ಸಂಕ್ರಾಂತಿಯಂದು ಸುಖ - ದುಃಖ
ಉದ್ದೇಶಗಳು
- ವಿದ್ಯಾರ್ಥಿಯು ಭಾರತದಲ್ಲಿನ ಪ್ರಮುಖ ಹಬ್ಬಗಳನ್ನು ಪಟ್ಟಿಮಾಡಿ ಅವುಗಳ ಆಚರಣೆ ಕುರಿತು ವಿವರಿಸುವುದು.
- ಕೃತಿಕಾರರ ಚಿತ್ರಪಟವನ್ನು ಗುರ್ತಿಸಿ ಅವರ ಕೃತಿಗಳು ಹಾಗೂ ಅವರ ಮುಖ್ಯ ಕೃತಿಗಳ ವಿಶೇಷತೆ ಹಾಗೂ ಪ್ರಶಸ್ತಿಗಳ ಕುರಿತು ವಿವರಿಸುವುದು.
- ಕರ್ನಾಟಕದಲ್ಲಿ ಸಾಂಪ್ರದಾಯಿಕ ಸಂಕ್ರಾಂತಿ ಹಬ್ಬದ ಆಚರಣೆ ಹಾಗೂ ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳುವುದು.
ಸಂಪನ್ಮೂಲಗಳು
- ಭಾರತದಲ್ಲಿ ಆಚರಿಸುವ ವಿವಿಧ ಹಬ್ಬಗಳ ಚಿತ್ರಪಟಗಳು.
- ಎ.ಆರ್ ಮಣಿಕಾಂತ್ ರವರ ಚಿತ್ರಪಟ ಹೊಂದಿರುವ ಡಿಜಿಟಲ್ ಕವಿ ಪರಿಚಯ.
- ಸಂಕ್ರಾಂತಿ ಹಬ್ಬ (ಕಥಾ ಖಜಾನೆ ಆಡಿಯೋ ಕಥೆ)
ತರಗತಿ ಚಟುವಟಿಕೆ
ವಿದ್ಯಾರ್ಥಿಯ ಪೂರ್ವಜ್ಞಾನ ಪರಿಶೀಲನೆ.
- ನೀವು ಭಾರತದಲ್ಲಿ ಯಾವೆಲ್ಲಾ ಹಬ್ಬಗಳನ್ನು ಕಾಣುತ್ತೀರಿ?
- ನೀವು ಆಚರಿಸುವ ಪ್ರಮುಖ ಹಬ್ಬಗಳಾವುವು?
- ಶಿಕ್ಷಕರು ವಿದ್ಯಾರ್ಥಿಗಳನ್ನು ಕೆಲವು ತಂಡಗಳಾಗಿ ವಿಭಾಗಿಸುತ್ತಾರೆ.
- ಪ್ರತಿತಂಡವು ಒಂದೊಂದು ಹಬ್ಬದ ಕುರಿತಾಗಿ ಚರ್ಚಿಸಿ ತಿಳಿಸುವುದು.
- ಸಂಕ್ರಾಂತಿ ಆಚರಣೆಯ ವಿಡಿಯೋವನ್ನು ಪ್ರದರ್ಶಿಸುವುದು.
- ನೀವು ನಿಮ್ಮ ಮನೆಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಹೇಗೆಲ್ಲಾ ಆಚರಿಸುವಿರಿ?
- ಹಾಗಾದರೆ ಮಕ್ಕಳೇ ಸಂಕ್ರಾಂತಿ ಹಬ್ಬವನ್ನು ನೀವು ಹೇಳಿದ ರೀತಿಯಲ್ಲಿ ಆಚರಿಸಲು ಕಾರಣವೇನೆಂಬುದನ್ನು "ಸಂಕ್ರಾಂತಿಯ ಸುಖ ದುಖಃ' ಎನ್ನುವ ಕಥೆಯನ್ನು ಕೇಳುವ ಮೂಲಕ ತಿಳಿದುಕೊಳ್ಳೋಣ ಎಂದು ಪಾಠಕ್ಕೆ ಪೀಠಿಕೆ ಹಾಕುವುದು.
ಕಥಾ ಖಜಾನೆ ಆಡಿಯೋ ಕಥೆಯನ್ನು ಕೇಳಿಸುವುದು.
ಕಥೆ ಖಜಾನೆಯಲ್ಲಿನ ಸಂಕ್ರಾಂತಿ ಹಬ್ಬ ಎಂಬ ಆಡಿಯೋ ಕಥೆಯನ್ನು ಸೂಕ್ತವಾದ ಸ್ಥಳಗಳಲ್ಲಿ ನಿಲ್ಲಿಸಿ ಮಕ್ಕಳನ್ನೂ ಸಹ ಪ್ರಶ್ನಿಸುತ್ತಾ ಮಕ್ಕಳಿಗೆ ಕಥೆ ಕೇಳಿಸುವುದು. ಮಕ್ಕಳು ಕಥೆಯನ್ನು ಕೇಳಿಸಿಕೊಂಡ ನಂತರ ಕಥೆಯ ಕುರಿತಾಗಿ ಮಕ್ಕಳೊಂದಿಗೆ ಚರ್ಚಿಸುವುದು. ನಂತರ "ಮಕ್ಕಳೇ ನಮ್ಮ ಈ ಸಂಕ್ರಾಂತಿ ಹಬ್ಬದ ಕುರಿತಾಗಿ ನಿಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಎ.ಆರ್ ಮಣಿಕಾಂತ್ ರವರು ಬರೆದಿರುವ ಸಂಕ್ರಾಂತಿಯಂದು ಸುಖ ದುಖಃ ಎನ್ನುವ ಪಾಠವನ್ನು ತಿಳಿದುಕೊಳ್ಳೊಣ.
ಕೃತಿಕಾರರ ಪರಿಚಯ.
- ಎ.ಆರ್ ಮಣಿಕಾಂತ್ ರವರ ಚಿತ್ರಪಟ ಪ್ರದರ್ಶನ.
- ಕೃತಿಕಾರರ ಸಾಧನೆ, ಪ್ರಮುಖ ಕೃತಿಗಳ ಪರಿಚಯ ಹಾಗೂ ಪ್ರಶಸ್ತಿಗಳ ಕುರಿತು ಮಾಹಿತಿ.
- ಕೃತಿಕಾರರ ಸಂದರ್ಶನದ ವಿಡಿಯೋವನ್ನು ಪ್ರದರ್ಶಿಸುವುದು ಹಾಗೂ ಅವರ ವೈಶಿಷ್ಟ್ಯತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು.
ಶಿಕ್ಷಕರ ಮಾದರಿ ವಾಚನ.
ತರಗತಿಗೆ ಅನುಗುಣವಾಗಿ ಪಠ್ಯವನ್ನು ಕೆಲವು ಭಾಗಗಳಾಗಿ ಮೊದಲಿಗೇ ವಿಭಾಗಿಸಿಕೊಂಡಿದ್ದು ಪ್ರಸ್ತುತ ತರಗತಿಯಲ್ಲಿ ಮೊದಲ ಭಾಗವನ್ನು ಧ್ವನಿ-ಏರಿಳಿತಗಳನ್ನು ಒಳಗೊಂಡಂತೆ ಸ್ಷಷ್ಟ ಉಚ್ಚಾರದಿಂದ ಲೇಖನ ಚಿಹ್ನೆಗಳಿಗೆ ಅನುಗುಣವಾಗಿ ಶಿಕ್ಷಕರು ಓದುವರು. ಶಿಕ್ಷಕರು ಓದುವ ವೇಳೆಯಲ್ಲಿ ಗಮನವಿಟ್ಟು ಆಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡುವುದು.
ವಿದ್ಯಾರ್ಥಿ ವಾಚನ.
ಆಯ್ದ ಭಾಗವನ್ನು ವಿದ್ಯಾರ್ಥಿಗಳಿಗೆ ಓದುವಂತೆ ಸೂಚಿಸುವುದು ಹಾಗೂ ಇನ್ನಷ್ಟು ಉತ್ತಮವಾಗಿ ಓದುವ ಸಲಹೆಗಳನ್ನು ನೀಡುವುದು.
ಪಠ್ಯಪೂರಕ ಅಭ್ಯಾಸ
ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿನ ವೈಜ್ಞಾನಿಕ ಹಿನ್ನೆಲೆಯಂತೆ ಇನ್ನಿತರೆ ಹಬ್ಬಗಳ ಹಿಂದಿರುವ ವೈಜ್ಞಾನಿಕ ಆಚರಣೆಗಳ ಕುರಿತು ಪೋಷಕರೊಂದಿಗೆ ಚರ್ಚಿಸಿ ತಿಳಿದುಕೊಂಡು ಬನ್ನಿ.