ಸಿ.ಆರ್.ಪಿ. ಓರಿಯೆಂಟೇಶನ್ ಕಾರ್ಯಾಗಾರ - ಮೈಸೂರು 2025

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಹಿನ್ನೆಲೆ

"ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT)' ಯು "ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ ಆಧಾರಿತ ಬೋಧನ ವಿಧಾನದ ಅಳವಡಿಕೆ' ಕಾರ್ಯಕ್ರಮವನ್ನು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (CTE) ಹಾಗು ಐಟಿ ಫಾರ್ ಚೇಂಜ್ (ITfC) ಸಂಸ್ಥೆಯ ಸಹಯೋಗದೊಂದಿಗೆ 2023-24 ರ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗಿದೆ. ಕಥೆ-ಆಧಾರಿತ ಬೋಧನ ವಿಧಾನದ ಪರಿಣಾಮಕಾರಿತ್ವದ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯನ್ನು ವರ್ಧಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ .

ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ನಡೆಸಲಾಗಿದ್ದು, ಮೊದಲನೇ ವರ್ಷದಲ್ಲಿ ಸಂಪನ್ಮೂಲ ತಯಾರಿಕೆಯ ಮೇಲೆ ಕೇಂದ್ರಿಕರಿಸಿ, ಸರ್ಕಾರೀ ಶಾಲಾ ಶಿಕ್ಷಕರಿಂದ 200ಕ್ಕೂ ಹೆಚ್ಚು ಧ್ವನಿ ಕಥೆಗಳನ್ನು ನಾಲ್ಕು ಭಾಷೆಗಳಲ್ಲಿ ಸೃಜಿಸಲಾಯಿತು. ಪ್ರಸ್ತುತ2024-25 ರ ಶೈಕ್ಷಣಿಕ ವರ್ಷದಲ್ಲಿ ಸೃಜಿಸಲಾಗಿರುವ ಧ್ವನಿ ಕಥೆಗಳ ತರಗತಿ ಮಟ್ಟದ ಅನುಷ್ಠಾನವನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ತಂತ್ರೋ ಬೋಧನ ವಿಧಾನ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ. ಇದರ ಸಲುವಾಗಿ 23-25 ಜುಲೈ, 2024 ರಂದು ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ 30 ಪ್ರಥಮಿಕ ಶಾಲಾ ಇಂಗ್ಲಿಷ್ ಭಾಷಾ ಶಿಕ್ಷಕರು, ಆಯ್ದ ಸಿ.ಆರ್.ಪಿ, ಬಿ.ಆರ್.ಪಿ.ಗಳು ಹಾಗು ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ದಿನದ ತಂತ್ರೋ-ಬೋಧನ ವಿಧಾನ ಕಾರ್ಯಾಗಾವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಭಾಷಾ ಬೋಧನ-ಕಲಿಕೆಗೆ ಸಂಬಂಧಿಸಿದ ಹಲವು ಅಂಶಗಳನ್ನು ಚರ್ಚಿಸಲಾಯಿತು. ಮುಖ್ಯವಾಗಿ, ದಿಜಿಟಲ್ ಧ್ವನಿ ಕಥೆಗಳನ್ನು ತರಗತಿಯ ಕಲಿಕಾ ಪ್ರಕ್ರಿಯೆಯಲ್ಲಿ ಹೇಗೆ ಸಂಯೋಜಿಸುವುದು, ಕಲಿಕಾರ್ಥಿಗಳ ವಿಮರ್ಶಾತ್ಮಕ ಕೌಶಲ್ಯ, ವಿವರಣಾತ್ಮಕ ಕೌಶಲ್ಯ, ಹಾಗು ಸೃಜನಶೀಲ ಕೌಶಲ್ಯವನ್ನು ಕಥೆ ಆಧಾರಿತ ಚಟುವಟಿಕೆಗಳ ಮೂಲಕ ಹೇಗೆ ಉತೇಜಿಸಬಹುದು ಹಾಗು ಆಲಿಸುವಿಕೆ ಮತ್ತು ಮಾತನಾಡುವಿಕೆ, ಗ್ರಹಿಕೆಯುಕ್ತ ಓದುವಿಕೆ ಹಾಗೂ ಬರೆಯುವ ಅಥವಾ ಚಿತ್ರಿಸುವ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವ ಅವಕಾಶಗಳನ್ನು ಹೇಗೆ  ಕಲ್ಪಿಸಬಹುದೆಂದು ಅನ್ವೇಶಿಸಲಾಯಿತು.

ಈ ಹಿನ್ನೆಲೆಯಲ್ಲಿ, ಸದರಿ ಕಾರ್ಯಕ್ರಮದ ಸಂಪನ್ಮೂಲಗಳು ಮತ್ತು ಕಲಿಕೆಯು ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಮೈಸುರು ಜಿಲ್ಲೆಯ ಎಲ್ಲಾ ಸಿ.ಆರ್.ಪಿಗಳಿಗೆ ಡಯಟ್ ನ ಸಹಯೋಗದೊಂದಿಗೆ ಎರೆಡು ದಿನದ ಓರಿಯಂಟೇಶನ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗರದಲ್ಲಿ ಸೃಜಿಸಲಾಗಿರುವ ಸಂಪನ್ಮೂಲಗಳು ಮತ್ತು ತರಗತಿಯಲ್ಲಿ ಭಾಷಾ ಬೋಧನೆಗೆ ಬಳಸಿಕೊಳ್ಳಬಹುದಾದ ವಿಧಗಳನ್ನು ಪರಿಚಯಿಸಲಾಗುವುದು. ಇದರ ಮೂಲಕ, ಸಿಆರ್‌ಪಿಗಳು ತಮ್ಮ ಕ್ಲಸ್ಟರ್‌ನ ಶಿಕ್ಷಕರೊಂದಿಗೆ ಧ್ವನಿ ಕಥೆಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ತರಗತಿಯಲ್ಲಿ ಅವುಗಳ ಪರಿಣಾಕಾರಿ ಬಳಕೆಗೆ ಶಿಕ್ಷಕರನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.

ಕಾರ್ಯಾಗಾರದ ಉದ್ದೇಶಗಳು

  • ಭಾಷಾ ಬೋಧನೆ-ಕಲಿಕೆಯಲ್ಲಿ ಆಡಿಯೋ ಕಥೆಗಳನ್ನು ಬಳಸಬಹುದಾದ ವಿಧಾನಗಳನ್ನು CRP ಗಳು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು
  • ಆಂಟೆನಾಪಾಡ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಥೆ ಖಜಾನೆ ಆಡಿಯೊ ಸ್ಟೋರಿ ಭಂಡಾರವನ್ನು ಅನ್ವೇಷಿಸುವುದು
  • ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಬೋಧನಾ ಅಭ್ಯಾಸದಲ್ಲಿ ಆಡಿಯೋ ಕಥೆಗಳನ್ನು ಸಂಯೋಜಿಸುವುದು
  • ಶಿಕ್ಷಕರು ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳು ಮತ್ತು ಬೋಧನ ವಿಧಾನಗಳನ್ನು ತರಗತಿಯಲ್ಲಿ ಅಳವಡಿಸಿಕೊಳ್ಳಲು ಬೆಂಬಲಿಸಲು CRP ಗಳು ಬಳಸಬಹುದಾದ ಕಾರ್ಯತಂತ್ರಗಳನ್ನು ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು
  • CRP ಗಳ ನಡುವೆ ಪರಸ್ಪರ ಹಂಚಿಕೆ ಮತ್ತು ಕಲಿಕೆಗಾಗಿ ಅಭ್ಯಾಸದ ವರ್ಚುವಲ್ ಸಮುದಾಯವನ್ನು ರಚಿಸುವುದು
  • CRP ಗಳ ದಿನನಿತ್ಯದ ಚಟುವಟಿಕೆಗಳಿಗೆ ಬೆಂಬಲಿಸಬಹುದಾದ ತಂತ್ರಾಂಶಗಳನ್ನು ಪರಿಚಯಿಸಿ ಅನ್ವೇಶಿಸುವುದು

ಕಾರ್ಯಸೂಚಿ

ದಿನ ಸಮಯ ಅಧಿವೇಶನ ವಿವರಣೆ/ವಿಷಯಗಳು ಸಂಪನ್ಮೂಲಗಳು
1 10:00 AM to 10:30 AM ಪೀಠಿಕೆ ಐಸ್ ಬ್ರೇಕರ್ ಚಟುವಟಿಕೆ
10:30 AM to 11:30 AM CRP ಗಳ ಸವಾಲುಗಳು CRP ಯ ವೃತ್ತಿ ಪಾತ್ರದಲ್ಲಿ ಸವಾಲುಗಳನ್ನು ಚರ್ಚಿಸುವುದು. ಶಿಕ್ಷಣದ ನಾಯಕತ್ವ, ಪ್ರಭಾವದ ವಲಯ ಮತ್ತು ನಿಯಂತ್ರಣ ವಲಯ ಚೌಕಟ್ಟನ್ನು ಅರ್ಥಮಾಡಿಕೊಳ್ಳುವುದು
11:30 PM to 12:30 PM ಭಾಷಾ ಬೋಧನೆ: ಚಿಂತನ ಮಂಥನ ಭಾಷಾ ತರಗತಿಯಲ್ಲಿನ ಸವಾಲುಗಳು, ಶಿಕ್ಷಕರು ಏನು ಹಂಚಿಕೊಳ್ಳುತ್ತಾರೆ, ಸಿಆರ್‌ಪಿಗಳು ಏನು ಗಮನಿಸಿದ್ದಾರೆ. ಭಾಷಾ ಕಲಿಕೆಗೆ ಸಂಬಂಧಿಸಿದ ಕೆಲವು ಮಿಥ್ಯಗಳು, ಸಾಧ್ಯತೆಗಳ ಕುರಿತು ಚರ್ಚೆ ಭಾಷೆ ಕಲಿಕೆ ತತ್ವಗಳು
ಭಾಷೆ ಕಲಿಕೆ ಚರ್ಚೆ.png
12:30 PM to 1:00 PM ಕಾರ್ಯಕ್ರಮದ ಪರಿಚಯ ಭಾಷಾ ಕಲಿಕೆಯ ಕೆಲ ಸವಾಲುಗಳನ್ನು ಪರಿಹರಿಸಲು ಪರ್ಯಾಯ ಬೋಧನ ಪ್ರಕ್ರಿಯೆಗಳ ಕುರಿತು ಚರ್ಚೆ: ಆಡಿಯೋ ಕಥೆ ಆಧಾರಿತ ಬೋಧನ ಪ್ರಕ್ರಿಯೆಯ ಪರಿಕಲ್ಪನೆ.

ಕಥೆ ಖಜಾನೆ ಕಾರ್ಯಕ್ರಮದ ಮೇಲ್ನೋಟ, ಕಾರ್ಯಾಗಾರದ ಉದ್ದಶಗಳು ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳುವುದು

1:45 PM to 2:30 PM ಡೆಮೊ: 'ತರಗತಿಯಲ್ಲಿ ಆಡಿಯೊ ಸಂಪನ್ಮೂಲಗಳ ಬಳಕೆ' ಶಿಕ್ಷಕರು ವಿದ್ಯಾರ್ಥಿಗಳಂತೆ ಭಾಗವಹಿಸಿ ಡಿಜಿಟಲ್ ಕಥೆ ಆಧಾರಿತ ಬೋಧನ ಪ್ರಕ್ರಿಯೆಯನ್ನು ನೇರವಾಗಿ ಅನುಭವಿಸುವ ಡೆಮೊ ಸೆಶನ್

ಪೂರ್ವ ಆಲಿಸುವಿಕೆ, TPR, ಆಲಿಸುವ ಸಮಯದಲ್ಲಿ ಮತ್ತು ಆಲಿಸಿದ ನಂತರದ ಚಟುವಟಿಕೆಗಳನ್ನು ಚರ್ಚಿಸುವುದು. ಚಟುವಟಿಕೆಗಳ ಕುರಿತು ಚರ್ಚೆ - ಅವಲೋಕನಗಳು, ಪ್ರತಿಕ್ರಿಯೆ ಹಾಗೂ ಆಡಿಯೊ-ಸ್ಟೋರಿಗಳನ್ನು ಬಳಸುವ ಇತರ ವಿಧಾನಗಳ ಚಿಂತನ-ಮಂಥನ

2:30 to 3:00 ಕಥೆ ಖಜಾನೆ ಪರಿಚಯ ಮತ್ತು ಇನ್ಸ್ಟಾಲೇಶನ್ ಧ್ವನಿ ಸಂಪನ್ಮೂಲಗಳ ಡಿಜಿಟಲ್ ಭಂಡಾರದ ಪರಿಚಯ, ಮೊಬೈಲ್ನಲ್ಲಿ ಆಪ್ ನ ಇನ್ಸ್ಟಾಲೇಷನ್ , ಅದರ ಪ್ರಾಯೋಗಿಕ ಅಭ್ಯಾಸ 1. ಆಂಟೆನಪಾಡ್ ಆಪ್ ಡೌನ್ ಲೋಡ್ ಮಾಡಿ:

https://play.google.com/store/apps/details?id=de.danoeh.antennapod


2. Subscribe to audio stories podcast in this link ಈ ಲಿಂಕ್ ನಲ್ಲಿ ಧ್ವನಿ ಕಥೆಗಳ ಪ್ದಕಾಸ್ಟ್ ಗೆ ಚಂದಾದಾರರಾಗಿ:

https://kathe-khajane.teacher-network.in/pages/help/ka-help.html


Tutorial for installation and set up ಇನ್ಸ್ಟಾಲೇಶನ್ ಗೆ ಮಾರ್ಗಸೂಚಿ ವೀಡಿಯೋ

https://youtu.be/LF5ZaGXWNAs?si=2yC_vI3c6pfagmeD

3:00 to 4:00 FOSS - OER ನ ಅನ್ವೇಷಣೆ FOSS ತಂತ್ರೋಪಕರಣಗಳು ಮತ್ತು OER ಸಂಪನ್ಮೂಲ ಭಂಡಾರಗಳ ಅನ್ವೇಷಣೆ Educational Applications ಶೈಕ್ಷಣಿಕ ತಂತ್ರೋಪಕರಣಗಳು:

https://teacher-network.in/OER/index.php/Explore_an_application


https://karnatakaeducation.org.in/KOER/index.php/Special:ShortUrl/51a

Classroom Technology Applications ತರಗತಿ ತಂತ್ರೋಪಕರಣಗಳು: https://karnatakaeducation.org.in/KOER/en/index.php/Classroom_Technology_Toolkit


https://karnatakaeducation.org.in/KOER/index.php/Special:ShortUrl/66h

2 10:00 AM to 10:30 AM ಮರು ಸಮೀಕ್ಷೆ ಮೊದಲನೇ ದಿನದ ಚಟುವಟಿಕೆಗಳು, ಚರ್ಚೆಗಳ ಮರು ಸಮೀಕ್ಷೆ
10:30 AM to 12:00 PM CRP ಗಳ ಪಾತ್ರವನ್ನು ಅರ್ಥೈಸಿಕೊಳ್ಳುವುದು CRP ವೃತ್ತಿ ಪಾತ್ರವನ್ನು ಚಟುಟಿಕೆ ಮೂಲಕ ಅರ್ಥೈಸುವಿಕೆ
12:00 to 1 ಗುಂಪು ಚರ್ಚೆ ತರಗತಿ ಸನ್ನಿವೇಶಕ್ಕೆ ಅನುಗುಣವಾದ ಆಡಿಯೋ ಕಥೆ ಆಧಾರಿತ ಚಟುವಟಿಕಿಕೆಗಳ ವಿನ್ಯಾಸ
2 to 3.30 SMART ಕೆಲಸಕ್ಕಾಗಿ SMART ಫೋನ್ ಉಪಯುಕ್ತ ಗೂಗಲ್ ಮತ್ತು ಸ್ಮಾರ್ಟ್ ಫೋನ್ ಉಪಕರಣಗಳ ಅನ್ವೇಷಣೆ
3.30 to 4 ಹಿಮ್ಮಾಹಿತಿ, ಮುಂದಿನ ಯೋಜನೆ ಶಿಬಿರಾರ್ಥಿಗಳಿಂದ ಹಿಮ್ಮಹಿತಿ, ಸಲಹೆಗಳ ಸಂಗ್ರಹಣೆ, ಮುಂದಿನ ಯೋಜನೆ, ಗುಂಪು ಚಿತ್ರ

ಸಂಪನ್ಮೂಲಗಳು