Internet access handout

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕನ್ನಡದಲ್ಲಿ Internet access handoutಗಾಗಿ ಇಲ್ಲಿ ಒತ್ತಿ


ಅಂತರ್ಜಾಲಾಧಾರಿತ ಸಂಪನ್ಮೂಲ ಸಂಗ್ರಹಣೆಗಾಗಿ ಕೆಲವು ಮಾರ್ಗಸೂಚಿಗಳು

ಹೆಚ್ಚಿನ ಮಾಹಿತಿಗಳಿಗೆ ನಾವು ಸಾಮಾನ್ಯವಾಗಿ ಅಂತರ್ಜಾಲವನ್ನು ಬಳಸುತ್ತೇವೆ. ಪುಸ್ತಕಗಳು & ಗ್ರಂಥಾಲಯಗಳು ಸಂಪನ್ಮೂಲಗಳ ಮುಖ್ಯ ಮೂಲವಾಗಿದ್ದರು ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ಅಂತರ್ಜಾಲ ಬಳಕೆಯೇ ಪ್ರಮುಖ ಅವಕಾಶವಾಗಿದೆ. ಅಂತರ್ಜಾಲದಲ್ಲಿ ದೊರಕುವ ವಿಷಯಗಳನ್ನು ಸಹ ನಾವುಗಳು ನೇರವಾಗಿ ಒಪ್ಪಕೊಳ್ಳದೇ ಇತರೇ ವಿಷಯಗಳಂತೆಯೇ ತಿದ್ದಿಕೊಳ್ಳಬೇಕಾದ ಅವಶ್ಯಕತೆ ಇದೆ.ಗಮನಿಸಬೇಕಾದ ಅಂಶವೆಂದರೆ ಅಂತರ್ಜಾಲದಲ್ಲಿ ವಿಷಯಗಳಿಗೆ ಸಂಬಂದಪಟ್ಟ ಪ್ರತ್ಯೇಕ ಪುಟಗಳ ವಿಂಗಡಣೆ ಇರುವುದಿಲ್ಲ. ಆದ್ದರಿಂದ ಲಿಂಕ್ ಗಳನ್ನು ಗುರುತಿಸುವಾಗ ಮತ್ತು ಬಳಸುವಾಗ ಬಹಳ ಎಚ್ಚರ ವಹಿಸಬೇಕು.


ಅಂತರ್ಜಾಲ ಸಂಪನ್ಮೂಲ ಹುಡುಕುವಾಗ ನಾವು ಗಮನಿಸಬೇಕಾ ೨ ಅಂಶಗಳೆಂದರೆ :

ಮೊದಲನೆಯದು;ಮಾಹಿತಿ ಪುಟಗಳ ಬಳಕೆ ಮತ್ತು ಅಗತ್ಯತೆ, ಎರಡನೆಯದು: ವಿಷಯಾದಾರಿತ

ಮಾಹಿತಿಯನ್ನು ಹೇಗೆ ಹುಡುಕಬೇಕು.


ಅಂತರ್ಜಾಲ ಪುಟದ ಗುಣಮಟ್ಟ ಅಳೆಯುವುದು

ಅಂತರ್ಜಾಲದಲ್ಲಿನ ಮಾಹಿತಿಗಳನ್ನು ನಾವು ಬಳಸುವಾಗ ಗಮನಿಸಬೇಕಾದ ಅಂಶಗಳೆಂದರೆ :- ಮಾಹಿತಿಗಳನ್ನು ಹುಡುಕುವುದು ಹೇಗೆ

ಅಂತರ್ಜಾಲದಲ್ಲಿ ನಾವು ಹೇಗೆ ಮಾಹಿತಿಯನ್ನು ಹುಡುಕುತ್ತೇವೆ ಎಂಬುದು ಸಹ ಬಹಳ ಮುಖ್ಯ. ನಮಗೆ ದೊರೆತ ಮಾಹಿತಿಯ ಗುಣಮಟ್ಟವು ನಮಗೆ ಸೂಕ್ತವಾಗಿರಬೇಕಾದರೆ, ಮಾಹಿತಿ ಹುಡುಕುವಾಗ ನಾವು ಬಳಸುವ ಪದಗಳು, ನಮ್ಮ ಪ್ರಶ್ನೆಗಳು ಸೂಕ್ತವಾಗಿರಬೇಕು . ಮಾಹಿತಿಯನ್ನು ಹುಡುಕುತ್ತಿರುವ ಅಗತ್ಯವೇನು , ಮತ್ತು ಈ ಮಾಹಿತಿಯನ್ನು ನಾನು ಹೇಗೆ ಬಳಸುತ್ತೇನೆ ಮತ್ತು ಈ ಮಾಹಿತಿ ನನಗೆ ಎಷ್ಟು ಸೂಕ್ತ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು.


'3. Safe search -'ಸುರಕ್ಷಿತವೆಬ್ ಬಳಕೆ


ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವಾಗ , ನಮಗೆ ಅನವಶ್ಯಕ ಲಿಂಕ್ ಗಳು, ಅಶ್ಲೀಲ ಚಿತ್ರಗಳು ಬರುವ ಸಾಧ್ಯತೆಗಳಿರುತ್ತವೆ. ಇವು ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಈ ರೀತಿ ಆಗದಂತೆ ಅಂತರ್ಜಾಲದಲ್ಲಿ ಸೂಕ್ತ ಸೆಟ್ಟಿಂಗ್ಸ್ ಮಾಡಿಕೊಳ್ಳಲು ಈ ಕೆಳಕಂಡ ವಿಧಾನವನ್ನು ಅನುಸರಿಸಬಹುದು.


೧. ನಿಮ್ಮ ಹೊಸ ವೆಬ್ ಪುಟದಲ್ಲಿ ಈ www.google.com/preferences ವಿಳಾಸಕ್ಕೆ ಹೋಗಿ.


೨. ಚಿತ್ರದಲ್ಲಿ

" Filter explicit reults “

ಎಂಬಲ್ಲಿ ಕ್ಲಿಕ್ ಮಾಡಿ


೩. ನಂತರ ಪುಟದ ಕೆಳಗಿನ ಭಾಗದಲ್ಲಿರುವ SAVE ಬಟನ್ ಕ್ಲಿಕ್ ಮಾಡಿ.