ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ
ಚಟುವಟಿಕೆ - ಭೂ ಬಳಕೆಯ ಮಾಹಿತಿ ಸಂಗ್ರಹಣೆ-ಗುಂಪು ಚಟುವಟಿಕೆ
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಚಿತ್ರಪಟಗಳು
- ವಿದ್ಯಾರ್ಥಿಗಳು ಸಂಗ್ರಹ ಮಾಡಿದ ವಿವಿಧ ಬೆಳೆಗಳ ಗಿಡ,ಎಲೆಗಳು
- ಹಿರಿಯರ ಸಹಾಯ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಆತ್ಮೀಯ ಶಿಕ್ಷಕರೇ, ನಾವು ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿದೆ.
- ಭಾರತದಲ್ಲಿ ವ್ಯವಸಾಯದ ಭೂಮಿಯು ಸಾಕಷ್ಟಿದ್ದರೂ ವ್ಯವಸಾಯವಾಗುತ್ತಿಲ್ಲ.ಕಾರಣವೇನು ಎಂದು ಅವರಿಗೆ ಮನವರಿಕೆ ಮಾಡಬೇಕಾಗಿದೆ.
- ಇತ್ತೀಚೆಗೆ ವ್ಯವಸಾಯದ ಮೇಲೆ ವಾಯುಗುಣದ ,ವಾತಾವರಣದ ಪ್ರಭಾವವು ಬೀರುತ್ತಿರುವ ಬಗ್ಗೆ ಮನವರಿಕೆ ಮಾಡಬಹುದು.
- ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕುಸಿತವಾಗಿರುವುದು, ಮಾತ್ರವಲ್ಲದೆ ಅದು ವ್ಯವಸಾಯದ ಮೇಲೆ ಪ್ರಭಾವಬೀರುವುದು ಎಂದು ತಿಳಿಸಬೇಕಾಗಿದೆ.
- ನಿರುದ್ಯೋಗದ ಸಮಸ್ಯೆಯನ್ನು ವಿವರಿಸುತ್ತಾ , ಕೃಷಿಯಲ್ಲಿ ಉದ್ಯೋಗವಿರುವ ಬಗ್ಗೆ ಭರವಸೆ ಮೂಡಿಸಬೇಕಾಗಿದೆ.
- ಬಳಕೆಯಾಗದ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸಬೇಕು.
- ಕೃಷಿ ಎಂಬುವುದು ಅನಕ್ಷರಸ್ಥರು ಮಾತ್ರ ಮಾಡುವ ಉದ್ಯೋಗವಲ್ಲ, ವಿದ್ಯಾವಂತರೀಗೂ ಅವಕಾಶಗಳು ಸಾಕಷ್ಟಿದೆ ಎಂದು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
- ಸ್ಥಳೀಯ ಪೇಪರ್ ಗಳಲ್ಲಿ ಬರುವ ವಿಶೇಷ ಲೇಖನಗಳನ್ನು(ಕೃಷಿ ಬಗ್ಗೆ) ಸಂಗ್ರಹ ಮಾಡಿ ವಿದ್ಯಾರ್ಥಿಗಳಿಗೆ ತೋರಿಸುವುದು.
- ಕೃಷಿ ಸಂಬಂದಿಸಿದ ಸಿ.ಡಿ ಗಳನ್ನು ತಂದು ವಿದ್ಯಾರ್ಥಿಗಳಿಗೆ ತೋರಿಸುವುದು.
- ಕೃಷಿಗೆ ಸಂಬಂದಿಸಿದ ವಾರ್ತೆಗಳನ್ನು , ಟಿವಿ ಕಾರ್ಯಕ್ರಮಗಳನ್ನು ನೋಡಲು ಹೇಳುವುದು.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ಸ್ಥಳೀಯ ರೈತರನ್ನು ಶಾಲೆಗೆ ಕರೆದು ವ್ಯವಸಾಯದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಡುವುದು.
- ಹೊಲಕ್ಕೆ ಭೇಟಿ ಕೊಡುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ವಿವಿಧ ದೇಶದಲ್ಲಿ ಭೂಬಳಕೆ ಬಗ್ಗೆ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಭಾರತದಲ್ಲಿ ಭೂ ಬಳಕೆ ಮಾದರಿ ಮಾಹಿತಿಯನ್ನು ವೀಕ್ಷಿಸಿಸಲು ಇಲ್ಲಿ ನೋಡಿ
- ಪ್ರಸ್ತುತ ಭಾರತದಲ್ಲಿರುವ ಭೂ ಬಳಕೆಯ ನಿಯಮಗಳು ಅದರ ಮಾಹಿತಿ ಇಲ್ಲಿದೆ
- ಭೂ ಬಳಕೆಯ ಚಿತ್ರಗಳು, ಪೈ ನಕ್ಷೆಗಳು ಇತ್ಯಾದಿಗಳು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮರುಭೂಮಿಯಲ್ಲಿ ಮಾಡಿರುವ ಕೃಷಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಅರಣ್ಯ ಉತ್ಪನ್ನ ಬಳಕೆ ಬಗ್ಗೆ ಮಾಹಿತಿ ಇರುವ ವೀಡಿಯೋ ಇದೆ.
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ವ್ಯವಸಾಯದ ಭೂಮಿಗಳು ಅವರ ಊರಿನಲ್ಲಿ ಎಲ್ಲಿ ಇವೆ ಎಂದು ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
- ಯಾವ ಯಾವ ಕೃಷಿಯನ್ನು ಅವರ ಊರಿನಲ್ಲಿ ಮಾಡುತ್ತಾರೆ ಎಂದು ಹಿರಿಯರಿಂದ ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
- ಅವರ ಊರಿನಲ್ಲಿ ಕೃಷೀ ಭೂಮಿಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡು ಬರಲು ಹೇಳುವುದು.
- ಅವರ ಊರಿನಲ್ಲಿ ಬೀಳು ಭೂಮಿಗಳು ಎಲ್ಲಿವೆ ಎಂದು ತಿಳಿದುಕೊಂಡು ಬರಲು ತಿಳಿಸುವುದು.
ನಂತರ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳನ್ನು ಮಾಡಿಕೊಂಡು ತಾವು ತಂದಿರುವ ಮಾಹಿತಿಯನ್ನು ವಿಶ್ಲೇಸಿಸಲು ಹೇಳುವುದು.
- ಮೊದಲಿಗೆ ಅವರ ಊರಿನ ಬೆಳೆಗಳ ಹೆಸರುಗಳನ್ನು ಬರೆಯಲು ಹೇಳುವುದು
- ಅವುಗಳನ್ನು ಒಣ ಬೇಸಾಯದ ಬೆಳೆಗಳು , ಗುಡ್ಡ ಪ್ರದೇಶದ ಬೆಳೆಗಳು, ಹೊಲದಲ್ಲಿ ಬೆಳೆಯುವ ಬೆಳೆಗಳು,ಎಂದು ವಿಂಗಡಿಸಲು ಹೇಳುವುದು.
- ಅವರ ಊರಿನಲ್ಲಿ ಬಳಕೆಯಾಗದೇ ಇರುವ ಭೂಮಿಗಳು ಇರುವ ಪ್ರದೇಶಗಳನ್ನು ಪಟ್ಟಿ ಮಾಡಲು ಹೇಳುವುದು.
- ಅವರ ಊರಿನಲ್ಲಿ ಅರಣ್ಯ ಪ್ರದೇಶಗಳನ್ನು ಪಟ್ಟಿ ಮಾಡಿಸುವುದು.
ಪಟ್ಟಿ ಮಾಡಿಸಿದ ನಂತರ ಅದನ್ನು ತರಗತಿಯಲ್ಲಿ ಮಂಡಿಸಲು ಹೇಳುವುದು.ಈ ಸಂದರ್ಭದಲ್ಲಿ ಭೂಬಳಕೆಯು ಅವರ ಊರುಗಳಲ್ಲಿ ಹೇಗೆ ಇದೆ ಎಂದು ಅವರಿಗೆ ಮನವರಿಕೆ ಮಾಡುತ್ತಾ , ಅವರ ಊರಿನ ಪಾಳು ಬಿದ್ದಿರುವ ಭೂ ಬಳಕೆಯ ಮಹತ್ವವನ್ನು ಅವರಿಗೆ ತಿಳಿಸುವುದು. ಅರಣ್ಯವನ್ನು ರಕ್ಷಣೆ ಮಾಡಿ ವಾತಾವರಣವನ್ನು ಕಾಪಾಡುವುದರ ಮೂಲಕ , ಕೃಷೀಗೂ ನೆರವು ಆಗುವುದರ ಮಹತ್ವವನ್ನು ತಿಳಿಸುವುದು.ಅವರ ಊರಿನಲ್ಲಿ ಸಾಗುವಳೀ ಕ್ಷೇತ್ರವು ಯಾವ ಪ್ರಮಾಣದಲ್ಲಿದೆ ಎಂದು ತಿಳಿಸಿ, ವ್ಯವಸಾಯ ಮಾಡುವುದರ ಅಗತ್ಯತೆಯನ್ನು ತಿಳಿಸುವುದು.ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ಕೊಡುವುದರ ಅಗತ್ಯತೆಯನ್ನು ತಿಳಿಸುವುದು ಅಗತ್ಯವಾಗಿದೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಕೃಷಿಯನ್ನು ಉಳಿಸಿಕೊಂಡು ಭಾರತದಲ್ಲಿ ಕೈಗಾರಿಕೆಗಳನ್ನು ಹೇಗೆ ಬೆಳೆಸ ಬಹುದು?
- ನಿಮ್ಮ ಊರಿನಲ್ಲಿ ಪಾಳು ಬಿದ್ದಿರುವ ಭೂಮಿ ಇರಲು ಕಾರಣವೇನಿರಬಹುದು?
- ನಿಮ್ಮ ಊರಿನಲ್ಲಿ ಬಡತನ ಇರಲು ಮುಖ್ಯ ಕಾರಣ ಕೃಷಿ ಬಳಕೆಯ ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವುದು ಆಗಿರಬಹುದೇ?
- ಭಾರತದ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಕೃಷಿಯು ಮಹತ್ತರ ಪಾತ್ರವಹಿಸಬಹುದೇ?
- ನಿನ್ನ ಊರಿನ ಅರಣ್ಯ ನಾಶವು ನಿನ್ನ ಊರಿನ ವ್ಯವಸಾಯದ ಮೇಲೆ ಪರಿಣಾಮ ಬೀರಿದೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಪಾಳು ಬಿದ್ದಿರುವ ಭೂಮಿ ಎಂದರೇನು?
- ಪಾಳು ಬಿದ್ದಿರುವ ವ್ಯವಸಾಯ ಭೂಮಿಯನ್ನು ಉಪಯೋಗಿಸುವಂತೆ ನೀವು ಯಾವ ಸಲಹೆ ಕೊಡುವಿರಿ.?
- ವ್ಯವಸಾಯೇತರ ಭೂಮಿಯನ್ನು ಯಾವ ರೀತಿಯಲ್ಲಿ ಉಪಯೋಗಿಸಿ ದೇಶದ ಅಭಿವೃದ್ದಿಗೆ ಸಹಾಯ ಮಾಡಬಹುದು?
ಪ್ರಶ್ನೆಗಳು
ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸಲು ಹೇಳುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ