ಸಮಾಂತರ ಚತುರ್ಭುಜದ ಗುಣಲಕ್ಷಣಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಲಿಕೆಯ ಉದ್ದೇಶಗಳು:

ಸಮಾಂತರ ಚತುರ್ಭುಜದ ಗುಣಲಕ್ಷಣಗಳನ್ನು ನಿರ್ಣಯಿಸುವುದು.

ಅಂದಾಜು ಸಮಯ

4೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಸಮಾಂತರ ರೇಖೆಗಳು, ಪಾರ್ಶ್ವ ಕೋನಗಳು, ಪೂರಕ ಕೋನಗಳು, ಕರ್ಣಗಳು, ಚತುರ್ಭುಜಗಳ ಬಗ್ಗೆ ಪೂರ್ವ ಜ್ಞಾನ

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ವಿದ್ಯಾರ್ಥಿಗಳಿಗೆ ಸಮಾಂತರ ಚತುರ್ಭುಜಗಳನ್ನು ಪರಿಚಯಿಸಲು ಶಿಕ್ಷಕರು ಈ ಜಿಯೋಜೆಬ್ರಾ ಕಡತವನ್ನು ಬಳಸಬಹುದು.
  2. A ಅಥವಾ B ಅಥವಾ D ಶೃಂಗಗಳನ್ನು ಸರಿಸಿ ಮತ್ತು ಚೌಕ, ಆಯತ ಮತ್ತು ವಜ್ರಾಕೃತಿಯಂತಹ ವಿಭಿನ್ನ ಸಮಾಂತರ ರೇಖಾಚಿತ್ರಗಳನ್ನು ಗಮನಿಸಿ.
  3. ಬಾಹುಗಳು, ಕೋನಗಳು ಮತ್ತು ಕರ್ಣಗಳ ಅಳತೆಗಳಿಗೆ ಅವರ ಗಮನವನ್ನು ತರಿಸಿ.

ಅಭಿವೃದ್ಧಿ ಪ್ರಶ್ನೆಗಳು:

  1. ನೀವು ಆಕೃತಿಯನ್ನು ಗುರುತಿಸಬಹುದೇ?
  2. ಈ ಅಕೃತಿಯು ಎಷ್ಟು ಬಾಹುಗಳನ್ನು ಹೊಂದಿದೆ?
  3. ನಾವು 4 ಬಾಹುಗಳನ್ನು ಹೊಂದಿರುವ ಅಕೃತಿಗೆ ಏನೆಂದು ಕರೆಯುತ್ತೇವೆ?
  4. ಎಲ್ಲಾ 4 ಬಾಹುಗಳು ಸಮವಾಗಿವೆಯೇ?
  5. ಸಮಾಂತರ ರೇಖೆಗಳು ಯಾವುವು?
  6. ಸಮಾಂತರ ರೇಖೆಗಳ 2 ಗಣಗಳನ್ನು ಗುರುತಿಸಿ.
  7. ಬಾಹುಗಳು, ಕೋನಗಳು ಮತ್ತು ಕರ್ಣಗಳಿಗೆ ಸಂಬಂಧಿಸಿದಂತೆ ರೂಪುಗೊಂಡ ಅಕೃತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ.
  8. ರೂಪುಗೊಂಡ ಎಲ್ಲಾ ಅಕೃತಿ/ ಆಕಾರಗಳಲ್ಲಿ ನೀವು ಯಾವ ಸಾಮಾನ್ಯ ಲಕ್ಷಣಗಳನ್ನು ಗಮನಿಸುತ್ತೀರಿ?

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಚೌಕ, ಆಯತ ಮತ್ತು ವಜ್ರಾಕೃತಿಯು ಸಮಾಂತರ ಚತುರ್ಭುಜಗಳೇ?
  2. ಸಮಾಂತರ ಚತುರ್ಭುಜಗಳು ಯಾವುವು?
  3. ಒಂದು ಸಮಾಂತರ ರೇಖಾಚಿತ್ರವು ಎಷ್ಟು ಜೋಡಿ ಸಮಾಂತರ ರೇಖೆಗಳನ್ನು ಹೊಂದಿದೆ?
  4. ಗಾಳಿಪಟ ಒಂದು ಸಮಾಂತರ ಚತುರ್ಭುಜವೇ?