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎನ್ನುವ ಆಲೋಚನೆಯೊಂದಿಗೆ ಅತ್ಯಾವಶ್ಯಕವಾಗಿ ಶಾಲಾ ಅಭಿವೃದ್ಧಿಗೆ ಬೇಕಾಗಿರುವುದನ್ನು ಆದ್ಯತೀಕರಿಸಿ ಕಾರ್ಯಗತಗೊಳಿಸಬೇಕು.

ಶಾಲಾ ನಾಯಕನ ಕನಸುಗಳು ಅವನ ಮೌಲ್ಯಗಳನ್ನು ನಿರ್ದೇಶಿಸುತ್ತವೆ. ಶಾಲಾ ನಾಯಕನು ತನ್ನ ಕಾಣ್ಕೆಯನ್ನು ತನ್ನಿತರೇ ಭಾಗೀದಾರರೊಂದಿಗೆ ಹಂÀಚಿಕೊಳ್ಳಬೇಕು. ಕೆಲವೊಮ್ಮೆ ತಾವು ಮಹತ್ವವೆಂದು ಪರಿಗಣಿಸಿದ ಕಾಣ್ಕೆಗಳನ್ನು ತನ್ನ ತಂಡದ ಸದಸ್ಯರೂ ಪರಿಗಣಿಸಬೇಕೆಂದು ಬಯಸುತ್ತಾನೆ, ಆದರೆ ಇದು ಪ್ರಯೋಜನಕಾರಿಯಲ್ಲ. ಶಾಲಾ ನಾಯಕನ ಕನಸುಗಳನ್ನುತನ್ನ ತಂಡದ ಸದಸ್ಯರ ಜೊತೆ ಸೇರಿ ಚರ್ಚಿಸಿ ಅವರ ಅಭಿಪ್ರಾಯದೊಂದಿಗೆ ಮುನ್ನಡೆದಲ್ಲಿ ಪ್ರತಿಯೊಬ್ಬರೂ ಅದನ್ನು ಸಾಕಾರಗೊಳಿಸುವಲ್ಲಿ ಕೈಜೋಡಿಸುತ್ತಾರೆ.

ಕಾಣ್ಕೆ ನಂಬಿಕೆಗೆ ಸಂಬಂಧಿಸಿದೆ. ಶಾಲೆಯ ಬಗ್ಗೆ ಯಾರಾದರೂ ಕಾಣ್ಕೆಯನ್ನು ಹೊಂದಬಹುದು ಆದರೆ ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ನಂಬಿಕೆಯನ್ನು ಇರಿಸಿದವರು ಮಾತ್ರವೇ ಅವನ್ನು ಸಾಕಾರಗೊಳಿಸಬಲ್ಲ. ಶಾಲೆ ಎಂದರೆ ಮನುಷ್ಯ ಇನ್ನೊಬ್ಬ ಮನುಷ್ಯನೊಂದಿಗೆ ವ್ಯವಹರಿಸುವ ಕ್ರಿಯೆಯಾಗಿದೆ. ಶಾಲಾ ಶಿಕ್ಷಕರ ನಂಬಿಕೆ ಇರಿಸಿ, ಮಕ್ಕಳ ಬುದ್ಧಿಮತ್ತೆ ಹಾಗೂ ಸಾಮಥ್ರ್ಯದಲ್ಲಿ ವಿಶ್ವಾಸವಿರಿಸಿದಾಗ ಶಾಲಾ ಕನಸು ಸಾಕಾರಗೊಳ್ಳುತ್ತದೆ. ಇಲ್ಲದಿದ್ದಲ್ಲಿ ಅದು ಕನಸಾಗಿಯೇ ಉಳಿಯುತ್ತದೆ.