ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೨ 2018-19
ಕಾರ್ಯಗಾರದ ಉದ್ದೇಶಗಳು
- ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸಂಪರ್ಕ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಕಂಪ್ಯೂಟರ್ ಹಾಗು ಮೊಬೈಲ್ ಮೂಲಕ ಅಂತರ್ಜಾಲದ ಬಳಕೆ, ಮತ್ತು ಶಿಕಸ ಮುಖ್ಯ ಶಿಕ್ಷಕರ ಟೆಲಿಗ್ರಾಮ್ ಗುಂಪಿನಲ್ಲಿ ಪಾಲ್ಗೊಳ್ಳುವುದು.
- ಮುಖ್ಯ ಶಿಕ್ಷಕರು ಐಸಿಟಿಯನ್ನು ""ಸೃಷ್ಟಿ ಮತ್ತು ಕಲಿಕೆ"ಗಾಗಿ ಬಳಸಲು ಪರಿಚಯ - ಶೈಕ್ಷಣಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರಳ ಪಠ್ಯ ಸಂಪನ್ಮೂಲಗಳನ್ನು ರಚಿಸುವುದು
- ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ (ವಾಚನ ಕೈ ಮಿಂಗ್ ಚಂಗ್, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’ - ಕೈ ಮಿಂಗ್ ಚಂಗ್ ರವರ ಶಾಲಾ ಕಾಣ್ಕೆ ಲೇಖನ )
- ಶಾಲಾ ಮಟ್ಟದ ಕೆಲಸದ ಸಾಧ್ಯತೆಗಳನ್ನು ಚರ್ಚಿಸಿ (ಗಣಿತ, ಕನ್ನಡ ಮತ್ತು ಡಿಜಿಟಲ್ ಸಾಕ್ಷರತೆ)
- ಕಾರ್ಯಾಗಾರದ ನಂತರ ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯ ಬಗ್ಗೆ ನಿಮ್ಮ ಕಲಿಕೆಯನ್ನು ಮುಂದುವರಿಸಿ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ
ಕಾರ್ಯಕ್ರಮದ ಕಾರ್ಯಸೂಚಿ
ಕ್ರಮ ಸಂಖ್ಯೆ | ವಿಶೇಷಗಳು | ಸಮಯ | ವಿಸ್ತರಿಸಿದ ಸಭಾ ಯೋಜನೆ |
ದಿನ ೧ | |||
1 | ನೋಂದಣೆ | 9.30 - 10.00 | ODKಯಲ್ಲಿ ಭಾಗಿದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್) |
2 | ಮೂಲಭೂತ ಡಿಜಿಟಲ್ ಸಾಕ್ಷರತೆ | 10.00 – 11.00 | ಡೆಸ್ಕ್‌ಟಾಪ್ ವಾತಾವರಣಕ್ಕೆ ಪರಿಚಯ
ಕೀಲಿಮಣೆಗೆ ಪರಿಚಯ (ಟಕ್ಸ್ ಟೈಪಿಂಗ್ ಅಭ್ಯಾಸ) ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್ ಬ್ರೌಸರ್ ಬಳಸುವುದು (ಫೈರ್‌ಫಾಕ್ಸ್ ಅಭ್ಯಾಸ) ಅಭ್ಯಾಸ (ಬಳಕೆದಾರರ ಕೈಪಿಡಿಯನ್ನು ನೋಡಿ- ಲ್ಯಾಪ್‌ಟಾಪ್ ಹಾಗು ಮೊಬೈಲ್‌ನಲ್ಲಿ ಅನ್ವಯಕಗಳ ಅನ್ವೇಷಣೆ) |
3 | ಚಹಾ ವಿರಾಮ | 11.00 – 11.15 | |
4 | ಸಂಪರ್ಕ ಹಾಗು ಕಲಿಕೆ | 11.15 – 12.30 | ಸರ್ಚ್ ಇಂಜಿನ್ ಪರಿಚಯ (ಪಠ್ಯ ಸಂಪನ್ಮೂಲಗಳು)
ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್‌ಲೋಡ್ ಮಾಡಿ - ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು) |
5 | ಊಟದ ವಿರಾಮ | 12.30 – 1.15 | ಟಕ್ಸ್ ಟೈಪಿಂಗ್ ಅಭ್ಯಾಸ + ODK |
6 | ಸಂಪರ್ಕ ಹಾಗು ಕಲಿಕೆ | 1.15 - 4.00 | ಅಂತರ್ಜಾಲದಲ್ಲಿನ ಚಿತ್ರಶೋಧನೆಯ ಪರಿಚಯ
ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್ ಪೋನ್ ಅನ್ನು ಬಳಸುವುದು - ಅಭ್ಯಾಸ |
7 | ಚಹಾ ವಿರಾಮ | ||
8 | ಮನೆಗೆಲಸ | 4.00 - 4.30 | ನಿಯೋಜನೆ- ವಾಚನ ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’. |
ದಿನ ೨ | |||
9 | ಶಾಲಾ ನಾಯಕತ್ವ ಹಾಗು ಅಭಿವೃದ್ಧಿ | 9.30 – 11.15 | ಸಣ್ಣ ಗುಂಪುಗಳಲ್ಲಿ ವಾಚನ - ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’.
ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ - ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು. ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ (ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್ ಸಂದೇಶಗಳನ್ನುಕಳುಹಿಸಿ ಇತ್ಯಾದಿ) |
10 | ಚಹಾ ವಿರಾಮ | 11.15 – 11.30 | |
11 | ವಿಷಯ ಸಂಯೋಜನೆ | 11.15 - 12.30 | ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ.
ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ. |
12 | ಊಟದ ವಿರಾಮ | 12.30 – 1.15 | |
13 | ಸಂಪರ್ಕ ಹಾಗು ಕಲಿಕೆ | 2.00 - 4.00 | ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ
ಕನ್ನಡ ಹಾಗು ಇಂಗ್ಲೀಷ್ ಟೈಪಿಂಗ್ ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುವುದರ ಅಭ್ಯಾಸ |
14 | ಚಹಾ ವಿರಾಮ | ||
15 | ಮುಂದಿನ ದಾರಿ ಹಾಗು ಮನೆಗೆಲಸ | 4.00 - 4.30 | ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್ ಸಾಕ್ಷರತೆ
ಮುಂದಿನ ಕಾರ್ಯಗಾರಕ್ಕೆ ವಾಚನ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern") |
ಕಾರ್ಯಗಾರದ ಸಂಪನ್ಮೂಲಗಳು
- ಮೂಲಭೂತ ಡಿಜಿಟಲ್ ಸಾಕ್ಷರತೆ - ನಿಮ್ಮ ಕಂಪ್ಯೂಟರ್ ಅನ್ನು ತಿಳಿಯಿರಿ.
- ಕಲಿಕೆಗಾಗಿ ಸಂಪರ್ಕ - ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರವೇಶಿಸಲು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಿ.
- ವೆಬ್ ಬ್ರೌಸರ್ ಬಳಸಿ ಅಂತರ್ಜಾಲದಲ್ಲಿ ಹುಡುಕಿ ಫೈರ್‌ಫಾಕ್ಸ್.
- ಗೂಗಲ್ ಸರ್ಚ್ ಇಂಜಿನ್ ಬಳಸಿ ಮಾಹಿತಿಯನ್ನು ಹುಡುಕಿ
- ಉಪಯುಕ್ತ ಜಾಲತಾಣಗಳು.
- ಫೋನ್‌ನಲ್ಲಿ ಮಾಹಿತಿ ಹುಡುಕಿ (ಟೆಲಿಗ್ರಾಮ್, ವೆಬ್ ಬ್ರೌಸಿಂಗ್, ನಿಘಂಟು)
- ಟಕ್ಸ್ ಟೈಪಿಂಗ್ ಮತ್ತು ಪಠ್ಯ ಸಂಪಾದನೆ - ಪಠ್ಯ ಸಂಪನ್ಮೂಲಗಳನ್ನು ಸಂಪಾದಿಸುವುದು ಹಾಗು ಸೃಷ್ಟಿಸುವುದಕ್ಕೆ ಹೊಂದಿಕೊಳ್ಳುವುದು.
- ನನ್ನ ಶಾಲಾ ದೃಷ್ಟಿಕೋನವನ್ನು ಅಭಿವೃದ್ಧಿಗೊಳಿಸುವುದು - ಕೈ ಮಿಂಗ್ ಚಂಗ್, ‘ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು’.
- ಮುಂದಿನ ಕಾರ್ಯಗಾರಕ್ಕೆ ನಿಯೋಜನೆ - ವಾಚನ ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ
ಮುಂದಿನ ದಾರಿ
- ಲಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ಖರೀದಿಸಿ ಹಾಗು ನಿಮ್ಮ ಫೋನಿಗೆ ಇಂಟರ್ನೆಟ್ ತೆಗೆದುಕೊಳ್ಳಿ.
- ನಿಮ್ಮ ಶಾಲೆಯಲ್ಲಿ ಶಿಕ್ಷಕರಿಗೆ ಬೆಂಬಲಿಸಲು ಶೈಕ್ಷಣಿಕ ಅನ್ವಯಕಗಳನ್ನು ಒಳಗೊಂಡ ಐಸಿಟಿ ಪ್ರಯೋಗಾಲಯವನ್ನು ಸ್ಥಾಪಿಸಿ (ಮುಖ್ಯ ಶಿಕ್ಷಕರು ಐಟಿಎಫ್‌ಸಿಯ ಮುಖಾಂತರ ಐಟಿ ಸಂಸ್ಥೆಗಳ ಡಿಬಾಂಡೆಡ್ ಕಂಪ್ಯೂಟರ್‌ಗಳಿಗೆ ಮನವಿ ಪತ್ರ )
- ಸುಲಭ ಸಂಯೋಜನೆಗಾಗಿ ನಿಮ್ಮ ಶಾಲೆಯ ಟೆಲಿಗ್ರಾಮ್ ಗುಂಪನ್ನು ರಚಿಸಿ (ನಿಮ್ಮ ಎಲ್ಲ ಶಿಕ್ಷಕರು ಸದಸ್ಯರಾಗಿ).