ಸಂತೆಯಲ್ಲಿ ಮಗ್ಗಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಲೀಲು ತನ್ನ ತರಗತಿಯ 36 ವಿದ್ಯಾರ್ಥಿಗಳ ಜೊತೆಗೆ ಸಂತೆಗೆ ಹೋದಳು. ಟಿಕೆಟ್ ಖರೀದಿಸಲು ಎಷ್ಟು ಮಕ್ಕಳಿದ್ದಾರೆ ಎಂದು ಸರ್ ಆಗಾಗ ಎಣಿಸಬೇಕಾಗುತ್ತಿತ್ತು. 1, 2, 3, ಎಂದು 36ರವರೆಗೆ ಎಣಿಸುವ ಬದಲು ಇನ್ನೂ ಸುಲಭವಾಗಿ ಎಣಿಸಲು ಆಗುವುದೇ? ಜೊತೆ, ಜೊತೆಯಾಗಿ ಎಣಿಸುವುದನ್ನು ಕಥೆ ಮೂಲಕ ತಿಳಿಸುತ್ತಾ ಮಗ್ಗಿಯನ್ನು ಕತೆಯಲ್ಲಿ ಪರಿಚಯಿಸಿದೆ.

ಉದ್ದೇಶಗಳು

ಕಥೆಯ ಮೂಲಕ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಅಂಶಗಳು, ದಿನನಿತ್ಯ ಅವುಗಳ ಬಳಕೆ ಮತ್ತು ಪ್ರಾಮುಖ್ಯತೆ ಕುರಿತು ತಿಳಿಸುವುದು.

ಕಥಾ ವಸ್ತು : ಗಣಿತ, ಬುದ್ಧಿವಂತಿಕೆ ಮತ್ತು ಚತುರತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Santheyalli%20Maggi.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಶಾಲಾ ಪ್ರವಾಸದಲ್ಲಿ ಮಕ್ಕಳ ಅನುಭವಕ್ಕೆ ಬಂದ ಗಣಿತ ಅಂಶಗಳ ಕುರಿತು ಚರ್ಚಿಸುವುದು. ಉದಾ: ಪ್ರವಾಸಕ್ಕೆ ಎಷ್ಟು ಮಕ್ಕಳು ಬಂದದ್ದರು? ಶಿಕ್ಷಕರು ಎಷ್ಟು ಮಂದಿ ? ಪ್ರವಾಶ ಶುಲ್ಕ ಎಷ್ಟು? ನಿಮ್ಮ ತರಗತಿಯಿಂದ ಸಂಗ್ರಹವಾದ ಶುಲ್ಕ ಎಷ್ಟು? ಇತರೆ.
  2. ಮಕ್ಕಳಿಗೆ ತಿಳಿದಿರುವಷ್ಟು ಮಗ್ಗಿ ಹೇಳುವಂತೆ ತಿಳಿಸುವುದು.
  3. ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಗಣಿತಾಂಶಗಳನ್ನು ಬಳಸುವ ಅನುಭವಗಳನ್ನು ಹೇಳಲು ತಿಳಿಸುವುದು.
  4. ಗಣಿತ ವಿಷಯಕ್ಕೆ ಸಂಭಂದಿಸಿದಂತೆ ಕೆಲವು ಚಟುವಟಿಕಾ ಪ್ರಶ್ನೆಗಳನ್ನು ನೀಡಿ ಉತ್ತರಿಸುವಂತೆ ತಿಳಿಸುವುದು. ಉದಾ: ನಿಮ್ಮ ತರಗತಿಗೆ ಇಬ್ಬರು ವಿದ್ಯಾರ್ಥಿಗಳು ಹೊಸದಾಗಿ ಸೇರಿಕೊಂಡರೆ ಆಗ ನಿಮ್ಮ ತರಗತಿಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು. ಉದಾ: ಆರು ವಿಷಯಗಳನ್ನು ಮೂರು ಶಿಕ್ಷಕರು ಸಮನಾಗಿ ವಿಭಾಗಿಸಿಕೊಂಡು ಬೋಧಿಸುವುದಾದರೆ ಒಬ್ಬೊಬ್ಬ ಶಿಕ್ಷಕರಿಗೆ ಬೋಧಿಸಲು ಎಷ್ಟು ವಿಷಯಗಳು ಸಿಗುತ್ತದೆ. ತರಗತಿಯಲ್ಲಿ ಒಂದು ಬೆಂಚಿಗೆ 4 ವಿದ್ಯಾರ್ಥಿಗಳಂತೆ
  5. ಬೆಂಚಿನಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಕುಳಿತುಕೊಳ್ಳುವರು.

ಸಂಪೂರ್ಣ ದೈಹಿಕ ಚಟುವಟಿಕೆ

ಹಾಡು :

ಎರಡು ಗುಣಿಸು ಒಂದು ಹೇಗಾಯ್ತು?

ಎರಡನ್ನು ಒಂದು ಬಾರಿ ಕೂಡಿ ಎರಡಾಯ್ತು .

ಎರಡು ಗುಣಿಸು ಎರಡು ನಾಲ್ಕು ಹೇಗಾಯ್ತು?

ಎರಡನ್ನು ಎರಡು ಬಾರಿ ಕೂಡಿ ನಾಲ್ಕಾಯ್ತು.

ಆಲಿಸುವ ಪೂರ್ವದ ಚಟುವಟಿಕೆ

  • ಮೇಲಿನ ಹಾಡಿನಲ್ಲಿ ಬರುವ ಸಂಖ್ಯೆಗಳು ಯಾವುವು?
  • ಈ ಹಾಡಿನಲ್ಲಿ ಎರಡನ್ನು ಏನು ಮಾಡಲಾಗಿದೆ?
  • ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರದ ಚಿನ್ಹೆಗಳಾವುವು?
  • ನಿಮ್ಮ ತರಗತಿಯಲ್ಲಿ ಎಷ್ಟು ಮಕ್ಕಳಿದ್ದಾರೆ?
  • ನಿಮ್ಮ ತರಗತಿಯನ್ನು ಎರಡು ಗುಂಪು ಮಾಡಿದರೆ ಗುಂಪಿಗೆ ಎಷ್ಟು ಜನ ವಿದ್ಯಾರ್ಥಿಗಳಿರುತ್ತಾರೆ?

ಆಲಿಸುವ ಸಮಯದ ಚಟುವಟಿಕೆ

  • ಕಥೆಯಲ್ಲಿನ ಪ್ರಮುಖ ಪಾತ್ರ ಯಾವುದು?
  • ಕಥೆಯಲ್ಲಿ ಯಾವ ತರಗತಿಯ ಮಕ್ಕಳಿದ್ದಾರೆ?
  • ನಾಲ್ಕನೇ ತರಗತಿಯಲ್ಲಿ ಎಷ್ಟು ಮಕ್ಕಳಿದ್ದಾರೆ?
  • ಶಿಕ್ಷಕರು ಯಾವ ಆಟವನ್ನು ಆಡಿಸುವುದಾಗಿ ಹೇಳಿದರು?
  • ನೀವು ಸಂತೆ ನೋಡಿದ್ದರಾ? ಎಂದಾದರೂ ಹೋಗಿದ್ದೀರಾ?
  • ನೀಲು ಯಾವ ಅಂಕಿಯನ್ನು ಎಣಿಸಿದಳು?
  • ಮಕ್ಕಳು ಯಾವ ಆಟ ಆಡಿದರೂ ?
  • ನೀಲು ಏಕೆ 18 ಟಿಕೆಟ್ ತೆಗೆದುಕೊಂಡಳು?
  • ಕುದುರೆ ಮೇಲೆ ಒಮ್ಮೆಗೆ ಎಷ್ಟು ಜನ ಕುಳಿತುಕೊಳ್ಳಬಹುದು? ಹಾಗಾದರೆ ನೀಮ ಎಷ್ಟು ಟಿಕೆಟ್ ಕೊಂಡಳು? ಏಕೆ?
  • ಸಾರಿಗೆಯ ವಿಧಗಳಾವುವು?
  • ನೀವು ಯಾವೆಲ್ಲಾ ಸಾರಿಗೆಯಲ್ಲಿ ಸಂಚರಿಸಿದ್ದೀರಿ?
  • ನಿಮಗೆ ಇಷ್ಟವಾದ ಸಾರಿಗೆ ಯಾವುದು?
  • ರೈಲಿನಲ್ಲಿ ಪ್ರಯಾಣ ಮಾಡಿದ ಅನುಭವವನ್ನು ತಿಳಿಸಿ.

ಆಲಿಸಿದ ನಂತರದ ಚಟುವಟಿಕೆಗಳು

  1. ಮಕ್ಕಳಿಂದ ಮಗ್ಗಿ ಕೋಷ್ಟಕ ರಚಿಸುವುದು.
  2. ಕಲ್ಲು, ಬೀಜ, ಮಣಿಗಳನ್ನು ಬಳಸಿ ಮಗ್ಗಿ ರಚಿಸುವ ಚಟುವಟಿಕೆ.
  3. ಕಡ್ಡಿಗಳಿಂದ ಮಗ್ಗಿ ರಚಿಸುವ ಚಟುವಟಿಕೆ.
  4. ಮಕ್ಕಳಿಗೆ Jumble ರೀತಿ ಮಗ್ಗಿ ಮಿಂಚುಪಟ್ಟಿ ಕೊಟ್ಟು ಕ್ರಮವಾಗಿ ಜೋಡಿಸುವ ಚಟುವಟಿಕೆ ಮಾಡಿಸುವುದು.
  5. ಎರಡರ ಮಗ್ಗಿಯ ಹಾಡಿನಂತೆ ಇತರೆ ಮಗ್ಗಿಯನ್ನು ಹಾಡಿನ ರೂಪದಲ್ಲಿ ಹಾಡಿಸುವುದು.

ಪಠ್ಯ ಪುಸ್ತಕಕ್ಕೆ ಸಂಪರ್ಕಿಸಬಹುದು

ನಾಲ್ಕನೇ ತರಗತಿ

  1. ಸಂಕಲನ, ವ್ಯವಕಲನ, ಗುಣಾಕಾರ