MDRS ಆಡಿಯೋ ರೆಕಾರ್ಡಿಂಗ್‌ ಬೇಸಿಕ್ಸ್‌ ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

  • ಆಡಿಯೊ ಬೇಸಿಕ್ಸ್ ಶುರುಮಾಡುವುದು - ೪ ಥಂಬ್ ರೂಲ್ಸ್ ಹಾಗೂ ರೆಕಾರ್ಡರ್ ಪರಿಚಯ - ಅವುಗಳಿಗೆ ಸಂಬಂಧಪಟ್ಟ ಸಿಂಬಲ್ಸ್ ಮತ್ತು ಅವುಗಳ ಅರ್ಥ ಏನು ಎಂದು ಅರ್ಥ ಮಾಡಿಸಿವುದು .

ಪ್ರಕ್ರಿಯೆ

ಕುಶಲೋಪರಿಯ ಮೂಲಕ ಮಾತುಕತೆಯನ್ನು ಶುರು ಮಾಡುವುದು.

ಹಿಂದಿನ ವಾರ ಒಂದಷ್ಟು ಕಟ್ಟುಪಾಡುಗಳನ್ನ ಮಾಡ್ಕೊಂಡ್ವಲ್ಲ. ಅವು ಏನು ಅಂತ ಹೇಳಬಹುದ?

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನೀವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹೋದ ಸೆಶನ್‌ನಲ್ಲಿ ನಾವು ಟೀನೇಜ್‌ ಬಗ್ಗೆ ಮಾತಾಡಿದೀವಿ. ಇವತ್ತು ಒಂದು ಹೊಸ ವಿಷ್ಯ ತಿಳ್ಕೊಳ್ಳೋಣ? ಎಂದು ಹೇಳುವುದು.

ನಾಲ್ಕು ಬಟನ್‌ಗಳ PDF ಅನ್ನು ಪ್ರೊಜೆಕ್ಟ್‌ ಮಾಡುವುದು.

ಇವುಗಳನ್ನು ಕಿಶೋರಿಯರು ಮುಂಚೆ ಎಲ್ಲಿ ಆದ್ರೂ ನೋಡಿದಿರಾ ಇಲ್ವಾ ಎಂದು ಕೇಳುವುದು.

ನೋಡಿದ್ದರೆ ಎಲ್ಲಿ? ಅವು ಏನು ಕೆಲಸ ಮಾಡುತ್ತವೆ ಎಂದು ಒಂದಾದ ಮೇಲೆ ಒಂದರಂತೆ ಬಟನ್‌ಗಳನ್ನು ಪರಿಚಯಿಸುವುದು.

ಒಂದು ವೇಳೆ ಅವರು ನೋಡಿರದೆ ಇದ್ದಲ್ಲಿ, ಪರ್ವಾಗಿಲ್ಲ ಇವಾಗ ಇವುಗಳ ಬಗ್ಗೆ ತಿಳ್ಕೊಳೋಣ ಎಂದು ಹೇಳುವುದು.

ಮುಂಜಾನೆ ಮಂಜಲ್ಲಿ ಹಾಡನ್ನು ಹಾಡಿಕೊಂಡು ಚಾಂದಿನಿ ಹೇಳುತ್ತಾಳೆ - ಪ್ಲೇ, ಪಾಸ್ ಮತ್ತು ಸ್ಟಾಪ್ ಹೇಳಿ ಇವುಗಳ ಡೆಮೋ ಮಾಡಬೇಕು.

ರೆಕಾರ್ಡ್ ಅಂದಾಗ ಕಾರ್ತೀಕ್ chandani ಜೊತೆ ನಡೆದುಕೊಂಡು ಹೋಗುತ್ತಾರೆ.

ಈಗ ಇಲ್ಲಿ ಏನಾಯ್ತು? ಅಂತ ಕೇಳುವುದು. ಹಾಡಾಡಿಕೊಂಡು, ಓಡಾಡಿದ್ರು ಚಾಂದಿನಿ ಅಕ್ಕ, ಪಾಸ್ ಅಂದಾಗ ನಿಂತ್ಕೊಂಡ್ರು ಇತ್ಯಾದಿ ಸರ್ಯಾಗಿ ಹೇಳ್ಲಿಲ್ಲ ಅಂದ್ರೆ, ಇನ್ನೊಮ್ಮೆ ಮಾಡಿಸುವುದು. ಈಗ ಗಮನ ಇಟ್ಟು ನೋಡಿ ಎಂದು ಹೇಳುವುದು.

Play -

Pause -  

Stop -

Record -

ಮತ್ತೆ PDF ತೋರಿಸಿಕೊಂಡು ಮತ್ತೆ ಪ್ಲೇ ಪಾಸ್ ಸ್ಟಾಪ್ ರೆಕಾರ್ಡ್‌ ಬಟನ್‌ಗಳ ಬಗ್ಗೆ ಮಾತನಾಡುವುದು. (20 ನಿಮಿಷ)

ಅವರಿಗೆ ಆಡಿಯೋ ರೆಕಾರ್ಡರ್‌ ಅನ್ನು ತೋರಿಸಿ ಇದೇನು, ಇದನ್ನ ಮುಂಚೆ ಎಲ್ಲಾದ್ರು ನೋಡಿದ್ದೀರ ಎಂದು ಕೇಳುವುದು. ಕೆಲವರು ಮೈಕ್ ಅನ್ನಬಹುದು, ರೆಕಾರ್ಡ್‌ ಮಾಡಿದ್ದರೆ, ಬೇರೆಯವರು ಮಾತಾಡಬೇಕಿದ್ದಾಗ ನೋಡಿದ್ದರೆ ಅವರು ಅದನ್ನು ರೆಕಾರ್ಡರ್‌ ಎಂದು ಹೇಳಬಹುದು.

ನಿಮಗೆ ಇದನ್ನು ಬಳಸಿ, ರೆಕಾರ್ಡ್ ಮಾಡುವುದನ್ನು ಕಲಿಯಲು ಆಸಕ್ತಿ ಇದೆಯೆ ಎಂದು ಕೇಳುವುದು. ಅವರು ಇದೆ ಅನ್ನಬಹುದು.

ಸ್ಲೈಡ್‌ ಶೋ ತೋರಿಸುತ್ತಾ ಆಡಿಯೋ ರೆಕಾರ್ಡರ್‌ ಅನ್ನು ತೋರಿಸುವುದು.

ಆಡಿಯೋ ರೆಕಾರ್ಡರ್ ಪರಿಚಯ:

ಮೊದಲಿಗೆ ರೆಕಾರ್ಡ್ ಅಂದ್ರೆ ಏನು ಅಂತ ತಿಳ್ಕೊಳೋಣ. ರೆಕಾರ್ಡ್ ಪದದ ಅರ್ಥ ದಾಖಲೆ ಮಾಡುವುದು ಅಥ್ವ ಅದನ್ನ ಆಮೇಲೆ ನಮ್ಗೆ ಬೇಕಿದ್ದಾಗ ಸಿಗುವ ಹಾಗೆ ಒಂದು ಕಡೆ ಇಡೋದು ಅಂತ ಅರ್ಥ.

ಉದಾಹರಣೆಗಳು:

ಬುಕ್ಕು, ಪೆನ್ನು/ಪೆನ್ಸಿಲ್ ಬಳಸಿ ಬರೆದಿಡೋದನ್ನ - ಬರಹದ  ರೆಕಾರ್ಡ್ ಅನ್ನಬಹುದು

ಕ್ಯಾಮೆರಾ ಬಳಸಿ ಫೋಟೋ ತೆಗೆದಿರೋದನ್ನ - ಫೋಟೋ ರೆಕಾರ್ಡ್ ಅನ್ನಬಹುದು    

ವೀಡಿಯೋ ಕ್ಯಾಮರ ಬಳಸಿ ಶೂಟ್ ಮಾಡಿರೋದನ್ನ - ವೀಡಿಯೋ ರೆಕಾರ್ಡ್ ಅನ್ನಬಹುದು ಅದೇ ರೀತಿ,

ಆಡಿಯೋ ರೆಕಾರ್ಡರನ್ನ ಬಳಸಿ ಧ್ವನಿ, ಶಬ್ಧಗಳನ್ನ ರೆಕಾರ್ಡ್ ಮಾಡೋದನ್ನ ಆಡಿಯೋ ರೆಕಾರ್ಡ್ ಅನ್ನಬಹುದು

ರೆಕಾರ್ಡರ್ ಕೈಗೆತ್ತಿಕೊಂಡು - ಇದನ್ನ ಆಡಿಯೋ ರೆಕಾರ್ಡರ್ ಅಂತಾರೆ. ಇದು ಆಡಿಯೋನ ರೆಕಾರ್ಡ್ ಮಾಡುತ್ತೆ. ತನ್ನ ಸುತ್ತಲೂ ಇರುವ ಧ್ವನಿಗಳನ್ನ ಮತ್ತು ಶಬ್ಧಗಳನ್ನ ರೆಕಾರ್ಡ್ ಮಾಡಿ ಇಟ್ಕೊಳುತ್ತೆ. ನಮ್ಮ ರೆಕಾರ್ಡರ್ ಅನ್ನು ಅವರಿಗೆ ಕೊಟ್ಟು ಕೈಯಲ್ಲಿ ಹಿಡಿದು ನೋಡಿ ಪಾಸ್ ಮಾಡಲು ಹೇಳುವುದು.

ಇಬ್ಬರು ವಾಲಂಟಿಯರ್‌ಗಳು ಬಂದು ರೆಕಾರ್ಡ್‌ ಮಾಡುವುದು ಹೇಗೆ ಎಂದು ರೆಕಾರ್ಡರ್‌ ಹಿಡಿದು ಡೆಮೋ ಮಾಡಿ ತೋರಿಸುವರು. (ಮೊದಲು ಫೆಸಿಲಿಟೇಟರ್ಸ್ ಅದನ್ನು ಮಾಡಿ ತೋರಿಸುವುದು)

  • ನಿನ್ನ ಹೆಸರೇನು?
  • ನಿನ್ನ ಫೇವರೇಟ್‌ ತಿಂಡಿ ಯಾವುದು?
  • ನಿನ್ನ ಫೇವರೇಟ್‌ ಹೂವು ಯಾವುದು?

ಇದನ್ನು ಒಬ್ಬರು ಇನ್ನೊಬ್ಬ ಕಿಶೋರಿಗೆ ಕೇಳುವುದು. ಅವರು ಹೇಗೆ ರೆಕಾರ್ಡ್‌ ಮಾಡಿದ್ದಾರೆ ಎಂದು ಅಲ್ಲಿಯೇ ಕಂಪ್ಯೂಟರ್‌ ಅಲ್ಲಿ ಅದನ್ನು ಕೇಳಿಸುವುದು. ಹೇಗಿದೆ ಅಂತ ಕೇಳುವುದು. ಅವರು ನಮ್ಮ ನಿರೀಕ್ಷೆಯಂತೆ ಉತ್ತರ ಹೇಳಬಹುದು ಒಂದು ವೇಳೆ ಹೇಳದಿದ್ದಲ್ಲಿ, ಕೇಳುಸ್ಕೊಳಕ್ಕೆ ಚೆನ್ನಾಗಿತ್ತ? ಅವ್ರು ಮಾತಾಡೋದು ಕೇಳಿಸಿತ? ಇತ್ಯಾದಿ

ಆದ್ರೆ ನಾವು ಇಲ್ಲಿ ತಂಕ ಮಾತಾಡಿದ ವಿಷಯಗಳನ್ನ ಅರ್ಥ ಮಾಡ್ಕೊಂಡು ಕರೆಕ್ಟಾಗಿ ರೆಕಾರ್ಡ್ ಮತ್ತೆ ಸ್ಟಾಪ್ ಬಟನ್ ಯೂಸ್ ಮಾಡಿದಾರೆ ಅದಕ್ಕೆ ಅವ್ರಿಗೆ ಒಂದ್ಸಲಿ ಕ್ಲಾಪ್ಸ್ ಮಾಡೋಣ್ವ?

ಬರೀ ಆಡಿಯೋ ರೆಕಾರ್ಡಿಂಗ್‌ ಬಟನ್ಸ್ ಮಾತ್ರ ತಿಳಿದುಕೊಂಡ್ರೆ ಆಡಿಯೋ ರೆಕಾರ್ಡ್‌ ಮಾಡಕ್ಕೆ ಆಗಲ್ಲ. ಅದುಕ್ಕೆ ಇವಾಗ ಹೇಗೆ ಆಡಿಯೋ ರೆಕಾರ್ಡಿಂಗ್ ಮಾಡುವುದು ಅಂತ ತಿಳಿದುಕೊಳ್ಳೋಣ.

ನಾಲ್ಕು ರೂಲ್ಸ್‌ :

  • ಹಿನ್ನೆಲೆ ಯಾವ ಥರದ್ದನ್ನ ಆಯ್ಕೆ ಮಾಡಿಕೊಂಡು ಇದ್ದೀವಿ. ಯಾಕೆ ಅಂದ್ರೆ, ಮೈಕಿಗೆ ಗೊತ್ತಾಗಲ್ಲ, ಅದು ನಿಮ್ಮ ವಾಯ್ಸ್‌ ಮಾತ್ರ ಅಲ್ಲದೆ ನಿಮ್ಮ ಸುತ್ತಾ ಮುತ್ತಾ ಇರೋ ಎಲ್ಲಾ ಥರದ ಧ್ವನಿಗಳನ್ನ, ಶಬ್ಧಗಳನ್ನ ರೆಕಾರ್ಡ್‌ ಮಾಡಿಕೊಂಡು ಬಿಡುತ್ತದೆ. ತುಂಬಾ ಗಾಳಿ ಬರದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಫೀಲ್ಡ್‌ ಅಥ್ವ ದೊಡ್ಡದಾದ ರೂಮ್‌ ಬೇಡ.
  • ಮೈಕು ಬಾಯಿಂದ 45 ಡಿಗ್ರಿ ಕೆಳಗೆ ಒಂದು ಅಡಿ ದೂರದಲ್ಲಿ ಹಿಡಿದುಕೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಧ್ವನಿ ಸರಿಯಾಗಿ ರೆಕಾರ್ಡ್‌ ಆಗಲ್ಲ. ತುಂಬಾ ಹತ್ರ ಹಿಡಿದುಕೊಂಡ್ರೆ ಜೋರು ಧ್ವನಿ, ನಿಮ್ಮ ಉಸಿರಾಟ, ಗಾಳಿ ಎಲ್ಲಾದು ರೆಕಾರ್ಡ್‌ ಆಗುತ್ತೆ. ದೂರ ಹಿಡಿದುಕೊಂಡ್ರೆ ಸರಿಯಾಗಿ ಧ್ವನಿ ಕೇಳಿಸಲ್ಲ.
  • ಯಾರು ಮಾತನಾಡುತ್ತಾರೋ ಅವರಿಗೆ ಮೈಕ್‌ ಕೊಡಬಾರ್ದು. ಇನ್ನೊಬ್ಬರು ಅದನ್ನು ಹಿಡಿದುಕೊಂಡು ಅವರಿಗೆ ಮಾತನಾಡಲು ಅನುವು ಮಾಡಿಕೊಡಬೇಕು.
  • ರೆಕಾರ್ಡ್‌ ನಿಮ್ಮ ಬಳಿ ಬಂದು ನೀವು ಮಾತನಾಡಬೇಕು ಅನ್ನುವವರೆಗೆ ನೀವು ಮಾತನಾಡಬಾರದು.

Karthik and Chandani ಸ್ಕೆಚ್ ಪೆನ್ ಬಳಸಿ ಡೆಮೊ ಮಾಡ್ತಾರೆ.

ಮತ್ತೆ ರೆಕಾರ್ಡಿಂಗ್‌ ಬೇಸಿಕ್ಸ್ ಬಗ್ಗೆ ಹೇಳುವುದು, ಎಲ್ಲಿ ಆ ಆಡಿಯೋವನ್ನು ಸುಧಾರಿಸಬಹುದಿತ್ತು ಎಂದು ತೋರಿಸಿ ಕೊಡುವುದು.

ಒಟ್ಟು ಸಮಯ

೬೦ ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 2

ಬೇಕಾಗಿರುವ ಸಂಪನ್ಮೂಲಗಳು

  • ಕ್ಯಾಮೆರ
  • Audio recorder - 3
  • ಸ್ಕೆಚ್‌ ಪೆನ್‌ಗಳು - ೨ ಸೆಟ್‌ಗಳು
  • ಪ್ರೊಜೆಕ್ಟರ್‌
  • Extension Chord
  • Projector connector
  • Speaker
  • Laptop
  • ಚಾರ್ಟ್‌ಗಳು

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

ಕಿಶೋರಿಯರ ಸಂದರ್ಶನಗಳು