ಗಾಳಿಪಟದ ವಿಸ್ತೀರ್ಣಕ್ಕೆ ಸೂತ್ರವನ್ನು ಪಡೆಯುವುದು
Jump to navigation
Jump to search
ಅಂದಾಜು ಸಮಯ
30 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಲ್ಯಾಪ್ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು.
ಬಹುಮಾಧ್ಯಮ ಸಂಪನ್ಮೂಲಗಳು
ವೆಬ್ಸೈಟ್ ಸಂವಾದಾತ್ಮಕ / ಲಿಂಕ್ಗಳು / / ಜಿಯೋಜಿಬ್ರಾ ಕಡತಗಳು
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು.
- ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ.
- ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ.
ಅಭಿವೃದ್ಧಿ ಪ್ರಶ್ನೆಗಳು
- ಗಾಳಿಪಟ ಎಂದರೇನು?
- ಗಾಳಿಪಟದ ಗುಣಲಕ್ಷಣಗಳು ಯಾವುವು.
- ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು?
- ಇವು ಯಾವ ರೀತಿಯ ತ್ರಿಭುಜಗಳು?
- ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ?
- ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು?
ಮೌಲ್ಯ ನಿರ್ಣಯ ಪ್ರಶ್ನೆಗಳು
ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ?
ಪ್ರಶ್ನೆ ಕಾರ್ನರ್:
ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ.