ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಭಾಷಾ ಕಾರ್ಯಕ್ರಮ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಶಿಕ್ಷಕರ ಕಲಿಕಾ ಸಮುದಾಯ 3 ನೇ ಹಂತ

 1. ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ.

ಇದು ಬೆಂಗಳೂರು ದಕ್ಷಿಣ ವಲಯ 3 ರಲ್ಲಿ ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕ್ರಮದ ಮೂರನೇ ಹಂತವಾಗಿದೆ. 2014-17ರೊಳಗೆ ಇದು ಸರ್ಕಾರಿ ಪ್ರೌಢ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಎರಡನೇ ಹಂತದ TCOL ನಲ್ಲಿ ಕೆಲಸವನ್ನು ವಿಸ್ತರಿಸಲು ಮತ್ತು ಆಳವಾಗಿಸಲು ಈ ಕಾರ್ಯಕ್ರಮ ಪ್ರಯತ್ನಿಸುತ್ತದೆ,

ಶಿಕ್ಷಕ ವೃತ್ತಿಪರ ಅಭಿವೃದ್ಧಿ, ಶಾಲೆ ಮತ್ತು ತರಗತಿ ಪ್ರಕ್ರಿಯೆಗಳ ಬೆಳವಣಿಗೆ ಮತ್ತು ಒಟ್ಟಾರೆ ಶಾಲಾ ಅಭಿವೃದ್ಧಿಗೆ ನಿರಂತರವಾದ ಗಮನವನ್ನು ನೀಡುತ್ತದೆ, ಇದು ತಂತ್ರಜ್ಞಾನವನ್ನು ಅರ್ಥಪೂರ್ಣ ಮತ್ತು ಸಮರ್ಥನೀಯ ರೀತಿಯಲ್ಲಿ ಸಂಯೋಜಿಸುತ್ತದೆ.

TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು

 1. ಭಾಷಾ ಬೋಧನಾ ಕಲಿಕೆಯ ಸುಧಾರಣೆಗಾಗಿ ಶಿಕ್ಷಕರ ಸಾಮರ್ಥ್ಯಗಳನ್ನು ಬೆಂಬಲಿಸಲು
  1. ಭಾಷೆಯ ಚಿಂತನೆ ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಬೋಧನೆ ಮತ್ತು ಕಲಿಕೆ ವಿಧಾನಗಳನ್ನು ಪ್ರದರ್ಶಿಸಲು
  2. ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಭಾಷೆಯ ಮಹತ್ವವನ್ನು ಮನವರಿಕರೆ ಮಾಡುವುದು
  3. ತರಗತಿಯ ಒಳಗೊಳ್ಳುವಿಕೆಯನ್ನು ಮಾಡುವುದು
 2. ಭಾಷಾ ಕಲಿಕೆಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು KOER ನಲ್ಲಿ ಬೋಧನೆ ಕಲಿಕೆ ಮತ್ತು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವುದನ್ನು
 3. ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು
 4. ಭಾಷಾ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾಶಾಸ್ತ್ರದ ಗ್ರಹಿಕೆಯನ್ನು ಗಾಢವಾಗಿಸಲು
 5. ಹಂಚಿಕೆ, ಅನುಭವಗಳು, ಪರಿಕಲ್ಪನೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಮೂಲಕ ಸುಸ್ಥಿರ ಮತ್ತು ಮುಂದುವರಿದ ಶಿಕ್ಷಕ ವೃತ್ತಿಪರ ಅಭಿವೃದ್ಧಿಗಾಗಿ ಕಲಿಯುವ ಸಮುದಾಯವನ್ನು ನಿರ್ಮಿಸಲು

ಕಾರ್ಯಕ್ರಮದ ತಂತ್ರಗಳು

ಕಾರ್ಯಕ್ರಮವು ಈ ಉದ್ದೇಶಗಳ ಸಾಧನೆಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.ಅದರಲ್ಲಿ ಈ ಕೆಲವು ತಂತ್ರಗಳು ಸೇರಿವೆ

ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)

 1. ಭಾಷಾ ಬೋಧನಾ ಕಲಿಕೆಯಲ್ಲಿ ಹೊಸ ಆಲೋಚನೆಗಳನ್ನು, ಉಪಕರಣಗಳನ್ನು ಮತ್ತು ವಿಧಾನಗಳನ್ನು ಕಲಿಯಲು ಶಿಕ್ಷಕರ ಕಾರ್ಯಾಗಾರಗಳು
 2. ಸಂಪನ್ಮೂಲ ರಚನೆಯಲ್ಲಿ ಶಿಕ್ಷಕರು ಬೆಂಬಲ
 3. ಶಿಕ್ಷಕರು ಆನ್ಲೈನ್ ವೇದಿಕೆಗಳಲ್ಲಿ ಭಾಗವಹಿಸಲು ಬೆಂಬಲ ಮತ್ತು ಮಾರ್ಗದರ್ಶನ - ಇಮೇಲ್ ಗುಂಪುಗಳು ಮತ್ತು ಟೆಲಿಗ್ರಾಮ್ ಗುಂಪುಗಳಲ್ಲಿ ಪಾಲ್ಗೊಳ್ಳಲು ಮತ್ತು ಕಲಿಯಲು
 4. ನಿರಂತರ ಕಲಿಕೆಗೆ ಆನ್ಲೈನ್ ಕೋರ್ಸ್ಗಳು
 5. ಶಿಕ್ಷಕರೊಂದಿಗೆ KOER ಮೂಲಕ ಆವರ್ತಕವಾಗಿ ಸಂಪನ್ಮೂಲ ಹಂಚಿಕೆ

ಶಾಲಾ ಆಧಾರಿತ ಪ್ರದರ್ಶನಗಳು

 1. ತರಗತಿಯಲ್ಲಿ ಪ್ರದರ್ಶನ - ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡದೊಂದಿಗೆ ಬೋಧನೆ
 2. ವಿದ್ಯಾರ್ಥಿಗಳ ಕಾರ್ಯ ಯೋಜನೆ, ಮತ್ತು ಶಿಕ್ಷಕರಿಗೆ ಸಹಯೋಗಾತ್ಮಕ ಮತ್ತು ಅಂತರ ಶಿಸ್ತಿನ ಅಭಿವೃದ್ಧಿ ಯೋಜನೆಗಳು
 3. ಶೈಕ್ಷಣಿಕ ಉಪಕರಣಗಳೊಂದಿಗೆ ಐಸಿಟಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ
 4. ಚಟುವಟಿಕೆಗಳೊಂದಿಗೆ ರಚನಾತ್ಮಕ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು
 5. ನಿರ್ಣಾಯಕ ಚಿಂತನೆಗಳ ಮೇಲೆ ಗಮನಹರಿಸುವ ಮೂಲಕ ಸಮಗ್ರವಾದ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು

ಕಲಿಕೆ- ಹಂಚಿಕೆ ಕಾರ್ಯಕ್ರಮಗಳು

 1. ಶಾಲೆಯೊಳಗೆ ಮತ್ತು ಅಂತರ್‌ಶಾಲಾ ಕಾರ್ಯಕ್ರಮಗಳು - ನುಡಿಸಂಪದ, ಭಾಷಾ ಡಿಜಿಟಲ್‌ ಕಥಾ ಪ್ರಸ್ತುತಿ,
 2. ವಿಜಯ ಶಿಕ್ಷಕರ ಕಾಲೇಜ್ ಸಹಯೋಗದೊಂದಿಗೆ ಭಾಷಾ ಬೋಧನಾ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳ ಆಹ್ವಾನಿತ ಮಾತುಕತೆ
 3. ಶಿಕ್ಷಕ ವಿಚಾರಗೋಷ್ಠಿಗಳು ಮತ್ತು ಪ್ರತಿಭಾಶಾಲಿ ಬರವಣಿಗೆ ಮತ್ತು ಬೋಧನೆಯ ಅನುಭವಗಳ ಬಗ್ಗೆ ಶಿಕ್ಷಕರು ಹಂಚಿಕೊಂಡ ಘಟನೆಗಳು.

TCOL ಹಂತ 3 (2018-21)

ವಲಯ ಮಟ್ಟದ ಕಾರ್ಯಾಗಾರದ ವಿವರ - ಭಾಷೆಗಳು

2018 ಆಗಸ್ಟ್ 16-17 ಕಾರ್ಯಾಗಾರ 1

ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ

ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು.

ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು

ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ , ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು

ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF

2018 ಸೆಪ್ಟಂಬರ್ 19 - 20 ಕಾರ್ಯಾಗಾರ 2

ಭಾಷಾ ಕಲಿಕೆಗೆ ಧ್ವನಿಮಾ ವಿಧಾನವನ್ನು ಅನ್ವೇಷಿಸುವುದು - ಶಬ್ದ ಮತ್ತು ಲಿಪಿ

ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಸಾಮಗ್ರಿಗಳನ್ನು ತಯಾರಿಸುವುದು - ಚಿತ್ರಗಳ ಕಥೆ ಪುಸ್ತಕಗಳು

ಪಠ್ಯಪುಸ್ತಕ ಪಾಠಗಳಿಗಾಗಿ ಸಂಪನ್ಮೂಲ ಸಮೃದ್ದ ಪರಿಸರಗಳನ್ನು ರಚಿಸುವುದು

2018 ಅಕ್ಟೋಬರ್ 11-12 ಕಾರ್ಯಾಗಾರ 3

ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಮತ್ತು ಸಂವಹನಶೀಲ ಸಂಪನ್ಮೂಲಗಳನ್ನು ಮಾಡುವುದು - ಧ್ವನಿಗಳು ಮತ್ತು ವಾಚಿಸಿದ ಧ್ವನಿ ಪುಸ್ತಕ.

ಶೈಕ್ಷಣಿಕ ಉಪಕರಣಗಳು ಮತ್ತು ಮೊಬೈಲ್ - ವೆಬ್ ಅನ್ವಯಕಗಳ ಪರಿಚಯ

ವಿಭಿನ್ನ ವಿಧಾನಗಳು ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಅರ್ಥೈಸಿತವಾದ ಸಂಪನ್ಮೂಲ ತಯಾರಿಸುವುದು

2018 ನವೆಂಬರ್ 28-29 ಕಾರ್ಯಾಗಾರ 4

ಅಭಿವ್ಯಕ್ತಿಯ ವಿಧಾನವಾಗಿ ಕಥೆ ಹೇಳುವುದು - ಸಹಯೋಗಾತ್ಮಕವಾಗಿ ಕಥೆ ಹೇಳುವುದು, ಕಥೆ ಹೆಣಿಯುವುದು ಮತ್ತು ನಿರಂತರತೆ

ರಚನಾತ್ಮಕ ಮೌಲ್ಯಮಾಪನಕ್ಕಾಗಿ ಐಸಿಟಿ ಬಳಕೆ

2019 ಜನವರಿ 10-11 ಕಾರ್ಯಾಗಾರ 5

ಭಾಷಾ ಕಲಿಕೆಯಲ್ಲಿ ವಿದ್ಯುನ್ಮಾನ ಕಥೆಯ ಬಳಕೆ

ಭಾಷಾ ಸಾಮರ್ಥ್ಯಗಳನ್ನು ನಿರ್ಮಿಸುವುದು - ವಿಷಯಗಳಾಧ್ಯಂತವಾಗಿ ಭಾಷೆ

2019 -20 ನೇ ಸಾಲಿನ ಕಾರ್ಯಾಗಾರಗಳ ವಿವರ

 1. 2019 ಕಾರ್ಯಾಗಾರ 1 - ಜುಲೈ 27 2019
 2. 2019 ಕಾರ್ಯಾಗಾರ 2 - ಡಿಸೆಂಬರ್‌ 12 2019

2018-19ನೇ ಸಾಲಿನ ಕಾರ್ಯಗಾರಗಳ ವಿವರಗಳು

 1. 2018 ಕಾರ್ಯಾಗಾರ 1, ಆಗಸ್ಟ್ 16, 17, 2018
 2. 2018 ಕಾರ್ಯಾಗಾರ 2, ನವೆಂಬರ್‌ 29 - 30
 3. 2018 ಕಾರ್ಯಾಗಾರ 3, ಜನವರಿ 03-04
 4. 2018 ಕಾರ್ಯಾಗಾರ 4, ನವೆಂಬರ್ 28-29
 5. 2019 ಕಾರ್ಯಾಗಾರ 5, ಜನವರಿ 10-11

------------------------------------------------------------------------------------------------------------------------------------------------------------------------------

TCOL ಹಂತ 2

TCOL ಹಂತ 2 ಕಾರ್ಯಾಗಾರದ ವಿವರ - ಮುಗಿದಿದೆ

2014-15

2015-16

 1. 2015 ಜುಲೈ 15-16 ಕನ್ನಡ ಕಾರ್ಯಾಗಾರ 1
 2. 2015 ಡಿಸಂಬರ್ 7-8 ಕನ್ನಡ ಕಾರ್ಯಾಗಾರ 2

2016-17

 1. ಜುಲೈ 7 8
 2. 2016 ಸೆಪ್ಟಂಬರ್ 6 7 ಕನ್ನಡ ಕಾರ್ಯಾಗಾರ 1