ವೃತ್ತ ಕೇಂದ್ರ
Jump to navigation
Jump to search
ವೃತ್ತದಲ್ಲಿನ ಎಲ್ಲಾ ಬಿಂದುಗಳು ಒಂದು ಬಿಂದುವಿನಿಂದ ನಿಗದಿತ ದೂರದಲ್ಲಿರುತ್ತವೆ, ಅದು ವೃತ್ತದ ಕೇಂದ್ರವಾಗಿರುತ್ತದೆ.
ಕಲಿಕೆಯ ಉದ್ದೇಶಗಳು :
- ಕೇಂದ್ರವು ಎಲ್ಲಾ ಬಿಂದುಗಳಿಂದ ಸಮಾನ ದೂರದಲ್ಲಿರುವ ವೃತ್ತದ ಸ್ಥಿರ ಬಿಂದುವಾಗಿದೆ.
- ವೃತ್ತಗಳಿಗೆ ಉದಾಹರಣೆಗಳನ್ನು ನೀಡಿ
- ಕೇಂದ್ರವನ್ನು ಉಲ್ಲೇಖ ಬಿಂದುವಾಗಿ ಬಳಸಿಕೊಂಡು ವೃತ್ತವನ್ನು ಎಳೆಯಲಾಗುತ್ತದೆ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಬಣ್ಣದ ಕಾಗದಗಳು, ಕೈವಾರ, ಪೆನ್ಸಿಲ್, ಅಳತೆಪಟ್ಟಿ ಮತ್ತು ಕತ್ತರಿ.
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ರೇಖಾ ಖಂಡಗಳ ಪೂರ್ವ ಜ್ಞಾನ.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ವೃತ್ತದ ಕೇಂದ್ರವನ್ನು ಹೇಗೆ ಗುರುತಿಸುವುದು?
- ನೀವು ಅದನ್ನು ಹೇಗೆ ಹೆಸರಿಸುತ್ತೀರಿ?
- ನೀವು ವೃತ್ತವನ್ನು ಹೇಗೆ ಎಳೆಯುತ್ತೀರಿ?
ಮೌಲ್ಯ ನಿರ್ಣಯ ಪ್ರಶ್ನೆಗಳು:
- ವೃತ್ತವು ಎಷ್ಟು ಕೇಂದ್ರಗಳನ್ನು ಹೊಂದಿದೆ?
- ವೃತ್ತದ ಕೇಂದ್ರ ಎಲ್ಲಿರುತ್ತದೆ? (ಒಳಗೆ ಹೊರಗೆ)
- ವೃತ್ತವನ್ನು ಅದರ ಕೇಂದ್ರವನ್ನು ಕಂಡುಹಿಡಿಯದೆ ಎಳೆಯಬಹುದೇ?