ರಾಜಕುಮಾರಿಯ ಜಾಣ್ಮೆ ಗುಂಪು ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪಾಠ ಪರಿಚಯ

ಮಕ್ಕಳು ತಮಗೆ ಗೊತ್ತಿರುವ ಕಥೆಗಳನ್ನು(ಜಾನಪದ ಕಥೆಗಳು)ಹೇಳಲು ಪ್ರೋತ್ಸಾಹಿಸುವುದು

ಕುರಿ ಕಾಯುವ ಯುವಕನ ಜಾಣ್ಮೆ

ಒಮ್ಮೆ ಮಗಧ ರಾಜ್ಯಕ್ಕೆ ಒಬ್ಬ ಘನ ಪಂಡಿತ ಬರುತ್ತಾನೆ. ಆತನು ತನ್ನ ವಿದ್ವತ್ತಿನಿಂದ ಹಲವು ಪಂಡಿತರನ್ನು ಸೋಲಿಸಿ ಕೀರ್ತಿ ಪಡೆದವನು. ಆತ ರಾಜ ಪಂಡಿತರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ೧. ಈ ಭೂಮಿಯ ಮಧ್ಯ ಬಿಂದು ಎಲ್ಲಿದೆ? ೨. ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ೩. ಈ ಭೂಮಿಯ ಮೇಲೆ ಈಗ ನಲೆಸಿರುವ ಜನರೆಷ್ಟು? ಈ ಮೂರು ಪ್ರಶ್ನೆಗಳಿಗೆ ಮಗಧ ರಾಜ್ಯದ ಮಂತ್ರಿಗಳು ಉತ್ತರಿಸಲು ಸೋಲುತ್ತಾರೆ. ಆಗ ಪಂಡಿತ ಒಂದು ತಿಂಗಳ ಅವಧಿ ಕೊಡುವುದಾಗಿಯೂ ಆ ಅವಧಿಯಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ನನ್ನ ಬಿರುದು ಬಾವಲಿಗಳನ್ನೆಲ್ಲಾ ಅರ್ಪಿಸಿ ಶರಣಾಗುತ್ತೇನೆ. ಹೇಳದಿದ್ದರೆ ಅರ್ಧ ರಾಜ್ಯ ಕೊಡಬೇಕೆಂದು ಸವಾಲು ಹಾಕಿ ಹೋಗುತ್ತಾನೆ. ಇದರಿಂದ ಮಗಧ ರಾಜನಿಗೆ ಚಿಂತೆಯಾಗುತ್ತದೆ. ಒಬ್ಬ ಪಂಡಿತ ನನ್ನ ರಾಜ್ಯಕ್ಕೆ ಸವಾಲು ಹಾಕಿದ್ದು ಅವಮಾನವಾಗುತ್ತದೆ. ಅಲ್ಲದೆ ಒಂದು ತಿಂಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ ಅರ್ಧ ರಾಜ್ಯವನ್ನು ಪಂಡಿತನಿಗೆ ಕೊಡಬೇಕಾದುದು ಮತ್ತಷ್ಟು ರಾಜನಲ್ಲಿ ಭಯ ಹುಟ್ಟಿಸುತ್ತದೆ. ಹೀಗಾಗಿ ರಾಜನು ಈ ಪ್ರಶ್ನೆಗಳನ್ನು ಇಡೀ ರಾಜ್ಯದ ಜನತೆಗೆ ತಿಳಿಸಿ ಯಾರಾದರೂ ಉತ್ತರ ನೀಡಿದವರಿಗೆ ಅರ್ಧ ರಾಜ್ಯ ಕೊಡುವುದಾಗಿ ಡಂಗೂರ ಸಾರಿಸುತ್ತಾನೆ. ಈ ಪ್ರಶ್ನೆಗಳನ್ನು ಕೇಳಿದ ಕುರಿ ಕಾಯುವ ಯುವಕನೊಬ್ಬ ಬಿದ್ದು ಬಿದ್ದು ನಗುತ್ತಾನೆ. ಇಷ್ಟು ಸರಳವಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಲಿಲ್ಲವೇ, ನಾನು ಹೇಳಬಲ್ಲೆ ಎಂದು ಉತ್ಸುಕನಾಗುತ್ತಾನೆ. ಆದರೂ ಅದನ್ನು ಯಾರಲ್ಲಿಯೂ ಹೇಳುವುದಿಲ್ಲ. ಬದಲಾಗಿ ಯಾರೂ ಹೇಳದಿದ್ದರೆ ಕೊನೆಯ ದಿನ ಪಂಡಿತನ ಎದುರೇ ಹೇಳಿದರಾಯಿತು ಎಂದು ನಿರ್ಧರಿಸುತ್ತಾನೆ. ತಿಂಗಳ ಗಡುವಿನ ಕೊನೆಯ ದಿನ. ಯಾರೂ ಉತ್ತರ ಹೇಳಲು ಸಿದ್ದರಿಲ್ಲ. ರಾಜನ ಮುಖ ಕಳೆಗುಂದಿದೆ. ಅರಮನೆ ಮೈದಾನದಲ್ಲಿ ರಾಜ್ಯದ ಜನತೆ ಸುತ್ತುವರಿದಿದ್ದಾರೆ. ಪಂಡಿತ ಠೀವಿಯಿಂದ ಸಿಂಹಾಸನದ ಮೇಲೆ ಕೂತು ನೆರೆದ ಜನರನ್ನೆಲ್ಲಾ ನೋಡುತ್ತಿದ್ದಾನೆ. ಆತನ ಮುಖದಲ್ಲಿ ತುಂಟ ನಗೆ ಇಣುಕುತ್ತಿದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಹೇಳುವ ಜಾಣ್ಮೆ ಇಲ್ಲಿ ಯಾರಿಗೂ ಇಲ್ಲ. ಅರ್ಧ ರಾಜ್ಯ ನನ್ನದೇ ಎಂದು ಬೀಗುತ್ತಾನೆ. ರಾಜನು ಜನರನ್ನು ಉದ್ದೇಶಿಸಿ ಮಾತನಾಡಿ ಯಾರಾದರೂ ಸರಿ ಈ ಪ್ರಶ್ನೆಗಳಿಗೆ ಉತ್ತರ ಹೇಳಲು ತಯಾರಿದ್ದರೆ, ಹೇಳಿ ರಾಜ್ಯದ ಘನತೆಯನ್ನು ಕಾಪಾಡಿ ಉತ್ತರ ಹೇಳಿದವರಿಗೆ ರಾಜ್ಯದ ಅರ್ಧ ಭಾಗವನ್ನು ಕೊಡುವುದಾಗಿ ಹೇಳುತ್ತಾನೆ. ಹೀಗೆ ಹೇಳಿದ ಅರ್ಧ ಗಂಟೆ ಸಭೆ ಮೌನವಾಗುತ್ತದೆ ಇದನ್ನು ನೋಡಿದ ಕುರಿ ಕಾಯುವ ಯುವಕ ಹೆಗಲ ಮೇಲೆ ಕುರಿಯೊಂದನ್ನು ಹೊತ್ತು ಜನ ಸುತ್ತುವರಿದ ಮೈದಾನದ ಮಧ್ಯೆ ಬಂದು ನಿಲ್ಲುತ್ತಾನೆ. ಜನರೆಲ್ಲಾ ಗೊಳ್ ಎಂದು ನಗುತ್ತಾರೆ. ಪಂಡಿತ ಬಿದ್ದು ಬಿದ್ದು ನಕ್ಕು ಈ ಕುರುಬ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾನೆಯೇ? ಎಂದು ಠೇಂಕಾರ ತೋರುತ್ತಾನೆ. ಇದನ್ನು ನೋಡಿದ ರಾಜನ ಕಣ್ಣಲ್ಲಿ ಹೊಸ ಭರವಸೆ ಮೂಡುತ್ತದೆ. ಆಗ ರಾಜನು ಈತನು ಏನು ಹೇಳುತ್ತಾನೆ ಕೇಳೋಣ, ಎಂದು ಯುವಕನನ್ನು ಮಾತನಾಡಲು ಹೇಳುತ್ತಾರೆ ಯುವಕ ಪಂಡಿತರನ್ನು ತಾನು ನಿಂತಲ್ಲಿಗೆ ಕರೆಯುತ್ತಾನೆ. ಪಂಡಿತರೆ ನಿಮ್ಮ ಮೊದಲ ಪ್ರಶ್ನೆ ಯಾವುದು ಎನ್ನುತ್ತಾನೆ. ಪಂಡಿತ ತಿರಸ್ಕಾರದಿಂದಲೇ, ಈತನೇನು ಉತ್ತರಿಸಬಲ್ಲ ಎನ್ನುವಂತೆ, ಈ ಭೂಮಿಯ ಮಧ್ಯ ಬಿಂದು ಯಾವುದು? ಹೇಳಬಲ್ಲೆಯಾ ಎನ್ನುತ್ತಾನೆ. ಆಗ ಕುರಿಯನ್ನು ಹೆಗಲ ಮೇಲಿಂದ ಕೆಳಗೆ ಇಳಿಸಿ, ಪಂಡಿತರೇ ಈ ಕುರಿ ನಿಂತ ಸ್ಥಳವೇ ಈ ಭೂಮಿಯ ಮಧ್ಯ ಬಿಂದು ಎಂದು ಹೇಳುತ್ತಾನೆ. ಪಂಡಿತ ‘ಏನು ಉದ್ಧಟದ ಉತ್ತರವನ್ನು ಹೇಳುತ್ತಿರುವೆ’ ಎನ್ನುತ್ತಾನೆ. ಯುವಕ ‘ಪಂಡಿತರೆ ನಿಮಗೆ ಅನುಮಾನ ಬಂದರೆ ಭೂಮಿಯನ್ನೊಮ್ಮೆ ಅಳತೆ ಮಾಡಿಕೊಂಡು ಬನ್ನಿ. ಅಲ್ಲಿಯವರೆಗೂ ನಾನು ಇಲ್ಲಿಯೇ ನಿಂತಿರುವೆ. ಸುಳ್ಳಾದರೆ ಅಳೆದು ತೋರಿಸಿ’ ಎನ್ನುತ್ತಾನೆ. ಈ ಮಾತಿನಿಂದ ಪೆಚ್ಚಾದ ಪಂಡಿತರ ಮುಖ ಬಿಳಿಚಿಕೊಳ್ಳುತ್ತದೆ. ಭೂಮಿಯನ್ನು ಅಳತೆ ಮಾಡಲು ಸಾದ್ಯವೇ ಎಂದು ಮನದಲ್ಲಿಯೇ ಅಂದುಕೊಂಡು. ವಿಧಿಯಿಲ್ಲದೆ, ಸರಿ ನಿನ್ನ ಮೊದಲ ಉತ್ತರ ಸರಿಯಾಗಿದೆ ಎನ್ನುತ್ತಾನೆ. ಇದನ್ನು ಕೇಳಿ ಜನರೆಲ್ಲಾ ಜೈಕಾರ ಹಾಕುತ್ತಾರೆ ಯುವಕ ‘ಹೇಳಿ ಪಂಡಿತರೆ ನಿಮ್ಮ ಎರಡನೆ ಪ್ರಶ್ನೆ ಯಾವುದು’ ಎನ್ನುತ್ತಾನೆ. ಪಂಡಿತ ‘ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ಹೇಳುವೆಯಾ’ ಎನ್ನುತ್ತಾನೆ. ಯುವಕ ಕುರಿಗೆ ಹೊಟ್ಟೆಯ ಮಧ್ಯ ಭಾಗಕ್ಕೆ ಹಗ್ಗವೊಂದನ್ನು ಕಟ್ಟಿ ‘ಈ ಕುರಿಯ ಅರ್ಧ ಭಾಗದ ಕೂದಲು ಎಷ್ಟಿವೆಯೋ ಅಷ್ಟು ಜನ ಭೂಮಿಯ ಮೇಲೆ ಹುಟ್ಟಿದ್ದಾರೆ. ಇನ್ನರ್ಧ ಭಾಗ ಭೂಮಿಯ ಮೇಲೆ ಸತ್ತವರ ಸಂಖ್ಯೆ, ಅನುಮಾನ ಬಂದರೆ ಈ ಕುರಿ ಕೂದಲನ್ನು ಎಣಿಸಿ ಪರಿಹರಿಸಿಕೊಳ್ಳಿ’ ಎನ್ನುತ್ತಾನೆ. ಆಗ ಪಂಡಿತ ಕಕ್ಕಾಬಿಕ್ಕಿಯಾಗಿ, ‘ಇಲ್ಲ ಇದು ಸರಿಯಾದ ಉತ್ತರವಲ್ಲ’ ಎನ್ನುತ್ತಾನೆ. ಯುವಕ ‘ಪಂಡಿತರೇ ಅನುಮಾನವಿದ್ದರೆ ಒಂದು ಸಲ ಸತ್ತವರನ್ನೂ ಹುಟ್ಟಿದವರನ್ನೂ ಲೆಕ್ಕ ಹಾಕಿಕೊಂಡು ಬನ್ನಿ, ಆಮೇಲೆ ಬೇಕಾದರೆ ಈ ಕುರಿ ಕೂದಲನ್ನು ಎಣಿಸಿ ಲೆಕ್ಕ ತಪ್ಪಾದರೆ ಆಗ ನೋಡೋಣ’ ಎಂದು ನಿಧಾನವಾಗಿಯೇ ಹೇಳುತ್ತಾನೆ. ಪಂಡಿತ ಇದು ಸಹ ಅಸಾದ್ಯ ಎಂದರಿತು ಈ ಉತ್ತರವೂ ಸರಿ ಎಂದು ಒಪ್ಪಿಕೊಳ್ಳುತ್ತಾನೆ ಇನ್ನು ಮೂರನೆ ಪ್ರಶ್ನೆಗೆ ಉತ್ತರ ಸುಲಭ ಎಂದು ಕುರಿಗೆ ಕಟ್ಟಿದ ಹಗ್ಗ ಕಿತ್ತು ಕುರಿಯಲ್ಲಿ ಎಷ್ಟು ಕೂದಲಿವೆಯೋ ಅಷ್ಟು ಜನ ಈಗ ಈ ಭೂಮಿಯ ಮೇಲೆ ನೆಲೆಸಿದ್ದಾರೆ. ಈ ಉತ್ತರವೂ ಸರಿಯಲ್ಲವೆಂದರೆ ಜಗದ ಜನರನ್ನು ಎಣಿಸಿಕೊಂಡು ಬನ್ನಿ ಎನ್ನುತ್ತಾನೆ. ಇದನ್ನು ಪಂಡಿತ ಒಪ್ಪಿಕೊಂಡು ಯುವಕನೆದುರು ಸೋಲನ್ನು ಒಪ್ಪಿಕೊಳ್ಳುತ್ತಾನೆ. ಈತನಕ ತಾನು ಪಡೆದ ಬಿರುದು ಬಾವಲಿಗಳನ್ನು ಯುವಕನಿಗೆ ನೀಡಿ ತಾನು ಸೋತೆ ಎಂದು ಹೇಳುತ್ತಾನೆ. ಇದನ್ನು ನೋಡಿದ ರಾಜನು ಆನಂದ ತುಂದಿಲನಾಗುತ್ತಾನೆ. ಆಗ ಯುವಕನನ್ನು ಇಡೀ ರಾಜ್ಯದ ಜನತೆ ಹಾಡಿ ಕೊಂಡಾಡುತ್ತದೆ. ಯುವಕ ರಾಜ್ಯದ ಅರ್ಧ ಭಾಗವನ್ನು ನಿರಾಕರಿಸುತ್ತಾನೆ. ಯುವಕನ ಸಮಯಪ್ರಜ್ಞೆ, ಬುದ್ಧಿವಂತಿಕೆ, ಪ್ರಾಮಾಣಿಕತೆಯನ್ನು ನೋಡಿದ ಯುವರಾಣಿಗೆ ಯುವಕನಲ್ಲಿ ಪ್ರೇಮಾಂಕುವವಾಗುತ್ತದೆ. ಇದನ್ನು ತಿಳಿದು ರಾಜ ಯುವಕನಿಗೆ ತನ್ನ ಮಗಳ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕುರಿ ಕಾಯುವ ಯುವಕ ಮಗಧ ರಾಜ್ಯದ ಯುವ ರಾಜನಾಗುತ್ತಾನೆ.

ಈ ರೀತಿಯಾಗಿ ಮಕ್ಕಳಿಗೆ ಗೊತ್ತಿರುವ ಕಥೆಗಳನ್ನು ಹೇಳಿಸಿ ನಂತರ ಪಾಠವನ್ನು ಆರಂಭ ಮಾಡುವುದು.

ಗುಂಪು ೧ ರ ಚಟುವಟಿಕೆಗಳು

ರಾಜಕುಮಾರಿಯ ಬಗ್ಗೆ ಮಕ್ಕಳಿಗೆ ಇರುವ ಪರಿಕಲ್ಪನೆಗಳ ಬಗ್ಗೆ ನಕ್ಷೆಯನ್ನು ರಚನೆ ಮಾಡುವುದು ರಾಜಕುಮಾರಿಯ ಜಾಣ್ಮೆ .png

ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು: ಶಪ್ತ,ಯುದ್ಧ,ಅಪ್ಪಣೆ,ಸೆರೆಯಾಳು,ಎಡೆಮುಡಿ

  1. ಶಪ್ತ:ನಾನು ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳಿಸುತ್ತೇನೆ ಎಂದು ಶಪ್ತ ಮಾಡಿದ್ದೇನೆ .
  2. ಯುದ್ಧ:ಅಶೋಕನು ಕಾಳಿಂಗ ಯುದ್ಧದಲ್ಲಿ ನಡೆದ ಸಾವುಗಳನ್ನು ನೋಡಿ ಅಂದಿನಿಂದ ಯುದ್ಧ ಮಾಡುವುದನ್ನು ನಿಲ್ಲಿಸಿದನು .
  3. ಅಪ್ಪಣೆ:ನಾವು ಮನೆಯಿಂದ ಹೊರಗಡೆ ಹೋಗುವಾಗ ಮನೆಯಲ್ಲಿ ಅಪ್ಪಣೆಯನ್ನು ತೆಗೆದುಕಳ್ಳುತ್ತೇವೆ .

ಸೆ#ರೆಯಾಳು:ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಸೋತವರನ್ನು ಸೆರೆಯಾಳು ಮಾಡುತ್ತಿದ್ದರು.

ಆಡು ಬಾಷೆಯ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವರು ಕೇಳ್ತಾರೆ,ಕೋಡ್ತಾನೆ,ಸೋಲ್ತಾರೆ,ಹೊರಡ್ತರೆ,ಹತ್ಕಳ್ಳುತ್ತೆ,ಆಡುತ್ತಿರ್ತಳೆ,ಇರದ್ರಿಂದಲೇ,ಮಾಡ್ತಿರ್ತಳೆ,ಒಪ್ಕಂತಳೆ,ಯೋಚ್ನೆ,ಕತ್ಲೇಲಿ,ಸತ್ತೋದ್ಲು,ತಿಳ್ಕೊಂಡಿರ್ತನೆ.

ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಬರೆಯುವರು

  1. ಸೊಲು * ಗೆಲವು
  2. ಹುಟ್ಟು * ಸಾವು
  3. ಹತ್ತಿರ * ದೂರ

ಪಠ್ಯದಲ್ಲಿರುವ ಪ್ರಶ್ನೆಗಳನ್ನು ಬಿಟ್ಟು ಮಕ್ಕಳನ್ನು ಸ್ವಂತವಾಗಿ ಪ್ರಶ್ನೆಗಳನ್ನು ರಚನೆ ಮಾಡುವುದು

  1. ರಾಜಕುಮಾರಿ ಅಡಗೂರಿಗೆ ಹೋಗಲು ಕಾರಣವೇನು?
  2. ಅಡಗೂರಿನ ರಾಜ ಮತ್ತು ರಾಜಕುಮಾರಿ ಇಬ್ಬರು ಶಪತ ಮಾಡಲು ಕಾರಣವೇನು?
  3. ರಾಜಕುಮಾರಿ ಕಾಳಿಕದೇವಿ ದೇವಸ್ಥಾನಕ್ಕೆ ಹೋಗಲು ಕಾರಣವೇನು?

ಆಲಿಸಿದ ವಿಷಯದಲ್ಲಿನ ವಚನ ಲಿಂಗ,ಕಾಲಗಳ ಹೇಳುವರು ಓದಿದ ಕಥೆಯನ್ನು ನಾಟಕ ರೂಪದಲ್ಲಿ ಅಭಿವ್ಯಕ್ತಿ ಪಡಿಸುವರು ಕೊಟ್ಟ ಕಥೆಯ ಬಗ್ಗೆ ತನ್ನ ಅಭಿಪ್ರಾಯವನ್ನು ಆಲೋಚನೆಗಳನ್ನು ವ್ಯಕ್ತ ಪಡಿಸುವರು

ಗುಂಪು ೨ ರ ಚಟುವಟಿಕೆಗಳು

  1. ಪಾಠದಲ್ಲಿ ಇರುವ ಪ್ರಶ್ನೆಗಳನ್ನು ಬಿಟ್ಟು ಮಕ್ಕಳು ಸ್ವಂತವಾಗಿ ಪ್ರಶ್ನೆಗಳನ್ನು ರಚನೆ ಮಾಡುವರು.
  2. ಮಕ್ಕಳು ಕೇಳಿದ ಕಥೆಗಳನ್ನು ಹೇಳುವುದು ಮತ್ತು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವುದು.
  3. ಆಡು ಭಾಷೆಯ ಪದಗಳನ್ನು ಪಟ್ಟಿ ಮಾಡಿ,ಅದನ್ನು ಪುಸ್ತಕ ಭಾಷೆಯಲ್ಲಿ ಬರೆಯುವುದು.
  4. ಸಣ್ಣ ಕಥೆಗಳನ್ನು ಓದಲು ಹೇಳುವುದು ಮತ್ತು ಮಕ್ಕಳಿಗೆ ಕಥೆ ಪುಸ್ತಕಗಳು ಮತ್ತು ವಾರ್ತಾ ಪತ್ರಿಕೆಗಳನ್ನು ನೀಡುವುದು.
  5. ಅಲ್ಪಪ್ರಾಣ,ಮಹಾಪ್ರಾಣ ಮತ್ತು ಅ-ಹ ,ಶ-ಸ ಗಳ ನಡುವಿನ ಅಕ್ಷರಗಳ ವ್ಯತ್ಯಾಸವನ್ನು ಗಮನಿಸುವನು .
  6. ನಿತ್ಯ ಬಳಕೆಯಲ್ಲಿರುವ ಧ್ವನಿ ವ್ಯತ್ಯಾಸವನ್ನು ಕುರಿತು ಗುರುತಿಸಿ ಓದವರು.
  7. ಗ್ರಾಮ್ಯ ಭಾಷೆ, ಆಡುಭಾಷೆ ಮತ್ತು ಗ್ರಾಮೀಣ ಭಾಷೆಯಲ್ಲಿನ ವ್ಯತ್ಯಾಸಗಳನ್ನು ಗುರತಿಸುತ್ತ ಓದುವರು.ಕಲಿಕಾ ಪ್ರಕ್ರಿಯೆ ಹಂತ
  8. ತಮಗೆ ಪರಿಚಯವಿರುವ ಪದಗಳನ್ನು ಓದುವರು ಮತ್ತು ಅದರ ಅರ್ತವನ್ನು ತಿಳಿಯುವುದು.
  9. ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣವಾಕ್ಯಗಳನ್ನು ಬರೆಯವುದು.
  10. ಕೊಟ್ಟಿರುವ ಪದಗಳಿಗೆ ಏಕವಚನ ಮತ್ತು ಬಹುವಚನ ರೂಪವನ್ನು ಬರೆಯುವರು.

ಗುಂಪು ೩ ರ ಚಟುವಟಿಕೆಗಳು

  1. ಪಾಠದಲ್ಲಿರುವ ಸರಳ ಪದಗಳನ್ನು ಪಟ್ಟಿ ಮಾಡುವುದು.
  2. ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳ ವ್ಯತ್ಯಾಸ ಗುರುತಿಸಿ ಓದುವುದು.
  3. ವಿಜಾತಿಯ ಒತ್ತಕ್ಷರಗಳು ಇರುವ ಪದಗಳನ್ನು ಪಟ್ಟಿ ಮಾಡುವುದು ಅವುಗಳನ್ನು ಬಿಡಿಸಿ ಬರೆಯುವುದು.
  4. ಮಕ್ಕಳಿಗೆ ಕಥೆ ಹೇಳಲು ಹೇಳುವುದು.

ಮತ್ತಷ್ಟು ಚಟುವಟಿಕೆಗಳು

ರಾಜಕುಮಾರಿಯ ಜಾಣ್ಮೆ : ಗುಂಪು ೧ :

  1. ಮಕ್ಕಳು ತಮಗೆ ಗೊತ್ತಿರುವ ಕಥೆಗಳನ್ನು ( ಜಾನಪದ ಕಥೆಗಳು) ಹೇಳಲು ಪ್ರೋತ್ಸಾಹಿಸುವುದು.
  2. ರಾಜಕುಮಾರಿಯ ಬಗ್ಗೆ ಮಕ್ಕಳಿಗೆ ಇರುವ ಪರಿಕಲ್ಪನೆಗಳ ಬಗ್ಗೆ ನಕ್ಷೆಯನ್ನು ರಚನೆ ಮಾಡುವುದು.
  3. ಪಾಠದಲ್ಲಿ ಬಳಸಿರುವ ಆಡು ಭಾಷೆಯ ಪದಗಳನ್ನು ಪಟ್ಟಿಮಾಡುವುದು.
  4. ಪಠ್ಯದಲ್ಲಿರುವ ಪ್ರಶ್ನೆಗಳನ್ನು ಬಿಟ್ಟು ಮಕ್ಕಳನ್ನು ಸ್ವಂತವಾಗಿ ಪ್ರಶ್ನೆಗಳನ್ನು ರಚನೆ ಮಾಡುವುದು.
  5. ಆಡು ಭಾಷೆಯ ಪದಗಳನ್ನು ಗ್ರಂಥಸ್ಥ ಭಾಷೆಯಲ್ಲಿ ಬರೆಯುವರು.
  6. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು: ಶಪ್ತ , ಯುದ್ಧ , ಅಪ್ಪಣೆ , ಸೆರೆಯಾಳು ,ಎಡೆಮುಡಿ
  7. ಪಾಠದಲ್ಲಿ ಬರುವ ವಿರುದ್ಧ ಪದಗಳನ್ನು ಬರೆಯುವರು.
  8. ಸಜಾತಿ ಮತ್ತು ವಿಜಾತಿಯ ಸಂಯುಕ್ತಾಕ್ಷರಗಳನ್ನು ಗುರುತಿಸಿ ಪಟ್ಟಿ ಮಾಡಿ ಅದರ ವ್ಯತ್ಯಾಸ ತಿಳಿಸುವನು .
  9. ಸಾಮಾನ್ಯ ವಾಕ್ಯ , ಸಂಯೋಜಿತ ವಾಕ್ಯ ಮತ್ತು ಮಿಶ್ರ ವಾಕ್ಯಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವುದು.
  10. ನಿತ್ಯ ಬಳಕೆಯಲ್ಲಿರುವ ಧ್ವನಿ ವ್ಯತ್ಯಾಸವನ್ನು ಕುರಿತು ಗುರುತಿಸಿ ಓದವರು.
  11. ಧ್ವನಿ ವ್ಯತ್ಯಾಸದಿಂದ ಅರ್ಥದಲ್ಲಿ ಬದಲಾಗುವ ಪದಗಳನ್ನು ಪಟ್ಟಿ ಮಾಡುವುದು.
  12. ಮಹಿಳೆಯರು ಮುಖ್ಯವಾದ ಪಾತ್ರವನ್ನು ವಹಿಸಿದ ಕಥೆಗಳನ್ನು ಸಂಗ್ರಹಿಸಿ , ಅಂತಹ ಕಥೆಗಳನ್ನು ತರಗತಿಯಲ್ಲಿ ಓದುವುದು.
  13. ಶಬ್ಧ ಕೋಶದ ಸಹಾಯದಿಂದ ವಿಶೇಷವಾದ ಪದಗಳ ಅರ್ಥವನ್ನು ತಿಳಿಯುವುದು ಮತ್ತು ಅವುಗಳನ್ನು ಸ್ವಂತವಾಕ್ಯದಲ್ಲಿ ಬರೆಯುವುದು.
  14. ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣವಾಕ್ಯಗಳನ್ನು ಬರೆಯವುದು.
  15. ಕಥೆಗಳಿಗೆ ಸಂಬಂಧಿಸಿದಂತೆ ಪದಬಂಧವನ್ನು ರಚನೆ ಮಾಡುವುದು.


ಗುಂಪು : ೨

  1. ಪಾಠದಲ್ಲಿ ಇರುವ ಪ್ರಶ್ನೆಗಳನ್ನು ಬಿಟ್ಟು ಮಕ್ಕಳು ಸ್ವಂತವಾಗಿ ಪ್ರಶ್ನೆಗಳನ್ನು ರಚನೆ ಮಾಡುವರು.
  2. ಮಕ್ಕಳು ಕೇಳಿದ ಕಥೆಗಳನ್ನು ಹೇಳುವುದು ಮತ್ತು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವುದು.
  3. ಆಡುಭಾಷೆಯ ಪದಗಳನ್ನು ಪಟ್ಟಿಮಾಡಿ, ಅದನ್ನು ಗ್ರಂಥಸ್ಥಭಾಷೆಯಲ್ಲಿ ಬರೆಯುವುದು.
  4. ಸಣ್ಣ ಕಥೆಗಳನ್ನು ಓದಲು ಹೇಳುವುದು ಮತ್ತು ಮಕ್ಕಳಿಗೆ ಕಥೆ ಪುಸ್ತಕಗಳು ಮತ್ತು ವಾರ್ತಾ ಪತ್ರಿಕೆಗಳನ್ನು ನೀಡುವುದು.
  5. ಅಲ್ಪಪ್ರಾಣ , ಮಹಾಪ್ರಾಣ ಮತ್ತು ಅ-ಹ , ಶ-ಸ ಗಳ ನಡುವಿನ ಅಕ್ಷರಗಳ ವ್ಯತ್ಯಾಸವನ್ನು ಗಮನಿಸುವನು .
  6. ನಿತ್ಯ ಬಳಕೆಯಲ್ಲಿರುವ ಧ್ವನಿ ವ್ಯತ್ಯಾಸವನ್ನು ಕುರಿತು ಗುರುತಿಸಿ ಓದವರು.
  7. ಗ್ರಾಮ್ಯ ಭಾಷೆ, ಆಡುಭಾಷೆ ಮತ್ತು ಪ್ರಾದೇಶಿಕ ಭಾಷೆಯಲ್ಲಿನ ವ್ಯತ್ಯಾಸಗಳನ್ನು ಗುರುತಿಸುತ್ತ ಓದುವರು. - ಕಲಿಕಾ ಪ್ರಕ್ರಿಯೆ ಹಂತ
  8. ತಮಗೆ ಪರಿಚಯವಿರುವ ಪದಗಳನ್ನು ಓದುವರು ಮತ್ತು ಅದರ ಅರ್ತವನ್ನು ತಿಳಿಯುವುದು.
  9. ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣವಾಕ್ಯಗಳನ್ನು ಬರೆಯವುದು.
  10. ಕೊಟ್ಟಿರುವ ಪದಗಳಿಗೆ ಏಕವಚನ ಮತ್ತು ಬಹುವಚನ ರೂಪವನ್ನು ಬರೆಯುವರು.

ಗುಂಪು- ೩

  1. ಪಾಠದಲ್ಲಿರುವ ಸರಳ ಪದಗಳನ್ನು ಪಟ್ಟಿ ಮಾಡುವುದು.
  2. ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳ ವ್ಯತ್ಯಾಸ ಗುರುತಿಸಿ ಓದುವುದು.
  3. ವಿಜಾತಿಯ ಒತ್ತಕ್ಷರಗಳು ಇರುವ ಪದಗಳನ್ನು ಪಟ್ಟಿ ಮಾಡುವುದು ಅವುಗಳನ್ನು ಬಿಡಿಸಿ ಬರೆಯುವುದು.
  4. ಮಕ್ಕಳಿಗೆ ಕಥೆ ಹೇಳಲು ಹೇಳುವುದು.