ಐಸಿಟಿ ವಿದ್ಯಾರ್ಥಿ ಪಠ್ಯ/ಛಾಯಾ ಚಿತ್ರ ಹಾಗು ಚಿತ್ರ ಪ್ರಬಂಧಗಳು
(ICT student textbook/Photo and image essays ಇಂದ ಪುನರ್ನಿರ್ದೇಶಿತ)
Jump to navigation
Jump to search
ಛಾಯಾಚಿತ್ರ ಹಾಗು ಚಿತ್ರ ಪ್ರಬಂಧಗಳನ್ನು ಸೃಷ್ಟಿಸುವುದು
ಈ ಚಟುವಟಿಕೆಯಲ್ಲಿ ನೀವು ಚಿತ್ರಗಳೊಂದಿಗೆ ಕಥೆಯನ್ನು ರಚಿಸುವುದು ಹೇಗೆಂದು ಕಲಿಯುವಿರಿ.
ಉದ್ದೇಶಗಳು
- ಕಥೆಯನ್ನು ಹೇಳಲು ಮತ್ತು ಸಂವಹನ ಮಾಡಲು ಚಿತ್ರವನ್ನು ಸೆರೆಹಿಡಿಯುವುದು
- ಚಿತ್ರಗಳ ಸಂಗ್ರಹವನ್ನು ಪ್ರಬಂಧವಾಗಿ ರಚಿಸಬಹುದು ಎಂದು ಅರ್ಥೈಸುವುದು
- ಚಿತ್ರ ಸೆರೆಹಿಡಿಯುವಿಕೆಯ ವಿವಿಧ ವಿಧಾನಗಳೊಂದಿಗೆ ಪರಿಚಿತರಾಗುವುದು.
- ಕಥೆಯನ್ನು ಹೇಳುವ ಸಾಮರ್ಥ್ಯ
ಮುಂಚೆಯೇ ಇರಬೇಕಾದ ಕೌಶಲಗಳು
- ಮೊಬೈಲ್, ಕ್ಯಾಮೆರಾ, ಇತ್ಯಾದಿಗಳನ್ನು ಒಳಗೊಂಡಂತೆ ಐಸಿಟಿ ಉಪಕರಣಗಳನ್ನು ಸುರಕ್ಷಿತವಾಗಿ ಬಳಸುವ ಸಾಮರ್ಥ್ಯ (ಅಗತ್ಯವಿದ್ದಲ್ಲಿ, ಶಿಕ್ಷಕರು ಕಿರು ಪರಿಚಯಾತ್ಮಕ ಅಧಿವೇಶನವನ್ನು ಮಾಡಬಹುದು)
- ಐಸಿಟಿ ಪರಿಸರದ ಪರಿಚಿತತೆ ಹಾಗು ಕಡತಗಳು ಮತ್ತು ಕಡತಕೋಶಗಳನ್ನು ನಿರ್ವಹಿಸುವುದು
- ಪರಿಕಲ್ಪನಾ ನಕ್ಷೆ ಮತ್ತು ಪಠ್ಯ ಸಂಪಾದನೆಯ ಮೂಲಕ ಸ್ಥಳೀಯ ಭಾಷೆಗಳಲ್ಲಿ ಟೈಪಿಂಗ್
ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ
- ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್
- ಉಬುಂಟು ಹೊಂದಿರುವ ಕಂಪ್ಯೂಟರ್
- ಕ್ಯಾಮೆರಾ, ಮೊಬೈಲ್, ಜೋಡುಕಗಳು
- ಚಿತ್ರಗಳು, ಛಾಯಾಚಿತ್ರಗಳು
- ಉಬುಂಟು ಕೈಪಿಡಿ
- ಲಿಬ್ರೆ ಆಫೀಸ್ ಕೈಪಿಡಿ
- ಫ್ರೀಪ್ಲೇನ್ ಕೈಪಿಡಿ
- ಟಕ್ಸ್‌ಪೇಂಟ್ ಕೈಪಿಡಿ
- ಇಮೇಜ್ ವ್ಯೂವರ್ ಕೈಪಿಡಿ
ನೀವು ಯಾವ ಡಿಜಿಟಲ್ ಕೌಶಲಗಳನ್ನು ಕಲಿಯುವಿರಿ
- ಚಿತ್ರಗಳನ್ನು ಸೃಷ್ಟಿಸುವುದು ಹಾಗು ಪ್ರವೇಶಿಸುವುದು- ಚಿತ್ರಿಸುವುದು ಹಾಗು ಛಾಯಾಚಿತ್ರವನ್ನು ತೆಗೆದುಕೊಳ್ಳುವುದು, ಕ್ಯಾಮೆರಾ ಬಳಸುವುದು, ಸ್ಕ್ರೀನ್‌ಶಾಟ್ ಬಳಸಿ ಚಿತ್ರವನ್ನು ಸೆರೆಹಿಡಿಯುವುದು
- ಕಡತಕೋಶಗಳಲ್ಲಿ ಜೋಡಿಸುವುದು
- ಚಿತ್ರಗಳನ್ನು ನೋಡುವುದು
- ಚಿತ್ರಗಳು ಹಾಗು ಪಠ್ಯವನ್ನು ಸೇರಿಸುವುದು.
ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ
ಶಿಕ್ಷಕರ ನೇತೃತ್ವದ ಚಟುವಟಿಕೆ
ನಿಮ್ಮ ಶಿಕ್ಷಕರು ಹಲವಾರು ರೀತಿಗಳಲ್ಲಿ ಹೇಗೆ ಚಿತ್ರವನ್ನು ಸೃಷ್ಟಿಸಬಹುದೆಂದು ಪ್ರದರ್ಶಿಸುತ್ತಾರೆ:
- ಕ್ಯಾಮೆರಾದಿಂದ ಛಾಯಾಚಿತ್ರ (ಅಥವಾ ಮೊಬೈಲ್‌ನಿಂದ)
- ಕೈಯಿಂದ ಬಿಡಿಸಿದ ಚಿತ್ರವನ್ನು ಕ್ಯಾಮೆರಾ ಅಥವಾ ಮೊಬೈಲ್‌ನಿಂದ ಸೆರೆಹಿಡಿಯುವುದು.
- ಕಾಣುತ್ತಿರುವ ವಿಡಿಯೋದಿಂದ ಸ್ಕ್ರೀನ್‌ಶಾಟ್ ಅಥವಾ ಸ್ನಾಪ್‌ಶಾಟ್ ತೆಗೆಯುವುದು.
ಅವರು ಚಿತ್ರಗಳನ್ನು ಹೇಗೆ ಕಂಪ್ಯೂಟರ್‌ಗೆ ನಕಲು ಮಾಡುವುದು.
ಒಂದು ಚಿತ್ರ ಪ್ರಬಂಧ
|
ಹಲವು ಚಿತ್ರ ಪ್ರಬಂಧಗಳು - ಟೈಮ್‌ಲೈನ್
- ಕಥೆಗಳನ್ನು ಹೇಳಲು ಬಳಸಬಹುದಾದ ಟೈಮ್‌ಲೈನ್‌ಗಳು ಅಥವಾ ಇನ್ಫೋಗ್ರಾಫಿಕ್ಸ್‌ನಂತಹ ವಿಭಿನ್ನ ರೀತಿಯ ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಚಟುವಟಿಕೆಯ ಟೈಮ್‌ಲೈನ್ ಅನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಉದಾಹರಣೆಗೆ, ಈ ಚಿತ್ರಗಳಿಂದ ನೀವು ಯಾವ ಕಥೆಯನ್ನು ಹೇಳಬಹುದು?
- ಚಟುವಟಿಕೆಯ ಟೈಮ್‌ಲೈನ್ ಅನ್ನು ನೀವು ಸೆರೆಹಿಡಿಯುವ ವಿಭಿನ್ನ ವಿಧಾನಗಳು ಯಾವುವು? ಚಿತ್ರಗಳ ಸ್ಥಳವನ್ನು ನೀವು ಹೇಗೆ ಗುರುತಿಸಬಹುದು? ಚಿತ್ರಗಳಿಂದ ನೀವು ಎಷ್ಟು ವಿಭಿನ್ನ ಆಲೋಚನೆಗಳನ್ನು ತೆಗೆದುಕೊಳ್ಳಬಹುದು?
- ಒಂದೇ ಚಿತ್ರ ಮತ್ತು ಹಲವು ಚಿತ್ರಗಳ ಕಥೆಯನ್ನು ಹೇಳುವಲ್ಲಿ ವ್ಯತ್ಯಾಸವಿದೆಯೇ?
- ಶಿಕ್ಷಕರು ಅನೇಕ ಚಿತ್ರಗಳನ್ನು ಹೇಗೆ ತೆರೆಯುತ್ತಾರೆ ಎಂಬುದನ್ನು ನೋಡಿ; ನಿಮ್ಮ ಶಿಕ್ಷಕರು ಅನೇಕ ಚಿತ್ರಗಳನ್ನು ವೀಕ್ಷಿಸುವುದಕ್ಕಾಗಿ ಚಿತ್ರಗಳ ಸ್ಲೈಡ್ ಶೋ ಮಾಡಲು ತೋರಿಸುತ್ತಾರೆ.
ಹಲವು ಚಿತ್ರ ಪ್ರಬಂಧಗಳು - ಕ್ಷಣಗಳನ್ನು ಸೆರೆಹಿಡಿಯುವುದು
- ನಿಮ್ಮ ಶಿಕ್ಷಕರು ಈ ಮುಂದಿನ ಚಿತ್ರಗಳನ್ನು ನಿಮಗೆ ತೋರಿಸುತ್ತಾರೆ. ನೀವು ಗುಂಪುಗಳಲ್ಲಿ ಕೆಲಸ ಮಾಡಬಹುದು ಮತ್ತು ಈ ಚಿತ್ರಗಳಿಂದ ನೀವು ಯಾವ ಕಥೆಗಳನ್ನು ರಚಿಸಬಹುದು ಎಂಬುದರ ಬಗ್ಗೆ ಚರ್ಚಿಸಬಹುದು.
- ಈ ಕಥೆಯ ಮತ್ತು ಹಿಂದಿನ ಸಾಲಿನ ಕಥೆಯ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂದು ಯೋಚಿಸಿ. ನೀವು ನೋಡುವ ವ್ಯತ್ಯಾಸವೇನು ಮತ್ತು ಅದು ಹೇಗೆ ವಿಭಿನ್ನವಾಗಿದೆ ಎಂದು ಯೋಚಿಸಿ?
ನಿಮ್ಮ ಸ್ವಂತ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು, ಫೋಟೋಗಳನ್ನು ಮತ್ತು ಸ್ಥಳಗಳ ಚಿತ್ರಗಳನ್ನು ಮತ್ತು ಜನರನ್ನು ಹೇಗೆ ಸೆರೆಹಿಡಿಯುವುದು ಎಂದು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ, ಅವು ತಮ್ಮದೇ ಆದ ಕಥೆಗಳನ್ನು ಹೇಳುತ್ತವೆ.
ವಿದ್ಯಾರ್ಥಿ ಚಟುವಟಿಕೆಗಳು
- ಯಾವುದೇ ಸ್ಥಳೀಯ ಉತ್ಸವ ಅಥವಾ ಜಾತ್ರೆಗಳ ಚಿತ್ರಗಳ ಪ್ರಬಂಧವನ್ನು ರಚಿಸಿ. ನೀವು 3-5 ಚಿತ್ರಗಳ ಸಂಗ್ರಹವನ್ನು ಪಡೆಯಬಹುದು (ನೀವು ಅವುಗಳನ್ನು ಸೆರೆಹಿಡಿಯಬಹುದು ಅಥವಾ ಅವುಗಳನ್ನು ಛಾಯಾಚಿತ್ರದಂತೆ ಸೆರೆಹಿಡಿಯಬಹುದು) ಮತ್ತು ಅವುಗಳನ್ನು ಸ್ಲೈಡ್ ಶೋ ರೀತಿಯಲ್ಲಿ ತೋರಿಸಬಹುದು. ಈ ಚಿತ್ರಗಳೇ ನಿಮ್ಮ ಕಥೆಗಳು! ಈ ಚಿತ್ರಗಳಿಂದ ನೀವು ಬಯಸುವ ಕಥೆಯನ್ನು ಹೇಳಲು ನಿಮ್ಮ ಕಲ್ಪನೆಯನ್ನು ಬಳಸಿ.
- ನಿಮ್ಮ ವಿಜ್ಞಾನ ತರಗತಿಗಳಲ್ಲಿ ನೈಸರ್ಗಿಕ ನಾರುಗಳ ಬಗ್ಗೆ ನೀವು ಅಧ್ಯಯನ ಮಾಡಿದ್ದೀರಿ. ನಿಮ್ಮ ಸಮುದಾಯದಲ್ಲಿ, ಸ್ಥಳೀಯ ನೈಸರ್ಗಿಕ ನಾರುಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವ ಅಥವಾ ಮಾರುವ ಸ್ಥಳೀಯ ಕುಶಲಕರ್ಮಿಗಳು / ಉದ್ಯೋಗಗಳು / ಉದ್ಯಮ / ಅಂಗಡಿಗಳನ್ನು ಗುರುತಿಸಿ. ಉದಾಹರಣೆಗೆ ಹೊಲಿಗೆ, ಬುಟ್ಟಿಯ ನೇಯ್ಗೆ, , ರಂಗು ಹಾಕುವುದು, ಈ ಚಟುವಟಿಕೆಗಳನ್ನು ಹೇಗೆ ಮಾಡಲಾಗುತ್ತದೆ ಮತ್ತು ಚಿತ್ರ ಕಥೆಯನ್ನು ಅಭಿವೃದ್ಧಿಪಡಿಸಿ.
- ಈ ಕೆಳಗಿನವುಗಳ ಚಿತ್ರದ ಟೈಮ್‌ಲೈನ್ ಅನ್ನು ಗುಂಪುಗಳಲ್ಲಿ ರಚಿಸಿ ಮತ್ತು ನಿಮ್ಮ ಸೃಷ್ಟಿಗಳನ್ನು ಚರ್ಚಿಸಿ:
- ಶಾಲೆಯಲ್ಲಿನ ಒಂದು ದಿನ
- Dussehra ಸಿದ್ಧತೆ
- ಕಡಲೆಕಾಯಿ ಪರಿಷೆ ಜಾತ್ರೆಯ ಟೈಮ್ಲೈನ್
- ಮೈಸೂರಿನ ಅರಸರು
ಪೋರ್ಟ್‌ಪೋಲಿಯೋ
- ನಿಮ್ಮ ಚಿತ್ರಗಳ ಸಂಗ್ರಹ - ಕಡತಕೋಶದಲ್ಲಿ ಆಯೋಜಿಸಲಾಗಿದೆ.
- ನೀವು ಕಥಾ ಸಾಲೊಂದನ್ನು ಕಲ್ಪಿಸಿರಬಹುದು ಹಾಗು ಕಥೆಯನ್ನು ಹೇಳಲು ಕೆಲವು ಯೋಚನೆಗಳನ್ನು ಮಾಡಿಕೊಂಡಿರಬಹುದು. ಅದನ್ನು ಪಠ್ಯ ದಸ್ತಾವೇಜಿನಲ್ಲಿ ಬರೆಯಿರಿ.