ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಭಾಷಾ ಕಾರ್ಯಕ್ರಮ
ಶಿಕ್ಷಕರ ಕಲಿಕಾ ಸಮುದಾಯ 3 ನೇ ಹಂತ
- ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ.
ಇದು ಬೆಂಗಳೂರು ದಕ್ಷಿಣ ವಲಯ 3 ರಲ್ಲಿ ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕ್ರಮದ ಮೂರನೇ ಹಂತವಾಗಿದೆ. 2014-17ರೊಳಗೆ ಇದು ಸರ್ಕಾರಿ ಪ್ರೌಢ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಎರಡನೇ ಹಂತದ TCOL ನಲ್ಲಿ ಕೆಲಸವನ್ನು ವಿಸ್ತರಿಸಲು ಮತ್ತು ಆಳವಾಗಿಸಲು ಈ ಕಾರ್ಯಕ್ರಮ ಪ್ರಯತ್ನಿಸುತ್ತದೆ,
ಶಿಕ್ಷಕ ವೃತ್ತಿಪರ ಅಭಿವೃದ್ಧಿ, ಶಾಲೆ ಮತ್ತು ತರಗತಿ ಪ್ರಕ್ರಿಯೆಗಳ ಬೆಳವಣಿಗೆ ಮತ್ತು ಒಟ್ಟಾರೆ ಶಾಲಾ ಅಭಿವೃದ್ಧಿಗೆ ನಿರಂತರವಾದ ಗಮನವನ್ನು ನೀಡುತ್ತದೆ, ಇದು ತಂತ್ರಜ್ಞಾನವನ್ನು ಅರ್ಥಪೂರ್ಣ ಮತ್ತು ಸಮರ್ಥನೀಯ ರೀತಿಯಲ್ಲಿ ಸಂಯೋಜಿಸುತ್ತದೆ.
TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು
- ಭಾಷಾ ಬೋಧನಾ ಕಲಿಕೆಯ ಸುಧಾರಣೆಗಾಗಿ ಶಿಕ್ಷಕರ ಸಾಮರ್ಥ್ಯಗಳನ್ನು ಬೆಂಬಲಿಸಲು
- ಭಾಷೆಯ ಚಿಂತನೆ ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಬೋಧನೆ ಮತ್ತು ಕಲಿಕೆ ವಿಧಾನಗಳನ್ನು ಪ್ರದರ್ಶಿಸಲು
- ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಭಾಷೆಯ ಮಹತ್ವವನ್ನು ಮನವರಿಕರೆ ಮಾಡುವುದು
- ತರಗತಿಯ ಒಳಗೊಳ್ಳುವಿಕೆಯನ್ನು ಮಾಡುವುದು
- ಭಾಷಾ ಕಲಿಕೆಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು KOER ನಲ್ಲಿ ಬೋಧನೆ ಕಲಿಕೆ ಮತ್ತು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವುದನ್ನು
- ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು
- ಭಾಷಾ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾಶಾಸ್ತ್ರದ ಗ್ರಹಿಕೆಯನ್ನು ಗಾಢವಾಗಿಸಲು
- ಹಂಚಿಕೆ, ಅನುಭವಗಳು, ಪರಿಕಲ್ಪನೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಮೂಲಕ ಸುಸ್ಥಿರ ಮತ್ತು ಮುಂದುವರಿದ ಶಿಕ್ಷಕ ವೃತ್ತಿಪರ ಅಭಿವೃದ್ಧಿಗಾಗಿ ಕಲಿಯುವ ಸಮುದಾಯವನ್ನು ನಿರ್ಮಿಸಲು
ಕಾರ್ಯಕ್ರಮದ ತಂತ್ರಗಳು
ಕಾರ್ಯಕ್ರಮವು ಈ ಉದ್ದೇಶಗಳ ಸಾಧನೆಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.ಅದರಲ್ಲಿ ಈ ಕೆಲವು ತಂತ್ರಗಳು ಸೇರಿವೆ
ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)
- ಭಾಷಾ ಬೋಧನಾ ಕಲಿಕೆಯಲ್ಲಿ ಹೊಸ ಆಲೋಚನೆಗಳನ್ನು, ಉಪಕರಣಗಳನ್ನು ಮತ್ತು ವಿಧಾನಗಳನ್ನು ಕಲಿಯಲು ಶಿಕ್ಷಕರ ಕಾರ್ಯಾಗಾರಗಳು
- ಸಂಪನ್ಮೂಲ ರಚನೆಯಲ್ಲಿ ಶಿಕ್ಷಕರು ಬೆಂಬಲ
- ಶಿಕ್ಷಕರು ಆನ್ಲೈನ್ ವೇದಿಕೆಗಳಲ್ಲಿ ಭಾಗವಹಿಸಲು ಬೆಂಬಲ ಮತ್ತು ಮಾರ್ಗದರ್ಶನ - ಇಮೇಲ್ ಗುಂಪುಗಳು ಮತ್ತು ಟೆಲಿಗ್ರಾಮ್ ಗುಂಪುಗಳಲ್ಲಿ ಪಾಲ್ಗೊಳ್ಳಲು ಮತ್ತು ಕಲಿಯಲು
- ನಿರಂತರ ಕಲಿಕೆಗೆ ಆನ್ಲೈನ್ ಕೋರ್ಸ್ಗಳು
- ಶಿಕ್ಷಕರೊಂದಿಗೆ KOER ಮೂಲಕ ಆವರ್ತಕವಾಗಿ ಸಂಪನ್ಮೂಲ ಹಂಚಿಕೆ
ಶಾಲಾ ಆಧಾರಿತ ಪ್ರದರ್ಶನಗಳು
- ತರಗತಿಯಲ್ಲಿ ಪ್ರದರ್ಶನ - ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡದೊಂದಿಗೆ ಬೋಧನೆ
- ವಿದ್ಯಾರ್ಥಿಗಳ ಕಾರ್ಯ ಯೋಜನೆ, ಮತ್ತು ಶಿಕ್ಷಕರಿಗೆ ಸಹಯೋಗಾತ್ಮಕ ಮತ್ತು ಅಂತರ ಶಿಸ್ತಿನ ಅಭಿವೃದ್ಧಿ ಯೋಜನೆಗಳು
- ಶೈಕ್ಷಣಿಕ ಉಪಕರಣಗಳೊಂದಿಗೆ ಐಸಿಟಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ
- ಚಟುವಟಿಕೆಗಳೊಂದಿಗೆ ರಚನಾತ್ಮಕ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
- ನಿರ್ಣಾಯಕ ಚಿಂತನೆಗಳ ಮೇಲೆ ಗಮನಹರಿಸುವ ಮೂಲಕ ಸಮಗ್ರವಾದ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
ಕಲಿಕೆ- ಹಂಚಿಕೆ ಕಾರ್ಯಕ್ರಮಗಳು
- ಶಾಲೆಯೊಳಗೆ ಮತ್ತು ಅಂತರ್‌ಶಾಲಾ ಕಾರ್ಯಕ್ರಮಗಳು - ನುಡಿಸಂಪದ, ಭಾಷಾ ಡಿಜಿಟಲ್ ಕಥಾ ಪ್ರಸ್ತುತಿ,
- ವಿಜಯ ಶಿಕ್ಷಕರ ಕಾಲೇಜ್ ಸಹಯೋಗದೊಂದಿಗೆ ಭಾಷಾ ಬೋಧನಾ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳ ಆಹ್ವಾನಿತ ಮಾತುಕತೆ
- ಶಿಕ್ಷಕ ವಿಚಾರಗೋಷ್ಠಿಗಳು ಮತ್ತು ಪ್ರತಿಭಾಶಾಲಿ ಬರವಣಿಗೆ ಮತ್ತು ಬೋಧನೆಯ ಅನುಭವಗಳ ಬಗ್ಗೆ ಶಿಕ್ಷಕರು ಹಂಚಿಕೊಂಡ ಘಟನೆಗಳು.
TCOL ಹಂತ 3 (2018-21)
ವಲಯ ಮಟ್ಟದ ಕಾರ್ಯಾಗಾರದ ವಿವರ - ಭಾಷೆಗಳು
2018 ಆಗಸ್ಟ್ 16-17 | ಕಾರ್ಯಾಗಾರ 1
ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು. ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ , ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF |
2018 ಸೆಪ್ಟಂಬರ್ 19 - 20 | ಕಾರ್ಯಾಗಾರ 2
ಭಾಷಾ ಕಲಿಕೆಗೆ ಧ್ವನಿಮಾ ವಿಧಾನವನ್ನು ಅನ್ವೇಷಿಸುವುದು - ಶಬ್ದ ಮತ್ತು ಲಿಪಿ ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಸಾಮಗ್ರಿಗಳನ್ನು ತಯಾರಿಸುವುದು - ಚಿತ್ರಗಳ ಕಥೆ ಪುಸ್ತಕಗಳು ಪಠ್ಯಪುಸ್ತಕ ಪಾಠಗಳಿಗಾಗಿ ಸಂಪನ್ಮೂಲ ಸಮೃದ್ದ ಪರಿಸರಗಳನ್ನು ರಚಿಸುವುದು |
2018 ಅಕ್ಟೋಬರ್ 11-12 | ಕಾರ್ಯಾಗಾರ 3
ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಮತ್ತು ಸಂವಹನಶೀಲ ಸಂಪನ್ಮೂಲಗಳನ್ನು ಮಾಡುವುದು - ಧ್ವನಿಗಳು ಮತ್ತು ವಾಚಿಸಿದ ಧ್ವನಿ ಪುಸ್ತಕ. ಶೈಕ್ಷಣಿಕ ಉಪಕರಣಗಳು ಮತ್ತು ಮೊಬೈಲ್ - ವೆಬ್ ಅನ್ವಯಕಗಳ ಪರಿಚಯ ವಿಭಿನ್ನ ವಿಧಾನಗಳು ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಅರ್ಥೈಸಿತವಾದ ಸಂಪನ್ಮೂಲ ತಯಾರಿಸುವುದು |
2018 ನವೆಂಬರ್ 28-29 | ಕಾರ್ಯಾಗಾರ 4
ಅಭಿವ್ಯಕ್ತಿಯ ವಿಧಾನವಾಗಿ ಕಥೆ ಹೇಳುವುದು - ಸಹಯೋಗಾತ್ಮಕವಾಗಿ ಕಥೆ ಹೇಳುವುದು, ಕಥೆ ಹೆಣಿಯುವುದು ಮತ್ತು ನಿರಂತರತೆ ರಚನಾತ್ಮಕ ಮೌಲ್ಯಮಾಪನಕ್ಕಾಗಿ ಐಸಿಟಿ ಬಳಕೆ |
2019 ಜನವರಿ 10-11 | ಕಾರ್ಯಾಗಾರ 5
ಭಾಷಾ ಕಲಿಕೆಯಲ್ಲಿ ವಿದ್ಯುನ್ಮಾನ ಕಥೆಯ ಬಳಕೆ ಭಾಷಾ ಸಾಮರ್ಥ್ಯಗಳನ್ನು ನಿರ್ಮಿಸುವುದು - ವಿಷಯಗಳಾಧ್ಯಂತವಾಗಿ ಭಾಷೆ |
2019 -20 ನೇ ಸಾಲಿನ ಕಾರ್ಯಾಗಾರಗಳ ವಿವರ
2018-19ನೇ ಸಾಲಿನ ಕಾರ್ಯಗಾರಗಳ ವಿವರಗಳು
- 2018 ಕಾರ್ಯಾಗಾರ 1, ಆಗಸ್ಟ್ 16, 17, 2018
- 2018 ಕಾರ್ಯಾಗಾರ 2, ನವೆಂಬರ್ 29 - 30
- 2018 ಕಾರ್ಯಾಗಾರ 3, ಜನವರಿ 03-04
- 2018 ಕಾರ್ಯಾಗಾರ 4, ನವೆಂಬರ್ 28-29
- 2019 ಕಾರ್ಯಾಗಾರ 5, ಜನವರಿ 10-11
------------------------------------------------------------------------------------------------------------------------------------------------------------------------------
TCOL ಹಂತ 2
TCOL ಹಂತ 2 ಕಾರ್ಯಾಗಾರದ ವಿವರ - ಮುಗಿದಿದೆ
2014-15
2015-16
2016-17
- ಜುಲೈ 7 8
- 2016 ಸೆಪ್ಟಂಬರ್ 6 7 ಕನ್ನಡ ಕಾರ್ಯಾಗಾರ 1